भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

keck

ಅಕರ್ಮಕ ಕ್ರಿಯಾಪದ

ಪದಗುಚ್ಛ

ಓಕರಿಸು; ವಾಕರಿಸು; ವಾಂತಿ ಯಾ ವಮನ ಮಾಡುವಂತೆ ವರ್ತಿಸು; ಓಕರಿಕೆ ಆಗುವಂತೆ ಯಾ ಬರುವಂತೆ ವರ್ತಿಸು. keck at (ಆಹಾರ ಮೊದಲಾದವನ್ನು ಹೇವರಿಕೆಯಿಂದ, ಅಸಹ್ಯದಿಂದ) ಒಲ್ಲೆನೆನ್ನು; ನಿರಾಕರಿಸು; ತಿರಸ್ಕರಿಸು.

kedge

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಹಡಗಿನ ವಿಷಯದಲ್ಲಿ, ಲಂಗರಿನ ತುಯ್ತದಿಂದ) ಸಾಗು; ಹೋಗು; ಚಲಿಸು.

  • (ಸಣ್ಣ ಲಂಗರಿಗೆ ಕಟ್ಟಿದ ಸರಪಣಿಯಿಂದ) ಹಡಗನ್ನು – ತುಯ್ಯು, ಎಳೆದುಕೊಂಡು ಹೋಗು.
  • (ಸಣ್ಣ ಲಂಗರಿಗೆ ಕಟ್ಟಿದ ಸರಪಣಿಯಿಂದ) ಹಡಗನ್ನು ತುಯ್ದು ಯಾ ಎಳೆದು ಚಲಿಸುವಂತೆ, ಹೋಗುವಂತೆ ಮಾಡು.

kedge

ನಾಮವಾಚಕ

(ಹಡಗನ್ನು ತುಯ್ಯಲು ಬಳಸುವ) ಕಿರುಲಂಗರು.

kedge-anchor

ನಾಮವಾಚಕ

= 2kedge.

kedgeree

ನಾಮವಾಚಕ

ಕಿಚಡಿ; ಖಿಚಡಿ:

  • ಅಕ್ಕಿ, ಬೇಳೆ, ಈರುಳ್ಳಿ, ಮೊಟ್ಟೆ ಮೊದಲಾದವನ್ನು ಸೇರಿಸಿ ಮಾಡಿದ ಭಾರತದ ಒಂದು ಅಡಿಗೆ ಪದಾರ್ಥ.
  • ಮೀನು, ಅಕ್ಕಿ, ಮೊಟ್ಟೆ ಮೊದಲಾದವನ್ನು ಹಾಕಿ ಮಾಡಿದ ಯೂರೋಪಿನವರ ಒಂದು ಅಡಿಗೆ ಪದಾರ್ಥ.

keek

ನಾಮವಾಚಕ

(ಸ್ಕಾಟ್ಲೆಂಡ್‍ ಪ್ರಯೋಗ) ಇಣುಕು ದೃಷ್ಟಿ; ಹಣಿಕು ನೋಟ.

keek

ಅಕರ್ಮಕ ಕ್ರಿಯಾಪದ

(ಸ್ಕಾಟ್ಲೆಂಡ್‍ ಪ್ರಯೋಗ) ಇಣುಕು; ಹಣಿಕಿ ನೋಡು.

keel

ನಾಮವಾಚಕ

ಪದಗುಚ್ಛ

false keel (ನಿಜವಾದ ಅಡಿಗಟ್ಟಿಗೆ ಅಪಾಯ ತಪ್ಪಿಸಲು ಅದರ ನೆರವಿಗಾಗಿ ಅದರಡಿಯಲ್ಲಿ ಜೋಡಿಸಿದ) ಹುಸಿ – ಅಡಿಮರ, ತಳದಿಮ್ಮಿ ಯಾ ಅಡಿ ಹಲಗೆ.

