भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Kru

ಗುಣವಾಚಕ

ಕ್ರೂ ಬುಡಕಟ್ಟಿನ.

krugerrand

ನಾಮವಾಚಕ

ಕ್ರೂಗರ್ಯಾಂಡ್‍; ದಕ್ಷಿಣ ಆಹ್ರಿಕದ ರಾಜನೀತಿಜ್ಞನಾದ ಎಸ್‍.ಜೆ.ಪಿ. ಕ್ರೂಗರ್‍ (ನಿಧನ 1904) ಎಂಬಾತನ ಚಿತ್ರವಿರುವ ದಕ್ಷಿಣ ಆಹ್ರಿಕದ ಚಿನ್ನದ ನಾಣ್ಯ.

krummhorn

ನಾಮವಾಚಕ

ಜೋಡಿ ಪೀಪಿ ಕಹಳೆ; ಜೋಡಿ ಪೀಪಿಗಳೂ, ವಕ್ರವಾದ ತುದಿಯೂ ಇರುವ, ಮಧ್ಯಯುಗದ ಒಂದು ಸುಷಿರ ವಾದ್ಯ.

krypton

ನಾಮವಾಚಕ

(ರಸಾಯನವಿಜ್ಞಾನ) ಕ್ರಿಪ್ಟಾನ್‍; ವಾಯುವಿನಲ್ಲಿರುವ ವಿರಳಾನಿಲಗಳಲ್ಲೊಂದಾದ, ರಾಸಾಯನಿಕವಾಗಿ ಜಡವಾದ, ಪರಮಾಣು ಸಂಖ್ಯೆ 36 ಮತ್ತು ಪರಮಾಣು ತೂಕ 83.7 ಉಳ್ಳ, ಧಾತು.

KS

ಸಂಕ್ಷಿಪ್ತ

  • (ಅಮೆರಿಕನ್‍ ಪ್ರಯೋಗ) Kansas.
  • (ಬ್ರಿಟಿಷ್‍ ಪ್ರಯೋಗ) King’s Scholar.

Kshatriya

ನಾಮವಾಚಕ

ಕ್ಷತ್ರಿಯ; ಹಿಂದೂ ಧರ್ಮದ ನಾಲ್ಕು ವರ್ಣಗಳಲ್ಲಿ ಎರಡನೆಯ ಯೋಧ ವರ್ಣದವನು.

KT

ಸಂಕ್ಷಿಪ್ತ

  • Knight Templar.
  • (ಬ್ರಿಟಿಷ್‍ ಪ್ರಯೋಗ) Knight (of the Order) of the Thistle.

Kt.

ಸಂಕ್ಷಿಪ್ತ

Knight.

kt.

ಸಂಕ್ಷಿಪ್ತ

knot.

Ku

ಸಂಕೇತ

(ರಸಾಯನವಿಜ್ಞಾನ) kurchatovium (ಧಾತು).

Ku-Klux

ನಾಮವಾಚಕ

= Ku-Klux-Klan.

Ku-Klux-Klan

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕೂ – ಕ್ಲಕ್ಸ್‍ – ಕೂಟ:

  • ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ನಡೆದ ಅಂತರ್ಯುದ್ಧದ ಬಳಿಕ ನೀಗ್ರೋಗಳ ಹಾಗೂ ರೋಮನ್‍ ಕ್ಯಾಥೊಲಿಕರ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಸಲುವಾಗಿ ದಕ್ಷಿಣದ ಸಂಸ್ಥಾನಗಳಲ್ಲಿ ಕಟ್ಟಿದ ಈ ಹೆಸರಿನ ಗುಪ್ತ ಸಂಘ.
  • ಮೊದಲನೆಯ ಮಹಾಯುದ್ಧದ ಬಳಿಕ ಹೊರರಾಷ್ಟ್ರಗಳ ಪ್ರಭಾವದ ವಿರುದ್ಧ ಹೋರಾಡುವ ಸಲುವಾಗಿ ಅಮೆರಿಕದಲ್ಲಿ ಕಟ್ಟಿದ ಈ ಹೆಸರಿನ ಗುಪ್ತ ಸಂಘ.

kudos

ನಾಮವಾಚಕ

(ಆಡುಮಾತು) ಹೆಸರುವಾಸಿ; ಕೀರ್ತಿ; ಯಶಸ್ಸು; ಖ್ಯಾತಿ.

kudu

ನಾಮವಾಚಕ

ಕೂಡೂ; ದೊಡ್ಡದೊಡ್ಡ ಬಿಳಿ ಪಟ್ಟೆಗಳುಳ್ಳ, ಕವಲುಗೊಂಬಿನ, ದಕ್ಷಿಣ ಆಹ್ರಿಕದ ಒಂದು ಜಿಂಕೆ, ಎರಳೆ.

Kufic

ನಾಮವಾಚಕ

= $^1$Cufic.

Kufic

ಗುಣವಾಚಕ

= $^2$Cufic.

kukri

ನಾಮವಾಚಕ

ಕುಕ್ರಿ; ಕೊಂಕು ಕಠಾರಿ; ಘೂರ್ಕರು ಬಳಸುವ, ಮೊನೆಯ ಕಡೆಗೆ ಅಗಲವಾಗುತ್ತ ಹೋಗುವ ಅಲಗಿನ ಕೂಡುಗತ್ತಿ.

kulak

ನಾಮವಾಚಕ

ರಷ್ಯದ ಅನುಕೂಲಸ್ಥ ರೈತ ಯಾ ರೈತರೊಡೆಯ.

kulan

ನಾಮವಾಚಕ

ನೈಋತ್ಯ ಏಷ್ಯದ ಕಾಡುಗತ್ತೆ.

kultur

ನಾಮವಾಚಕ

(ಮುಖ್ಯವಾಗಿ ಹೀನಾರ್ಥದಲ್ಲಿ) (ಉಚ್ಚ ಕುಲದವರೆಂಬ ದುರಹಂಕಾರ ಮತ್ತು ಸೈನಿಕ ಮನೋಭಾವವನ್ನು ಸೂಚಿಸುವ) ಜರ್ಮನರ ಕಲ್ಪನೆಯ, ದೃಷ್ಟಿಯಲ್ಲಿನ – ನಾಗರಿಕತೆ, ಸಂಸ್ಕೃತಿ.

Search Dictionaries

Loading Results

Follow Us :   
  Download Bharatavani App
  Bharatavani Windows App