भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Jacob’s staff

ನಾಮವಾಚಕ

ಜೇಕಬ್‍ನ ದಂಡ; ಜೇಕಬ್‍ ಕಡ್ಡಿ;

  • ಮೋಜಣಿದಾರರು ಆಸರೆಯಂತೆ ಬಳಸುವ ಮೂಗಾಲಿನ, ಕಬ್ಬಿಣದ ಮುಸುಕಿರುವ ಕಂಬಿ, ದಂಡ.
  • ದೂರಗಳನ್ನೂ ಎತ್ತರಗಳನ್ನೂ ಅಳೆಯುವ ಒಂದು ಸಲಕರಣೆ.

Jacobean

ಗುಣವಾಚಕ

  • (ಮುಖ್ಯವಾಗಿ ವಾಸ್ತುಶಿಲ್ಪದ ವಿಷಯದಲ್ಲಿ) ಜ್ಯಾಕೋಬಿಯನ್‍; ಇಂಗ್ಲೆಂಡಿನ ಮೊದಲನೆಯ ಜೇಮ್ಸ್‍ ದೊರೆಯ ಆಳ್ವಿಕೆಯ (1603–1625) ಕಾಲದ.
  • ಸೆಂಟ್‍ ಜೇಮ್ಸ್‍ ದಿ ಲೆಸ್‍ನ ಅಥವಾ ಆತನ ಉಪದೇಶ ಪತ್ರದ.
  • (ಪೀಠೋಪಕರಣ) ಕಪ್ಪು ಓಕ್‍ (ಮರದ) ಬಣ್ಣದ.
  • (ಬ್ರಿಟಿಷ್‍ ಪ್ರಯೋಗ) (ನಾಟಕ, ಸಾಹಿತ್ಯ, ಮೊದಲಾದವುಗಳ ವಿಷಯದಲ್ಲಿ) ಜ್ಯಾಕೋಬಿಯನ್‍ ಕಾಲದ; ಹದಿನೇಳನೆಯ ಶತಮಾನದ ಮೊದಲ ಭಾಗದ.

Jacobean

ನಾಮವಾಚಕ

  • (ಇಂಗ್ಲೆಂಡಿನ) ಮೊದಲನೆಯ ಜೇಮ್ಸ್‍ ದೊರೆಯ (ಆಳ್ವಿಕೆಯ) ಕಾಲದ ವ್ಯಕ್ತಿ ಅಥವಾ ವಸ್ತು.
  • = Jacobite(2).

Jacobin

ನಾಮವಾಚಕ

  • ಜ್ಯಾಕೊಬಿನ್‍;
    1. ಡಾಮಿನಿಕನ್‍ ಪಂಥದ ಕ್ರೈಸ್ತ ಪಾದ್ರಿ.
    2. (ಹ್ರೆಂಚ್‍ ಮಹಾಕ್ರಾಂತಿಯ ಕಾಲದ ಪ್ಯಾರಿಸಿನ) ತೀವ್ರಗಾಮಿ ಪ್ರಜಾಪ್ರಭುತ್ವವಾದಿಗಳ ಸಮಾಜದ ಸದಸ್ಯ.
    3. ಆ ಸಮಾಜದ ತತ್ತ್ವಗಳಲ್ಲಿ ಸಹಾನುಭೂತಿಯುಳ್ಳವನು.
  • ಉಗ್ರಗಾಮಿ; ತೀವ್ರಗಾಮಿ; ತೀವ್ರತರವಾದ ತತ್ತ್ವಗಳ ಪ್ರತಿಪಾದಕ ಅಥವಾ ಅನುಯಾಯಿ.

jacobin

ನಾಮವಾಚಕ

ಮುಸುಕಿನ ಪಾರಿವಾಳ; ಕುತ್ತಿಗೆಯ ಮೇಲೆ ಗರಿಗಳು ಹಿಂದುಮುಂದಾಗಿದ್ದು ಕ್ರೈಸ್ತಪಾದ್ರಿಯ ಮುಸುಕಿನಂತೆ, ಕುಲಾವಿಯಂತೆ, ಅಳವಟ್ಟಿರುವ ಒಂದು ಜಾತಿಯ ಪಾರಿವಾಳ.

