भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kraft

ನಾಮವಾಚಕ

= kraft paper.

kraft paper

ನಾಮವಾಚಕ

ಕ್ರಾಹ್ಟ್‍ ಕಾಗದ; ನುಣುಪಾಗಿ ಗಟ್ಟಿಯಾಗಿರುವ, ಕಂದುಬಣ್ಣದ, ಹೊದಿಕೆಗೆ ಬಳಸುವ ಕಾಗದ.

krait

ನಾಮವಾಚಕ

ಕ್ರೈಟ್‍ (ಹಾವು); (ಪೂರ್ವ ಏಷ್ಯಾದಲ್ಲಿ ವಿಶೇಷವಾಗಿ ಕಂಡುಬರುವ, ತೀಕ್ಷ್ಣ ವಿಷವುಳ್ಳ, ಬಣ್ಣಬಣ್ಣದ ಪಟ್ಟೆಗಳಿರುವ) ಕಟ್ಟು ಹಾವು; ಕಡಂಬಳ.

kraken

ನಾಮವಾಚಕ

ಕ್ರಾಕನ್‍; ಕಡಲುದೆವ್ವ; ಸಾಗರಭೂತ; ನಾರ್ವೆಯ ಕಡಲ ಕರೆಯಿಂದಾಚೆ ಕಾಣಿಸಿಕೊಳ್ಳುವುದೆಂದು ಭಾವಿಸಲಾಗಿದ್ದ, ಪುರಾಣ ಪ್ರಸಿದ್ಧವಾದ ಕಡಲ ಪೆಡಂಭೂತ.

krans

ನಾಮವಾಚಕ

(ದಕ್ಷಿಣ ಆಹ್ರಿಕಾ) ಕಡಿಬಂಡೆಗಳ ಯಾ ಚಾಚುಬಂಡೆಗಳ ಗೋಡೆ.

Kraut

ನಾಮವಾಚಕ

(ಅಶಿಷ್ಟ) (ತಿರಸ್ಕಾರಾರ್ಥದಲ್ಲಿ) ಜರ್ಮನ; ಜರ್ಮನಿ ದೇಶದವನು.

kremlin

ನಾಮವಾಚಕ

ಪದಗುಚ್ಛ

ಕ್ರೆಮ್ಲಿನ್‍; ರಷ್ಯಾದ ಪಟ್ಟಣದೊಳಗಿನ, (ಮುಖ್ಯವಾಗಿ ಮಾಸ್ಕೋ ನಗರದಲ್ಲಿನ, ಹಿಂದಿನ ಚಕ್ರವರ್ತಿಗಳ ಅರಮನೆ ಮೊದಲಾದವು ಇರುವ) ದುರ್ಗ; ಕೋಟೆ. the Kremlin

  • ಮಾಸ್ಕೊ ನಗರದ ಕೋಟೆ.
  • ರಷ್ಯಾ ಸರ್ಕಾರ ಯಾ ಸರ್ಕಾರಿ ಭವನ.

Kremlinology

ನಾಮವಾಚಕ

ರಷ್ಯಾ ರಾಜಕೀಯದ ಅಧ್ಯಯನ (ಮತ್ತು ವಿಶ್ಲೇಷಣೆ).

kreutzer

ನಾಮವಾಚಕ

ಕ್ರಾಯಿಟ’ರ್‍; ಹಿಂದೆ ಜರ್ಮನಿ ಹಾಗೂ ಆಸ್ಟ್ರಿಯಗಳಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿ ಮತ್ತು ತಾಮ್ರ ಬೆರೆತ ಸಣ್ಣ ನಾಣ್ಯ.

kriegspiel

ನಾಮವಾಚಕ

  • ಕ್ರೀಗ್‍ಸ್ಪೀಲ್‍ (ಆಟ); ಯುದ್ಧ ತಂತ್ರದ ಅಭ್ಯಾಸಕ್ಕಾಗಿ ಸೈನಿಕ ಪಡೆಗಳು ಮೊದಲಾದವುಗಳ ಚಲನವಲನಗಳನ್ನು ತೋರಿಸಲು ಭೂಪಟಗಳ ಮೇಲೆ ಕಾಯಿ ನಡೆಸಿ ಆಡುವ ಯುದ್ಧದಾಟ.
  • ಒಂದು ಬಗೆಯ ಚದುರಂಗದಾಟ.

