भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Jack Frost

ನಾಮವಾಚಕ

ಶ್ರೀಮಾನ್‍ ಹಿಮ; ವ್ಯಕ್ತೀಕರಿಸಿದ ಹಿಮ.

Jack Ketch

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಗಲ್ಲುಗಾರ; ಗಲ್ಲಿಗೇರಿಸುವ ಅಧಿಕಾರಿ.

jack plug

ನಾಮವಾಚಕ

ಎತ್ತುಗ(ದೊಡನೆ ಬಳಸುವ) ಬೆಣೆ.

jack pudding

ನಾಮವಾಚಕ

ನಕಲಿ ಶ್ಯಾಮ; ವಿದೂಷಕ; ಕೋಡಂಗಿ; ಕೀಳ್ತರದ ಹಾಸ್ಯಗಾರ, ಹಾಸ್ಯನಟ.

Jack Russel

ನಾಮವಾಚಕ

ಜ್ಯಾಕ್‍ ರಸಲ್‍; ಒಂದು ಬಗೆಯ ಟೆರಿಯರ್‍ ನಾಯಿ.

Jack tar

ನಾಮವಾಚಕ

ನಾವಿಕ.

jack-a-dandy

ನಾಮವಾಚಕ

ಷೋಕಿಲಾಲ; ಅಲಂಕಾರಪ್ರಿಯ.

jack-in-office

ನಾಮವಾಚಕ

ಸೊಕ್ಕಿನ ಅಧಿಕಾರಿ; ದುರಭಿಮಾನಿ ಅಧಿಕಾರಿ.

jack-in-the-box

ನಾಮವಾಚಕ

ಪೆಟ್ಟಿಗೆ ಬೊಂಬೆ; ಮುಚ್ಚಳವನ್ನು ತೆರೆದೊಡನೆ ಪುಸಕ್ಕನೆ ತಲೆ ಎತ್ತುವ ಬೊಂಬೆ.

jack-in-the-green

ನಾಮವಾಚಕ

ಹಸುರಾಳು: ಮೇ-ದಿನದ ಉತ್ಸವಗಳಲ್ಲಿ ಎಲೆಗಳಿಂದ ಮುಚ್ಚಿದ ಚೌಕಟ್ಟಿನಲ್ಲಿ ಮರೆಸಿ ಇಟ್ಟಿರುವ ಮನುಷ್ಯ ಅಥವಾ ಹುಡುಗ.

jack-o’-lantern

ನಾಮವಾಚಕ

  • ಕೊಳ್ಳಿದೆವ್ವ (ರೂಪಕವಾಗಿ ಸಹ).
  • (ಕುಂಬಳಕಾಯಿ ಅಥವಾ ಮೂಲಂಗಿ ಗೆಡ್ಡೆಯನ್ನು ಮನುಷ್ಯನ ಮುಖದಂತೆ ಕೆತ್ತಿ ಅದರ ಮೇಲೆ ಹೊತ್ತಿಸಿದ) ಗುಮ್ಮದೀಪ. Figure: jack-lantern

jack-rafter

ನಾಮವಾಚಕ

ಸಣ್ಣ ಬಾಗುಪಟ್ಟಿ; ಬಾಗು ಛಾವಣಿಗೆ ಹಾಕಿರುವ ಮರದ ಸಣ್ಣಪಟ್ಟಿ.

jack-towel

ನಾಮವಾಚಕ

ಸುತ್ತುಟವಲು; ಉರುಳುಗಲ್ಲಿನ ಮೇಲೆ ಹರಡಿದ ಕೈ ಚೌಕ, ಟವೆಲು.

jackal

ನಾಮವಾಚಕ

  • ಗುಳ್ಳೆನರಿ; ಶೃಗಾಲ; ಕುನ್ನಿನರಿ; ಕಂಕನರಿ; ಜಂಬುಕ. Figure: jackal
  • (ರೂಪಕವಾಗಿ) ತೈನಾತಿ;
    1. ಕಚ್ಚಾ ಚಾಕರ; ಕಾಮಾಟಿ; (ತನಗಿಂತ ಮೇಲ್ಪಟ್ಟವನಿಗಾಗಿ) ಮೊದಲು ಮಾಡಬೇಕಾದ ಕಚ್ಚಾ ಚಾಕರಿ ಮಾಡುವವನು.
    2. ಇನ್ನೊಬ್ಬನ ಅನೈತಿಕ ವರ್ತನೆಗೆ ನೆರವಾಗುವವನು.

