भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

karma

ನಾಮವಾಚಕ

(ಹಿಂದೂ, ಜೈನ ಹಾಗೂ ಬೌದ್ಧಧರ್ಮ) ಕರ್ಮ:

  • ಕರ್ಮಸಿದ್ಧಾಂತ; ಈ ಜನ್ಮದಲ್ಲೋ ಜನ್ಮಾಂತರದಲ್ಲೋ ತಾನು ಮಾಡಿದ ಕರ್ಮಫಲವನ್ನು ತಾನೇ ಅನುಭವಿಸಿ ತೀರಬೇಕೆಂಬ ಸಿದ್ಧಾಂತ.
  • ಕರ್ಮಯೋಗ; ಹಿಂದೂಧರ್ಮದ ಪ್ರಕಾರ ಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಕರ್ಮ, ಜ್ಞಾನ, ಭಕ್ತಿ ಎಂಬ ಸಾಧನತ್ರಯಗಳಲ್ಲೊಂದು.
  • ವ್ಯಕ್ತಿಯು ಹಿಂದಿನ ಜನ್ಮಗಳೊಂದರಲ್ಲಿ ಮಾಡಿರುವ, ಅವನ ಮುಂದಿನ ಜನ್ಮವನ್ನು ನಿರ್ಧರಿಸುವುದೆಂದು ಭಾವಿಸಲಾದ ಕರ್ಮಗಳ ಮೊತ್ತ. ಸಂಚಯ.
  • ವಿಧಿ; ಹಣೆಬರಹ; ನಸೀಬು.

karmic

ಗುಣವಾಚಕ

  • ಕರ್ಮದ; ಕರ್ಮಕ್ಕೆ ಸಂಬಂಧಿಸಿದ; ಕರ್ಮದಿಂದಾದ.
  • ವಿಧಿಯ; ಹಣೆಯ ಬರಹದ.

Karoo

ನಾಮವಾಚಕ

ಕರೂ; ಬೇಸಿಗೆಯಲ್ಲಿ ಬತ್ತಿ – ಹೋಗುವ, ಜೇಡಿಮಣ್ಣಿನ ನೆಲವುಳ್ಳ, ದಕ್ಷಿಣ ಆಹ್ರಿಕಾದ ಎತ್ತರವಾದ ಪ್ರಸ್ಥಭೂಮಿ.

kaross

ನಾಮವಾಚಕ

ಕರಾಸ್‍; ತುಪ್ಪುಳು ಚರ್ಮದ ಹೊದಿಕೆ; ಹೊರ ಮೈಮೇಲೆ ಕೂದಲಿರುವಂತೆಯೇ ಹದ ಮಾಡಿದ, (ಪ್ರಾಣಿಗಳ) ತೊಗಲಿನಿಂದ ತಯಾರಿಸಿದ, ದಕ್ಷಿಣ ಆಹ್ರಿಕದ ಬುಡಕಟ್ಟುಗಳವರು ಹೊದ್ದುಕೊಳ್ಳುವ ಹೊದಿಕೆ.

karri

ನಾಮವಾಚಕ

ಕ್ಯಾರಿ:

  • ಪಶ್ಚಿಮ ಆಸ್ಟ್ರೇಲಿಯಾದ ಕಡುಗೆಂಪು ಬಣ್ಣದ, ಗಟ್ಟಿದಾರು ಇರುವ ಒಂದು ಎತ್ತರದ ಮರ.
  • ಆ ಮರದ ದಾರು.

