भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kale

ನಾಮವಾಚಕ

ಪದಗುಚ್ಛ

Scotch kale ಧೂಮ್ರವರ್ಣದ ಎಲೆಗಳುಳ್ಳ ಕೋಸುಗೆಡ್ಡೆ.

  • ಕೇಲ್‍ (ಸಸ್ಯ); ಸುರುಳಿ ಸುರುಳಿಯಾದ ಎಲೆಗಳಿರುವ, ಕೋಸುಗೆಡ್ಡೆ ಜಾತಿಯ ಸಸ್ಯ.
  • ಕೇಲ್‍ ಸಾಂಬಾರು; ಕೇಲ್‍ ಗೆಡ್ಡೆಯಿಂದ ಮಾಡಿದ ಸಾಂಬಾರು.
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಣ; ರೊಕ್ಕ.

kaleidoscope

ನಾಮವಾಚಕ

  • ಕಲೈಡೋಸ್ಕೋಪು; ವಿವಿಧ ಚಿತ್ರದರ್ಶಕ; ವಿವಿಧ ಚಿತ್ರದರ್ಶಿ; ಕೊಳವೆಯ ಒಳಗಡೆಗೆ ತಗುಲಿದಂತೆ ಪರಸ್ಪರ $50^\circ$ ಕೋನಗಳಿರುವಂತೆ ಮೂರು ಉದ್ದದ ಕನ್ನಡಿಗಳನ್ನು ಜೋಡಿಸಿ, ಕೊಳವಿಯನ್ನು ತಿರುಗಿಸಿದಾಗ ತಳದಲ್ಲಿ ಹಾಕಿರುವ ಬಣ್ಣಬಣ್ಣದ ಗಾಜಿನ ಚೂರುಗಳು, ಮಣಿಗಳು, ಮೊದಲಾದವನ್ನು ವಿವಿಧ ವಿಚಿತ್ರ ಹಾಗೂ ಸುಂದರ ಆಕಾರಗಳಲ್ಲಿ ತೋರಿಸುವ ಸಲಕರಣೆ.
  • (ರೂಪಕವಾಗಿ) ಚಿತ್ರ ವಿಚಿತ್ರ ಘಟನಾವಲಿ; ನಿರಂತರವಾಗಿ ಬದಲಾಯಿಸುತ್ತಿರುವ ಚಿತ್ರವಿಚಿತ್ರ ವಸ್ತುಗಳು ಯಾ ಘಟನಾವಳಿ; ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಘಟನೆಗಳ ಪರಂಪರೆ.

kaleidoscopic

ಗುಣವಾಚಕ

  • ಕಲೈಡೋಸ್ಕೋಪಿನ ಯಾ ಕಲೈಡೋಸ್ಕೋಪಿಗೆ ಸಂಬಂಧಿಸಿದ.
  • ರೂಪ, ಆಕೃತಿ, ವರ್ಣ, ಮೊದಲಾದವನ್ನು ಕಲೈಡೋಸ್ಕೋಪಿನಂತೆ ಬದಲಾಯಿಸುತ್ತಿರುವ.
  • ನಿತ್ಯ ಪರಿಣಾಮಿ; ನಿರಂತರವಾಗಿ ಬದಲಾಯಿಸುತ್ತಿರುವ: kaleidoscopic events ನಿರಂತರವಾಗಿ ಬದಲಾಯಿಸುತ್ತಿರುವ ಘಟನೆಗಳು.
  • ಅತ್ಯಂತ ಜಟಿಲವೂ ವೈವಿಧ್ಯಮಯವೂ ಆದ: kaleidoscopic view of history ಜಟಿಲವೂ ವೈವಿಧ್ಯಮಯವೂ ಆದ ಐತಿಹಾಸಿಕ ದೃಷ್ಟಿ.

kaleidoscopical

ಗುಣವಾಚಕ

= kaleidoscopic.

kaleidoscopically

ಕ್ರಿಯಾವಿಶೇಷಣ

  • ಕಲೈಡೋಸ್ಕೋಪಿನಂತೆ.
  • ಕಲೈಡೋಸ್ಕೋಪಿನಂತೆ ಬದಲಾಯಿಸುತ್ತಾ.
  • ನಿರಂತರವಾಗಿ ಬದಲಾವಣೆಗೊಳ್ಳುತ್ತಾ.
  • ಜಟಿಲವೂ ವೈವಿಧ್ಯಮಯವೂ ಆದ ರೀತಿಯಲ್ಲಿ.

kalends

ನಾಮವಾಚಕ

= calends.

kaleyard

ನಾಮವಾಚಕ

(ಕುಟುಂಬದ ಬಳಕೆಗಾಗಿ ಕಾಯಿಪಲ್ಯ ಬೆಳೆಸುವ) ಹಿತ್ತಲ ತೋಟ; ಕೈತೋಟ.

kaleyard school

ನಾಮವಾಚಕ

ಹಿತ್ತಲ ಬಳಗ; ಹಿತ್ತಲ ಪಂಥ; ಜನಸಾಮಾನ್ಯರ ನುಡಿಯನ್ನು ವಿಶೇಷವಾಗಿ ಬಳಸಿ, ಜನಸಾಮಾನ್ಯರ ದಿನನಿತ್ಯದ ಜೀವನವನ್ನು ಕುರಿತು ಬರೆಯುವ ಸ್ಕಾಟ್ಲೆಂಡಿನ ಕಾದಂಬರಿಕಾರರ ಒಂದು ಪಂಥ, ಬಳಗ.

kali

ನಾಮವಾಚಕ

ಕಾಲಿ; ಸೋಡಾ ಭಸ್ಮವನ್ನು ತಯಾರಿಸಲು ಬಳಸುತ್ತಿದ್ದ, ಗ್ಲಾಸ್‍ವರ್ಟ್‍ ಎಂಬ ಮುಳ್ಳುಗಿಡ.

kalmia

ನಾಮವಾಚಕ

ಕ್ಯಾಲ್ಮಿಯ; ಉತ್ತರ ಅಮೆರಿಕದ, ಚಿತ್ರವರ್ಣದ ಬೆಡಗು ಹೂ ಬಿಡುವ ಒಂದು ನಿತ್ಯ ಹಸುರು ಪೊದೆ.

