भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Japanese clock

ನಾಮವಾಚಕ

ಜಪಾನೀ ಗಡಿಯಾರ; ಸೂರ್ಯೋದಯ ಮತ್ತು ಸೂರ್ಯಾಸ್ತದ ಕಾಲಾವಧಿಯನ್ನು ತಲಾ ಆರು ಭಾಗಗಳಾಗಿ ವಿಂಗಡಿಸಿರುವುದನ್ನು ಸೂಚಿಸುವ, ಋತುಗಳು ಬದಲಾಯಿಸಿದಂತೆ ಆ ಕಾಲಾವಧಿ ಬದಲಾಯಿಸುವುದನ್ನು ತೋರಿಸುವ ಗಡಿಯಾರ.

Japanese laurel

ನಾಮವಾಚಕ

(‘ಔಕ್ಯುಬ ಜಪಾನಿಕ’ ಕುಲದ, ಹಲವೊಮ್ಮೆ ಪೇಲವ ವರ್ಣದ ಎಲೆಗಳ್ಳುಳ್ಳ) ಜಪಾನೀ ಲಾರೆಲ್‍ ಬಳ್ಳಿ.

Japanese maple

ನಾಮವಾಚಕ

ಜಪಾನೀ ಮೇಪಲ್‍ (ಗಿಡ); ‘ಏಸರ್‍ ಪಾಲ್ಮಟಸ್‍’ ಕುಲದ, ಅಂದ ಚೆಂದದ, ನೇರಿಳೆ ಬಣ್ಣದ ಮೇಪಲ್‍ ಗಿಡ.

Japanese medlar

ನಾಮವಾಚಕ

= loquat.

Japanese paper

ನಾಮವಾಚಕ

ಜಪಾನೀ ಕಾಗದ; ಹಿಂದೆ ಜಪಾನಿನಲ್ಲಿ ಉದ್ದನೆಯ ನಾರಿನೆಳೆಗಳಿಂದ ತಯಾರಾಗುತ್ತಿದ್ದ, ಚಿತ್ರಗೆತ್ತನೆಗಳನ್ನು ಮುದ್ರಿಸಲು ಬಳಸುತ್ತಿದ್ದ ವಿಶೇಷ ರೀತಿಯ ಕಾಗದ.

Japanese print

ನಾಮವಾಚಕ

ಜಪಾನೀ (ವರ್ಣ)ಮುದ್ರಣ; (ಬಣ್ಣದ) ಜಪಾನೀ ಅಚ್ಚುಗಾರಿಕೆ; ಮರದ ಅಚ್ಚುಗಳಿಗೆ ಜಲವರ್ಣದ ಮಸಿಯನ್ನು ಸವರಿ ಅಚ್ಚು ಮಾಡಿದ, (18ನೆಯ ಶತಮಾನದ ಕೊನೆಯ ಭಾಗದಲ್ಲಿ ಹಾಗೂ 19ನೆಯ ಶತಮಾನದ ಮೊದಲಲ್ಲಿ) ಅತ್ಯಂತ ಉನ್ನತ ಕಲಾತ್ಮಕ ಸ್ವರೂಪ ಪಡೆದಿದ್ದ, ಜಪಾನಿನ ಒಂದು ತೆರನ ಮುದ್ರಣ ಶೈಲಿ.

Japanese quince

ನಾಮವಾಚಕ

= japonica.

Japanese red

ನಾಮವಾಚಕ

ಜಪಾನಿ ಕೆಂಪು; ಕೆಂಗಂದು ಬಣ್ಣ; ವೆನೀಷಿಯನ್‍ ಕೆಂಪಿಗಿಂತ ಹೆಚ್ಚು ಕೆಂಪಾಗಿಯೂ ಗಾಢವಾಗಿಯೂ ಇರುವ, ಕೆಂಪು ಕಂದು ಬಣ್ಣ.

Japanese tissue

ನಾಮವಾಚಕ

ಜಪಾನೀ ತೆಳುಕಾಗದ; ಮೊದಲು ಜಪಾನಿನಲ್ಲಿ ತಯಾರಾಗುತ್ತಿದ್ದ, ಉದ್ದನೆಯ ನಾರೆಳೆಗಳಿಂದ ಕೈಯಲ್ಲಿ ಮಾಡಿದ ತೆಳು ಕಾಗದ.

Japanesery

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಜಪಾನೀ(ಯರ) ಆಭರಣ, ಒಡವೆ.

Japanesque

ಗುಣವಾಚಕ

ಜಪಾನೀ(ಯ); ಜಪಾನ್‍ – ಶೈಲಿಯ, ಮಾದರಿಯ.

Japanesque

ನಾಮವಾಚಕ

ಜಪಾನೀ ಕಲೆ, ಅಲಂಕರಣ; ಜಪಾನಿನ ರೀತಿಯ, ಮಾದರಿಯ – ಕಲೆ, ಅಲಂಕರಣ.

Japanism

ನಾಮವಾಚಕ

ಜಪಾನೀಯತೆ; ನಾಗರಿಕತೆ, ಕಲೆ, ಮೊದಲಾದವುಗಳಲ್ಲಿ ಜಪಾನೀಯ ಎನ್ನಬಹುದಾದ ವಿಶಿಷ್ಟ ಗುಣಲಕ್ಷಣ.

Japanization

ನಾಮವಾಚಕ

ಜಪಾನೀಕರಣ; ನಾಗರಿಕತೆ, ಕಲೆ, ನಡೆನುಡಿ, ಮೊದಲಾದವುಗಳಲ್ಲಿ ಜಪಾನೀಯರನ್ನು ಅನುಕರಿಸುವುದು.

Japanize

ಸಕರ್ಮಕ ಕ್ರಿಯಾಪದ

ಜಪಾನೀಕರಿಸು.

jape

ಅಕರ್ಮಕ ಕ್ರಿಯಾಪದ

ಕುಚೇಷ್ಟೆ ಮಾಡು; ಕುಚೋದ್ಯ ಮಾಡು.

jape

ನಾಮವಾಚಕ

ಕುಚೇಷ್ಟೆ; ಕುಚೋದ್ಯ; ಹಾಸ್ಯ; ತಮಾಷೆ; ಗೇಲಿ.

japery

ನಾಮವಾಚಕ

ಗೇಲಿ; ಹಾಸ್ಯ.

Japhetic

ಗುಣವಾಚಕ

  • (ಯೆಹೂದ್ಯ ಪುರಾಣದಲ್ಲಿನ ನೋವನ ಮೂರನೆಯ ಮಗನಾದ) ಜೇಹತ್‍ನ ಸಂತತಿಯ.
  • (ಪ್ರಾಚೀನ ಪ್ರಯೋಗ) ಇಂಡೋ ಯೂರೋಪಿಯನ್‍ ಬುಡಕಟ್ಟಿನ.

Japlish

ನಾಮವಾಚಕ

ಜ್ಯಾಪ್ಲಿಷ್‍ (ಭಾಷೆ); ಜಪಾನೀ ಮತ್ತು ಇಂಗ್ಲಿಷ್‍ ಭಾಷೆಗಳನ್ನು ಬೆರೆಸಿದ ಬೆರಕೆ ಭಾಷೆ.

Search Dictionaries

Loading Results

Follow Us :   
  Download Bharatavani App
  Bharatavani Windows App