भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

jam

ನಾಮವಾಚಕ

= jam session.

jam session

ನಾಮವಾಚಕ

(ಜ್ಯಾಸ್‍ ಆಡುಮಾತು) ಆಶು ಜ್ಯಾಸ್‍ ಗೋಷ್ಠಿ, ಕಚೇರಿ; ಜ್ಯಾಸ್‍ ಮಂಡಲಿಯು ಸಮಯ ಸ್ಫೂರ್ತಿಯಿಂದ ನಡೆಸುವ ಗಾಯನ ಅಥವಾ ವಾದನಗೋಷ್ಠಿ.

jam tomorrow

ನಾಮವಾಚಕ

ನಾಳೆ ಸಿಹಿ; ಭವಿಷ್ಯ ಸುಖ; ಭಾವಿಸುಖ, ‘ನಾಳೆ’; ‘ನಾಳೆ’ ಎಂದು ವಾಗ್ದಾನ ಮಾಡುತ್ತಲೇ ಹೋಗುವ, ಆದರೆ ಎಂದೂ ಒದಗಿಸದ ಪ್ರಿಯವಸ್ತು.

jam-packed

ಜ್ಯಾಮ್‍ಪ್ಯಾಕ್ಟ್‍

ಗುಣವಾಚಕ

(ಆಡುಮಾತು) ಕಿಕ್ಕಿರಿದ; ಇಡಿಕಿರಿದ.

jam-stroke

ನಾಮವಾಚಕ

(ಬಿಲಿಯರ್ಡ್ಸ್‍ ಆಟ) ಅಡಚೇಟು; (ತೂತಿನೆಡೆಯಲ್ಲಿ ಎರಡು ಚೆಂಡುಗಳು ಅಡಚಿಕೊಂಡಾಗ ಅವನ್ನು ಆಟಗಾರನು ಒಂದಾದ ಮೇಲೊಂದರಂತೆ ಹೊಡೆಯುವ) ಚೆಂಡಿನ ಹೊಡೆತಗಳು.

Jam.

ಸಂಕ್ಷಿಪ್ತ

  • Jamaica.
  • James (ಹೊಸ ಒಡಂಬಡಿಕೆ).

Jamaica pepper

ನಾಮವಾಚಕ

ಜಮೇಕ ಸಾರಾಯಿ; ಜಮೇಕ ದ್ವೀಪದಲ್ಲಿ ತಯಾರಿಸಿದ ಒಂದು ತೆರನ ಸಾರಾಯಿ.

jamb

ನಾಮವಾಚಕ

  • (ಬಾಗಿಲು, ಕಿಟಕಿ, ಮೊದಲಾದವುಗಳ) ಪಕ್ಕನಿಲುವು; ಮಗ್ಗುಲುಪಟ್ಟಿ; ದ್ವಾರಬಂಧದ-ಕಂಬ, ತೋಳು.
  • (ಮುಖ್ಯವಾಗಿ ಬಹುವಚನದಲ್ಲಿ) ಒಲೆಯ ಪಕ್ಕದ – ದವಡೆಗಲ್ಲುಗಳು, ಕೆನ್ನೆಗಲ್ಲುಗಳು. ಮಗ್ಗಲುಗಲ್ಲುಗಳು.

jambalaya

ನಾಮವಾಚಕ

ಜಂಬಲಯ; ಸೀಗಡಿಗಳು, ಕೋಳಿಮರಿ ಮಾಂಸ, ಮೊದಲಾದವನ್ನು ಹಾಕಿ ಬೇಯಿಸಿದ ಅನ್ನ.

jamboree

ನಾಮವಾಚಕ

  • ಉತ್ಸವ(ಸಮಾರಂಭ).
  • ವಿನೋದಕೇಳಿ.
  • ಬಾಲಚಮೂಗಳ(ಸ್ಕೌಟ್‍ಗಳ) ದೊಡ್ಡ ಮೇಳ.

jamjar

ನಾಮವಾಚಕ

ಜ್ಯಾಮ್‍ಜಾಡಿ; ಜ್ಯಾಮ್‍ ಸೀಸೆ; ಜ್ಯಾಮನ್ನು ತುಂಬುವ, ತುಂಬಿರುವ ಗಾಜಿನ ಜಾಡಿ.