krill

ನಾಮವಾಚಕ

(ತಿಮಿಂಗಿಲ ಮೊದಲಾದವುಗಳು ತಿನ್ನುವ) ಪುಟ್ಟ ಕಡಲಕಳೆ ಚಿಪ್ಪುಜೀವಿಗಳು.

krimmer

ನಾಮವಾಚಕ

(ಕ್ರೈಮಿಯ ದೇಶದ ಕುರಿಮರಿಗಳ ಉಣ್ಣೆಯಿಂದ ತಯಾರಿಸಿದ) ಕಂದು ಯಾ ಕಪ್ಪು ಬಣ್ಣದ ತುಪ್ಪುಳು ಬಟ್ಟೆ.

kris

ನಾಮವಾಚಕ

(ಮಲಯಾ ಯಾ ಇಂಡೊನೀಷ್ಯಾಗಳ) ಡೊಂಕು ಚೂರಿ; ಅಂಕುಡೊಂಕಾಗಿ ಬಾಗಿರುವ ಚಾಕು.

Krishnaism

ನಾಮವಾಚಕ

(ಶ್ರೀಕೃಷ್ಣನನ್ನು ವಿಷ್ಣುವಿನ ಅವತಾರವೆಂದು ನಂಬಿ ಪೂಜಿಸುವ) ಕೃಷ್ಣಾರಾಧನೆ; ಕೃಷ್ಣೋಪಾಸನೆ; ಕೃಷ್ಣಪಂಥ.

kromesky

ನಾಮವಾಚಕ

ಕೋಳಿಮರಿ ಮೊದಲಾದವುಗಳ ಮಾಂಸಗಳನ್ನು ಚೂರುಚೂರಾಗಿ ಹೆಚ್ಚಿ ಹಂದಿಯ ಮಾಂಸದಲ್ಲಿ ಸುತ್ತಿಟ್ಟು ಕರಿದ ಭಕ್ಷ್ಯ.

krona

ನಾಮವಾಚಕ

ಕ್ರೋನ:

  • (ಬಹುವಚನ kronor ಉಚ್ಚಾರಣೆ ಕ್ರೋನರ್‍). ಸ್ವೀಡನ್ನಿನ ನಾಣ್ಯ.
  • (ಬಹುವಚನ kronur ಉಚ್ಚಾರಣೆ ಕ್ರೋನರ್‍). ಇಸ್‍ಲೆಂಡಿನ ನಾಣ್ಯ.

krone

ನಾಮವಾಚಕ

ಕ್ರೋನ:

  • ಡೆನ್‍ಮಾರ್ಕ್‍, ನಾರ್ವೆ ಮತ್ತು ಸ್ವೀಡನ್‍ಗಳಲ್ಲಿ ಚಲಾವಣೆಯಲ್ಲಿರುವ ಬೆಳ್ಳಿನಾಣ್ಯ.
  • ಹಿಂದೆ ಆಸ್ಟ್ರಿಯದಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿನಾಣ್ಯ.
  • ಹಿಂದೆ ಜರ್ಮನಿಯಲ್ಲಿ ಚಲಾವಣೆಯಲ್ಲಿದ್ದ 10 ಮಾರ್ಕ್‍ ಬೆಲೆಯ ಚಿನ್ನದ ನಾಣ್ಯ.

Kroo

ನಾಮವಾಚಕ

1Kru ಎಂಬ ಪದದ ರೂಪಾಂತರ.

Kroo

ಗುಣವಾಚಕ

2Kru ಎಂಬ ಪದದ ರೂಪಾಂತರ.

kru

ನಾಮವಾಚಕ

ಕ್ರೂ (ಬುಡಕಟ್ಟಿನವನು); ಲೈಬೀರಿಯಾದ ಕಡಲಕೆರೆಯಲ್ಲಿ ವಾಸಿಸುವ, ನಾವಿಕಪಟುಗಳಾದ ನೀಗ್ರೊಗಳ ಜನಾಂಗದವನು.

Search Dictionaries

Loading Results

Follow Us :   
  Download Bharatavani App
  Bharatavani Windows App