भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

janitor

ನಾಮವಾಚಕ

  • ದ್ವಾರಪಾಲಕ; ದೌವಾರಿ(ಕ); ಬಾಗಿಲು ಕಾಯುವವನು.
  • ದಫೇದಾರ; ಗೃಹರಕ್ಷಕ; ಮನೆಗಾವಲಿನವನು; ಉಸ್ತುವಾರಿ ಸೇವಕ; (ಕಚೇರಿಯನ್ನು ಗುಡಿಸಿ, ಚೊಕ್ಕಟ ಮಾಡಿ) ಉಸ್ತುವಾರಿ ನೋಡಿಕೊಳ್ಳುವವನು.

janitorial

ಗುಣವಾಚಕ

  • ದ್ವಾರಪಾಲಕನ ಅಥವಾ ದ್ವಾರಪಾಲಕನಂಥ.
  • ಮನೆಗಾವಲಿನವನ; ಗೃಹರಕ್ಷಕನ.
  • ಮನೆಗಾವಲಿನವನಂಥ; ಗೃಹರಕ್ಷಕನವನಂಥ.

janizary

ನಾಮವಾಚಕ

  • (ಚರಿತ್ರೆ) ತುರ್ಕಿ ಸುಲ್ತಾನನ ಅಂಗರಕ್ಷಕ ಪಡೆಯವನು.
  • ತುರ್ಕಿ ಸನಿಕ.
  • (ರೂಪಕವಾಗಿ) ಕಟ್ಟಾ – ಹಿಂಬಾಲಕ, ಬೆಂಬಲಿಗ, ನಿಷ್ಠುರ ಅನುಯಾಯಿ.

jankers

ನಾಮವಾಚಕ

(ಅಶಿಷ್ಟ, ಮುಖ್ಯವಾಗಿ ಸೈನ್ಯ) ತಪ್ಪಿತಸ್ಥರಿಗೆ ಕೊಡುವ ಶಿಕ್ಷೆ.

jannock

ಗುಣವಾಚಕ

(ಬ್ರಿಟಿಷ್‍ ಪ್ರಯೋಗ)(ಪ್ರಾಂತೀಯ ಪ್ರಯೋಗ)(ಮುಖ್ಯವಾಗಿ ಇಂಗ್ಲೆಂಡಿನ ಲಾಂಕಾಷೈರ್‍, ಯಾರ್ಕ್‍ಷೈರ್‍ ಉಪಭಾಷೆಗಳಲ್ಲಿನ ಪ್ರಯೋಗ).

  • ಪ್ರಾಮಾಣಿಕ; ಸಾಚಾ; ಅಸಲಿ; ಋಜು ಸ್ವಭಾವದ.
  • ಉಚಿತವಾದ; ಸಭ್ಯವಾದ; ಯೋಗ್ಯವಾದ.

Jansenism

ನಾಮವಾಚಕ

ಜ್ಯಾನ್ಸನ್‍ ವಾದ, ಸಿದ್ಧಾಂತ; ಮನುಷ್ಯನಿಗೆ ಸಂಕ ಸ್ವಾತಂತ್ರ್ಯವಿಲ್ಲ, ಮಾನವ ಸ್ವಭಾವ ಜನ್ಮತಃ ದುಷ್ಟ, ಮತ್ತು ಕ್ರಿಸ್ತನು ಪ್ರಾಣತ್ಯಾಗ ಮಾಡಿದ್ದು ದೇವರಿಂದ ಆಯ್ಕೆಯಾದ ವ್ಯಕ್ತಿಗಳಿಗಾಗಿ ಮಾತ್ರವೇ ವಿನಾ ಎಲ್ಲಾ ಮಾನವರಿಗಾಗಿ ಅಲ್ಲ ಎಂದು ಪ್ರತಿಪಾದಿಸಿದ ಕಾರ್ನಿಲಿಯಸ್‍ ಜಾನಸೆನ್‍ (1585–1638) ಎಂಬ ಡಚ್‍ ರೋಮನ್‍ ಕ್ಯಾಥೊಲಿಕ್‍ ದೇವತಾ ಶಾಸ್ತ್ರಜ್ಞನ ಸಿದ್ದಾಂತ.

Jansenist

ನಾಮವಾಚಕ

(ಚರಿತ್ರೆ) ಜಾನ್ಸನ್‍ ವಾದಿ, ಸಿದ್ಧಾಂತಿ; ಕಾರ್ನಿಲಿಯಸ್‍ ಜಾನ್ಸನನ ಅಭಿಪ್ರಾಯಗಳನ್ನು ಪುರಸ್ಕರಿಸಿದ್ದ, ಮುಖ್ಯವಾಗಿ ಹ್ರಾನ್ಸಿನ ರೋಮನ್‍ ಕ್ಯಾಥೊಲಿಕ್‍ ಪಕ್ಷದ ಸದಸ್ಯ.

Jansenistic

ಗುಣವಾಚಕ

(ಚರಿತ್ರೆ) ಜ್ಯಾನ್ಸನೀಯ; ಜ್ಯಾನ್ಸನ್‍ನ ವಾದದ, ತತ್ತ್ವದ; ಜಾನ್ಸನ್‍ನ ತತ್ತ್ವಕ್ಕೆ ಸಂಬಂಧಿಸಿದ.

