भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mutual insurance company

ನಾಮವಾಚಕ

ಮ್ಯೂಚುಯಲ್‍ ವಿಮೆ (ವ್ಯವಸ್ಥೆಯುಳ್ಳ) ಸಂಸ್ಥೆ; ಮ್ಯೂಚುಯಲ್‍ ವಿಮೆ ಭಾಗವನ್ನು ವಿಮಾದಾರರಲ್ಲಿ ಹಂಚುವ ಸಂಸ್ಥೆ.

mutual term

ನಾಮವಾಚಕ

(ವಾಣಿಜ್ಯ) ಸಲ್ಲಿಸಬೇಕಾದ ಹಣಕ್ಕೆ ಬದಲು ಸೇವಾ ರೂಪದಲ್ಲಿ ವಿನಿಮಯದ ವ್ಯವಸ್ಥೆಯನ್ನೊಳಗೊಂಡ ಒಪ್ಪಂದ.

mutualism

ನಾಮವಾಚಕ

  • ಪರಸ್ಪರಾವಲಂಬನವಾದ; ಎಲ್ಲರ ಕ್ಷೇಮಾಭ್ಯುದಯಕ್ಕೆ ಪರಸ್ಪರಾವಲಂಬನವು ಅಗತ್ಯವೆಂದು ಪ್ರತಿಪಾದಿಸುವ ವಾದ.
  • ಪರಸ್ಪರ ಪ್ರಯೋಜಕವಾದ – ಸಹಜೀವನ, ಕೂಡುಬದುಕು.

mutualist

ನಾಮವಾಚಕ

  • ಪರಸ್ಪರಾವಲಂಬನವಾದಿ; ಎಲ್ಲರ ಕ್ಷೇಮಾಭ್ಯುದಯಕ್ಕೆ ಪರಸ್ಪರಾವಲಂಬನ ಅಗತ್ಯವೆಂದು ಪ್ರತಿಪಾದಿಸುವವ.
  • ಪರಸ್ಪರ ಪ್ರಯೋಜಕ ಸಹಜೀವನವಾದಿ.

mutualist

ಗುಣವಾಚಕ

= mutualistic.

mutualistic

ಗುಣವಾಚಕ

ಪರಸ್ಪರ ಪ್ರಯೋಜಕವಾದ ಸಹಜೀವನದ ಯಾ ಅದಕ್ಕೆ ಸಂಬಂಧಿಸಿದ.

mutualistically

ಕ್ರಿಯಾವಿಶೇಷಣ

ಪರಸ್ಪರ ಪ್ರಯೋಜಕವಾದ ಸಹಜೀವನದಂತೆ.

mutuality

ನಾಮವಾಚಕ

ಪರಸ್ಪರತೆ; ಪರಸ್ಪರಾವಲಂಬನ; ಒಬ್ಬರಿಗೊಬ್ಬರು ಆಗುವಿಕೆ, ಒದಗುವಿಕೆ.

mutually

ಕ್ರಿಯಾವಿಶೇಷಣ

ಅನ್ಯೋನ್ಯವಾಗಿ; ಪರಸ್ಪರವಾಗಿ.

mutuel

ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) = totalizator.

mutule

ನಾಮವಾಚಕ

(ವಾಸ್ತುಶಿಲ್ಪ) ಚಾಚು ಪೀಠ; ಡೋರಿಕ್‍ ಶಿಲ್ಪಶೈಲಿಯ ಕಟ್ಟಡದಲ್ಲಿ ಕಾರ್ನೀಸಿನ ತಳದಿಂದ ಚಾಚಿಕೊಂಡಿರುವ ಮರದ ತುಂಡು.

muu-muu

ನಾಮವಾಚಕ

ಅಳ್ಳಕ ಉಡುಗೆ; ಹೆಂಗಸಿನ ಪ್ರಕಾಶಮಾನವಾದ ಬಣ್ಣದ ಸಡಿಲ ಉಡುಪು.