Jacobinic

ಗುಣವಾಚಕ

ಉಗ್ರಗಾಮಿ ಪಕ್ಷದ; ತೀವ್ರ ಉಗ್ರಪಕ್ಷದ; ಉಗ್ರ ಪ್ರಜಾಪ್ರಭುತ್ವವಾದದ.

Jacobinical

ಗುಣವಾಚಕ

= Jacobinic.

Jacobinism

ನಾಮವಾಚಕ

  • ಜ್ಯಾಕೊಬಿನ್‍ ತತ್ತ್ವ.
  • ತೀವ್ರ, ಉಗ್ರ – ಪಕ್ಷ, ವಾದ ಯಾ ತತ್ತ್ವ.

Jacobinize

ಸಕರ್ಮಕ ಕ್ರಿಯಾಪದ

ಜ್ಯಾಕೊಬೀಕರಿಸು; (ಒಬ್ಬನನ್ನು) ಉಗ್ರಪಕ್ಷವಾದಕ್ಕೆ ತಿರುಗಿಸು; ಉಗ್ರಪಕ್ಷೀಯನನ್ನಾಗಿಸು.

Jacobite

ನಾಮವಾಚಕ

ಜ್ಯಾಕೊಬೈಟ್‍:

  • ಇಂಗ್ಲೆಂಡಿನಲ್ಲಿ ರಾಜತ್ಯಾಗ ಮಾಡಿದ ಎರಡನೆಯ ಜೇಮ್ಸ್‍ನ (1685-88) ಅಥವಾ ರಾಜ್ಯಕ್ಕೆ ಹಕ್ಕು ಹೂಡಿದ ಅವನ ವಂಶಜರ ಯಾ ಸ್ಟೂವರ್ಟರ ಬೆಂಬಲಿಗ, ಅನುಯಾಯಿ.
  • ಅಮೆರಿಕದ ಕಾದಂಬರಿಕಾರ ಹಾಗೂ ವಿಮರ್ಶಕ ಹೆನ್ರಿ ಜೇಮ್ಸ್‍ನ ಅಭಿಮಾನಿ.
  • (ಸಿರಿಯದ 6ನೇ ಶತಮಾನದ ಸಂನ್ಯಾಸಿ) ಜ್ಯಾಕೊಬಸ್‍ ಬರಡೆಯಸನ ಅನುಯಾಯಿ.

Jacobitical

ಗುಣವಾಚಕ

ಇಂಗ್ಲೆಂಡಿನ ರಾಜ ಎರಡನೆಯ ಜೇಮ್ಸ್‍ನ ಪಕ್ಷದ, ಅಥವಾ ಅವನ ವಂಶಜರ ಪಕ್ಷದ.

Jacobitism

ನಾಮವಾಚಕ

ಜ್ಯಾಕೊಬೈಟ್‍ ಪಕ್ಷದ ಗುರಿ, ತತ್ತ್ವ.

jaconet

ನಾಮವಾಚಕ

ಮೇಣಕಪಡ; ಪೊಲ್ಟೀಸ್‍ ಕಟ್ಟುವುದು ಮೊದಲಾದವಕ್ಕೆ ಬಳಸುವ ನೀರಿಳಿಯದಂಥ, ನಸು ದಪ್ಪದ, ಬಣ್ಣ ಕಟ್ಟಿದ, ಹತ್ತಿಯ ಬಟ್ಟೆ.

Jacquard

ನಾಮವಾಚಕ

  • ಜ್ಯಾಕಾರ್ಡ್‍; ತೂತುಗಳನ್ನು ಮಾಡಿದ ಕಾರ್ಡುಗಳುಳ್ಳ, ಚಿತ್ರನೆಯ್ಗೆಯನ್ನು ಮಾಡಲು ಅನುಕೂಲಿಸುವ ಸಲಕರಣೆ.
  • = Jacquard loom.
  • ಜಾಕಾರ್ಡ್‍ ಬಟ್ಟೆ; ಚಿತ್ರಿತ ನೆಯ್ಗೆಯ ಬಟ್ಟೆ.

