भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

magistrature

ನಾಮವಾಚಕ

= magistracy.

Maglemosian

ಗುಣವಾಚಕ

ಮ್ಯಾಗಲ್‍ಮೋಸಿಯನ್‍; (ಡೆನ್ಮಾರ್ಕಿನ ಮೆಗಲ್‍ ಮೋಸ್‍ ಎಂಬಲ್ಲಿ ದೊರೆತ ವಸ್ತುಗಳು ಸೂಚಿಸುವ) ಪುರಾತನ ಯೂರೋಪಿನ ಮೆಸೊಲಿಥಿಕ್‍ ಸಂಸ್ಕೃತಿಯ ಯಾ ಸಂಸ್ಕೃತಿಗೆ ಸೇರಿದ.

Maglemosian

ನಾಮವಾಚಕ

ಮ್ಯಾಗಲ್‍ಮೋಸಿಯನ್‍; (ಡೆನ್ಮಾರ್ಕಿನ ಮೆಗಲ್‍ ಮೋಸ್‍ ಎಂಬಲ್ಲಿ ದೊರೆತ, ಮೂಳೆಯ ಮತ್ತು ಕಲ್ಲಿನ ಉಪಕರಣಗಳು ಸೂಚಿಸುವ) ಪುರಾತನ ಯೂರೋಪಿನ ಮೆಸೂಲಿಥಿಕ್‍ ಸಂಸ್ಕೃತಿ.

maglev

ನಾಮವಾಚಕ

(ಸಾಮಾನ್ಯವಾಗಿ ವಿಶೇಷಣವಾಗಿ ಪ್ರಯೋಗ) ಮ್ಯಾಗ್ಲೆವ್‍; ಕಾಂತಕ್ಷೇತ್ರದ ಪ್ರಭಾವದಿಂದ ರೈಲುಜಾಡುಗಳ ಮೇಲೆ ಸ್ವಲ್ಪ ಎತ್ತರದಲ್ಲಿ ರೈಲು ಸಾಗುವಂತೆ ಏರ್ಪಡಿಸುವ ವ್ಯವಸ್ಥೆ (magnetic levitation ಎಂಬುದರ ಹ್ರಸ್ವರೂಪ).

magma

ನಾಮವಾಚಕ

ಮ್ಯಾಗ್ಮ:

  • ಖನಿಜ ಪದಾರ್ಥಗಳ ಯಾ ಕಾರ್ಬನಿಕ ಪದಾರ್ಥಗಳ ಚರಟದಂತಿರುವ ಮಿಶ್ರಣ.
  • ಶಿಲಾಪಾಕ; ಶಿಲಾದ್ರವ; ಶಿಲಾರಸ; ಆರಿದ ಮೇಲೆ ಅಗ್ನಿಶಿಲೆಯಾಗಿ ಮಾರ್ಪಡುವ, ಶಿಲೆಯ ದ್ರವ ಯಾ ಅರೆದ್ರವ.

magmatic

ಗುಣವಾಚಕ

ಮ್ಯಾಗ್ಮದ ಯಾ ಅದಕ್ಕೆ ಸಂಬಂಧಿಸಿದ ಯಾ ಅದರಿಂದ ಜನ್ಯವಾದ:

  • ಖನಿಜ ಪದಾರ್ಥಗಳ ಯಾ ಕಾರ್ಬನಿಕ ಪದಾರ್ಥಗಳ ಚರಟದಂತಿರುವ ಮಿಶ್ರಣದ ಯಾ ಅದಕ್ಕೆ ಸಂಬಂಧಿಸಿದ ಯಾ ಅದರಿಂದಾದ.
  • ಶಿಲಾಪಾಕದ, ಶಿಲಾರಸದ ಯಾ ಅದಕ್ಕೆ ಸಂಬಂಧಿಸಿದ.

Magna Carta

ನಾಮವಾಚಕ

  • ಮ್ಯಾಗ್ನಕಾರ್ಟ (ಎಂಬ ಮಹಾಸ್ವಾತಂತ್ರ್ಯ ಶಾಸನ); (1215ರಲ್ಲಿ ಇಂಗ್ಲೆಂಡಿನ ಜಾನ್‍ ದೊರೆಯಿಂದ ಇಂಗ್ಲಿಷ್‍ ಪ್ರಜೆಗಳು ಪಡೆದುಕೊಂಡ) ವೈಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಮಹಾಸನ್ನದು.
  • ಮ್ಯಾಗ್ನಕಾರ್ಟದಂಥ ಯಾವುದೇ ಹಕ್ಕುಗಳ ದಾಖಲೆ , ಸನ್ನದು, ಶಾಸನ.

Magna Charta

ನಾಮವಾಚಕ

= Magna Carta.

magnalium

ನಾಮವಾಚಕ

ಮ್ಯಾಗ್ನೇಲಿಯಮ್‍; ಹಗುರವಾದ ಆದರೆ ದೃಢವಾದ, ಮೆಗ್ನೀಸಿಯಂ ಅಲ್ಯೂಮಿನಿಯಮ್‍ ಮಿಶ್ರ ಲೋಹ.

magnanimity

ನಾಮವಾಚಕ

ಹೃದಯವೈಶಾಲ್ಯ; ದೊಡ್ಡತನ; ಉದಾತ್ತತೆ; ಉದಾರ ಮನಸ್ಕತೆ.

magnanimous

ಗುಣವಾಚಕ

ದೊಡ್ಡ ಮನಸ್ಸಿನ; ಉದಾತ್ತ; ಉದಾರ ಹೃದಯದ; ಭಾವಗಳಲ್ಲಾಗಲಿ ನಡತೆಯಲ್ಲಾಗಲಿ ಅಲ್ಪತೆಯಿಂದ ಕೂಡಿರದ, ಸಂಕುಚಿತವಾಗಿರದ.

