भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

knurled

ಗುಣವಾಚಕ

(ಲೋಹದ ಕೆಲಸದಲ್ಲಿ ಮೇಲ್ಮೈ ಮೇಲೆ) ಮಣಿಗುಂಡುಳ್ಳ.

knurr

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) = knur.

KO

ಸಂಕ್ಷಿಪ್ತ

  • knockout.
  • kick-off.

Ko’d

ಗುಣವಾಚಕ

knocked out (ಎಂಬುದರ ಸಂಕ್ಷಿಪ್ತ).

koa

ನಾಮವಾಚಕ

ಕೋಅ:

  • ಹವಾಯಿ ದ್ವೀಪಗಳಲ್ಲಿ ಬೆಳೆಯುವ, ಕಡುಗೆಂಪು ದಾರುವುಳ್ಳ, ಜಾಲಿಮರದ ಜಾತಿಯ ಮರ.
  • ಈ ಮರದ ದಾರು.

koala

ನಾಮವಾಚಕ

ಕೋಲಾ (ಕರಡಿ); ಆಕಾರದಲ್ಲಿ ಸ್ಲಾತ್‍ ಎಂಬ ಪ್ರಾಣಿಯನ್ನು ಹೋಲುವ, ಮರದ ಮೇಲೆ ವಾಸಿಸುವ, ಆಸ್ಟ್ರೇಲಿಯದ, ಬಾಲವಿಲ್ಲದ ಒಂದು ಸಸ್ತನಿ.

koan

ನಾಮವಾಚಕ

ಕೋನ್‍; ತಾರ್ಕಿಕ ವಿಚಾರ ವಿಧಾನದ ಅಸಮರ್ಪಕತೆಯನ್ನು ಬೋದಿಸಲು ಸೆನ್‍ (ಬೌದ್ಧ) ಮತದಲ್ಲಿ ಬಳಸುವ ಒಗಟು.

kobold

ನಾಮವಾಚಕ

  • (ಜರ್ಮನ್‍ ಪುರಾಣ) = brownie(1).
  • (ಗಣಿಗಳು ಮೊದಲಾದವುಗಳಲ್ಲಿ ವಿಹರಿಸುವುದೆಂದು ಹೇಳುವ) ಭೂಗತ ಭೂತ.

Kochel number

ನಾಮವಾಚಕ

(ಸಂಗೀತ) ಕಖಲ್‍ ಸಂಖ್ಯೆ; ಕಖಲ್‍ ಮತ್ತು ಅವನ ಅನುಯಾಯಿಗಳು ತಯಾರಿಸಿದ ಮೋಸಾರ್ಟ್‍ನ ಸಮಗ್ರ ಸಂಗೀತಕೃತಿಗಳ ಪಟ್ಟಿಯಲ್ಲಿ ಪ್ರತಿಯೊಂದು ಕೃತಿಗೂ ಕೊಟ್ಟಿರುವ ಸಂಖ್ಯೆ.

Kodak

ನಾಮವಾಚಕ

Proprietary nameಕೋಡ್ಯಾಕ್‍; ಸೂಕ್ಷ್ಮಗ್ರಾಹಿಯಾದ ಪಟಲದ ಅವಿಚ್ಛಿನ್ನವಾದ ಸುರುಳಿಯನ್ನೊಳಗೊಂಡ ಒಂದು ಬಗೆಯ ಛಾಯಾಗ್ರಾಹಿ, ಕ್ಯಾಮರಾ (ತಯಾರಕರ ಹೆಸರು).

Kodiak

ನಾಮವಾಚಕ

ಅಲಾಸ್ಕ ತೀರದ ಕೋಡಿಆಕ್‍ ದ್ವೀಪದಲ್ಲಿರುವ, ದೊಡ್ಡ, ಕಂದು ಬಣ್ಣದ ಕರಡಿ.

Kodiak bear

ನಾಮವಾಚಕ

= Kodiak.

koel

ನಾಮವಾಚಕ

(ಇಂಡಿಯ ಆಸ್ಟ್ರೇಲಿಯಗಳ) ಕೋಗಿಲೆ.

kohinoor

ನಾಮವಾಚಕ

  • (1849ರಿಂದ ಬ್ರಿಟಿಷ್‍ ರಾಜರ ಸ್ವತ್ತಾಗಿರುವ, ಸುವಿಖ್ಯಾತವಾದ) ಕೋಹಿನೂರು (ವಜ್ರ).
  • (ಯಾವುದೇ ವರ್ಗಕ್ಕೆ ಸೇರಿದ ವಸ್ತುಗಳಿಗೆಲ್ಲ) ರತ್ನಪ್ರಾಯವಾದದ್ದು; ಅತ್ಯುತ್ಕೃಷ್ಟವಾದುದು.

kohl

ನಾಮವಾಚಕ

ಕಾಡಿಗೆ, ಕಜ್ಜಳ; ಕಣ್ಣುಕಪ್ಪು; ಪೂರ್ವ ದೇಶಗಳಲ್ಲಿ ಕಣ್ಣಿಗೆ ಹಚ್ಚಲು ಬಳಸುವ, ಒಂದು ಬಗೆಯ ಕಪ್ಪು (ಸಾಮಾನ್ಯವಾಗಿ ಸುರುಮ).

kohlrabi

ನಾಮವಾಚಕ

ಮೂಲಂಗಿಕೋಸು; ಗೆಡ್ಡೆಕೋಸು; ನವಿಲುಕೋಸು; ದುಂಡು ಮೂಲಂಗಿ ಆಕಾರದ, ತಿನ್ನಬಹುದಾದ ಕಾಂಡವಿರುವ, ಒಂದು ಬಗೆಯ ಕೋಸುಗೆಡ್ಡೆ.

koine

ನಾಮವಾಚಕ

ಕಾಯಿನಿ:

  • ಆಟಿಕ್‍ ಅವಧಿಯ ಕೊನೆಯಿಂದ ಬೈಜಾಂಟೈನ್‍ ಅವಧಿಯವರೆಗೆ ಎಲ್ಲ ಗ್ರೀಕ್‍ ರಾಜ್ಯಗಳಲ್ಲೂ ಬಳಕೆಯಲ್ಲಿದ್ದ, ಗ್ರೀಕರ ಸಾಮಾನ್ಯ ವ್ಯಾವಹಾರಿಕ ಭಾಷೆ.
  • ಸಾಮಾನ್ಯ ಭಾಷೆ; ವಿವಿಧ ಬಗೆಯ ಜನ ಸಮಾನವಾಗಿ ಬಳಸುವ ಸಾಮಾನ್ಯ, ವ್ಯಾವಹಾರಿಕ ಭಾಷೆ.

kola

ನಾಮವಾಚಕ

= cola.

Kolarian

ಗುಣವಾಚಕ

ಕೋಲ ಎಂಬ ಆದಿವಾಸಿ ಬುಡಕಟ್ಟುಗಳ; ಬಂಗಾಳದ ಕಾಡುಗಳು ಹಾಗೂ ಬೆಟ್ಟಗಾಡುಗಳಲ್ಲಿ ವಾಸಿಸುವ ಬಗೆ ಬಗೆಯ ಆರ್ಯೇತರ ಬುಡಕಟ್ಟುಗಳ.

Kolarian

ನಾಮವಾಚಕ

(ಬಂಗಾಳದ) ಕೋಲ ಬುಡಕಟ್ಟಿನವನು ಯಾ ಅವನ ಭಾಷೆ.

Search Dictionaries

Loading Results

Follow Us :   
  Download Bharatavani App
  Bharatavani Windows App