English-Kannada Nighantu (University of Mysore)
University of Mysore
K
ಸಂಕ್ಷಿಪ್ತ
- (ಬೈಬ್ಲ್) King(s).
- Kochel (ಮೋಸಾರ್ಟನ ಸಂಗೀತ ಕೃತಿಗಳ ಕ್ಯಾಟಲಾಗು).
- Kelvin(s).
- (k ಸಹ) (ಅಂಕಿಯ ತರುವಾಯ)
- (ಕಂಪ್ಯೂಟರ್) 1024 (ಅಂದರೆ $2^{ 10}$) ಬೈಟುಗಳು ಅಥವಾ ಸಡಿಲವಾಗಿ 1000 ಬೈಟುಗಳು.
- 1000.
K
ಸಂಕೇತ
(ರಸಾಯನವಿಜ್ಞಾನ) ಪೊಟ್ಯಾಷಿಯಮ್ ಧಾತುವಿನ ಅಕ್ಷರ ಸಂಕೇತ.
k
ಸಂಕ್ಷಿಪ್ತ
- kilo-.
- knot(s).
K, k
ನಾಮವಾಚಕ
- ಇಂಗ್ಲಿಷ್ ವರ್ಣಮಾಲೆಯ 11ನೆಯ ಅಕ್ಷರ.
- K ಆಕಾರದ ಯಾವುದೇ ವಸ್ತು.
- K ಅಕ್ಷರದ ಅಚ್ಚು ಮೊಳೆ.
K-meson
ನಾಮವಾಚಕ
= kaon.
k.p.h.
ಸಂಕ್ಷಿಪ್ತ
kilometres per hour.
K.St. J.
ಸಂಕ್ಷಿಪ್ತ
Knight (of the Order) of St. John.
kaaba
ನಾಮವಾಚಕ
ಕಾಬಾ; ಮೆಕ್ಕಾದ ಮಸೀದಿಯಲ್ಲಿ ಮುಸ್ಲಿಮರಿಗೆ ಪವಿತ್ರವಾದ ಕಪ್ಪು ಶಿಲೆಯಿರುವ ಪ್ರಾರ್ಥನಾ ಮಂದಿರ.
kaama
ನಾಮವಾಚಕ
ಕಾಮ; ದಕ್ಷಿಣ ಆಹ್ರಿಕದ ಒಂದು ಜಿಂಕೆ.
kabaka
ನಾಮವಾಚಕ
ಕಬಾಕ:
- ದಕ್ಷಿಣ ಆಹ್ರಿಕದ ಬ್ಯೂಗಾಂಡಾ ದೇಶದ ದೊರೆ.
- ಬ್ಯೂಗಾಂಡಾ ದೊರೆಯ ಬಿರುದು.
kabbala
ನಾಮವಾಚಕ
cab(b)ala ಎಂಬುದರ ರೂಪಾಂತರ.
kabuki
ನಾಮವಾಚಕ
ಕಬೂಕಿ (ನಾಟಕ); ವೇಷಭೂಷಣಗಳು ವಿಪುಲವಾಗಿರುವ, ಸಂಗೀತಸಂವಾದ ಪ್ರಧಾನವಾದ, ಗಂಡಸರು ಮಾತ್ರ ಪಾತ್ರವಹಿಸುವ, ಜಪಾನಿನ ಜನಪ್ರಿಯ ಸಾಂಪ್ರದಾಯಿಕ ನಾಟಕ ರೂಪ.
Kabyle
ನಾಮವಾಚಕ
ಕಬೈಲ್:
- ಆಲ್ಜೀರಿಯಾ ಮೊರಾಕೊ ಯಾ ಟ್ಯೂನಿಸ್ ದೇಶದ ಬರ್ಬರ್ ತಂಡದವನು.
- (ಆ ತಂಡದ) ಬರ್ಬರ್ (ಪ್ರಾಂತೀಯ) ಭಾಷೆ.
kachina
ನಾಮವಾಚಕ
ಕಚೀನ:
- ಅಮೆರಿಕದ ಇಂಡಿಯನರ ಪಿತೃಪ್ರೇತ, ಪೂರ್ವಜಪ್ರೇತ.
- ವ್ರತಾಂಗ ನೃತ್ಯಗಳಲ್ಲಿ ಆ ಪ್ರೇತವನ್ನು ಪ್ರತಿನಿಧಿಸುವ ಪಾತ್ರಧಾರಿ, ನರ್ತಕ.
kachina dancer
ನಾಮವಾಚಕ
= kachina(b).
kachina doll
ನಾಮವಾಚಕ
ಕಚೀನ ಬೊಂಬೆ; ಕಚೀನ ಪ್ರೇತವನ್ನು ಸಂಕೇತಿಸುವ ಮರದ ಬೊಂಬೆ.
Kaddish
ನಾಮವಾಚಕ
- (ಮೃತರ ಆತ್ಮಕ್ಕಾಗಿ ಯೆಹೂದ್ಯರು ತಮ್ಮ ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸುವ) ಪ್ರಾರ್ಥನಾ ಗೀತೆ.
- ಯೆಹೂದ್ಯ ದೇವಾಲಯದ ಪೂಜಾ ಸೇವೆಯ ಪ್ರಾರ್ಥನಾ ಗೀತೆ.
kadi
ನಾಮವಾಚಕ
cadi ಎಂಬುದರ ರೂಪಾಂತರ.
kaffeeklatsch
ನಾಮವಾಚಕ
(ಅಮೆರಿಕನ್ ಪ್ರಯೋಗ) ಕಾಫಿಕೂಟ; ಕಾಫಿ ಸಭೆ; ಲೋಕಾಭಿರಾಮ ಮಾತು ಮತ್ತು ಕಾಫಿಸೇವನೆಗಾಗಿ ಸೇರುವ ಕೂಟ.
Kaffir
ನಾಮವಾಚಕ
- ಕ್ಯಾಹರ್:
- ಬಂಟು ಕುಲಕ್ಕೆ ಸೇರಿದ ದಕ್ಷಿಣ ಆಹ್ರಿಕದ ಒಂದು ಜನಾಂಗದವನು.
- ಬಂಟು ಕುಲದವರ ಭಾಷೆ.
- (ಬಹುವಚನದಲ್ಲಿ) ದಕ್ಷಿಣ ಆಹ್ರಿಕದ ಗಣಿಗಳ ಷೇರುಗಳು.
- ಕ್ಯಾಹರ್ ನವಣೆ; ಪೂರ್ವಆಹ್ರಿಕ ಮತ್ತು ಇತರ ಒಣ ಪ್ರದೇಶಗಳಲ್ಲಿ ಬೆಳೆಯುವ ಒಂದು ನವಣೆ ಜಾತಿ.