भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

jaghire

ನಾಮವಾಚಕ

= jaghir.

jaguar

ನಾಮವಾಚಕ

ಜಾಗ್ವರ್‍; ಮಧ್ಯ ಮತ್ತು ದಕ್ಷಿಣ ಅಮೆರಿಕದ ಕಾಡುಗಳಲ್ಲಿ ವಾಸಿಸುವ, ಪ್ಯಾಂತರ ಆಂಕ ಕುಲದ, ಒಂದು ಬಗೆಯ ಚಿರತೆ.

jaguarundi

ನಾಮವಾಚಕ

ಜ್ಯಾಗ್ವರುಂಡಿ; ದಕ್ಷಿಣ ಮತ್ತು ಮಧ್ಯ ಅಮೆರಿಕದ, ಬೂದು ಬಣ್ಣದ, ಉದ್ದ ಬಾಲದ, ಬೆಕ್ಕಿನ ಜಾತಿಯ ಪ್ರಾಣಿ.

jai alai

ನಾಮವಾಚಕ

ಹೈ ಅಲೈ (ಆಟ); ದೊಡ್ಡ ದೊಡ್ಡ ವರ್ತುಲಾಕಾರದ ಬುಟ್ಟಿಗಳೊಡನೆ ಆಡುವ, (ಪೆಲೋಟ ಆಟದಂಥ) ಆಟ.

jail

ನಾಮವಾಚಕ

= $^1$gaol.

jail

ಸಕರ್ಮಕ ಕ್ರಿಯಾಪದ

= $^2$gaol.

jailbird

ನಾಮವಾಚಕ

= gaolbird.

jailbreak

ನಾಮವಾಚಕ

= gaolbreak.

jailer

ನಾಮವಾಚಕ

= gaoler.

jailor

ನಾಮವಾಚಕ

= gaoler.

Jain

ನಾಮವಾಚಕ

ಜೈನ; ಜೈನ ಧರ್ಮಾವಲಂಬಿ.

Jain

ಗುಣವಾಚಕ

  • ಜೈನರ.
  • ಜೈನ ಮತದ, ತತ್ತ್ವದ.

Jainism

ನಾಮವಾಚಕ

ಜೈನ – ಮತ, ಧರ್ಮ.

Jainist

ನಾಮವಾಚಕ

ಜೈನ; ಜೈನ ಮತಾನುಯಾಯಿ.

jake

ಗುಣವಾಚಕ

(ಅಶಿಷ್ಟ) (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಸರಿ(ಯಾಗಿರುವ); ಸಮರ್ಪಕ(ವಾದ).

jalap

ನಾಮವಾಚಕ

ಜ್ಯಾಲಪ್‍; ಜುಲಾಬು ಮದ್ದು; ಭೇದಿ ಮದ್ದು; ಮೆಕ್ಸಿಕೋದಲ್ಲಿ ಬೆಳೆಯುವ ಒಂದು ಬಗೆಯ ಬಳ್ಳಿಯ ಗೆಡ್ಡೆಯಂಥ ಬೇರಿನಿಂದ ತಯಾರಿಸಿದ ವಿರೇಚಕ (ಮದ್ದು).

jam

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ಎರಡು ತಲಗಳ ಮಧ್ಯೆ ವಸ್ತುವನ್ನು) ಅಮುಕು; ಜಡಿ; ತುರುಕು; ಇರುಕು; ಅಡಕು.
  • (ಯಂತ್ರ ಭಾಗವನ್ನು) ಕೆಲಸಕ್ಕೆ ಬಾರದಂತೆ – ಇರುಕಿಸು, ಅದುಮಿ ಬಿಡು, ಜಜ್ಜಿ ಬಿಡು.
  • ಯಂತ್ರವನ್ನು ಅದುಮಿ ಬಿಟ್ಟು ಕೆಲಸ ಮಾಡದಂತೆ ಮಾಡು.
  • (ವಸ್ತುಗಳು ಒತ್ತಾಗಿ ಮುದ್ದೆಯಾಗುವಂತೆ) ಅದುಮು; ಗಿಡಿ.
  • (ವಸ್ತುವನ್ನು, ಇಕ್ಕಟ್ಟು ಜಾಗ ಮೊದಲಾದವುಗಳ ಒಳಕ್ಕೆ) ಬಲವಾಗಿ – ತಳ್ಳು, ತುರುಕು, ನೂಕು, ಗಿಡಿ, ಜಡಿ.
  • (ಮಾರ್ಗ ಮೊದಲಾದವನ್ನು) ಕಿಕ್ಕಿರಿದು ತುಂಬಿ, ನೆರೆದು, ಸೇರಿ – ಅಡಚಿಬಿಡು, ಬಂದ್‍ ಮಾಡಿ ಬಿಡು. 7 (ರೇಡಿಯೋ) ಅದುಮು; ಇರುಕು; ಸಂಮರ್ದಿಸು (ಸಮಾನ ತರಂಗಾಂತರದಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡಿ ಅನ್ಯರ ರೇಡಿಯೋ ಅಥವಾ ರೇಡಾರ್‍ ಸಂಕೇತಗಳನ್ನು) ಗಜಿಬಿಜಿ ಮಾಡು.
  • ನಿರ್ಗಮನವನ್ನು – ತಡೆ, ನಿರೋಧಿಸು: we were jammed in ಹೊರಬರದಂತೆ ನಮ್ಮನ್ನು ತಡೆಯಲಾಯಿತು.
  • (ಸಾಮಾನ್ಯವಾಗಿ jam on) (ಬ್ರೇಕುಗಳು ಮೊದಲಾದವುಗಳನ್ನು) ಬಲವಂತವಾಗಿ ಅಥವಾ ಇದ್ದಕ್ಕಿದ್ದಂತೆ – ಅಮುಕು, ಹಾಕು, ಒತ್ತು.

