भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

knowing

ಗುಣವಾಚಕ

  • ಬಲ್ಲ; ತಿಳಿದ; ಅರಿವಿರುವ.
  • ಅನುಭವವುಳ್ಳ; ತಿಳಿದುಕೊಂಡಿರುವ.
  • ಜಾಣ; ಕುಶಲ; ಚಾತುರ್ಯವುಳ್ಳ.
  • ಚಾಣಾಕ್ಷ; ಸೂಕ್ಷ್ಮ ಪರಿಜ್ಞಾನವುಳ್ಳ; ಮರ್ಮಜ್ಞ.
  • (ಸಾಮಾನ್ಯವಾಗಿ ತಿರಸ್ಕಾರಾರ್ಥಕವಾಗಿ)
    1. ಜಾಣ(ತನದ); (ಕು)ತಂತ್ರದ.
    2. ಎಚ್ಚರಿಕೆಯ; ಜಾಗರೂಕ; ಹುಷಾರಿನ.
  • ಬುದ್ಧಿಪೂರ್ವಕವಾದ; ತಿಳಿದೂ, ಅರಿತೂ – ಮಾಡಿದ; ಬುದ್ಧಿಪುರಸ್ಸರವಾದ: a knowing crime ಬುದ್ಧಿಪೂರ್ವಕವಾದ, ತಿಳಿದೂ ತಿಳಿದೂ ಮಾಡಿದ – ಅಪರಾಧ.
  • (ಆಡುಮಾತು) ಸೊಗಸಿನ; ಠೀಕಿನ; ಬೆಡಗಿನ; ಷೋಕಿಯ: a knowing hat ಷೋಕಿಯ ಹ್ಯಾಟು.

knowingly

ಕ್ರಿಯಾವಿಶೇಷಣ

  • ಅರಿತುಕೊಂಡು; ತಿಳಿವಳಿಕೆಯಿಂದ ಕೂಡಿ.
  • ಬುದ್ಧಿವಂತಿಕೆಯಿಂದ; ಜಾಣತನದಿಂದ.
  • ಬುದ್ಧಿಪೂರ್ವಕವಾಗಿ; ಉದ್ದೇಶಪೂರ್ವಕವಾಗಿ: I have never knowingly injured him ನಾನು ಎಂದೂ ಬುದ್ಧಿಪೂರ್ವಕವಾಗಿ ಅವನಿಗೆ ಕೇಡು ಮಾಡಿಲ್ಲ.

knowingness

ನಾಮವಾಚಕ

  • ತಿಳಿದಿರುವಿಕೆ.
  • ಜಾಣತನ; ಬುದ್ಧಿವಂತಿಕೆ.
  • ಚಾಣಾಕ್ಷತನ.
  • ಷೋಕಿ; ಸೊಗಸುಗಾರಿಕೆ.

knowledgable

ಗುಣವಾಚಕ

= knowledgeable.

knowledge

ನಾಮವಾಚಕ

ನುಡಿಗಟ್ಟು

  • (ವ್ಯಕ್ತಿ, ವಿಷಯ, ವಸ್ತುಗಳನ್ನು ಕುರಿತ, ಅನುಭವದಿಂದ ಪಡೆದ) ಅರಿವು; ತಿಳಿವು; ಜ್ಞಾನ; ಪರಿಚಯ.
  • (ವ್ಯಕ್ತಿಯ) ಜ್ಞಾನವ್ಯಾಪ್ತಿ; ಅರಿವಿನ ಪರಿಧಿ; ತಿಳಿವಳಿಕೆ; ತಿಳಿದ ಮಟ್ಟಿನ ಜ್ಞಾನ: came to my knowledge ನನ್ನ ಅರಿವಿಗೆ ಬಂದಿತು.
  • ಜ್ಞಾನ; ತಿಳಿದಿರುವುದರ ಮೊತ್ತ, ರಾಶಿ, ಸಮಷ್ಟಿ: every branch of knowledge ಪ್ರತಿಯೊಂದು ಜ್ಞಾನಶಾಖೆಯೂ.
  • (ವಿಷಯ, ಭಾಷೆ, ಮೊದಲಾದವುಗಳ) ಸೈದ್ಧಾಂತಿಕ ಯಾ ಪ್ರಾಯೋಗಿಕ, ತಾತ್ವಿಕ ಯಾ ವ್ಯಾವಹಾರಿಕ ಜ್ಞಾನ, ಅರಿವು.
  • (ತತ್ತ್ವಶಾಸ್ತ್ರ) (ಕೇವಲ ಅಭಿಪ್ರಾಯಕ್ಕೆ ವಿರುದ್ಧವಾದಂತೆ) ನಿಷ್ಕೃಷ್ಟ ಜ್ಞಾನ; ನಿಶ್ಚಿತ ಜ್ಞಾನ.
  • ಸಂಭೋಗ; ಮೈಥುನ.

