English-Kannada Nighantu (University of Mysore)
University of Mysore
Kantian
ಗುಣವಾಚಕ
ಕ್ಯಾಂಟ್ ಎಂಬಾತನ; ಕ್ಯಾಂಟಿನ ಸಿದ್ಧಾಂತದ.
Kantian
ನಾಮವಾಚಕ
ಕ್ಯಾಂಟ್ನ ಅನುಯಾಯಿ; ಕ್ಯಾಂಟ್ವಾದಿ; ಕ್ಯಾಂಟ್ಪಂಥಿ.
Kantianism
ನಾಮವಾಚಕ
ಕ್ಯಾಂಟ್ನ ಸಿದ್ಧಾಂತ; ಬ್ರಿಟಿಷ್ ಅನುಭವವಾದ ಹಾಗೂ ಇತರ ಯೂರೋಪಿಯನ್ ದೇಶಗಳ ವಿಚಾರವಾದ – ಈ ಎರಡರ ಸಮನ್ವಯಕ್ಕೆ ಯತ್ನಿಸಿದ ಹದಿನೆಂಟನೆಯ ಶತಮಾನದ ಜರ್ಮನ್ ತತ್ವಶಾಸ್ತ್ರಜ್ಞ ಇಮ್ಯಾನ್ಯುಅಲ್ ಕ್ಯಾಂಟ್ (1724–1804)ನ ಸಿದ್ಧಾಂತ.
KANU
ಸಂಕ್ಷಿಪ್ತ
Kenya African National Union.
kaolin
ನಾಮವಾಚಕ
ಕೆಯೊಲಿನ್; ಬಿಳಿಜೇಡಿ(ಮಣ್ಣು); ಪಿಂಗಾಣಿ ಮಣ್ಣು; ಪಿಂಗಾಣಿಯನ್ನು ತಯಾರಿಸಲು ಬಳಸುವ ಒಂದು ಬಗೆಯ ನುಣುಪಾದ ಬಿಳಿಯ ಜೇಡಿಮಣ್ಣು.
kaolinise
ಸಕರ್ಮಕ ಕ್ರಿಯಾಪದ
= kaolinize.
kaolinite
ನಾಮವಾಚಕ
ಕೆಯೊಲಿನೈಟ್; ಕೆಯೊಲಿನ್ನ ಮುಖ್ಯ ಘಟಕವಾಗಿರುವ ಜಲಯುಕ್ತ ಅಲ್ಯೂಮಿನಿಯಂ ಸಿಲಿಕೇಟ್, ${\rm Al}_2{\rm Si}_2{\rm O}_5{\rm (OH)}_4$.
kaolinize
ಸಕರ್ಮಕ ಕ್ರಿಯಾಪದ
(ಗಾಳಿ, ಬಿಸಿಲು, ಮೊದಲಾದ ಹವಾ ಬದಲಾವಣೆಗಳಿಗೆ ಒಡ್ಡುವುದರ ಮೂಲಕ ಹೆಲ್ಡ್ಸ್ಟಾರ್ ಮೊದಲಾದ ಖನಿಜವನ್ನು) ಕೆಯೊಲಿನೀಕರಿಸು; ಕೆಯೊಲಿನ್ಗೊಳಿಸು; ಬಿಳಿ ಜೇಡಿಯನ್ನಾಗಿಸು.
kaon
ನಾಮವಾಚಕ
(ಭೌತವಿಜ್ಞಾನ) ಕೇಯಾನ್; ಅಧಿಕ ಶಕ್ತಿಕಣಗಳ ಸಂಘರ್ಷಣೆಯಲ್ಲಿ ಉತ್ಪತ್ತಿಯಾಗುವ, ಅಸ್ಥಿರವಾದ, ಇಲೆಕ್ಟ್ರಾನಿನ 966.3ರಷ್ಟು ತೂಕವಿರುವ ವಿದ್ಯುದಾವಿಷ್ಟ ಮೀಸಾನ್ ಯಾ 974.6ರಷ್ಟು ತೂಕವಿರುವ ವಿದ್ಯುತ್ತಟಸ್ಥ ಮೀಸಾನ್.
kapellmeister
ನಾಮವಾಚಕ
ವಾದ್ಯಮೇಳ, ಗೀತನಾಟಕ, ಮೇಳಗಾಯನ ಮೊದಲಾದವುಗಳ ಡೈರೆಕ್ಟರು, ನಿರ್ದೇಶಕ.
kapellmeister music
ನಾಮವಾಚಕ
ಮಾಮೂಲಿ ಸಂಗೀತ; ಸ್ಫೂರ್ತಿಜಾತವಲ್ಲದ, ನೀರಸವಾದ ಸಾಮಾನ್ಯ ಸಂಗೀತ.
kapok
ನಾಮವಾಚಕ
ಕೇಪಾಕ್:
- ದೂರಪ್ರಾಚ್ಯದಲ್ಲಿ ಬೆಳೆಯುವ ದೊಡ್ಡದಾದ ಬೂರುಗದ ಹತ್ತಿ ಮರ.