jam

ನಾಮವಾಚಕ

  • ಒತ್ತಡ; ಇರುಕು; ಅಡಚು.
  • (ಒತ್ತಡ ಮೊದಲಾದವುಗಳಿಂದ ಯಂತ್ರ ಮೊದಲಾದವು) ಅಡಚಿಕೊಳ್ಳುವುದು; ಅಡಚಿಹೋಗಿ ನಿಂತುಬಿಡುವುದು.
  • (ಜನ, ವಾಹನ, ಮೊದಲಾದವುಗಳ) ನೂಕು ನುಗ್ಗಲು; ಕಿಕ್ಕಿರಿದ ನೆರವಿ; ಸಂಮರ್ದ: traffic jam ವಾಹನ ಸಂಮರ್ದ.
  • (ಆಡುಮಾತು) ಇಕ್ಕಟ್ಟು; ಪೀಕಲಾಟ; ಫಜೀತಿ; ಉಭಯಸಂಕಟ: owing to a thoughtless act I am in a jam ಒಂದು ಅವಿಚಾರದ ಕೆಲಸದಿಂದಾಗಿ ನಾನೀಗ ಪೀಕಲಾಟದಲ್ಲಿ ಸಿಕ್ಕಿಕೊಂಡಿದ್ದೇನೆ.

jam

ನಾಮವಾಚಕ

ನುಡಿಗಟ್ಟು

real jam ಸ್ವಾರಸ್ಯ; ಸವಿ; ಸುಖವನ್ನೂ ಮಾಧುರ್ಯವನ್ನೂ ಕೊಡುವಂಥದ್ದು: without real jam, cash and kisses, the world is a bitter pill ಕಾಂಚನ ಮತ್ತು ಚುಂಬನದಂಥ ಸ್ವಾರಸ್ಯಗಳಿಲ್ಲದಿದ್ದರೆ, ಈ ಲೋಕವೊಂದು ಕಹಿ ಗುಳಿಗೆ.

  • ಜ್ಯಾಮು; ಮುರಬ್ಬ; ಸಕ್ಕರೆಪಾಕದಲ್ಲಿ ಕುದಿಸಿ ರಸಾಯನದಂತೆ ಮಾಡಿದ ಹಣ್ಣು.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಸವಿದಿನಿಸು; ಅಹಿತವಾದುದನ್ನು ಮರೆಸುವ, ಹಿತಕರವೂ ಸುಲಭವೂ ಆದ ವಸ್ತು (ರೂಪಕವಾಗಿ ಸಹ): this job is not all jam ಈ ಕೆಲಸ ಸಂಪೂರ್ಣವಾಗಿ ಹಿತಕರವಾದುದೇನಲ್ಲ.

jam

ಸಕರ್ಮಕ ಕ್ರಿಯಾಪದ

  • ಜ್ಯಾಮ್‍ ಲೇಪಿಸು; ಮುರಬ್ಬ – ಹಚ್ಚು, ಸವರು.
  • ಜ್ಯಾಮ್‍ಮಾಡು; ಮುರಬ್ಬ(ವಾಗಿ) ಮಾಡು.

Search Dictionaries

Loading Results

Follow Us :   
  Download Bharatavani App
  Bharatavani Windows App