भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

jade

ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಭೂತಕೃದಂತದಲ್ಲಿ) ಬಳಲಿಸು; ನಿತ್ರಾಣಗೊಳಿಸು; ಕಷ್ಟದ ಕೆಲಸ ಮಾಡಿಸಿ ಸುಸ್ತು ಬೀಳಿಸು.

jade

ನಾಮವಾಚಕ

  • ಜೇಡ್‍:
    1. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಸಿಲಿಕೇಟುಗಳಿಂದಾದ, ಆಭರಣಗಳಲ್ಲಿ ಯಾ ಸಲಕರಣೆಗಳಲ್ಲಿ ಬಳಸುವ ಒಂದು ಬಗೆಯ, ಸಾಮಾನ್ಯವಾಗಿ ಹಸುರು ಬಣ್ಣದ, ರತ್ನ.
    2. ಸೋಡಿಯಂ ಅಲ್ಯೂಮಿನಿಯಮ್ಮಿನಿಂದಾದ ಹಸುರು ಬಣ್ಣದ ಇದೇ ರೀತಿಯ ರತ್ನ.
  • ಜೇಡ್‍ ಬಣ್ಣ; ಮಾಸಲು ಹಸುರು ಬಣ್ಣ.

jaded

ಗುಣವಾಚಕ

  • ಸುಸ್ತಾಗಿರುವ; ದಣಿದ,
  • ಬೇಸರವಾಗಿರುವ; ಚಿಟ್ಟು ಹಿಡಿದಿರುವ.

jadedly

ಕ್ರಿಯಾವಿಶೇಷಣ

  • ಸುಸ್ತಾಗಿರುವಂತೆ; ದಣಿದಿರುವಂತೆ.
  • ಬೇಸರವಾಗಿರುವಂತೆ; ಚಿಟ್ಟು ಹಿಡಿದಿರುವಂತೆ.

jadedness

ನಾಮವಾಚಕ

  • ಸುಸ್ತಾಗಿರುವಿಕೆ; ದಣಿವು.
  • ಬೇಸರವಾಗಿರುವಿಕೆ; ಚಿಟ್ಟು (ಹಿಡಿದಿರುವಿಕೆ).

jadeite

ನಾಮವಾಚಕ

= 3jade(1b).

jaeger

ನಾಮವಾಚಕ

(ಅಮೆರಿಕನ್‍ ಪ್ರಯೋಗ)

  • ಜರ್ಮನಿಯ ಅಥವಾ ಆಸ್ಟ್ರಿಯದ – ಬಂದೂಕದಾರ, ತೋಪುದಾರ, ಕೋವಿ ಸಿಪಾಯಿ.
  • ದೊಡ್ಡ (ಗಾತ್ರದ) ಕಡಲ ಕೊಕ್ಕರೆ.

jaeger

ನಾಮವಾಚಕ

= skua.

Jaffa

ನಾಮವಾಚಕ

ಜಾಹ (ಕಿತ್ತಳೆ); ದಪ್ಪ ಸಿಪ್ಪೆಯ, ಅಂಡಾಕಾರದ ಕಿತ್ತಳೆ ಹಣ್ಣು.

jag

ನಾಮವಾಚಕ

(ಮುಖ್ಯವಾಗಿ ಬಂಡೆಯ) ಮೊನೆ; ಚೂಪು; ಮೊನಚಾದ ಚಾಚು.

jag

ಸಕರ್ಮಕ ಕ್ರಿಯಾಪದ

  • ಕೋಚುಕೋಚಾಗಿ – ಹರಿ, ಕತ್ತರಿಸು.
  • (ಏಣಿನಲ್ಲಿ, ಮೇಲ್ಮೈಯಲ್ಲಿ) ಹಲ್ಲು ಮಾಡು; ಏರುತಗ್ಗು ಮಾಡು; ಕಚ್ಚುಕಚ್ಚು ಮಾಡು; ಗರಗಸದಂತೆ ಮಾಡು; ಕ್ರಕಚಾಕಾರ ಮಾಡು.

jag

ನಾಮವಾಚಕ

  • (ಅಶಿಷ್ಟ) (ಕುಡಿತದ) ಒಂದು – ಸುತ್ತು, ಸೂಳು, ವರಸೆ, ಪಟ್ಟು.
  • ಪಾನಕೇಳಿ; ಕುಡಿತದ ಮೋಜು.
  • ಸಣ್ಣ ಹೊರೆ.
  • (ಹೊರೆ ಹೊತ್ತು ಬರುವ) ಒಂದು – ವರಿಸೆ, ಸೂಳು.
  • ಒಬ್ಬೆ; ಒಂದಿಷ್ಟು ಪ್ರಮಾಣ; give another jag of oats to the horse ಕುದುರೆಗೆ ಇನ್ನೊಂದು ಒಬ್ಬೆ ಓಟ್‍ಗಳನ್ನು ತಿನ್ನಿಸು.
  • (ಬಿರುಸು ಕೆಲಸ, ಭಾವ, ಮೊದಲಾದವುಗಳಲ್ಲಿ) ಮಗ್ನತೆಯಿಂದ ತೊಡಗಿರುವ – ಅವಧಿ, ಸೂಳು.