  • (ಹಡಗಿನ) ಅಡಿಮರ; ಪಾಟಣ; ಬೆನ್ನು ತೊಲೆ; ತಳ ತೊಲೆ; ಹಡಗಿನ ಯಾ ದೋಣಿಯ ಮೈಗೆಲ್ಲ ಆಧಾರವಾಗಿ ತಳದಲ್ಲಿ ಉದ್ದಕ್ಕೂ ಹಾಕಿರುವ ಮರದ ಅಡಿಗಟ್ಟು,ದಿಮ್ಮಿ.
  • (ಹಡಗುಗಳ ಲೋಹದ) ಅಡಿಗಟ್ಟು; ಅಡಿ ಹಲಗೆಗಳು.
  • (ಕರ್ಮಣಿಪ್ರಯೋಗ) ಹಡಗು.
  • (ಪ್ರಾಣಿವಿಜ್ಞಾನ) ಎದೆಯೇಣು; ಹಲವು ಪಕ್ಷಿಜಾತಿಗಳ ಎದೆ ಮೂಳೆಗಳ ಉದ್ದಕ್ಕೂ ಇರುವ ಉಬ್ಬು, ಏಣು.
  • (ಸಸ್ಯವಿಜ್ಞಾನ) ಏಣುದಳ(ಗಳು); ಹೂವಿನ ದಳವಲಯ ಮೊದಲಾದವುಗಳಲ್ಲಿರುವ, ಹಡಗಿನ ಅಡಿ ತೊಲೆಯನ್ನು ಹೋಲುವ, ಜೋಡಿ ದಳ.

keel

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

keel over = 2keel ಸಕರ್ಮಕ ಕ್ರಿಯಾಪದ, 2keel (ಅಕರ್ಮಕ ಕ್ರಿಯಾಪದ).

  • ಅಡಿಮರ ಮೇಲಾಗುವಂತೆ (ಹಡಗನ್ನು) ತಲೆ ಕೆಳಗು ಮಾಡು.
  • ಉರುಳಿಸು; ತೆಲೆಕೆಳಗು ಮಾಡು; ತೆಲೆಕೆಳಗಾಗುವಂತೆ ಮಾಡು; ತೆಲೆಕೆಳಗಾಗಿಸು.

keel

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ)

  • ಕಲ್ಲಿದ್ದಲ ಹಡಗು; (ಇಂಗ್ಲೆಂಡಿನಲ್ಲಿ) ಟೈನ್‍ ನದಿ ಮೊದಲಾದವುಗಳ ಮೇಲೆ ಕಲ್ಲಿದ್ದಲ ಹಡಗುಗಳಿಗೆ ಕಲ್ಲಿದ್ದಲನ್ನು ಸಾಗಿಸುವ ಚಪ್ಪಟೆ ತಳದ ಹಡಗು.
  • (ಇಂತಹ ಹಡಗಿನಲ್ಲಿ ಹೇರುವ) ಕಲ್ಲಿದ್ದಲ ಹೇರು.

keel-blocks

ನಾಮವಾಚಕ

ಅಡಿಮರದ ಆಸರೆ, ಆಧಾರ, (ಹಡಗನ್ನು ಕಟ್ಟುವುದೇ ಮೊದಲಾದ ಸಂದರ್ಭದಲ್ಲಿ) ಅಡಿಮರಕ್ಕೆ ಆಧಾರವಾಗಿ ಇಡುವ ಮರದ ತೊಲೆ ಯಾ ದಿಮ್ಮಿ.

keelhaul

ಸಕರ್ಮಕ ಕ್ರಿಯಾಪದ

  • (ಅಪರಾಧಿಯನ್ನು ದಂಡಿಸಲು ಅವನನ್ನು ಹಗ್ಗಕ್ಕೆ ಕಟ್ಟಿ ಇಳಿಯಬಿಟ್ಟು) ಅಡಿಗಟ್ಟಿನ ಕೆಳಗಿನಿಂದ (ಎಳೆದು) ಇನ್ನೊಂದು ಕಡೆಗೆ ಎಳೆದುಕೊ.
  • (ರೂಪಕವಾಗಿ) ಕಟುವಾಗಿ – ಛೀಮಾರಿ ಹಾಕು, ವಾಗ್ದಂಡನೆ ಮಾಡು.

