भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

juryman

ನಾಮವಾಚಕ

ನ್ಯಾಯದರ್ಶಿ; ನ್ಯಾಯದರ್ಶಿ ಮಂಡಲಿಯ ಸದಸ್ಯ.

jurywoman

ನಾಮವಾಚಕ

ನ್ಯಾಯದರ್ಶಿನಿ; ನ್ಯಾಯದರ್ಶಿ ಮಂಡಲಿಯ ಸದಸ್ಯೆ.

jussive

ನಾಮವಾಚಕ

(ವ್ಯಾಕರಣ) ಆಜ್ಞಾರ್ಥಕ; ವಿಧ್ಯರ್ಥಕ.

just

ಗುಣವಾಚಕ

ಪದಗುಚ್ಛ

the sleep of the just ಗಾಢ ನಿದ್ರೆ.

  • (ವ್ಯಕ್ತಿಯ ಅಥವಾ ನಡವಳಿಕೆಯ ವಿಷಯದಲ್ಲಿ) ನ್ಯಾಯವಾದ; ನಿಷ್ಪಕ್ಷಪಾತವಾದ; ನೈತಿಕವಾಗಿ ಸರಿಯಾದುದಕ್ಕೆ ಅಥವಾ ಯುಕ್ತವಾದುದಕ್ಕೆ ಅನುಗುಣವಾಗಿ ಮಾಡಿದ ಅಥವಾ ಮಾಡುವ.
  • (ಸಿಕ್ಕಿದ ಪುರಸ್ಕಾರ ಮೊದಲಾದವುಗಳ ವಿಷಯದಲ್ಲಿ) ತಕ್ಕ; ಯುಕ್ತ; ಅರ್ಹ; ಉಚಿತ; ಯಥೋಚಿತ; ಅರ್ಹತೆಗನುಗುಣವಾದ; ಯೋಗ್ಯತೆಗೆ ಸರಿಯಾದ; ಸಲ್ಲುವ; ಸಲ್ಲಬೇಕಾದ; ತಕ್ಕುದಾದ: a just reward ತಕ್ಕ ಪ್ರತಿಫಲ; ಅರ್ಹ ಪ್ರತಿಫಲ.
  • (ಭಾವನೆಗಳು, ಅಭಿಪ್ರಾಯಗಳು, ಮೊದಲಾದವುಗಳ ವಿಷಯದಲ್ಲಿ) ಸಕಾರಣವಾದ; ನ್ಯಾಯವಾದ; ಸಾಧಾರವಾದ: just resentment ಸಕಾರಣವಾದ ಕೋಪ; ನ್ಯಾಯವಾದ ಅಸಮಾಧಾನ; ಸಾಧಾರವಾದ ಮುನಿಸು.
  • (ಪ್ರಮಾಣ, ಗಾತ್ರ, ಮೊದಲಾದವುಗಳ ವಿಷಯದಲ್ಲಿ) ತಕ್ಕ; ಉಚಿತ(ವಾದ); ಸರಿಯಾದ; ನ್ಯಾಯವಾದ: just punishment ಉಚಿತ ಶಿಕ್ಷೆ; ತಕ್ಕ ದಂಡನೆ, ಶಾಸ್ತಿ.

