भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Kelt

ನಾಮವಾಚಕ

$^1$Celtನ ರೂಪಾಂತರ.

kelt

ನಾಮವಾಚಕ

ಮೊಟ್ಟೆ ಇಟ್ಟ ತರುವಾಯದ ಸಾಮನ್‍ ಯಾ ಕಡಲ ಟ್ರಾಟ್‍ ಮೀನು.

kelter

ನಾಮವಾಚಕ

kilterನ ರೂಪಾಂತರ.

kelvin

ನಾಮವಾಚಕ

(ಸೆಲ್ಸಿಯಸ್‍ ಡಿಗ್ರಿಗೆ ಸರಿಸಮನಾದ) ಕೆಲ್ವಿನ್‍ ಡಿಗ್ರಿ (ಸಂಕ್ಷಿಪ್ತ K).

Kelvin scale

ನಾಮವಾಚಕ

(ಭೌತವಿಜ್ಞಾನ) ಕೆಲ್ವಿನ್‍ ಮಾನ; ಕೆಲ್ವಿನ್‍ ತಾಪಮಾನ; ನಿರಪೇಕ್ಷ ಶೂನ್ಯ, ಅಂದರೆ $-273.15$ ಡಿಗ್ರಿ ಸೆಲ್ಸಿಯಸ್‍ ಅನ್ನು ಶೂನ್ಯ ಎಂದು ಪರಿಗಣಿಸುವ ತಾಪಮಾನ ಪದ್ಧತಿ.

kemp

ನಾಮವಾಚಕ

ತುಪ್ಪಟದ – ಒರಟುಗೂದಲು, ಬಿರುಗೂದಲು.

kempt

ಗುಣವಾಚಕ

ಬಾಚಿದ; ಅಂದವಾಗಿಟ್ಟುಕೊಂಡಿರುವ.

kempy

ಗುಣವಾಚಕ

ಒರಟುಗೂದಲಿನ.

ken

ಸಕರ್ಮಕ ಕ್ರಿಯಾಪದ

(ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡ್‍)

  • ನೋಟದಿಂದಲೇ ಗುರುತಿಸು.
  • (ವ್ಯಕ್ತಿಯನ್ನು, ವಿಷಯವನ್ನು ಯಾ ವಸ್ತುವನ್ನು) ತಿಳಿ; ಅರಿ.

ken

ನಾಮವಾಚಕ

ಪದಗುಚ್ಛ

  • ಕಣ್ಣಳವು; ಕಣ್ಣುನಿಟ್ಟು; ದೃಷ್ಟಿ(ಯ) ವ್ಯಾಪ್ತಿ.
  • ತಿಳಿವಳಿಕೆಯ, ಅರಿವಿನ – ವ್ಯಾಪ್ತಿ, ಪರಿಧಿ.

kenaf

ನಾಮವಾಚಕ

ಕನ್ಯಾಹ್‍; (ಹೊಲದ) ಪುಂಡ್ರಿಕೆ ಯಾ ಪುಂಡಿ; ಗೋಗು; ಸೆಣಬಿನಂತೆ ಬಳಸುವ ಒಂದು ಬಗೆಯ ದಕ್ಷಿಣ ಭಾರತದ ಸೆಣಬು.

kendo

ನಾಮವಾಚಕ

ಕೆಂಡೋ; ಇಕ್ಕೈ ಕತ್ತಿವರಸೆ; ಎರಡೂ ಕೈಗಳಿಂದ ಹಿಡಿದು ಆಡುವ ಜಪಾನಿನ ಒಂದು ಕತ್ತಿವರಸೆ.

kennel

ನಾಮವಾಚಕ

  • ನಾಯಿಮನೆ; ಶ್ವಾನಗೃಹ:
    1. ನಾಯಿಗೂಡು; ಮನೆನಾಯಿಗಾಗಿ ಯಾ ಬೇಟೆನಾಯಿಗಳಿಗಾಗಿ ಕಟ್ಟಿದ ಗೂಡು.
    2. (ಬಹುವಚನದಲ್ಲಿ) ನಾಯಿಗಳ ತಳಿ ಬೆಳೆಸುವ ಯಾ ಅವಕ್ಕೆ ಆಹಾರ, ವಸತಿ ಒದಗಿಸುವ ಮನೆ.
  • (ತಿರಸ್ಕಾರವಾಗಿ) ಕೀಳುತೆರದ ಮನೆ; ನಾಯಿಗೂಡು.

kennel

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

[ಭೂತರೂಪ ಮತ್ತು ಭೂತಕೃದಂತ (ಬ್ರಿಟಿಷ್‍ ಪ್ರಯೋಗ) kennelled, (ಅಮೆರಿಕನ್‍ ಪ್ರಯೋಗ) kenneled, ವರ್ತಮಾನ ಕೃದಂತ (ಬ್ರಿಟಿಷ್‍ ಪ್ರಯೋಗ) kennelling, (ಅಮೆರಿಕನ್‍ ಪ್ರಯೋಗ) kenneling].

  • ನಾಯಿಗೂಡಿನಲ್ಲಿಡು; ನಾಯಿಗೂಡಿಗೆ ಹಾಕು.
  • ನಾಯಿಮನೆಗೆ, ಶ್ವಾನಗೃಹಕ್ಕೆ ಕಳುಹಿಸು. ಅದರಲ್ಲಿರಿಸು.

kennel

ನಾಮವಾಚಕ

ಚರಂಡಿ; ಮೋರಿ; ಗಟಾರ.

kenning

ನಾಮವಾಚಕ

ಕೆನಿಂಗ್‍; (ಹಳೆಯ ಇಂಗ್ಲಿಷ್‍ ಮತ್ತು ಹಳೆಯ ನಾರ್ಸ್‍ ಕಾವ್ಯಗಳಲ್ಲಿ ಕಂಡುಬರುವ) ಸುತ್ತುಬಳಸು ಪದ: ಉದಾಹರಣೆಗೆ ‘oar-steed’ = ship; ‘storm of swords’ = ship.

keno

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕೀನೋ (ಆಟ); ಬಿಂಗೋ ಆಟವನ್ನು ಹೋಲುವ ಒಂದು ಬಗೆಯ ಇಸ್ಪೀಟಾಟ.

kenosis

ನಾಮವಾಚಕ

(ದೇವತಾಶಾಸ್ತ್ರ) (ಕ್ರಿಸ್ತನ) ದೇವತ್ವ ತ್ಯಾಗ; ಮನುಷ್ಯನಾಗಿ ಅವತರಿಸಿದಾಗ ಕ್ರಿಸ್ತನು ತನ್ನ ದೇವಸ್ವರೂಪವನ್ನು ಭಾಗಶಃ ತ್ಯಜಿಸಿದುದು.

kenotic

ಗುಣವಾಚಕ

(ಕ್ರೈಸ್ತಧರ್ಮ) ದೇವತ್ವ ತ್ಯಾಗದ.

kenoticism

ನಾಮವಾಚಕ

(ಕ್ರೈಸ್ತಧರ್ಮ) ದೇವತ್ವ ತ್ಯಾಗ ಸಿದ್ಧಾಂತ.

Search Dictionaries

Loading Results

Follow Us :   
  Download Bharatavani App
  Bharatavani Windows App