- ಇದರ ಹತ್ತಿ; ಜಾವಾಹತ್ತಿ; ಮೆತ್ತೆ ಮೊದಲಾದವುಗಳಿಗೆ ತುಂಬುವ, ಎಕ್ಕಿದ ಹತ್ತಿಯಂತಹ, ನಯವಾದ ಹತ್ತಿ ಯಾ ಅರಳೆ.
kappa
ನಾಮವಾಚಕ
ಗ್ರೀಕ್ ವರ್ಣಮಾಲೆಯಲ್ಲಿ ‘ಕ್’, k ಎಂಬ ಹತ್ತನೆಯ ಅಕ್ಷರ.
kaput
ಗುಣವಾಚಕ
(ಅಶಿಷ್ಟ) ( ಆಖ್ಯಾತಕ ಪ್ರಯೋಗದಲ್ಲಿ ಮಾತ್ರ)
- ಧ್ವಂಸವಾಗಿ ಹೋದ; ಹಾಳಾದ; ಭಸ್ಮವಾಗಿ ಹೋದ; ನಾಶವಾದ; ನಿಶ್ಶೇಷವಾದ; ಧೂಳೀಪಟವಾದ: after the bombardment the city was kaput ಬಾಂಬುದಾಳಿಯ ಬಳಿಕ ನಗರವೆಲ್ಲ ಧ್ವಂಸವಾಗಿ ಹೋಗಿತ್ತು.
- ಕೆಲಸಕ್ಕೆ ಬಾರದಂತಾದ; ಕೆಟ್ಟುಹೋದ; ನಿರುಪಯುಕ್ತವಾದ; ಅಸಮರ್ಥವಾಗಿ ಹೋದ: with their cameras rendered kaput ಕೆಲಸಕ್ಕೆ ಬಾರದಂತಾಗಿದ್ದ ತಮ್ಮ ಕ್ಯಾಮರಾಗಳೊಡನೆ.
- ಬಳಕೆ ತಪ್ಪಿದ; ಹಿಂದೆ ಬಿದ್ದುಹೋದ; ಗತ: their fashions completely kaput ತೀರ ಹಿಂದೆ ಬಿದ್ದುಹೋದ ಅವರ ಹ್ಯಾಷನ್ನುಗಳು.
karabiner
ನಾಮವಾಚಕ
ಕೂಡುಕೊಂಡಿ; ಪರ್ವತಾರೋಹಿಗಳು ಬಳಸುವ, ಕಾಪುಮುಚ್ಚಳವುಳ್ಳ ಜೋಡಣೆ ಕೊಂಡಿ.
karaburan
ನಾಮವಾಚಕ
ಕ್ಯಾರಬ್ಯುರಾನ್; ಕಪ್ಪು ಬಿರುಗಾಳಿ; ನೀಲ ಚಂಡಮಾರುತ; ಮಧ್ಯ ಏಷ್ಯಾದಲ್ಲಿ ಬೇಸಿಗೆಯಲ್ಲಿ ಬೀಸುವ ಅತಿ ಬಿರುಸಾದ, ಧೂಳುತುಂಬಿದ ಪ್ರಚಂಡ ಮಾರುತ.
Karaite
ನಾಮವಾಚಕ
ಕೇರೈಟ್; ಯೆಹೂದಿ ಧರ್ಮಶಾಸ್ತ್ರ ಪಂಡಿತರಿಂದ ಪ್ರತಿಪಾದಿತವಾದ ಸಾಂಪ್ರದಾಯಿಕ ವ್ಯಾಖ್ಯಾನವನ್ನು ನಿರಾಕರಿಸಿ ಬೈಬಲ್ಲಿನ ಹಳೆಯ ಒಡಂಬಡಿಕೆಯ ವಾಚ್ಯಾರ್ಥವನ್ನೇ ಅಂಗೀಕರಿಸುವ, ಮುಖ್ಯವಾಗಿ ಕ್ರಿಮಿಯಾದಲ್ಲಿ ವಾಸಿಸುವ, ಯೆಹೂದ್ಯ ಪಂಥಿ.
karakul
ನಾಮವಾಚಕ
ಕ್ಯಾರಕುಲ್:
- ಮರಿಯಾಗಿದ್ದಾಗ ಕಪ್ಪುತುಪ್ಪಟ ಹೊಂದಿದ್ದು, ವಯಸ್ಸಾದ ಮೇಲೆ ಅದು ಕಂದುಬಣ್ಣಕ್ಕೆ ತಿರುಗುವ, ಏಷ್ಯಾ ಖಂಡದ ಕುರಿ ಜಾತಿ.
- ಇದರಿಂದ ತಯಾರಿಸಿದ ಯಾ ಇದರಂತೆಯೇ ಇರುವ ತುಪ್ಪಟ, ತುಪ್ಪಳು.
karat
ನಾಮವಾಚಕ
= carat(b).
karate
ನಾಮವಾಚಕ
ಕರಾಟೆ; ಕೈಕಾಲುಗಳನ್ನು ಮಾತ್ರ ಬಳಸಿ, ಪ್ರತಿಸ್ಪರ್ಧಿಯನ್ನು ಶಸ್ತ್ರರಹಿತನನ್ನಾಗಿ ಮಾಡುವ ಜಪಾನೀ ಕಾಳಗ, ಹೋರಾಟ.