भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

keratose

ಗುಣವಾಚಕ

(ಸ್ಪಂಜಿನ ವಿಷಯದಲ್ಲಿ) ಕೆರಟಿನ್ನಿನ; ಕೊಂಬಿನ ದ್ರವ್ಯದಿಂದಾದ.

keratose

ನಾಮವಾಚಕ

ಕೆರಟೋಸ್‍; ಕೆಲವು ಸ್ಪಂಜುಗಳ ಅಂಶವಾದ, ಕೊಂಬಿನ ದ್ರವ್ಯದಂತಹ ವಸ್ತು.

kerb

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ರಸ್ತೆಯ ಮಗ್ಗುಲಿನ ಯಾ ಮನೆಯ ಮುಂದಣ, ನೆಲಗಟ್ಟಿಗೆ ಯಾ ಎತ್ತರಿಸಿದ ಕಾಲುಹಾದಿಗೆ ಇಕ್ಕೆಲದಲ್ಲೂ ರಕ್ಷಣೆಗಾಗಿ ಕಟ್ಟಿದ) ಕಲ್ಲಿನ – ಪಾಗಾರ, ದಂಡೆ, ಅಂಚುಗಟ್ಟು, ದಿಂಡು.

kerb drill

ನಾಮವಾಚಕ

ದಂಡೆ ಅಭ್ಯಾಸ; ಅಂಚು(ಗಟ್ಟು) ಅಭ್ಯಾಸ; ಸುರಕ್ಷಿತವಾಗಿ ರಸ್ತೆಯನ್ನು ಹಾಯಲು ಎಡಗಡೆ ಬಲಗಡೆ ನೋಡಿ ವಾಹನ ಸಂಚಾರ ಇಲ್ಲದ ಅವಕಾಶದಲ್ಲಿ ಹಾಯುವ ಸುಲಭ ಕ್ರಮ.

kerb market

ನಾಮವಾಚಕ

  • ಕರ್ಬ್‍ ವ್ಯಾಪಾರ; ದಂಡೆ ವ್ಯಾಪಾರ; ಅಂಚುಗಟ್ಟು ವ್ಯಾಪಾರ; ಸ್ಟಾಕ್‍ ಎಕ್ಸ್‍ಚೇಂಜಿನ ವೇಳಾವಧಿ ಮೀರಿದ ಬಳಿಕ ನಡೆಯುವ ವ್ಯಾಪಾರ ಯಾ ಸ್ಟಾಕ್‍ ಎಕ್ಸ್‍ಚೇಂಜ್‍ ವ್ಯವಹಾರಕ್ಕೊಳಪಡದ ಷೇರುಗಳ ವ್ಯಾಪಾರ.
  • ಕರ್ಬ್‍ ಮಾರುಕಟ್ಟೆ; ಅಂಚುಗಟ್ಟು ಮಾರುಕಟ್ಟೆ; ದಂಡೆ ಮಾರ್ಕೆಟ್ಟು; ಬೀದಿ ವ್ಯಾಪಾರ; ಸ್ಟಾಕ್‍ ಎಕ್ಸ್‍ಚೇಂಜಿನ ವೇಳಾವಧಿ ಮೀರಿದ ಬಳಿಕ ಸ್ಟಾಕ್‍ ವ್ಯವಹಾರ ನಡೆಯುವ ಯಾ ಸ್ಟಾಕ್‍ ಎಕ್ಸ್‍ಚೇಂಜಿನ ವ್ಯವಹಾರಕ್ಕೊಳಪಡದ ಷೇರುಗಳ ವ್ಯಾಪಾರ ನಡೆಯುವ ಸ್ಥಳ.