magnanimously

ಕ್ರಿಯಾವಿಶೇಷಣ

ದೊಡ್ಡ ಮನಸ್ಸಿನಿಂದ; ಉದಾತ್ತವಾಗಿ; ಉದಾರ ಹೃದಯದಿಂದ; ಅಲ್ಪತೆಯಿಲ್ಲದೆ.

magnate

ನಾಮವಾಚಕ

  • ದೊಡ್ಡ ಮನುಷ್ಯ; ಪ್ರತಿಷ್ಠಿತ ವ್ಯಕ್ತಿ; ದೊಡ್ಡ ಕುಳ; ಭಾರಿ ಕುಳ.
  • ಹಣವಂತ; ಧನಿಕ.
  • ಪ್ರಭಾವೀ ವ್ಯಕ್ತಿ; ಹಣದ ಯಾ ಸ್ಥಾನದ ದೆಸೆಯಿಂದ ಪ್ರಭಾವ ಬೀರಬಲ್ಲ ವ್ಯಕ್ತಿ.
  • ಮಹೋದ್ಯಮಿ; ಭಾರಿ ಉದ್ಯಮಿ; ದೊಡ್ಡ ಕೈಗಾರಿಕೆಯ ಯಾ ಇತರ ದೊಡ್ಡ ಉದ್ಯಮದ ಯಜಮಾನ: shipping magnate ಭಾರಿ ನೌಕೋದ್ಯಮಿ.
  • (ಮುಖ್ಯವಾಗಿ) ಭಾರಿ ವ್ಯಾಪಾರಿ; ದೊಡ್ಡ ವ್ಯಾಪಾರಗಾರ: cotton magnate ಭಾರಿ ಹತ್ತಿ ವ್ಯಾಪಾರಿ.

magnesia

ನಾಮವಾಚಕ

(ರಸಾಯನವಿಜ್ಞಾನ) ಮ್ಯಾಗ್ನೀಸಿಯ:

  • ಮ್ಯಾಗ್ನೀಸಿಯಮ್‍ ಆಕ್ಸೆ ಡ್‍.
  • ಆಮ್ಲನಾಶಕವಾಗಿ ಬಳಸುವ ಮ್ಯಾಗ್ನೀಸಿಯಮ್‍ ಕಾರ್ಬೊನೇಟಿನ ಬಿಳಿ ಪುಡಿ.

magnesian

ಗುಣವಾಚಕ

ಮ್ಯಾಗ್ನೀಸಿಯ ಉಳ್ಳ; ಮ್ಯಾಗ್ನೀಸಿಯದ ಯಾ ಅದಕ್ಕೆ ಸಂಬಂಧಿಸಿದ.

magnesite

ನಾಮವಾಚಕ

(ಭೂವಿಜ್ಞಾನ) ಮ್ಯಾಗ್ನಸೈಟ್‍; ಮೆಗ್ನೀಸಿಯಮ್‍ ಕಾರ್ಬೊನೇಟ್‍ ಸಂಯೋಜನೆಯುಳ್ಳ ಬಿಳಿಯ ಯಾ ಬೂದು ಬಣ್ಣದ ಖನಿಜ.

magnesium

ನಾಮವಾಚಕ

(ರಸಾಯನವಿಜ್ಞಾನ) ಮೆಗ್ನೀಸಿಯಮ್‍; ಪರಮಾಣು ಸಂಖ್ಯೆ 12, ಪರಮಾಣು ತೂಕ 24 ಉಳ್ಳ, ಹಗುರವಾದ, ಬಿಳಿಯ, ದ್ವಿವೇಲೆನ್ಸೀಯ ಲೋಹ, ಸಂಕೇತ Mg.

magnesium flare

ನಾಮವಾಚಕ

ಮೆಗ್ನೀಸಿಯಂ ಜ್ವಾಲೆ; ಮೆಗ್ನೀಸಿಯಮ್‍ ಉರಿದಾಗ ಬರುವ, ಕಣ್ಣು ಕೋರೈಸುವ ಬಿಳಿಯ ಜ್ವಾಲೆ.

magnesium light

ನಾಮವಾಚಕ

= magnesium flare.

magnet

ನಾಮವಾಚಕ

ಪದಗುಚ್ಛ

  • ಸೂಜಿಗಲ್ಲು; ಅಯಸ್ಕಾಂತ; ಕಾಂತ; (ಲೋಹ) ಚುಂಬಕ:
    1. ಕಬ್ಬಿಣವನ್ನು ಆಕರ್ಷಿಸುವ, ತೂಗುಬಿಟ್ಟಾಗ ಉತ್ತರ ದಕ್ಷಿಣ ದಿಕ್ಕಿಗೆ ತಿರುಗುವ, ನೈಸರ್ಗಿಕ ಕಬ್ಬಿಣದ ಅದಿರು.
    2. ಮತ್ತೊಂದು ಅಯಸ್ಕಾಂತದ ಪ್ರೇರಣೆಯಿಂದಲೋ ವಿದ್ಯುತ್ಪ್ರವಾಹದಿಂದಲೋ ಆ ಗುಣವನ್ನು ಪಡೆದಿರುವ ಕಬ್ಬಿಣದ ತುಂಡು.
  • = lodestone.
  • (ರೂಪಕವಾಗಿ) ಆಕರ್ಷಕ; (ಸೂಜಿಗಲ್ಲಿನಂತೆ) ಆಕರ್ಷಿಸುವ ವಸ್ತು ಯಾ ವ್ಯಕ್ತಿ.

Search Dictionaries

Loading Results

Follow Us :   
  Download Bharatavani App
  Bharatavani Windows App