jammer

ನಾಮವಾಚಕ

ಜ್ಯಾಮರ್‍; ಸಂಮರ್ದಕ; ರೇಡಿಯೋ ಅಲೆಗಳನ್ನು ಅಥವಾ ರೇಡಾರ್‍ ಸಂಕೇತಗಳನ್ನು ತಡೆದು ಗಜಿಬಿಜಿ ಮಾಡುವ ಯಂತ್ರ.

jammy

ಗುಣವಾಚಕ

( ತರರೂಪ jammier ತಮರೂಪ jammiest).

  • ಸಿಹಿಯಾದ; ಮಧುರವಾದ.
  • ಪ್ರಿಯವಾದ; ಹಿತವಾದ; ಆಹ್ಲಾದಕರವಾದ.
  • ಜ್ಯಾಮ್‍ – ಸವರಿದ, ಹಚ್ಚಿದ.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ಅದೃಷ್ಟಶಾಲಿಯಾದ; ಭಾಗ್ಯವಂತನಾದ.
    2. ಲಾಭದಾಯಕ.

Jan

ಸಂಕ್ಷಿಪ್ತ

January.

jane

ನಾಮವಾಚಕ

(ಅಶಿಷ್ಟ) ಹೆಣ್ಣು; ಹೆಂಗಸು.

Janeite

ನಾಮವಾಚಕ

ಜೇನ್‍ ಭಕ್ತ, ಅಭಿಮಾನಿ; ಹತ್ತೊಂಬತ್ತನೆ ಶತಮಾನದ ಇಂಗ್ಲಿಷ್‍ ಕಾದಂಬರಿಗಾರ್ತಿ ಜೇನ್‍ ಆಸ್ಟಿನ್ನಳ ಅಭಿಮಾನಿ.

jangle

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • ಕೂಗಾಡು; ಕಿರಿಚು; ಕಿರುಚುತ್ತಾ, ಗಲಾಟೆ ಮಾಡುತ್ತಾ ಮಾತಾಡು.
  • (ಗಂಟೆ ಮೊದಲಾದವನ್ನು) ಜೋರಾಗಿ, ಗಟ್ಟಿಯಾಗಿ, ಕರ್ಕಶವಾಗಿ – ಹೊಡೆ, ಸದ್ದು ಮಾಡಿಸು: jangle a bunch of keys ಬೀಗದ ಕೈ ಗೊಂಚಲವನ್ನು ಕರ್ಕಶವಾಗಿ ಶಬ್ದ ಮಾಡಿಸು.
  • ಕೂಗು; ಗಲಾಟೆಗಳಿಂದ (ನರಗಳು ಮೊದಲಾದವನ್ನು) – ಉಲ್ಬಣಗೊಳಿಸು, ಕೆರಳಿಸು.
  • ಕರ್ಕಶ ಸ್ವರದಲ್ಲಿ ಉಚ್ಚರಿಸು; ಕರ್ಕಶವಾಗಿ ಮಾತಾಡು.

jangle

ನಾಮವಾಚಕ

  • ಅಪಸ್ವರ; ಕರ್ಕಶ ಶಬ್ದ; ಗಟ್ಟಿ ಸದ್ದು.
  • ಕೂಗಾಟ; ಹುಯಿಲು; ಅಸಂಬದ್ಧವಾದ, ಕಿರಿಚಾಟದ ಮಾತು.
  • (ಪ್ರಾಚೀನ ಪ್ರಯೋಗ) ವಾಗ್ವಾದ; ವಾದವಿವಾದ; ವಾಗ್ಯುದ್ಧ: without further jangle ಈ ವಾಗ್ವಾದವನ್ನು, ವಾಗ್ಯುದ್ಧವನ್ನು ಇನ್ನೂ ಮುಂದುವರೆಸದೆ.

Janglish

ನಾಮವಾಚಕ

= Japlish.

janissary

ನಾಮವಾಚಕ

(ಚರಿತ್ರೆ) = janizary.

Search Dictionaries

Loading Results

Follow Us :   
  Download Bharatavani App
  Bharatavani Windows App