just

ಕ್ರಿಯಾವಿಶೇಷಣ

ಪದಗುಚ್ಛ

  • ಸರಿಯಾಗಿ; ನಿಷ್ಕೃಷ್ಟವಾಗಿ; ಕರಾರುವಾಕ್ಕಾಗಿ: just at that spot ಸರಿಯಾಗಿ ಆ ಸ್ಥಳದಲ್ಲೇ; ಅದೇ ಸ್ಥಳದಲ್ಲೇ. just then ಆ ಹೊತ್ತಿಗೆ ಸರಿಯಾಗಿ. just three O’clock ಈಗ ಸರಿಯಾಗಿ ಮೂರು ಗಂಟೆ; ಈಗ ತಾನೇ, ಇದೀಗ, ಇನ್ನೂ – ಮೂರು ಗಂಟೆ ಅಷ್ಟೇ. just as I opened the door ನಾನು ಬಾಗಿಲು ತೆಗೆಯುವುದಕ್ಕೆ ಸರಿಯಾಗಿ; ನಾನು ಬಾಗಿಲು ತೆಗೆಯುತ್ತಿದ್ದಂತೆ. just what I want ನಾನು ಬಯಸಿದ್ದೇ; ನಾನೇನು ಬಯಸುತ್ತೇನೆಯೋ ಅದೇ.
  • ಹಾಗೆಯೇ; ಅಂತೆಯೇ; ಸರಿಯಾಗಿ: just as you say ನೀನು ಹೇಳಿದಂತೆಯೇ.
  • ಅದೇ; ಅದೇನೇ; ಅದೇಯೇ: that is just it ಹೌದು ಅದೇ; ವಿವಾದದಲ್ಲಿರುವ ಅಂಶ ಅದೇನೆ.
  • (ನಿಖರವಾದ ಸಮಾಚಾರವನ್ನು ಕೇಳುವ ಪ್ರಶ್ನಾರ್ಥಕ ಪದಗಳ ಜೊತೆಯಲ್ಲಿ) just how did you do it? ಅದನ್ನು ಹೇಗೆತಾನೇ ಮಾಡಿದೆ? I wonder just how good he is ಅವನು ಎಷ್ಟರಮಟ್ಟಿಗೆ ಒಳ್ಳೆಯವನೆಂದು ಅಥವಾ ಸಮರ್ಥನೆಂದು ನಾನು ಕೌತುಕಪಡುತ್ತೇನೆ.
  • ಕೇವಲ ಅಷ್ಟು ಮಾತ್ರ; ತಾವನ್ಮಾತ್ರ; ಎಷ್ಟು ಬೇಕೋ, ಅವಶ್ಯಕವೋ ಅಷ್ಟೇ: I just managed it ಅಷ್ಟು ಮಾತ್ರದಲ್ಲೇ, ಅಷರಲ್ಲೇ ಹೇಗೋ ಅದನ್ನು ನಿಭಾಯಿಸಿದೆ. I just saw him (ಬ್ರಿಟಿಷ್‍ ಪ್ರಯೋಗ) ಅವನನ್ನು ಕೇವಲ ನೋಡಿದೆ ಅಷ್ಟೇ. (wait) just a minute, please ದಯವಿಟ್ಟು ಒಂದೇ ಒಂದು ನಿಮಿಷ, ಒಂದು ನಿಮಿಷಮಾತ್ರ ತಡೆಯಿರಿ.
  • ಇದೀಗ; ಈಗ ತಾನೇ; ಈಗ ಸ್ವಲ್ಪ ಹೊತ್ತಿನಲ್ಲಿ; ಆ ಸಮಯಕ್ಕೆ ಸರಿಯಾಗಿ ಅಥವಾ ಸ್ವಲ್ಪ ಹೆಚ್ಚು ಕಡಿಮೆ ಆ ಹೊತ್ತಿಗೆ: I have just seen him (ಬ್ರಿಟಿಷ್‍ ಪ್ರಯೋಗ) ಅವನನ್ನು ಈಗ ತಾನೇ ನೋಡಿದೆ.
  • (ಆಡುಮಾತು) ಕೇವಲ; ಇಷ್ಟೇ; ಅಷ್ಟೇ: it’s just that I don’t like him ನನಗೆ ಅವನ ವಿಷಯದಲ್ಲಿ ಒಲವಿಲ್ಲ, ಅಷ್ಟೆ; ನನಗೆ ಅವನನ್ನು ಕಂಡರೆ ಆಗುವುದಿಲ್ಲ, ಅಷ್ಟೆ. we are just good friends ನಾವು ಒಳ್ಳೆಯ ಸ್ನೇಹಿತರು ಅಷ್ಟೆ. it just doesn’t make sense ಅದರಲ್ಲೇನೂ, ಅದಕ್ಕೇನೂ – ಅರ್ಥವಿಲ್ಲ, ಅಷ್ಟೆ. just listen to that cheering! ಆ ಜಯಕಾರವನ್ನು ಸ್ವಲ್ಪ ಕೇಳು, ಆಲಿಸು!
  • ಒಂದಿಷ್ಟು; ಸ್ವಲ್ಪ: just (you) wait till I catch you ನಾನು ನಿನ್ನನ್ನು ಹಿಡಿಯುವವರೆಗೂ, ನನಗೆ ನೀನು ಸಿಕ್ಕುವವರೆಗೂ – ಒಂದಿಷ್ಟು ತಡೆ, ಸ್ವಲ್ಪ ತಾಳು.
  • (ಆಡುಮಾತು) ನಿಜಕ್ಕೂ; ಖಂಡಿತ(ವಾಗಿಯೂ); ನಿಜವಾಗಿಯೂ: it is just splendid ಅದು ನಿಜಕ್ಕೂ ಅದ್ಭುತವಾಗಿದೆ.
  • ಸಂಪೂರ್ಣವಾಗಿ; ಪೂರ್ತಿಯಾಗಿ; ಸರ್ವಥಾ: not just yet ಇನ್ನೂ (ಪೂರ್ತಿ) ಇಲ್ಲ; ಈಗಲೇ ಇನ್ನೂ ಇಲ್ಲ ಅಥವಾ ಅಲ್ಲ; ಇನ್ನೂ ಆಗಿಲ್ಲ. it is just as well that I checked ಈಗಲೇ ನಾನು (ಅದನ್ನು) ಪರೀಕ್ಷಿಸಿದರೆ ಒಳ್ಳೆಯದು.
  • (ಅಶಿಷ್ಟ) (ಅವಧಾರಣಾರ್ಥದಲ್ಲಿ) ಸರಿಯಾಗಿ; ನಿಜವಾಗಿ; ಸತ್ಯವಾಗಿ; ಖಚಿತವಾಗಿ; ನಿಶ್ಚಿತವಾಗಿ: won’t I just give him a pasting! ನಾನವನಿಗೆ ಸರಿಯಾಗಿ ಕೊಡ್ತೀನೋ ಇಲ್ಲವೋ ನೋಡುತ್ತಿರು.

