भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mycetoma

ನಾಮವಾಚಕ

(ರೋಗಶಾಸ್ತ್ರ) ಮೈಸಟೋಮ; ಪಾದಕ್ಕೆ ಅಥವಾ ಕೈಗೆ ತಗಲುವ ಒಂದು ಗಂತಿರೋಗ.

mycological

ಗುಣವಾಚಕ

ಶಿಲೀಂಧ್ರಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ.

mycologically

ಕ್ರಿಯಾವಿಶೇಷಣ

ಶಿಲೀಂಧ್ರಶಾಸ್ತ್ರರೀತ್ಯಾ.

mycologist

ನಾಮವಾಚಕ

ಶಿಲೀಂಧ್ರಶಾಸ್ತ್ರಜ್ಞ; ಶಿಲೀಂಧ್ರಶಾಸ್ತ್ರವನ್ನು ಅಧ್ಯಯನ ಮಾಡಿದವ.

mycology

ನಾಮವಾಚಕ

  • ಶಿಲೀಂಧ್ರ ಶಾಸ್ತ್ರ; ಅಣಬೆಶಾಸ್ತ್ರ; ಶಿಲೀಂಧ್ರಗಳನ್ನು ಕುರಿತು ಅಧ್ಯಯನ ನಡೆಸುವ ಸಸ್ಯಶಾಸ್ತ್ರ ಶಾಖೆ.
  • ಒಂದು ನಿರ್ದಿಷ್ಟ ಪ್ರದೇಶದ ಅಣಬೆ, ಶಿಲೀಂಧ್ರ.

mycorrhiza

ನಾಮವಾಚಕ

ಶಿಲೀಂಧ್ರಮೂಲ; ಮೈಕರೈಸ; ಒಂದು ಶಿಲೀಂಧ್ರ ಹಾಗೂ ಸಸ್ಯವೊಂದರ ಬೇರು, ಇವುಗಳ ನಡುವೆ ರೂಪುಗೊಳ್ಳುವ ಸಹಜೀವನ ಸಂಬಂಧ.

mycorrhizal

ಗುಣವಾಚಕ

ಶಿಲೀಂಧ್ರ ಮೂಲದ ಯಾ ಅದಕ್ಕೆ ಸಂಬಂಧಿಸಿದ; ಮೈಕರೈಸದ ಯಾ ಅದಕ್ಕೆ ಸಂಬಂಧಿಸಿದ.

mycosis

ನಾಮವಾಚಕ

ಶಿಲೀಂಧ್ರ ಸೋಂಕು ಯಾ ಶಿಲೀಂಧ್ರ ಸೋಂಕಿನಿಂದ ಉಂಟಾದ ರೋಗ, ಉದಾಹರಣೆಗೆ ಹುಳಕಡ್ಡಿ, ಗಜಕರ್ಣ.

mycotic

ಗುಣವಾಚಕ

ಶಿಲೀಂಧ್ರ ಸೋಂಕಿನ ಯಾ ಅದಕ್ಕೆ ಸಂಬಂಧಿಸಿದ.

mycotoxin

ನಾಮವಾಚಕ

ಶಿಲೀಂಧ್ರ ನಂಜು; ಮೈಕೊಟಾಕ್ಸಿನ್‍; ಶಿಲೀಂಧ್ರದಿಂದ ಉತ್ಪತ್ತಿಯಾಗುವ ಯಾವುದೇ ವಿಷ.

mycotrophy

ನಾಮವಾಚಕ

ಶಿಲೀಂಧ್ರ ಪುಷ್ಟಿ; ಸಸ್ಯ ಹಾಗೂ ಶಿಲೀಂಧ್ರಗಳ ನಡುವೆ ಸಹಜೀವನ ಇರುವಾಗ ಶಿಲೀಂಧ್ರದಿಂದ ಸಸ್ಯ ಪೌಷ್ಟಿಕಾಂಶಗಳನ್ನು ಪಡೆಯುವುದು.

mydriasis

ನಾಮವಾಚಕ

ಕನೀನಿಕೆ ವಿಸ್ತರಣೆ; ಕಣ್ಣಿನ ಪಾಪೆಯು ವಿಪರೀತ ಹಿಗ್ಗುವುದು, ಅಗಲವಾಗುವುದು.

myelin

ನಾಮವಾಚಕ

ನರಪೊರೆ; ಮಯಿಲಿನ್‍; ಕೆಲವು ನರತಂತುಗಳಿಗೆ ಕೋಶವಾಗಿ ಸುತ್ತಿಕೊಂಡಿರುವ ಒಂದು ಬಿಳಿಯ ವಸ್ತು.

myelination

ನಾಮವಾಚಕ

ಮಯಿಲೀಕರಣ; ಭ್ರೂಣದಲ್ಲಿ ನರತಂತುಗಳಿಗೆ ಮಯಿಲಿನ್‍ ಆವರಣ ರೂಪುಗೊಳ್ಳುವ ಪ್ರಕ್ರಿಯೆ.

myelitis

ನಾಮವಾಚಕ

ಮಯಿಲೈಟಿಸ್‍; ಬೆನ್ನುಹುರಿಯ ಉರಿಯೂತ.

myeloid

ಗುಣವಾಚಕ

ನೆಣದ; ಮಜ್ಜೆಯ; ಎಲುಬಿನೊಳಗಿನ ಮಜ್ಜೆಯ ಯಾ ಬೆನ್ನು ಮೂಳೆಯ ಮಜ್ಜಾರಜ್ಜುವಿನಂಥ.

myeloma

ನಾಮವಾಚಕ

ಎಲುಬಿನ ನೆಣದ, ಅಸ್ಥಿಮಜ್ಜೆಯ – ಮಾರಕ ದುರ್ಮಾಂಸ, ಗೆಡ್ಡೆ.

mylodon

ನಾಮವಾಚಕ

ಮೈಲಡನ್‍; ಪ್ಲೈಸ್ಟೊಸೀನ್‍ ಅವಧಿಯ ಹಿಮಯುಗದಲ್ಲಿ ಜೀವಿಸಿದ್ದು ಈಗ ನಿರ್ವಂಶವಾಗಿರುವ, ಉರುಳೆಯಾಕಾರದ ಹಲ್ಲುಳ್ಳ, ಅಮೆರಿಕದ ಸ್ಲಾತ್‍ಗಳನ್ನು ಹೋಲುವ, ದೈತ್ಯ ಸಸ್ತನಿಗಳ ಕುಲ.

myna

ನಾಮವಾಚಕ

ಮೈನ(ಹಕ್ಕಿ); ಗೊರವಂಕ.

mynah

ನಾಮವಾಚಕ

= myna.

Search Dictionaries

Loading Results

Follow Us :   
  Download Bharatavani App
  Bharatavani Windows App