keelless

ಗುಣವಾಚಕ

(ಹಡಗಿನ ಯಾ ದೋಣಿಯ ವಿಷಯದಲ್ಲಿ) ಅಡಿಮರವಿಲ್ಲದ; ಅಡಿಗಟ್ಟಿಲ್ಲದ (ರೂಪಕವಾಗಿ ಸಹ).

keelson

ನಾಮವಾಚಕ

ಅಡಿತೊಲೆ ಸೇರುವೆಪಟ್ಟಿ; ಹಡಗಿನ ಹಾಸು ತೊಲೆಗಳನ್ನು ಅಡಿತೊಲೆಗೆ ಬಂಧಿಸುವ ಮರದ ಪಟ್ಟಿ.

keen

ನಾಮವಾಚಕ

(ಗೋಳಾಟದೊಡನೆ ಕೂಡಿದ ಐರ್ಲೆಂಡಿನ) ಮಸಣದ ಹಾಡು; ಸ್ಮಶಾನಗೀತೆ; ಚರಮಗೀತೆ.

keen

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಸ್ಮಶಾನಗೀತೆಯನ್ನು ಹಾಡು; ಮಸಣದ ಹಾಡು ಹಾಡು.

  • ಸ್ಮಶಾನಗೀತೆಯ ಮೂಲಕ ಸತ್ತವನಿಗಾಗಿ ಗೋಳಾಡು.
  • ಗೋಳಿಡು; ಗೋಳಾಟದ ಧ್ವನಿಯಲ್ಲಿ ಹಾಡು; ಗೋಳಿಡುತ್ತ ಹಾಡು ಯಾ ಹೇಳು; ಹಾಡಿ ಹಲುಬು.

keen

ಗುಣವಾಚಕ

ಪದಗುಚ್ಛ

  • ಮೊನಚಾದ; ಹರಿತವಾದ ಅಲಗು ಯಾ ಮೊನೆ ಉಳ್ಳ: keen razor ಹರಿತವಾದ (ಅಲಗಿನ) ಕ್ಷೌರದ ಕತ್ತಿ.
  • (ಅಲಗು ಮೊದಲಾದವುಗಳ ವಿಷಯದಲ್ಲಿ) ಹರಿತವಾದ; ಮೊನಚಾದ; ಚೂಪಾದ; ಕೂರಾದ; ತೀಕ್ಷ್ಣವಾದ.
  • (ಗಾಳಿ, ಹಿಮ, ಮೊದಲಾದವುಗಳ ವಿಷಯದಲ್ಲಿ) ಕೊರೆತದ; ತೀವ್ರ ಚಳಿಯ; ಕೊರೆಯುವ (ಚಳಿಯ).
  • (ನೋವು, ಯಾತನೆ, ಮೊದಲಾದವುಗಳ ವಿಷಯದಲ್ಲಿ) ಕಟುವಾದ; ತೀವ್ರವಾದ; ತಾಳಲಾಗದ; ಅಸಹನೀಯ; ಸಹಿಸಲಾಗದ.
  • (ವ್ಯಕ್ತಿ, ಬಯಕೆ, ಆಸಕ್ತಿ, ಮೊದಲಾದವುಗಳ ವಿಷಯದಲ್ಲಿ) ಉತ್ಸುಕ; ತವಕಪಡುವ; ತೀವ್ರಾಸಕ್ತಿಯ; ಉತ್ಸಾಹಶಾಲಿ; ಉತ್ಸಾಹಭರಿತ: keen sportsman ಉತ್ಸಾಹಶಾಲಿಯಾದ ಕ್ರೀಡಾಪಟು.
  • (ಕಣ್ಣು, ದೃಷ್ಟಿ, ವಾಸನಾಶಕ್ತಿ, ಮೊದಲಾದವುಗಳ ವಿಷಯದಲ್ಲಿ) ಚುರುಕಾದ; ತೀಕ್ಷ್ಣವಾದ; ಸೂಕ್ಷ್ಮವಾದ.
  • ಚುರುಕುಬುದ್ಧಿಯ; ಕುಶಾಗ್ರಬುದ್ಧಿಯ; ಸೂಕ್ಷ್ಮಬುದ್ಧಿಯುಳ್ಳ; ತೀಕ್ಷ್ಣಮತಿಯಾದ.
  • (ಬ್ರಿಟಿಷ್‍ ಪ್ರಯೋಗ) (ಬೆಲೆಯ ವಿಷಯದಲ್ಲಿ) ಪೈಪೋಟಿಯ; (ಪೈಪೋಟಿಯ ಕಾರಣದಿಂದಾಗಿ) ಬಹಳ ಅಗ್ಗವಾದ.
  • (ಆಡುಮಾತು) ಉತ್ಕೃಷ್ಟ; ಶ್ರೇಷ್ಠ; ಅತ್ತುತ್ತಮ.

