भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kolinsky

ನಾಮವಾಚಕ

ಸೈಬೀರಿಯದ ಮಿಂಕ್‍ ಎಂಬ ಪ್ರಾಣಿ ಯಾ ಅದರ ತುಪ್ಪುಳ.

kolkhoz

ನಾಮವಾಚಕ

ಕಾಲ್ಕಾಸ್‍; ರಷ್ಯದ ಸಮಷ್ಟಿ ಜಮೀನು, ಸಾಮೂಹಿಕ ವ್ಯವಸಾಯ ಕ್ಷೇತ್ರ.

komitadji

ನಾಮವಾಚಕ

comitadji ಎಂಬುದರ ರೂಪಾಂತರ.

komitaji

ನಾಮವಾಚಕ

comitadji ಎಂಬುದರ ರೂಪಾಂತರ.

komodo dragon

ನಾಮವಾಚಕ

(ಮೊಸಳೆಗಳು ಬರುತ್ತಿವೆ ಎಂದು ಎಚ್ಚರಿಕೆ ನೀಡುವುದೆಂದು ಭಾವಿಸಲಾಗಿರುವ, ಇಂಡೊನೀಷ್ಯಾದ ಕೊಮೊಡೊ ದ್ವೀಪದ) ಭಾರಿ ಹಲ್ಲಿ; ದೈತ್ಯ ಗೌಳಿ.

komodo lizard

ನಾಮವಾಚಕ

= komodo dragon.

Komsomol

ನಾಮವಾಚಕ

ಕಾಮ್ಸಮಾಲ್‍; ರಷ್ಯದ ಕಮ್ಯೂನಿಸ್ಟ್‍ ಯುವಕ ಸಂಘ ಯಾ ಅದರ ಸದಸ್ಯ.

konck-on

ನಾಮವಾಚಕ

(ರಗ್ಬಿ ಚೆಂಡಾಟದಲ್ಲಿ) ಚೆಂಡನ್ನು ಎದುರಾಳಿಯ ಗೋಲಿನತ್ತ ಕೈಯಿಂದಲೋ ತೋಳಿನಿಂದಲೋ ತಳ್ಳುವುದು, ನೂಕುವುದು.

koodo

ನಾಮವಾಚಕ

kudu ಎಂಬುದುರ ರೂಪಾಂತರ.

kook

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ತಿಕ್ಕಲ; ವಿಚಿತ್ರ, ವಿಲಕ್ಷಣ – ವ್ಯಕ್ತಿ.

kook

ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ವ್ಯಕ್ತಿಯ ವಿಷಯದಲ್ಲಿ) ತಿಕ್ಕಲ; ವಿಲಕ್ಷಣ.

kookaburra

ನಾಮವಾಚಕ

(ಆಸ್ಟ್ರೇಲಿಯ) ಕುಕಬರ; ಡಸೆಲೊ ಕುಲದ, ನಗುವಿನಂತೆ ಕೂಗುವ, ಆಸ್ಟ್ರೇಲಿಯದ ಭಾರಿ ಮೀನ್ಚುಳ್ಳಿ (ಹಕ್ಕಿ).

kookily

ಕ್ರಿಯಾವಿಶೇಷಣ

(ಅಶಿಷ್ಟ) ಹುಚ್ಚುಹುಚ್ಚಾಗಿ; ಐಲು ಐಲಾಗಿ; ತಿಕ್ಕಲುತಿಕ್ಕಲಾಗಿ.

kookiness

ನಾಮವಾಚಕ

(ಅಶಿಷ್ಟ) ಐಲು; ತಿಕ್ಕಲು.

kooky

ಗುಣವಾಚಕ

(ಅಶಿಷ್ಟ) ಹುಚ್ಚುಹುಚ್ಚಾದ; ಐಲಿನ; ತಿಕ್ಕಲಿನ.

koorbash

ನಾಮವಾಚಕ

kourbash ಎಂಬುದರ ರೂಪಾಂತರ.

kop

ನಾಮವಾಚಕ

  • (ದಕ್ಷಿಣ ಆಹ್ರಿಕ) ಎದ್ದು ಕಾಣುವ ಬೆಟ್ಟ ಯಾ ಶಿಖರ.
  • (Kop) (ಕಾಲ್ಚೆಂಡಾಟ) ಮೆಟ್ಟಿಲು – ದಿಬ್ಬ, ದಿಣ್ಣೆ; ಮುಖ್ಯವಾಗಿ ಸ್ಥಳೀಯ ತಂಡವನ್ನು ಬೆಂಬಲಿಸುವ ಪ್ರೇಕ್ಷಕರು ನಿಂತುಕೊಂಡು ನೋಡುವುದಕ್ಕಾಗಿ ಏರ್ಪಡಿಸಿರುವ, ಮೆಟ್ಟಿಲು ಮೆಟ್ಟಿಲಾಗಿರುವ ಎತ್ತರದ ಏರಿ, ದಿಬ್ಬ.

kopeck

ನಾಮವಾಚಕ

copeck ಎಂಬ ಪದದ ರೂಪಾಂತರ.

kopek

ನಾಮವಾಚಕ

copeck ಪದದ ರೂಪಾಂತರ.

kopi

ನಾಮವಾಚಕ

(ಆಸ್ಟ್ರೇಲಿಯ) ಕೋಪಿ; ಪುಡಿಮಾಡಿದ ಜಿಪ್ಸಮ್‍.

Search Dictionaries

Loading Results

Follow Us :   
  Download Bharatavani App
  Bharatavani Windows App