भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

justness

ನಾಮವಾಚಕ

  • ನ್ಯಾಯವಾಗಿರುವಿಕೆ; ನ್ಯಾಯಯುತತೆ.
  • ಸಕಾರಣತೆ; ಸೂಕ್ತವಾದ ಕಾರಣ ಇರುವಿಕೆ.
  • ಉಚಿತತೆ; ಯುಕ್ತತೆ.

Jut

ನಾಮವಾಚಕ

  • ಚಾಚು.
  • ಮುಂಚಾಚು; ಮುಂದಕ್ಕೆ ಚಾಚಿಕೊಂಡಿರುವ ಭಾಗ, ತುದಿ.

jut

ಅಕರ್ಮಕ ಕ್ರಿಯಾಪದ

(ಮುಂದಕ್ಕೆ, ಹಿಂದಕ್ಕೆ ಇತ್ಯಾದಿ) ಚಾಚು; ಚಾಚಿಕೊಂಡಿರು.

jute

ನಾಮವಾಚಕ

ಗೋಣಿನಾರು; ಹಸಿಬೆ; ಸೆಣಬಿನ ನಾರು; ರಟ್ಟು ಬಟ್ಟೆ, ಹಗ್ಗ, ಗೋಣಿತಟ್ಟು, ಮೊದಲಾದವನ್ನು ತಯಾರಿಸಲು ಬಳಸುವ, ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರು.

Jute

ನಾಮವಾಚಕ

ಜೂಟ್‍; ಕ್ರಿಸ್ತಶಕ 5, 6ನೇ ಶತಮಾನಗಳಲ್ಲಿ ಬ್ರಿಟನ್ನಿನ ಮೇಲೆ ದಾಳಿ ಮಾಡಿದ ಜರ್ಮನಿಯ ಜೂಟ್‍ ಬುಡಕಟ್ಟಿನವನು.

Jutish

ಗುಣವಾಚಕ

  • ಜೂಟ್‍ ಜನಾಂಗದ.
  • ಜೂಟ್‍ (ಜನಾಂಗದ) ಮೂಲದ.

juvenescence

ನಾಮವಾಚಕ

ಎಳೆ ಹರೆಯ; ಕೌಮಾರ್ಯ; ಕೂಸುತನದಿಂದ ಹರೆಯಕ್ಕೆ ಕ್ರಮೇಣ ಆಗುವ ಬೆಳವಣಿಗೆಯ ಅವಧಿ.

juvenescent

ಗುಣವಾಚಕ

ಎಳೆ ಹರೆಯದ; ಕೌಮಾರ್ಯದ.

juvenile

ಗುಣವಾಚಕ

  • ಚಿಕ್ಕ ವಯಸ್ಸಿನ; ಎಳೆ ಹರೆಯದ; ಕೌಮಾರ್ಯದ.
  • ಹರೆಯದ; ತಾರುಣ್ಯದ; ಯೌವನದ.
  • ಹರೆಯಕ್ಕೆ ತಕ್ಕ; ಯೌವನೋಚಿತ; ತಾರುಣ್ಯೋಚಿತ.
  • ಹರೆಯದ, ಯೌವನದ, ತಾರುಣ್ಯದ – ಲಕ್ಷಣವಾದ.

juvenile

ನಾಮವಾಚಕ

  • ಕುಮಾರ ಅಥವಾ ಕುಮಾರಿ; ಎಳೆ ಹರೆಯದವನು(ಳು).
  • ಹರೆಯದವನು(ಳು); ಯುವಕ(ತಿ).
  • (ವ್ಯಾಪಾರದ ಪರಿಭಾಷೆಯಲ್ಲಿ) ಬಾಲಸಾಹಿತ್ಯ; ಮಕ್ಕಳ ಸಾಹಿತ್ಯ; ಬಾಲಗ್ರಂಥ; ಮಕ್ಕಳ, ಎಳೆಯರ – ಪುಸ್ತಕ; ಮಕ್ಕಳಿಗಾಗಿ ಬರೆದ ಪುಸ್ತಕ.
  • ಯುವ ಪಾತ್ರಧಾರಿ; ಯುವಕನ ಪಾತ್ರವಹಿಸುವ ನಟ.