keener

ನಾಮವಾಚಕ

ಹಲುಬಿಗ; ಗೋಳಾಟಗಾರ; (ಮುಖ್ಯವಾಗಿ ಐರ್ಲೆಂಡಿನ ಅಂತ್ಯಕ್ರಿಯೆಯಲ್ಲಿ ಪಾತ್ರವಹಿಸುವ) ಗೋಳಾಳು; ರೋದಕ; ಗೋಳಾಡುವ ವೃತ್ತಿಯವನು(ಳು).

keenly

ಕ್ರಿಯಾವಿಶೇಷಣ

  • ಹರಿತವಾಗಿ; ಹರಿತವಾದ ಸಾಧನದಿಂದ ಮಾಡುವಂತೆ.
  • (ಅಭಿಪ್ರಾಯ, ಮಾತು, ಮೊದಲಾದವುಗಳ ವಿಷಯದಲ್ಲಿ) ಮೊನಚಾಗಿ; ಕಟುವಾಗಿ; ತೀವ್ರವಾಗಿ; ಚುಚ್ಚುವಂತೆ.
  • ಉತ್ಸುಕತೆಯಿಂದ; ತವಕದಿಂದ; ತಿವ್ರೋತ್ಸಾಹದಿಂದ.
  • (ಇಂದ್ರಿಯ, ಗಮನ, ಮೊದಲಾದವುಗಳ ವಿಷಯದಲ್ಲಿ) ಚುರುಕಾಗಿ; ತೀಕ್ಷ್ಣವಾಗಿ; ಸೂಕ್ಷ್ಮವಾಗಿ.
  • ಚುರುಕುಬುದ್ಧಿಯಿಂದ; ಸೂಕ್ಷ್ಮಬುದ್ಧಿಯಿಂದ; ತೀಕ್ಷ್ಣಮತಿಯಿಂದ.
  • (ಭಾವದ ವಿಷಯದಲ್ಲಿ) ತೀವ್ರವಾಗಿ; ಬಲವಾಗಿ.

keenness

ನಾಮವಾಚಕ

  • ಮೊನಚು; ಹರಿತವಾಗಿರುವಿಕೆ; ಚೂಪಾಗಿರುವಿಕೆ.
  • (ಮಾತು, ಅಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) ಕಟುತ್ವ.
  • (ಶಾಖ, ಚಳಿ, ಮೊದಲಾದವುಗಳ ವಿಷಯದಲ್ಲಿ) ತೀವ್ರತೆ.
  • ಉತ್ಸುಕತೆ; ತವಕಪಡುವ ಲಕ್ಷಣ; ಉತ್ಸಾಹಭರಿತತೆ.
  • (ಇಂದ್ರಿಯಗಳ ವಿಷಯದಲ್ಲಿ) ಚುರುಕು(ತನ); ತೀಕ್ಷ್ಣತೆ; ಸೂಕ್ಷ್ಮತೆ.
  • ಬುದ್ಧಿಯ ಚುರುಕು; ತೀಕ್ಷ್ಣಮತಿತ್ವ; ಬುದ್ಧಿಸೂಕ್ಷ್ಮತೆ.

Search Dictionaries

Loading Results

Follow Us :   
  Download Bharatavani App
  Bharatavani Windows App