jackal

ಅಕರ್ಮಕ ಕ್ರಿಯಾಪದ

  • (ಬೇರೊಬ್ಬನಿಗಾಗಿ) ಕಚ್ಚಾ ಚಾಕರಿ ಮಾಡು; ಕತ್ತೆಯಂತೆ ದುಡಿ.
  • (ಅನೈತಿಕ ಕಾರ್ಯದಲ್ಲಿ, ಬೇರೊಬ್ಬನಿಗೆ) ನೆರವಾಗು; ಸಹಾಯ ಮಾಡು.

jackanapes

ನಾಮವಾಚಕ

  • (ಪ್ರಾಚೀನ ಪ್ರಯೋಗ) ಪಳಗಿದ-ಕಪಿ, ಕೋತಿ;
  • ತುಂಟ (ಮಗು); ತಂಟಲಮಾರಿ.
  • ಜಂಬದ ಕೋಳಿ.
  • ತಲೆಹರಟೆ (ಹುಡುಗ, ವ್ಯಕ್ತಿ).
  • ಮಂಗನಂಥವನು(ಳು).

jackaroo

ನಾಮವಾಚಕ

(jackeroo ಸಹ). ತರಬೇತಿಗಾರ; (ಆಸ್ಟ್ರೇಲಿಯ, ಆಡುಮಾತು) (ಕುರಿಕ್ಷೇತ್ರದಲ್ಲಿ) ಕೆಲಸ ಕಲಿಯಲು, ತರಬೇತಿ ಪಡೆಯಲು ಬಂದವನು.

jackaroo

ಅಕರ್ಮಕ ಕ್ರಿಯಾಪದ

(ಆಸ್ಟ್ರೇಲಿಯ) (ಆಡುಮಾತು) (ಕುರಿ ಕ್ಷೇತ್ರದಲ್ಲಿ) ತರಬೇತಿ ಪಡೆಯುತ್ತಿರು.

jackass

ನಾಮವಾಚಕ

ಪದಗುಚ್ಛ

laughing jackass ನಗುವ ಕೊಕ್ಕರೆ; ಆಸ್ಟ್ರೇಲಿಯಾದ ಭಾರಿ ಗಾತ್ರದ, ಕರಾಳವಾಗಿ ಕೇಕೆ ಹಾಕುವ ಕೊಕ್ಕರೆ.

  • ಗಂಡು ಕತ್ತೆ.
  • ಪೆದ್ದ; ದಡ್ಡ; ಹೆಡ್ಡ; ಮಡ್ಡಿ; ಮಡೆಯ; ಮಂಕ; ಮುಟ್ಠಾಳ.

jackboot

ನಾಮವಾಚಕ

  • ಜ್ಯಾಕ್‍ಬೂಟು;
    1. (ಬ್ರಿಟಿಷ್‍ ಪ್ರಯೋಗ) ಮುಖ್ಯವಾಗಿ 17, 18ನೇ ಶತಮಾನಗಳ ರಾವುತರು ಮೆಟ್ಟಿಕೊಳ್ಳುತ್ತಿದ್ದ, ಮೊಣಕಾಲಿನ ಮೇಲೆ ಬರುವ ಬೂಟು. Figure: jackboot
    2. ನಾಜಿ ಸೈನಿಕರು ಮೆಟ್ಟಿಕೊಳ್ಳುತ್ತಿದ್ದ, ಭಾರಿ ಗಾತ್ರದ ಬೂಟು.
  • (ರೂಪಕವಾಗಿ) ತುಳಿತ; ದಮನ; ದಬ್ಬಾಳಿಕೆ; ದುರ್ಬಲರನ್ನು ಅದುಮುವ ನಡವಳಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App