juvenile court

ನಾಮವಾಚಕ

ಬಾಲ ನ್ಯಾಯಾಲಯ; ಮಕ್ಕಳ ಕೋರ್ಟು; ಎಳೆಯರ ನ್ಯಾಯಾಲಯ; (17 ವರ್ಷದೊಳಗಿನ) ಬಾಲಾಪರಾಧಿಗಳನ್ನು ವಿಚಾರಣೆ ಮಾಡುವ ನ್ಯಾಯಸ್ಥಾನ.

juvenile delinquency

ನಾಮವಾಚಕ

ಎಳೆಯರ, ಎಳೆ ಹರೆಯದವರ – ತಪ್ಪಿತ; ಬಾಲಾಪರಾಧ.

juvenile delinquent

ನಾಮವಾಚಕ

ಎಳೆ ಹರೆಯದ ತಪ್ಪಿತಸ್ಥ; ಬಾಲಾಪರಾಧಿ.

juvenilely

ಕ್ರಿಯಾವಿಶೇಷಣ

ಬಾಲಿಶವಾಗಿ; ಎಳೆಯನ(ಳ)ಂತೆ; ಬಾಲಕನಂತೆ ಅಥವಾ ಬಾಲಕಿಯಂತೆ.

juvenilia

ನಾಮವಾಚಕ

(ಬಹುವಚನ) ಯುವಕೃತಿಗಳು; (ಸಾಹಿತಿಯ, ಕಲೆಗಾರನ) ಹರೆಯದ, ಪೂರ್ವ ವಯಸ್ಸಿನ ಬರಹ ಅಥವಾ ಕಲಾಕೃತಿ; ಹರೆಯದಲ್ಲಿ, ಯೌವನದಲ್ಲಿ ರಚಿಸುವ ಕೃತಿಗಳು ಅಥವಾ ಅಂಥ ಕೃತಿಗಳ ಸಂಕಲನ.

juvenility

ನಾಮವಾಚಕ

ಹುಡುಗತನ; ಬಾಲಿಶತೆ; ಎಳೆ ಹರೆಯದ ಮಕ್ಕಳಂಥ ಸ್ವಭಾವ, ಪ್ರವೃತ್ತಿ.

juxtapose

ಸಕರ್ಮಕ ಕ್ರಿಯಾಪದ

  • (ವಸ್ತುಗಳನ್ನು) ಪಕ್ಕಪಕ್ಕದಲ್ಲಿಡು; ಉಪನಿವೇಶಿಸು; ಒಂದರ ಪಕ್ಕದಲ್ಲಿ ಒಂದನ್ನು ಇಡು.
  • (ಒಂದು ವಸ್ತುವನ್ನು ಬೇರೊಂದು ವಸ್ತುವಿನ) ಮಗ್ಗುಲಲ್ಲಿಡು; ಪಕ್ಕದಲ್ಲಿಡು.

juxtaposition

ನಾಮವಾಚಕ

  • ಪಕ್ಕಪಕ್ಕದಲ್ಲಿಡುವುದು; ಉಪನಿವೇಶನ; ಒಂದರ ಪಕ್ಕದಲ್ಲೊಂದನ್ನು ಇಡುವುದು.
  • ಪಾರ್ಶ್ವಸ್ಥತೆ; ಮಗ್ಗುಲಲ್ಲಿರುವುದು; ಪಕ್ಕಪಕ್ಕದಲ್ಲಿರುವುದು.

juxtapositional

ಗುಣವಾಚಕ

ಪಾರ್ಶ್ವಸ್ಥ: ಮಗ್ಗುಲಿನ; ಮಗ್ಗುಲಲ್ಲಿರುವ; ಪಕ್ಕಪಕ್ಕದಲ್ಲಿರುವ ಅಥವಾ ಅದಕ್ಕೆ ಸಂಬಂಧಪಟ್ಟ.

Search Dictionaries

Loading Results

Follow Us :   
  Download Bharatavani App
  Bharatavani Windows App