भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kavass

ನಾಮವಾಚಕ

ಕವಾಸ್‍; ತುರ್ಕಿದೇಶದ ಶಸ್ತ್ರಸಜ್ಜಿತ ಪೊಲೀಸ್‍ ಪ್ಯಾದೆ, ಆಳು ಯಾ ದೂತ.

kawa-kawa

ನಾಮವಾಚಕ

ಕಾವಕಾವ; ನ್ಯೂಸಿಲೆಂಡಿನ, ಪರಿಮಳ ಬೀರುವ ಎಲೆಗಳುಳ್ಳ ಒಂದು ಅಂದವಾದ ಪೊದೆಗಿಡ.

kayak

ನಾಮವಾಚಕ

ಕೈಯಾಕ್‍:

  • ತೊಗಲ ದೋಣಿ; ಚಕ್ಕಳದ ದೋಣಿ; ಹಗುರವಾದ ಮರದ ಚೌಕಟ್ಟಿನ, ಸೀಲ್‍ ಪ್ರಾಣಿಯ ತೊಗಲಿನಿಂದ ಮುಚ್ಚಿದ, ಒಬ್ಬನೇ ಯಾನ ಮಾಡುವ ಎಸ್ಕಿಮೋ ದೋಣಿ.
  • ಇದನ್ನು ಹೋಲುವ ಮುಸುಕು ಹಾಕಿದ ದೋಣಿ.

kayo

ನಾಮವಾಚಕ

(ಆಡುಮಾತು) (ಮುಷ್ಟಿಕಾಳಗದಲ್ಲಿ) ಕೆಡವು – ಹೊಡೆತ, ಪೆಟ್ಟು, ಏಟು; ಕೆಡಹು ಗುದ್ದು; ಪಾತನ ಪ್ರಹಾರ.

kayo

ಸಕರ್ಮಕ ಕ್ರಿಯಾಪದ

(ಆಡುಮಾತು) ಕೆಡಹುಗುದ್ದುಕೊಡು; ಹೊಡೆದು ಕೆಡವು.

kazoo

ನಾಮವಾಚಕ

ಕಸೂ; ವಾದಕನು ಅದರೊಳಕ್ಕೆ ಹಾಡುವ ಯಾ ಗುಂಯ್‍ಗುಡುವ ಕಿರುವಾದ್ಯ.

KB

ಸಂಕ್ಷಿಪ್ತ

(United Kingdom) King’s Bench.

KBE

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Knight Commander of (the Order of) the British Empire.

KC

ಸಂಕ್ಷಿಪ್ತ

  • King’s College.
  • King’s Counsel.

Kc

ಸಂಕ್ಷಿಪ್ತ

kilocycle(s).

kc/s

ಸಂಕ್ಷಿಪ್ತ

kilocycles per second.

KCB

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Knight Commander of (the Order of) the Bath.

KCIE

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Knight Commander of (the Order of) the Indian Empire.

KCMG

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Kinght Commander of (the Order of) St. Michael & St. George.

KCSI

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Knight Commander of (the Order of) the Star of India.

KCVO

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Knight Commander of the Royal Victorian Order.

KD

ಸಂಕ್ಷಿಪ್ತ

knocked down.

KE

ಸಂಕ್ಷಿಪ್ತ

kinetic energy.

kea

ನಾಮವಾಚಕ

ಕೇಅ(ಗಿಣಿ); ಮೂತ್ರಪಿಂಡದ ಕೊಬ್ಬಿಗಾಗಿ ಕುರಿಗಳನ್ನು ಕೊಲ್ಲುವ, ಹಸುರು ಬಣ್ಣದ, ನ್ಯೂಸಿಲೆಂಡಿನ ಆಲ್ಪೈನ್‍ ಗಿಣಿ.

kebab

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) ಕಬಾಬ್‍; ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ತರಕಾರಿಗಳು, ಶುಂಠಿ, ಬೆಳ್ಳುಳ್ಳಿ, ಮೊದಲಾದವುಗಳೊಡನೆ ಬೇಯಿಸಿದ ಮಾಂಸ.

Search Dictionaries

Loading Results

Follow Us :   
  Download Bharatavani App
  Bharatavani Windows App