kerb weight

ನಾಮವಾಚಕ

ಖಾಲಿ ಕಾರು ತೂಕ; ಒಳಗೆ ಕೂರುವವರು ಹಾಗೂ ಚಾಲಕ ಇಲ್ಲದೆ, ಯಾವ ಹೊರೆಯೂ ಇಲ್ಲದೆ, ಪೆಟ್ರೋಲ್‍, ನೀರು, ಮೊದಲಾದವು ಮಾತ್ರ ಇರುವ ಕಾರಿನ ತೂಕ.

kerb-crawler

ನಾಮವಾಚಕ

ರಸ್ತೆದಂಡೆ ಮಂದಗಾಮಿ; ರಸ್ತೆಯ ಪಕ್ಕದ ಕಾಲುದಾರಿಯ ಮೇಲೆ ನಿಂತಿರುವವರನ್ನು ವಾಹನ ಹತ್ತಲು ಮನವೊಲಿಸುವುದಕ್ಕಾಗಿ ರಸ್ತೆಯ ಅಂಚಿನಲ್ಲಿ ನಿಧಾನವಾಗಿ ವಾಹನ ನಡೆಸುವವ.

kerb-crawling

ನಾಮವಾಚಕ

ರಸ್ತೆ ದಂಡೆ ಮಂದಗಮನ; ಅಂಚು, ಪಾಗಾರ, ದಂಡೆ – ತೆವಳು, ತೆವಳುವಿಕೆ; ರಸ್ತೆ ಪಕ್ಕದ ಕಾಲುದಾರಿಯ ಮೇಲೆ ನಿಂತಿರುವವರನ್ನು ವಾಹನ ಹತ್ತಲು ಮನವೊಲಿಸುವುದಕ್ಕಾಗಿ ರಸ್ತೆಯ ಅಂಚುಗಟ್ಟಿನ ಉದ್ದಕ್ಕೂ ವಾಹನವನ್ನು ನಿಧಾನವಾಗಿ ನಡೆಸುವುದು.

kerbstone

ನಾಮವಾಚಕ

(ರಸ್ತೆಯ) ದಂಡೆಕಲ್ಲು; ಅಂಚು(ಗಟ್ಟು)ಕಲ್ಲು; ರಸ್ತೆಯ ಅಂಚುಗಟ್ಟಾಗಿ ಜೋಡಿಸಿರುವ ಕಲ್ಲುಗಳಲ್ಲೊಂದು.

kerbstone market

ನಾಮವಾಚಕ

= kerb market.

kerchief

ನಾಮವಾಚಕ

  • ತಲೆ ಚೌಕ; ಶಿರೋವಸ್ತ್ರ; (ಮುಖ್ಯವಾಗಿ ಹೆಂಗಸರು) ತಲೆ ಮುಚ್ಚಿಕೊಳ್ಳಲು ಕಟ್ಟಿಕೊಳ್ಳುವ ಚೌಕ.
  • (ಕಾವ್ಯಪ್ರಯೋಗ) ಕರ್ಚೀಪು; ಕೈ ಚೌಕ; ಕರವಸ್ತ್ರ. Figure: kerchief

kerchiefed

ಗುಣವಾಚಕ

  • ಶಿರೋವಸ್ತ್ರ ಧರಿಸಿದ; ತಲೆಚೌಕ ಕಟ್ಟಿಕೊಂಡ.
  • (ಕಾವ್ಯಪ್ರಯೋಗ) ಕರ್ಚೀಪುಳ್ಳ; ಕರವಸ್ತ್ರ ಹೊಂದಿರುವ.

kerf

ನಾಮವಾಚಕ

  • (ಮುಖ್ಯವಾಗಿ ಗರಗಸದಿಂದ) ಕೊಯ್ದು ಮಾಡಿದ ಸೀಳುರಂಧ್ರ.
  • ಕಡಿದುರುಳಿಸಿದ ಮರದ, ಕಡಿದ ಕಡೆಯ ತುದಿ.