knowledgeability

ನಾಮವಾಚಕ

  • ಚೆನ್ನಾಗಿ ತಿಳಿದುಕೊಂಡಿರುವಿಕೆ; ಪ್ರಾಜ್ಞತೆ.
  • ಬುದ್ಧಿವಂತಿಕೆ; ಜಾಣತನ.

knowledgeable

ಗುಣವಾಚಕ

  • ಚೆನ್ನಾಗಿ ತಿಳಿದುಕೊಂಡಿರುವ; ಪ್ರಾಜ್ಞ.
  • ಬುದ್ಧಿವಂತ; ಜಾಣ.

knowledgeableness

ನಾಮವಾಚಕ

= knowledgeability.

knowledgeably

ಕ್ರಿಯಾವಿಶೇಷಣ

  • ಚೆನ್ನಾಗಿ ತಿಳಿದುಕೊಂಡಿರುವಂತೆ.
  • ಬುದ್ಧಿವಂತಿಕೆಯಿಂದ.

known

ಕ್ರಿಯಾಪದ

know ಧಾತುವಿನ ಭೂತಕೃದಂತ.

known

ಗುಣವಾಚಕ

  • ಜ್ಞಾತ; ಗೊತ್ತಿರುವ; ತಿಳಿದ; ತಿಳಿದುಬಂದಿರುವ; ಪ್ರಸಿದ್ಧ; ಪರಿಚಿತ: a known thief ಪ್ರಸಿದ್ಧನಾದ ಕಳ್ಳ; ಕಳ್ಳನೆಂದು ಗೊತ್ತಾಗಿರುವ ವ್ಯಕ್ತಿ; ಗೊತ್ತಿರುವ ಕಳ್ಳ.
  • (ಗಣಿತ) ಜ್ಞಾತ; (ಪರಿಮಾಣ ಮೊದಲಾದವುಗಳ ವಿಷಯದಲ್ಲಿ) ಬೆಲೆ, ಮೌಲ್ಯ ತಿಳಿಸಬಹುದಾದ.

Knt.

ಸಂಕ್ಷಿಪ್ತ

Knight.

knuckle

ನಾಮವಾಚಕ

ಪದಗುಚ್ಛ

ನುಡಿಗಟ್ಟು

$^1$rap on (or over) the knuckles (ರೂಪಕವಾಗಿ) ಛೀಮಾರಿ; ತೀವ್ರನಿಂದೆ.

  • ಬೆರಳಿನ (ಮುಖ್ಯವಾಗಿ ಬುಡದ) ಗೆಣ್ಣು.
  • (ಪ್ರಾಣಿಯ) ಮೊಣಕಾಲ ಗೆಣ್ಣು.
  • ಪ್ರಾಣಿಯ ಮೊಣಕಾಲು ಹಾಗೂ ಅದರ ಮೇಲ್ಭಾಗ, ಕೆಳಭಾಗಗಳ ಮಾಂಸಸಹಿತವಾದ ಖಂಡ.

knuckle

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

ಗೆಣ್ಣುಗಳಿಂದ ಹೊಡೆ ಯಾ ಅದುಮು ಯಾ ಉಜ್ಜು. (ಗೋಲಿ ಆಟದಲ್ಲಿ) ಗೆಣ್ಣುಗಳನ್ನು ನೆಲದ ಮೇಲೆ ಊರು.

