भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mutism

ನಾಮವಾಚಕ

  • = muteness.
  • ನಿಶ್ಶಬ್ದತೆ; ಸದ್ದಿಲ್ಲದಿರುವಿಕೆ.
  • ಮೂಕತೆ; ಮೂಕತನ.

muton

ನಾಮವಾಚಕ

(ಜೀವವಿಜ್ಞಾನ) ಮ್ಯೂಟಾನ್‍; ವಿಕೃತ ವ್ಯಕ್ತಿಯೊಂದಕ್ಕೆ ಜನ್ಮ ನೀಡಲು ಬೇಕಾಗುವ ಆನುವಂಶಿಕ ಪದಾರ್ಥದ ಕನಿಷ್ಠ ಪ್ರಮಾಣ.

mutt

ನಾಮವಾಚಕ

  • ಮುಠ್ಠಾಳ; ಶತದಡ್ಡ.
  • ಎಡವಟ್ಟ; ತಿಳಿಗೇಡಿತನದಿಂದ ತಪ್ಪುಗಳನ್ನು ಮಾಡುವವನು.
  • (ಹೀನಾರ್ಥಕ ಪ್ರಯೋಗ) ಕುನ್ನಿ; ನಾಯಿ.

mutter

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಶಬ್ದಗಳು ಮೊದಲಾದವನ್ನು) ಮೆಲುದನಿಯಲ್ಲಿ ಉಚ್ಚರಿಸು; ತಗ್ಗು ದನಿಯಲ್ಲಿ ಆಡು; ಪಿಸುಮಾತಿನಲ್ಲಿ ಹೇಳು.

  • ಗೊಣಗು; ಗೊಣಗುಟ್ಟು.
  • (ಕೇಳಿಸದಂತೆ) ತಗ್ಗುದನಿಯಲ್ಲಿ ಮಾತನಾಡು.
  • (ರೂಪಕವಾಗಿ) ಗುಟ್ಟಾಗಿ ಹೇಳು; ಪಿಸುಗುಟ್ಟು; ಗುಸುಗುಸು ಮಾತನಾಡು.

mutter

ನಾಮವಾಚಕ

  • ಗೊಣಗು(ವಿಕೆ).
  • ಪಿಸುಮಾತು; ಗುಸುಗುಸು ಮಾತು.

mutterer

ನಾಮವಾಚಕ

ಗೊಣಗಿ; ಗೊಣಗುವವ; (ಕೇಳಿಸದಂತೆ) ತಗ್ಗುದನಿಯಲ್ಲಿ ಮಾತನಾಡುವವ.

mutteringly

ಕ್ರಿಯಾವಿಶೇಷಣ

ಗೊಣಗುತ್ತಾ; (ಕೇಳಿಸದಂತೆ) ತಗ್ಗುದನಿಯಲ್ಲಿ ಮಾತನಾಡುತ್ತಾ.

mutton

ನಾಮವಾಚಕ

ಪದಗುಚ್ಛ

  • (ಆಹಾರವಾಗಿ ಬಳಸುವ) ಕುರಿಯ ಮಾಂಸ.
  • (ಹಾಸ್ಯ ಪ್ರಯೋಗ) ಕುರಿ.

mutton chop

ನಾಮವಾಚಕ

  • (ಕರಿಯಲು ಕತ್ತರಿಸಿದ) ಪಕ್ಕೆಲುಬೂ ಅರ್ಧ ಬೆನ್ನೆಲುಬೂ ಇರುವ ಕುರಿಯ ಮಾಂಸದ ತುಂಡು, ಬಿಲ್ಲೆ.
  • ಕುರಿಯ ಮಾಂಸದ ಬಿಲ್ಲೆಯ ಆಕಾರದ ಗಲ್ಲಮೀಸೆ; ಗುರಿಕಾರ್‍ ಮೀಸೆ; ಪಾಳೆಯಗಾರ ಮೀಸೆ; ಗಿರಲ ಮೀಸೆ; ಗಿರಿಜಾ ಮೀಸೆ. Figure: mutton chop-2

mutton chop whisker

ನಾಮವಾಚಕ

= mutton chop\((2)\).

mutton-bird

ನಾಮವಾಚಕ

ನೀರಿನ ಮೇಲ್ಮೈಗೆ ಬಹಳ ಹತ್ತಿರದಲ್ಲಿ ಹಾರುವ, ಆಸ್ಟ್ರೇಲಿಯದ ಒಂದು ಕಡಲ ಹಕ್ಕಿ.

mutton-head

ನಾಮವಾಚಕ

(ಆಡುಮಾತು) ಶುದ್ಧಪೆದ್ದ; ದಡ್ಡ; ಹೆಡ್ಡ.