jagged

ಗುಣವಾಚಕ

  • ಕೋಚುಕೋಚಾಗಿ ಕತ್ತರಿಸಿದ ಅಥವಾ ಹರಿದ ಅಂಚುಳ್ಳ.
  • ಹಲ್ಲು ಹಲ್ಲಾಗಿ ಅಥವಾ ಕೋಚುಕೋಚಾಗಿ ಕತ್ತರಿಸಿದ; ಗರಗಸದ ಅಂಚಿನಂತೆ ಮಾಡಿದ.

jagged

ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕುಡಿದು ಮತ್ತೇರಿದ; ಅಮಲೇರಿದ.

jaggedly

ಕ್ರಿಯಾವಿಶೇಷಣ

ಕೋಚುಕೋಚಾಗಿ; ಏರುತಗ್ಗಿರುವಂತೆ; ಚೂಪುಚೂಪಾಗಿ; ಕಚ್ಚುಕಚ್ಚಾಗಿ; ಮುಳ್ಳುಮುಳ್ಳಾಗಿ; ಹಲ್ಲುಹಲ್ಲಾಗಿ.

jaggedness

ನಾಮವಾಚಕ

ಕಚ್ಚುಕಚ್ಚಾಗಿರುವಿಕೆ; ಹಲ್ಲುಹಲ್ಲಾಗಿರುವಿಕೆ; ಕೋಚು ಕೋಚಾಗಿರುವಿಕೆ; ಏರುತಗ್ಗಾಗಿರುವುದು; ಮುಳ್ಳು ಮುಳ್ಳಾಗಿರುವುದು; ಚೂಪುಚೂಪಾಗಿರುವುದು.

jagger

ನಾಮವಾಚಕ

  • ಕೋಚುಕತ್ತರಿ; ಮೊನೆಮೊನೆಯಾಗಿರುವಂತೆ ಕತ್ತರಿಸುವ ಕತ್ತರಿ ಮೊದಲಾದ ಸಲಕರಣೆ.
  • (ಮುಖ್ಯವಾಗಿ ತಿಂಡಿ ತಿನಿಸುಗಳನ್ನು ಅಲಂಕಾರವಾಗಿ ಕತ್ತರಿಸುವ) ಹಲ್ಲಿನ ಚಕ್ರ.
  • (ಸವೆದು ಹೋದ ತಂತಿದಾರದಿಂದ ಮೇಲೆದ್ದ ತಂತಿಚೂರು ಮೊದಲಾದ) ಚೂಪಾಗಿ, ಚುಚ್ಚುವಂತಿರುವ ವಸ್ತು, ಮುಖ್ಯವಾಗಿ ಮುಳ್ಳು.

jaggy

ಗುಣವಾಚಕ

ಮೊನಚುಳ್ಳ; ಚೂಪುಗಳಿರುವ; ಕೋಚುಗಳಿಂದ ತುಂಬಿದ; ಉಬ್ಬು ತಗ್ಗಿರುವ; ಓರೆಕೋರೆಯಿರುವ: jaggy teeth ಚೂಪುಚೂಪಾದ ಹಲ್ಲುಗಳು.

jaghir

ನಾಮವಾಚಕ

(ಭಾರತ)

  • ಜಹಗೀರು; ಜಹಗೀರು ಕೊಡುವುದು; ಒಂದು ಜಿಲ್ಲೆಯ, ಪ್ರಾಂತದ ಆಡಳಿತವನ್ನೂ ವರಮಾನವನ್ನೂ ಒಬ್ಬನಿಗೆ ಅಥವಾ ಒಂದು ಸಂಸ್ಥೆಗೆ ಸರ್ಕಾರ ವಹಿಸುವುದು.
  • (ಹಾಗೆ ಕೊಟ್ಟ) ಜಹಗೀರು (ಪ್ರಾಂತ).

jaghirdar

ನಾಮವಾಚಕ

ಜಹಗೀರುದಾರ; ಜಹಗೀರಿನ ಒಡೆಯ.

Search Dictionaries

Loading Results

Follow Us :   
  Download Bharatavani App
  Bharatavani Windows App