January

ನಾಮವಾಚಕ

(ಇಂಗ್ಲಿಷ್‍ ವರ್ಷದ ಮೊದಲ ತಿಂಗಳಾದ) ಜನವರಿ.

Janus

ನಾಮವಾಚಕ

ಜೇನಸ್‍ (ದೇವತೆ); ಇಮ್ಮೊಗ ದೇವತೆ; ದ್ವಿಮುಖದೇವತೆ; ತಲೆಯ ಮುಂಭಾಗ ಹಿಂಭಾಗಗಳೆರಡರಲ್ಲೂ ಮುಖಗಳಿರುವಂತೆ ಚಿತ್ರಿಸಿರುವ, ದ್ವಾರ ಮತ್ತು ಮಹಾದ್ವಾರ ರಕ್ಷಕನಾದ, ಪ್ರಾಚೀನ ಇಟ್ಯಾಲಿಯನ್ನರ ದೇವತೆ.

Janus-faced

ಗುಣವಾಚಕ

  • ದ್ವಿಮುಖನಾದ.
  • (ರೂಪಕವಾಗಿ) ಇಬ್ಬಂದಿ; ಅಪ್ರಾಮಾಣಿಕನಾದ; ಆಷಾಢಭೂತಿಯಾದ; ಮನಸ್ಸಿನಲ್ಲೊಂದು ಬಾಯಲ್ಲೊಂದು ಕೈಯಲ್ಲೊಂದು ಎಂಬ ಸ್ವಭಾವದ.

Jap

ಗುಣವಾಚಕ

(ಆಡುಮಾತು) (ಕೆಲವೊಮ್ಮೆ ಹೀನಾರ್ಥಕ ಪ್ರಯೋಗ) ಜಪಾನಿನ.

Jap

ನಾಮವಾಚಕ

(ಆಡುಮಾತು) (ಕೆಲವೊಮ್ಮೆ ಹೀನಾರ್ಥಕ ಪ್ರಯೋಗ) ಜಪಾನೀಯ (ವ್ಯಕ್ತಿ).

japan

ನಾಮವಾಚಕ

  • ಜಪಾನೀ ಮೆರುಗು, ವಾರ್ನಿಷು; (ಮುಖ್ಯವಾಗಿ ಮೊದಲು ಜಪಾನಿನಿಂದ ಬರುತ್ತಿದ್ದ ಮೆರುಗಿನಂತೆಯೇ ಇರುವ) ಒಂದು ಬಗೆಯ ಗಟ್ಟಿ ಕಪ್ಪು ಮೆರುಗು, ವಾರ್ನಿಷು.
  • (ಮುಖ್ಯವಾಗಿ ಲೆಪ್ಪಹಾಕಿದ, ಚಿತ್ರ ಕೊರೆದ ಮರದ ಸಾಮಾನು ಮೊದಲಾದ) ಜಪಾನೀ (ಶೈಲಿಯ) ಕೃತಿ.

japan

ಸಕರ್ಮಕ ಕ್ರಿಯಾಪದ

  • ಜಪಾನೀ ಮೆರುಗು ಹಾಕು.
  • (ಜಪಾನೀ ಮೆರುಗು ಕೊಟ್ಟಂತೆ) ಕಪ್ಪನೆಯ ಹೊಳಪು ಕೊಡು.

Japanese

ಗುಣವಾಚಕ

ಜಪಾನಿನ; ಜಪಾನೀಯ; ಜಪಾನೀ ಮಾದರಿಯ, ಶೈಲಿಯ; ಜಪಾನೀ ವಸ್ತುಗಳನ್ನು ಹೋಲುವ.

Japanese

ನಾಮವಾಚಕ

  • ಜಪಾನಿನವನು(ಳು); ಜಪಾನೀಯ; ಜಪಾನಿನ ನಿವಾಸಿ.
  • ಜಪಾನೀ ಭಾಷೆ; ಜಪಾನಿನ ಭಾಷೆ.

Japanese (flowering) cherry

ನಾಮವಾಚಕ

(ಹೂ ಬಿಡುವ) ಜಪಾನೀ ಚೆರಿ; ಗುಲಾಬಿ ಅಥವಾ ಬಿಳಿ ಬಣ್ಣದ, ಸಾಮಾನ್ಯವಾಗಿ ದ್ವಿದಳ ಹೂವುಗಳನ್ನು ಬಿಡುವ, ಕಸಿ ಮಾಡಿದ ಚೆರಿ ಗಿಡ.

Japanese blue

ನಾಮವಾಚಕ

ಜಪಾನೀ ಹಸುರು (ಬಣ್ಣ); ಸ್ಲೇಟ್‍ ಹಸುರಿಗಿಂತ ಗಾಢವೂ, ಹೆಚ್ಚು ನೀಲಿಯೂ ಸ್ವಲ್ಪ ಹಳದಿಯೂ ಮಂದವೂ ಆಗಿರುವ, ಬೂದು ಹಸುರು (ಬಣ್ಣ).

Japanese cedar

ನಾಮವಾಚಕ

= cryptomeria.

Search Dictionaries

Loading Results

Follow Us :   
  Download Bharatavani App
  Bharatavani Windows App