mutton-headed

ಗುಣವಾಚಕ

ದಡ್ಡತನದ; ಮಂದಬುದ್ಧಿಯ; ಪೆದ್ದತಲೆಯ.

muttony

ಗುಣವಾಚಕ

ಕುರಿಯ – ಮಾಂಸದಂಥ, ಮಾಂಸದಂತಿರುವ ಯಾ ಮಾಂಸದ ರುಚಿಯುಳ್ಳ.

mutual

ಗುಣವಾಚಕ

  • (ಭಾವಗಳು, ಕಾರ್ಯಗಳು, ಮೊದಲಾದವುಗಳ ವಿಷಯದಲ್ಲಿ) ಅನ್ಯೋನ್ಯ; ಪರಸ್ಪರ; ಒಬ್ಬರಿಗಾಗಿ ಇನ್ನೊಬ್ಬರು (ಮನಸ್ಸಿನಲ್ಲಿ) ಅನುಭವಿಸುವ ಯಾ ಮಾಡುವ: mutual affection ಅನ್ಯೋನ್ಯಪ್ರೀತಿ. mutual benefit ಪರಸ್ಪರ ಉಪಕಾರ. mutual suspicion ಪರಸ್ಪರ ಸಂಶಯ.
  • (ಹೆಸರಿಸಿದಂಥ) ಅನ್ಯೋನ್ಯ ಸಂಬಂಧವುಳ್ಳ: mutual well-wishers ಪರಸ್ಪರ ಕ್ಷೇಮಾಭಿಲಾಷಿಗಳು.
  • (ಆಡುಮಾತು) (ಇಬ್ಬರಿಗೋ ಇನ್ನೂ ಹೆಚ್ಚು ಮಂದಿಗೋ) ಸಮಾನವಾದ ಸಂಬಂಧವುಳ್ಳ: our mutual friend ನಮ್ಮ ಸಮಾನ ಸ್ನೇಹಿತ; ನಮಗಿಬ್ಬರಿಗೂ, ನಮ್ಮಲ್ಲರಿಗೂ – ಸಮಾನವಾಗಿ ಸ್ನೇಹಿತನಾದವನು; ಉಭಯತ್ರರಿಗೂ ಮಿತ್ರ.

mutual admiration society

ನಾಮವಾಚಕ

ಪರಸ್ಪರ ಪ್ರಶಂಸಾ ಸಂಘ; ಒಬ್ಬರನ್ನೊಬ್ಬರು ಯೋಗ್ಯತೆಗೆ ಮೀರಿ ಹೊಗಳುವ ಕೂಟ.

mutual fund

ನಾಮವಾಚಕ

(ಅಮೆರಿಕನ್‍ ಪ್ರಯೋಗ) = unit trust.

mutual inductance

ನಾಮವಾಚಕ

(ಭೌತವಿಜ್ಞಾನ) ಪರಸ್ಪರ ಪ್ರೇರಕತೆ; ಕಾಂತೀಯ ಸಂಪರ್ಕವಿರುವ ಸರ್ಕಿಟ್‍ನಲ್ಲಿ ಹರಿಯುವ ವಿದ್ಯುತ್ಪ್ರವಾಹದಲ್ಲಾಗುವ ವ್ಯತ್ಯಾಸದಿಂದ ತನ್ನಲ್ಲಿ ವಿದ್ಯುಚ್ಚಾಲಕ ಬಲವನ್ನು ಉತ್ಪತ್ತಿಮಾದುವ ಸರ್ಕಿಟ್‍ ಒಂದರ ಗುಣ.

mutual induction

ನಾಮವಾಚಕ

(ಭೌತವಿಜ್ಞಾನ) ಪರಸ್ಪರ ಪ್ರೇರಣೆ; ಕಾಂತೀಯ ಸಂಪರ್ಕವಿರುವ ಅಕ್ಕಪಕ್ಕದ ವಿದ್ಯುತ್‍ ಸರ್ಕಿಟ್‍ಗಳಲ್ಲಿ ವಿದ್ಯುಚ್ಚಾಲಕ ಬಲ ಉತ್ಪತ್ತಿಯಾಗುವುಡು.

mutual insurance

ನಾಮವಾಚಕ

ಮ್ಯೂಚುಯಲ್‍ ವಿಮೆ; ಲಾಭವನ್ನು ಪೂರ್ಣವಾಗಿ ಯಾ ಅದರ ಸ್ವಲ್ಪ ಭಾಗವನ್ನು ವಿಮಾದಾರದಲ್ಲಿ ಹಂಚುವ ವಿಮಾ ವ್ಯವಸ್ಥೆ.

Search Dictionaries

Loading Results

Follow Us :   
  Download Bharatavani App
  Bharatavani Windows App