Karroo

ನಾಮವಾಚಕ

= Karoo.

karst

ನಾಮವಾಚಕ

ನೆಲದಡಿ ಕಲ್ಲು ಕರಗಿ – ಹೋಗುವುದರಿಂದ ಆದ ಕಾಲುವೆ, ಪೊಟರೆ, ಮೊದಲಾದವುಗಳುಳ್ಳ ಪ್ರದೇಶ.

kartell

ನಾಮವಾಚಕ

cartel ಪದದ ರೂಪಾಂತರ.

karyo-

ಸಮಾಸ ಪೂರ್ವಪದ

ಜೀವಕೋಶದ ನ್ಯೂಕ್ಲಿಯಸ್‍ ಎಂಬರ್ಥದ ಸಮಾಸ ಪೂರ್ವಪದ: karyogamy ನ್ಯೂಕ್ಲಿಯಸ್‍ಗಳ ಮಿಲನ.

karyokinesis

ನಾಮವಾಚಕ

(ಜೀವವಿಜ್ಞಾನ) ಕ್ಯಾರಿಯೋಕಿನೀಸಿಸ್‍; ‘ಮೈಟೋಸಿಸ್‍’ನಲ್ಲಿ ಕೋಶದ ನ್ಯೂಕ್ಲಿಯಸ್‍ ಒಳಗೆ ಆಗುವ ಪ್ರಕ್ರಿಯೆ.

karyotype

ನಾಮವಾಚಕ

(ಜೀವವಿಜ್ಞಾನ) ಕ್ಯಾರಿಯೊಟೈಪ್‍; ಕೋಶದ ನ್ಯೂಕ್ಲಿಯಸ್‍ನಲ್ಲಿರುವ ಕ್ರೊಮೊಸೋಮ್‍ ಸಂಖ್ಯೆ ಮತ್ತು ಅವುಗಳ ರಚನೆ.

kasbah

ನಾಮವಾಚಕ

= casbah.

katabatic

ಗುಣವಾಚಕ

(ಪವನಶಾಸ್ತ್ರ) ಅಧಶ್ಚಲ ವಾಯುಜನ್ಯ; (ಗಾಳಿಗಳ ವಿಷಯದಲ್ಲಿ) ಕೆಳದಿಕ್ಕಿಗೆ ಬೀಸುವ ಗಾಳಿಯಿಂದ ಉಂಟಾದ.

katabolism

ನಾಮವಾಚಕ

(ಜೀವವಿಜ್ಞಾನ) = catabolism.

katakana

ನಾಮವಾಚಕ

(ಜಪಾನೀ ಭಾಷೆಯ) ಕೋನಾಕ್ಷರ ಮಾಲೆ; ಕೋನವರ್ಣಮಾಲೆ; ಕೋನಾಕೃತಿಯಲ್ಲಿರುವ ವರ್ಣಮಾಲೆ.

kathode

ನಾಮವಾಚಕ

= cathode.

katydid

ನಾಮವಾಚಕ

ಹಸುರು ಹೆಮ್ಮಿಡತೆ; ಉದ್ದವಾದ ಮೀಸೆಗಳಿರುವ ಯಾ ಸ್ಪರ್ಶತಂತುಗಳಿರುವ, ಹಸುರು ಬಣ್ಣದ, ಅಮೆರಿಕದಲ್ಲಿ ಸಾಮಾನ್ಯವಾಗಿ ಕಂಡುಬರುವ, ದೊಡ್ಡ ಮಿಡತೆ.

kauri

ನಾಮವಾಚಕ

ಕೌರಿ(ಮರ): ತೇರುಮರ; ಬೆಲೆಬಾಳುವ ದಾರುವನ್ನೂ ಒಂದು ಬಗೆಯ ರಾಳವನ್ನೂ ಕೊಡುವ, ನ್ಯೂಸಿಲೆಂಡಿನ, ಶಂಕುವಿನಂತಿರುವ, ಒಂದು ಮರ.

kauri-gum

ನಾಮವಾಚಕ

ಕೌರಿ(ಮರದ) ಗೋಂದು, ಅಂಟು.

kava

ನಾಮವಾಚಕ

  • ಪಾಲಿನೀಷಯದ ಒಂದು ಪೊದೆಗಿಡ.
  • ಇದರ ಬೇರುಗಳಿಂದ ತೆಗೆದ ಒಂದು ಮಾದಕವೂ ಮೂತ್ರವರ್ಧಕವೂ ಆದ ಕಷಾಯ.

Search Dictionaries

Loading Results

Follow Us :   
  Download Bharatavani App
  Bharatavani Windows App