Kalmuck

ನಾಮವಾಚಕ

  • ಕ್ಯಾಲ್ಮಕ್‍; ಕ್ಯಾಸ್ಪಿಯನ್‍ ಸಮುದ್ರದ ತೀರದಲ್ಲಿ ವಾಸಿಸುವ ಬೌದ್ಧ ಮಂಗೋಲಿಯನ್‍ ಜನಾಂಗದ ಒಂದು ತಂಡ ಯಾ ತಂಡದವನು.
  • ಕ್ಯಾಲ್ಮಕ್‍ ಭಾಷೆ.

Kalmuck

ಗುಣವಾಚಕ

  • ಕ್ಯಾಲ್ಮಕ್‍ ತಂಡದ ಯಾ ತಂಡದವನ.
  • ಕ್ಯಾಲ್ಮಕ್‍ ಭಾಷೆಯ.

kalong

ನಾಮವಾಚಕ

(ಹಣ್ಣುತಿಂದು ಬದುಕುವ, ಇದುವರೆಗೂ ತಿಳಿದಿರುವಂತೆ ಬಾವಲಿಗಳಲ್ಲೆಲ್ಲ ಅತ್ಯಂತ ದೊಡ್ಡಗಾತ್ರದ, ಇಂಡೋನೇಷ್ಯಾ, ಮಲಯ ದೇಶಗಳ) ಕಾಲಾಂಗ್‍ (ಬಾವಲಿ); ನರಿಬಾವಲಿ.

kalpa

ನಾಮವಾಚಕ

(ಹಿಂದೂಮತ) ಕಲ್ಪ; ಬ್ರಹ್ಮನ ಒಂದು ದಿನ; 432 ಕೋಟಿ ವರ್ಷಗಳ ಕಾಲಾವಧಿ.

Kama

ನಾಮವಾಚಕ

ಕಾಮ; ಮನ್ಮಥ; ಹಿಂದೂ ಧರ್ಮದಲ್ಲಿನ ಪ್ರೇಮದ ಅಧಿದೈವ.

Kamasutra

ನಾಮವಾಚಕ

ಕಾಮಸೂತ್ರ; ಕಾಮ – ಕಲೆಯನ್ನು, ಕೇಳಿಯನ್ನು ಯಾ ಅನಂಗ ವಿದ್ಯೆಯನ್ನು ಯಾ ರತಿಕೇಳಿಯನ್ನು ಕುರಿತ, ಪುರಾತನ ಸಂಸ್ಕೃತ ಶಾಸ್ತ್ರಗ್ರಂಥ.

kame

ನಾಮವಾಚಕ

ಕೇಮ್‍; ಕರಗಿದ ಹಿಮನದಿಯು ರಾಶಿ ಹಾಕಿದ ಮರಳು ಮತ್ತು ಬೆಣಚುಗಲ್ಲುಗಳ ಸಣ್ಣ ದಿಬ್ಬ.

kami

ನಾಮವಾಚಕ

  • ಕಾಮಿ; (ಗವರ್ನರುಗಳು ಮೊದಲಾದವರಿಗೆ ಬಳಸುವ) ಜಪಾನೀ ಬಿರುದು.
  • ಜಪಾನಿನ ಧರ್ಮದ ದೇವ (ಪುರುಷ).

kamikaze

ನಾಮವಾಚಕ

(ಚರಿತ್ರೆ) ಕಾಮಿಕಾಸಿ:

  • ಸಿಡಿಮದ್ದುಗಳಿಂದ ತುಂಬಿ ಗುರಿಯ ಮೇಲೆ ಉದ್ದೇಶಪೂರ್ವಕವಾಗಿ ಚಾಲಕನು ಸಿಡಿಸುತ್ತಿದ್ದ, ಜಪಾನಿನ ವಿಮಾನ.
  • ಅಂಥ ವಿಮಾನದ ಚಾಲಕ.

kamikaze

ಗುಣವಾಚಕ

  • (ಚರಿತ್ರೆ) ಕಾಮಿಕಾಸಿಯ: ಸಿಡಿಮದ್ದುಗಳಿಂದ ತುಂಬಿ ಗುರಿಯ ಮೇಲೆ ಉದ್ದೇಶಪೂರ್ವಕ ಚಾಲಕನು ಸಿಡಿಸುತ್ತಿದ್ದ ಜಪಾನಿನ ವಿಮಾನದ, ಯಾ ಅಂಥ ವಿಮಾನ ಚಾಲಕನ.
  • (ಅಪಾಯ ಮೊದಲಾದವುಗಳ ಬಗ್ಗೆ) ಲಕ್ಷ್ಯಮಾಡದ; ನಿರ್ಲಕ್ಷ್ಯವಾದ.
  • ಅಪಾಯಕಾರಿ.
  • ಸ್ವವಿಘಾತಕ; ಸ್ವವಿನಾಶಕ ಶಕ್ತಿಯುಳ್ಳ.

Search Dictionaries

Loading Results

Follow Us :   
  Download Bharatavani App
  Bharatavani Windows App