  • knuckle down (or under) ಬಗ್ಗು; ಸಗ್ಗು; ಜಗ್ಗು; ಶರಣಾಗು; ಮಣಿ; ಅಧೀನನಾಗು.
  • knuckle down
    1. = 2knuckle ಅಕರ್ಮಕ ಕ್ರಿಯಾಪದ.
    2. (ಕೆಲಸ ಮೊದಲಾದವುಗಳಲ್ಲಿ) ಶ್ರದ್ಧೆಯಿಂದ ತೊಡಗಿಸಿಕೊ.

knuckle-bone

ನಾಮವಾಚಕ

(ಮುಖ್ಯವಾಗಿ ಕುರಿ ಮೊದಲಾದವುಗಳ ಮೊಣಕಾಲಿನ) ಗೆಣ್ಣೆಲುಬು; ಗೆಣ್ಣುಮೂಳೆ.

knuckle-bones

ನಾಮವಾಚಕ

ಗೆಣ್ಣುಮೂಳೆ ಆಟ; (ಕುರಿ ಮೊದಲಾದವುಗಳ ಮೊಣಕಾಲಿನ) ಗೆಣ್ಣೆಲುಬು, ಗೆಣ್ಣುಮೂಳೆಗಳಿಂದ ಆಡುವ ಒಂದು ಆಟ.

knuckleduster

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಗೆಣ್ಣುಕಾಪು; ಗೆಣ್ಣುಗಳಿಂದ ಬಡಿಯುವಾಗ ಅವುಗಳಿಗೆ ಗಾಯ, ನೋವು ಆಗದಂತೆ ತಡೆಯಲು ಯಾ ಏಟಿನ ಜೋರು ಹೆಚ್ಚಿಸಲು ಬಳಸುವ ಲೋಹದ ಸಲಕರಣೆ.

knuckly

ಗುಣವಾಚಕ

ಗೆಣ್ಣುಗೆಣ್ಣಾದ; ಗೆಣ್ಣುಗಳೇ ಎದ್ದುಕಾಣುವ: knuckly fingers ಗೆಣ್ಣುಗಳೇ ಎದ್ದು ಕಾಣುವ ಬೆರಳುಗಳು.

knur

ನಾಮವಾಚಕ

  • ಮರದ ಕಾಂಡದ ಮೇಲೆ ಬೆಳೆದ (ಅದರ ದೇಹಕ್ಕೆ ಹೊರತಾದ) ಗಟ್ಟಿಗಂಟು; ಕಲ್ಲು ಗಂಟು.
  • ಗಟ್ಟಿ – ಮುದ್ದೆ, ಗಂಟು.
  • (ಇಂಗ್ಲೆಂಡಿನ ಉತ್ತರ ಭಾಗದಲ್ಲಿ ಬಳಕೆಯಲ್ಲಿರುವ ಒಂದು ಬಗೆಯ ಚೆಂಡಾಟದ) ಮರದ ಚೆಂಡು.

knurl

ನಾಮವಾಚಕ

  • ಗಂಟು; ಗುಬುಟು; (ಮುಖ್ಯವಾಗಿ ಟೈಪ್‍ರೈಟರಿನಲ್ಲಿ ಅಕ್ಷರಕ್ಕೆ ಒತ್ತುವ ಲೋಹಫಲಕವನ್ನು ತಿರುಗಿಸುವ) ಗುಬುಟು.
  • (ಲೋಹದ ಕೆಲಸದಲ್ಲಿ ಮೇಲ್ಮೈಯ) ಮಣಿಗುಂಡು; ಉಬ್ಬು ಸಾಲುಗುಂಡು.

Search Dictionaries

Loading Results

Follow Us :   
  Download Bharatavani App
  Bharatavani Windows App