justice

ನಾಮವಾಚಕ

ಪದಗುಚ್ಛ

ನುಡಿಗಟ್ಟು

  • ನ್ಯಾಯಶೀಲ ವರ್ತನೆ; ನ್ಯಾಯವಾದ ನಡವಳಿಕೆ.
  • ನ್ಯಾಯ; ನಿಷ್ಪಕ್ಷಪಾತತೆ.
  • ನ್ಯಾಯಾಧಿಕಾರ; ನ್ಯಾಯವನ್ನು ಪಾಲಿಸುವುದರಲ್ಲಿ, ಸಮರ್ಥಿಸುವುದರಲ್ಲಿ ಬಳಸುವ ಅಧಿಕಾರ.
  • ನ್ಯಾಯ ವ್ಯವಹಾರ; ನ್ಯಾಯಕ್ರಮ; ನ್ಯಾಯಸ್ಥಾನದಲ್ಲಿ ಮೊಕದ್ದಮೆಯ ವಿಷಯದಲ್ಲಿ ಅನುಸರಿಸುವ ಕಾರ್ಯಧೋರಣೆ.
  • ನ್ಯಾಯಾಧೀಶ; ನ್ಯಾಯಾಧಿಪತಿ; ನ್ಯಾಯಮೂರ್ತಿ; ಮುಖ್ಯವಾಗಿ ಇಂಗ್ಲೆಂಡಿನಲ್ಲಿ ಸುಪ್ರೀಮ್‍ ಕೋರ್ಟ್‍ ಆಹ್‍ ಜೂಡಿಕೇಚರ್‍ ಎಂಬ ನ್ಯಾಯಾಲಯದಲ್ಲಿಯ ನ್ಯಾಯಾಧಿಕಾರಿ.

justiceship

ನಾಮವಾಚಕ

ನ್ಯಾಯಮೂರ್ತಿಯ – ಪದವಿ, ಅಧಿಕಾರ, ಕರ್ತವ್ಯ, ಸ್ಥಾನಮಾನ.

justiciable

ಗುಣವಾಚಕ

  • ನ್ಯಾಯಾಧೀನವಾದ; ನ್ಯಾಯಾಧಿಕಾರಕ್ಕೊಳಪಟ್ಟ; ಕಾನೂನಿಗೊಳಪಟ್ಟ.
  • ಕೋರ್ಟು ವಿಚಾರಣಾರ್ಹ; ಖಟ್ಲೆ ಯೋಗ್ಯ; ನ್ಯಾಯಾಲಯದಲ್ಲಿ ವಿಚಾರಣೆಗೆ – ಅರ್ಹವಾದ, ಯೋಗ್ಯವಾದ, ಒಳಪಡುವ.

justiciar

ನಾಮವಾಚಕ

(ಚರಿತ್ರೆ) (ಇಂಗ್ಲೆಂಡಿನ ನಾರ್ಮನ್‍ ಮತ್ತು ಪ್ರಾರಂಭದ ಪ್ಲಂಟಜೆನೆಟ್‍ ರಾಜರುಗಳ ಕೈಕೆಳಗಣ) ಪ್ರಮುಖ – ರಾಜಕೀಯ ಹಾಗೂ ನ್ಯಾಯಾಂಗದ ಅಧಿಕಾರಿ.

justiciary

ನಾಮವಾಚಕ

ಪದಗುಚ್ಛ

Court of Justiciary ಸ್ಕಾಟ್ಲೆಂಡಿನ ಅತ್ಯುನ್ನತ ಕ್ರಿಮಿನಲ್‍ – ನ್ಯಾಯಾಲಯ, ಕೋರ್ಟು.