kerfuffle

ನಾಮವಾಚಕ

(ಆಡುಮಾತು) ಗದ್ದಲ; ರಾದ್ದಾಂತ; ಗಲಭೆ; ಅವಾಂತರ; ಕೋಲಾಹಲ.

kermes

ನಾಮವಾಚಕ

  • (ಕರ್ಮಿಸ್‍ ಓಕ್‍ ಮರದ ಸಾರ ಹೀರಿ ಬದುಕುವ) ಹೆಣ್ಣು ಕಿರುಮಂಜಿ ಕೀಟ; ಕರ್ಮಿಸ್‍ ಕೀಟ.
  • = kermes oak.
  • (ರಸಾಯನವಿಜ್ಞಾನ) ಕರ್ಮಿಸ್‍; ಕಿರುಮಂಜಿ ಕೀಟಗಳನ್ನು ಒಣಗಿಸಿ ತಯಾರಿಸಿದ ಕೆಂಪು ರಂಗು, ವರ್ಣದ್ರವ್ಯ.
  • = kermes mineral.

kermes mineral

ನಾಮವಾಚಕ

ಕರ್ಮಿಸ್‍ ಖನಿಜ; ಅಸ್ಫಟಿಕ ರೂಪದ ಕೆಂಪು ಆಂಟಿಮನಿ ಟ್ರೈಸಲೆಡ್‍.

kermes oak

ನಾಮವಾಚಕ

ಕಿರುಮಂಜಿ ಓಕ್‍(ಮರ); ಕಿರುಮಂಜಿ ಕೀಟಕ್ಕೆ ಆಹಾರವಾದ, ದಕ್ಷಿಣ ಯೂರೋಪು ಮತ್ತು ಉತ್ತರ ಆಹ್ರಿಕಗಳಲ್ಲಿ ಬೆಳೆಯುವ, ನಿತ್ಯ ಹರಿದ್ವರ್ಣದ ಒಂದು ಓಕ್‍ ಮರ.

kermis

ನಾಮವಾಚಕ

ಕರ್ಮಿಸ್‍:

  • ಹಾಲೆಂಡ್‍ ಮೊದಲಾದ ದೇಶಗಳಲ್ಲಿ ನಡೆಯುವ, ಹರ್ಷೋತ್ಸಾಹಗಳಿಂದ ಕೂಡಿದ ವಾರ್ಷಿಕ ಸಂತೆ.
  • (ಅಮೆರಿಕನ್‍ ಪ್ರಯೋಗ) ಧರ್ಮಸಂತೆ; ದಾನಜಾತ್ರೆ; ದಾನಧರ್ಮಗಳಿಗಾಗಿ ನಿಧಿ ಕೂಡಿಸಲು ನಡೆಸುವ ಕರ್ಮಿಸ್‍ ತರಹದ ಸಂತೆ, ಜಾತ್ರೆ.

kern

ನಾಮವಾಚಕ

(ಮುದ್ರಣ) ಅಚ್ಚುಚಾಚು; ಒಡಲಿಗಿಂತ ಯಾ ಕಾವಿಗಿಂತ ಆಚೆಗೆ ಚಾಚಿಕೊಂಡಿರುವ, ಲೋಹದ ಅಚ್ಚುಮೊಳೆಯ ಭಾಗ.

kern

ನಾಮವಾಚಕ

  • (ಚರಿತ್ರೆ) ಲಘು(ವಾಗಿ) ಶಸ್ತ್ರಸಜ್ಜಿತವಾದ ಐರ್ಲೆಂಡ್‍ ಯಾ ಸ್ಕಾಟ್ಲೆಂಡಿನ ಸೈನಿಕ.
  • ಹಳ್ಳಿಯ – ಗಮಾರ, ಮುಕ್ಕ; ಅಸಂಸ್ಕೃತ ವ್ಯಕ್ತಿ; ಗಾವಿಲ.

Search Dictionaries

Loading Results

Follow Us :   
  Download Bharatavani App
  Bharatavani Windows App