Jacquard loom

ನಾಮವಾಚಕ

ಜ್ಯಾಕಾರ್ಡ್‍ ಮಗ್ಗ; ಚಿತ್ರನೆಯ್ಗೆ ಮಗ್ಗ; ಹ್ರಾನ್ಸಿನ ಲೈಅನ್ಸ್‍ ನಗರದ ಜ್ಯಾಕಾರ್ಡ್‍ (1834) ಎಂಬಾತನು ಬಟ್ಟೆಗಳಲ್ಲಿ ಚಿತ್ರನೆಯ್ಗೆ ನೆಯ್ಯಲು ರಚಿಸಿದ ಸಲಕರಣೆಯನ್ನು ಅಳವಡಿಸಿದ ಮಗ್ಗ.

jacquerie

ನಾಮವಾಚಕ

  • (ಮುಖ್ಯವಾಗಿ 1357–58ರಲ್ಲಿ ಹ್ರಾನ್ಸಿನಲ್ಲಿ ನಡೆದ) ರೈತಾಪಿ (ಜನರ) ದಂಗೆ.
  • ರೈತಾಪಿ ಜನ; ರೈತರು.

jactation

ನಾಮವಾಚಕ

  • (ಸಾಹಿತ್ಯ) ಜಂಬ ಕೊಚ್ಚುವುದು; ಬಡಾಯಿ ಹೊಡೆಯುವುದು.
  • = jactitation(2, 3).

jactitation

ನಾಮವಾಚಕ

ಪದಗುಚ್ಛ

jactitation of marriage = jactitation(1).

  • (ನ್ಯಾಯಶಾಸ್ತ್ರ) ಸುಳ್ಳು ಮದುವೆ; ಮಿಥ್ಯಾ ದಾಂಪತ್ಯ; ಮಿಥ್ಯಾ ವಿವಾಹ; ಒಬ್ಬನ ಹೆಂಡತಿ ಅಥವಾ ಒಬ್ಬಳ ಗಂಡ ಎಂದು ಹೇಳಿಕೊಂಡು ಸುಳ್ಳು ಹಕ್ಕು ಹೂಡುವ ಅಪರಾಧ.
  • (ವೈದ್ಯಶಾಸ್ತ್ರ) (ಕಾಯಿಲೆಯಿಂದ) ತೊಳಲಾಟ; ದೇಹದ ಎಡೆಬಿಡದ ಹೊರಳಾಟ.
  • (ವೈದ್ಯಶಾಸ್ತ್ರ) (ಸ್ನಾಯುಗಳ ಅಥವಾ ಕೈಕಾಲುಗಳ) ತುಡಿತ; ಕಂಪನ; ಸ್ಪಂದನ; ತುಯ್ತ; ಸೆಳೆತ; ಎಳೆತ.

Jacuzzi

ನಾಮವಾಚಕ

ಜಕೂಸಿ; ದೇಹದ ಅಂಗಗಳನ್ನು ನೀವಲು ನೀರೊಳಗೆ ಜಲಧಾರೆಗಳನ್ನು ಎರಚುವ ವ್ಯವಸ್ಥೆಯುಳ್ಳ ದೊಡ್ಡ ಸ್ನಾನದ ತೊಟ್ಟಿ, ಟಬ್ಬು.

jade

ನಾಮವಾಚಕ

  • ತಟ್ಟು; ಕೀಳು ಜಾತಿಯ ಕುದುರೆ; ಕೀಳುಜಾತಿಯ, ಸುಸ್ತುಬಿದ್ದ, ಜೀರ್ಣವಾದ, ಬಡಕಲು ಕುದುರೆ.
  • (ನಿಂದಿಸುವಲ್ಲಿ, ಸಾಮಾನ್ಯವಾಗಿ ತಮಾಷೆಯಾಗಿ) ಹೆಂಗಸು.

Search Dictionaries

Loading Results

Follow Us :   
  Download Bharatavani App
  Bharatavani Windows App