Muzak

ನಾಮವಾಚಕ

ಮ್ಯೂಸಾಕ್‍:

  • ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಬಳಸುವ ಸಂಗೀತ ವ್ಯವಸ್ಥೆ.
  • (muzak) ಧ್ವನಿಮುದ್ರಣ ಮಾಡಿದ, ಲಘು ಹಿನ್ನೆಲೆ ಸಂಗೀತ.

muzhik

ನಾಮವಾಚಕ

= moujik.

muzz

ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಮಂಕು ಕವಿಸು, ಹಿಡಿಸು; ಗೆಲವಿಲ್ಲದಂತೆ ಮಾಡು; ಉತ್ಸಾಹ ಶೂನ್ಯಗೊಳಿಸು.

muzzily

ಕ್ರಿಯಾವಿಶೇಷಣ

  • ಮಂಕು – ಕವಿದಂತೆ, ಹಿಡಿದಂತೆ; ಗೆಲವಿಲ್ಲದೆ; ಉತ್ಸಾಹವಿಲ್ಲದೆ.
  • (ಕುಡಿದು) ಬೆಪ್ಪು ಬಡಿದಂತಾಗಿ.
  • ಅಸ್ಫುಟವಾಗಿ; ಅಸ್ಪಷ್ಟವಾಗಿ; ಮಸುಕಾಗಿ.

muzziness

ನಾಮವಾಚಕ

  • ಮಂಕು ಕವಿದಂತಾಗಿರುವಿಕೆ.
  • ಗೆಲವಿಲ್ಲದಿರುವಿಕೆ; ಉತ್ಸಾಹವಿಲ್ಲದ ಸ್ಥಿತಿ; ನಿಸ್ತೇಜತೆ.
  • (ಕುಡಿದು) ಬೆಪ್ಪು ಬೆಪ್ಪಾಗಿರುವಿಕೆ.
  • ಅಸ್ಪಷ್ಟತೆ; ಮಸುಕಾಗಿರುವಿಕೆ.

muzzle

ನಾಮವಾಚಕ

  • (ಪ್ರಾಣಿಯ ಮೂಗು, ಬಾಯಿ ಸೇರಿದಂತೆ ಮುಂಚಾಚಿರುವ) ಮೂತಿ; ಮುಸುಡಿ.
  • (ಫಿರಂಗಿ, ಬಂದೂಕು, ಮೊದಲಾದವುಗಳ) ಬಾಯಿ; ಕೋವಿಯ ತೆರೆದ ತುದಿ.
  • (ಕಚ್ಚುವುದು, ತಿನ್ನುವುದು, ಮೊದಲಾದವನ್ನು ತಡೆಯಲು ಪ್ರಾಣಿಯ ಬಾಯಿಗೆ ಕಟ್ಟುವ) ಬಾಯಿ ಕುಕ್ಕೆ; ಬಾಯಿಕಲ್ಲಿ.

muzzle

ಸಕರ್ಮಕ ಕ್ರಿಯಾಪದ

  • (ಪ್ರಾಣಿಗೆ) ಬಾಯಿ ಕುಕ್ಕೆ ಕಟ್ಟು; ಕಲ್ಲಿ ಹಾಕು.
  • (ರೂಪಕವಾಗಿ) (ಮನುಷ್ಯನ) ಬಾಯಿಕಟ್ಟು; (ಮನುಷ್ಯ) ಮಾತನಾಡದಂತೆ ತಡೆ, ನಿರ್ಬಂಧಿಸು; ಬಾಯಿಗೆ ಬೀಗ ಹಾಕು; ವಾಗ್ಬಂಧನ ವಿಧಿಸು.
  • (ಹಡಗಿನ ಹಾಯಿ) ಮುದುರಿ ಬಿಡು; ಇಳಿಸಿ ಸುತ್ತಿಡು.

muzzle velocity

ನಾಮವಾಚಕ

ಮೂತಿವೇಗ; ಪ್ರಕ್ಷೇಪ್ಯವು ತುಪಾಕಿ ಮೂತಿಯನ್ನು ಬಿಟ್ಟು ಹೊರಬರುವ ವೇಗ.

Search Dictionaries

Loading Results

Follow Us :   
  Download Bharatavani App
  Bharatavani Windows App