  • ನ್ಯಾಯಪಾಲ(ಕ); ನ್ಯಾಯ ನಿರ್ವಹಣಾಧಿಕಾರಿ.
  • = justiciar.

justiciary

ಗುಣವಾಚಕ

ನ್ಯಾಯ ನಿರ್ವಾಹಕ; ನ್ಯಾಯನಿರ್ವಹಣೆಯ.

justifiability

ನಾಮವಾಚಕ

ಸಮರ್ಥನೀಯತೆ; ನೈತಿಕವಾಗಿ ಅಥವಾ ಕಾನೂನುರೀತ್ಯಾ ಸರಿಯೆಂದು ಸಮರ್ಥಿಸಲಾಗುವಿಕೆ, ರುಜುವಾತು ಪಡಿಸಲಾಗುವಿಕೆ.

justifiable

ಗುಣವಾಚಕ

ಪದಗುಚ್ಛ

(ವ್ಯಕ್ತಿ, ಕೆಲಸ, ಮೊದಲಾದವುಗಳ ವಿಷಯದಲ್ಲಿ ಕಾನೂನು ರೀತ್ಯಾ ಯಾ ನೈತಿಕವಾಗಿ) ಸಮರ್ಥನೀಯ; ನ್ಯಾಯವೆಂದು ಸಮರ್ಥಿಸಲಾಗುವ. justifiable homicide ಸಮರ್ಥನೀಯ ಕೊಲೆ; ನ್ಯಾಯಸಮ್ಮತ (ನರ)ಹತ್ಯೆ; ಆಕಸ್ಮಿಕ ಘಟನೆ, ಅಪಘಾತ ಅಥವಾ ತಪ್ಪು ಕಲ್ಪನೆಯಿಂದ ನಡೆಯುವ, ಆತ್ಮರಕ್ಷಣೆಯಲ್ಲಿ ಅಥವಾ ನ್ಯಾಯಪಾಲನೆಯಲ್ಲಿ ತೊಡಗಿದ್ದಾಗ ಉಂಟಾಗಬಹುದಾದ, ಮುಖ್ಯವಾಗಿ ನ್ಯಾಯಾಲಯವು ಮರಣದಂಡನೆ ವಿಧಿಸಬೇಕಾದಂಥ ಸಂದರ್ಭದಲ್ಲಿ ಯಾವ ದೋಷವೂ ಇಲ್ಲವೆಂದು ತೀರ್ಮಾನಿಸಬಹುದಾದ ಕೊಲೆ.

justifiableness

ನಾಮವಾಚಕ

= justifiability.

justifiably

ಕ್ರಿಯಾವಿಶೇಷಣ

ಸಮರ್ಥಿಸಲಾಗುವಂತೆ; ಸಮರ್ಥನೀಯವಾಗಿ; ಸರಿಯೆಂದು ತೋರಿಸಲು ಸಾಧ್ಯವಾಗುವಂತೆ, ಸಾಧ್ಯವಾಗುವ ರೀತಿಯಲ್ಲಿ.

justification

ನಾಮವಾಚಕ

  • ಸಮರ್ಥನೆ; ನ್ಯಾಯವಾಗಿದೆ, ಸಕಾರಣವಾಗಿದೆ, ಸಾಧಾರವಾಗಿದೆ – ಎಂದು ತೋರಿಸುವುದು.
  • (ದೇವತಾಶಾಸ್ತ್ರ) ದೇವರಿಂದ ಮಾನವನ ಸಮರ್ಥನೆ ಅಥವಾ ದೈವ ಕೃಪೆಯಿಂದ ಮಾನವನ ಪಾಪ ವಿಮೋಚನೆ.
  • (ಮುದ್ರಣ) ಸಾಲು ಸರಿಹೊಂದಿಸುವಿಕೆ ಅಥವಾ ಸರಿಹೊಂದಿಸಿರುವಿಕೆ.

justificative

ಗುಣವಾಚಕ

  • ಸಮರ್ಥಿಸುವ, ಪೋಷಕ – ಸಾಕ್ಷ್ಯರೂಪದ.
  • ಸಮರ್ಥನೆಯ; ಸಮರ್ಥನೆ ರೂಪದ.

justificatory

ಗುಣವಾಚಕ

= justificative.

justify

ಸಕರ್ಮಕ ಕ್ರಿಯಾಪದ

ಪದಗುಚ್ಛ

justify bail (ಒಬ್ಬನು ಒದಗಿಸುವ) ಜಾಮೀನನ್ನು ಸಮರ್ಥಿಸು; ಜಾಮೀನಾಗಲು ಜಾಮೀನುದಾರನಿಗೆ ಅರ್ಹತೆ ಇದೆ ಎಂದು, ಸಾಕಷ್ಟು ಹಣವಿದೆ ಎಂದು, ಅವನಿಂದ ಪ್ರಮಾಣ ಮಾಡಿಸಿ ತೋರಿಸು.

  • (ವ್ಯಕ್ತಿ, ಕ್ರಿಯೆ, ಮೊದಲಾದವುಗಳ) ನ್ಯಾಯತ್ವವನ್ನು, ಸಾಧುತ್ವವನ್ನು – ತೋರಿಸು, ಸಾಧಿಸು.
  • (ಹೇಳಿಕೆ, ಹಕ್ಕು, ಮೊದಲಾದವನ್ನು) ಸಮರ್ಥಿಸು; ಸಾಧಿಸು; ರುಜುವಾತುಗೊಳಿಸು; ನ್ಯಾಯವೆಂದು, ಸರಿಯೆಂದು ತೋರಿಸು.
  • (ನಡೆವಳಿಕೆ, ಹಕ್ಕು, ಮೊದಲಾದವಕ್ಕೆ) ಸಮರ್ಪಕ ಕಾರಣಗಳನ್ನು ಕೊಡು; ಸರಿಯಾದ ಆಧಾರಗಳನ್ನು ನೀಡು; ರುಜುವಾತು ಒದಗಿಸು.
  • (ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ಪರಿಸ್ಥಿತಿಗಳ ವಿಷಯದಲ್ಲಿ) ಸಮರ್ಥಕವಾಗಿರು; ಸಮರ್ಥಿಸುವಂತಿರು; ಸಾಧಕವಾಗಿರು.
  • (ಭೂತಕೃದಂತದಲ್ಲಿ) ನ್ಯಾಯವಾಗಿರು; ಸಾಧುವಾಗಿರು; ಸರಿಯಾಗಿರು; ಸಮರ್ಥನೀಯವಾಗಿರು: I am justified in assuming ಹೀಗೆಂದು ಊಹಿಸುವುದರಲ್ಲಿ ನ್ಯಾಯವಾಗಿದ್ದೇನೆ.
  • (ದೇವತಾಶಾಸ್ತ್ರ) (ಏಸುಕ್ರಿಸ್ತನು ಧರ್ಮಸ್ವರೂಪಿಯಾಗಿರುವುದರ ಆಧಾರದ ಮೇಲೆ ಅಥವಾ ರೋಮನ್‍ ಕ್ಯಾಥೊಲಿಕ್‍ರ ಪ್ರಕಾರ ದೈವಕೃಪೆಯ ಫಲವಾಗಿ, ಒಬ್ಬನಿಗೆ) ಪಾಪವಿಮೋಚನೆ ಘೋಷಿಸು; ಪಾಪದ ಶಿಕ್ಷೆಯಿಂದ ವಿಮೋಚನೆ ದೊರೆತಿದೆ ಎಂದು ಘೋಷಿಸು.
  • (ಮುದ್ರಣ) ಸಾಲು – ಹೊಂದಿಸು, ಸರಿಹೊಂದಿಸು; ಅಚ್ಚು ಮೊಳೆಗಳ ಸಾಲು ಸರಿಯಾಗಿರುವಂತೆ, ಖಾಲಿ ಸ್ಥಳವನ್ನು ಅಂದವಾಗಿ ತುಂಬುವಂತೆ, ಅಚ್ಚು ಪಂಕ್ತಿ ಸಾಲನ್ನು ಜೋಡಿಸು.

justly

ಕ್ರಿಯಾವಿಶೇಷಣ

  • ನ್ಯಾಯವಾಗಿ; ನ್ಯಾಯಯುತವಾಗಿ.
  • ಸಕಾರಣವಾಗಿ; ಸರಿಯಾಗಿ.
  • ಉಚಿತವಾಗಿ; ಸರಿಯಾಗಿ; ಯುಕ್ತವಾಗಿ.

Search Dictionaries

Loading Results

Follow Us :   
  Download Bharatavani App
  Bharatavani Windows App