भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mynheer

ನಾಮವಾಚಕ

  • ಡಚ್ಚರವನು; ಹಾಲೆಂಡಿನವನು.
  • ಡಚ್‍ ಮಾತನಾಡುವ ವ್ಯಕ್ತಿಗೆ ಬಳಸುವ, ನಮ್ಮ ಶ್ರೀ ಯಾ ಶ್ರೀಮಾನ್‍ಗೆ ಸಂವಾದಿಯಾದ, ಗೌರವದ ಉಪಾಧಿ.

myo-

ಸಮಾಸ ಪೂರ್ವಪದ

ಸ್ನಾಯು ಎಂಬರ್ಥದ ಸಮಾಸ ಪೂರ್ವಪದ, ಉದಾಹರಣೆಗೆ myocardium, myocarditis, myology.

myocardiac

ಗುಣವಾಚಕ

= myocardial.

myocardial

ಗುಣವಾಚಕ

ಹೃದಯ ಸ್ನಾಯುವಿನ ಯಾ ಅದಕ್ಕೆ ಸಂಬಂಧಿಸಿದ.

myocarditis

ನಾಮವಾಚಕ

(ರೋಗಶಾಸ್ತ್ರ) ಹೃದಯ ಸ್ನಾಯುವಿನ ಉರಿಯೂತ.

myocardium

ನಾಮವಾಚಕ

(ಅಂಗರಚನಾಶಾಸ್ತ್ರ) ಹೃದಯಸ್ನಾಯು; ಹೃದಯ ಭಿತ್ತಿಯ ಮೂರು ಪದರಗಳಲ್ಲಿ ಮಧ್ಯದ ಸ್ನಾಯುಪದರ.

myofibril

ನಾಮವಾಚಕ

ಸ್ನಾಯುಕೋಶಗಳಲ್ಲಿ ಕಂಡುಬರುವ, ಮಯೊಸಿನ್‍ ಮತ್ತು ಆಕ್ಟಿನ್‍ಗಳಿಂದ ಕೂಡಿದ ಉದ್ದುದ್ದನಾದ ಸಂಕೋಚಕ ತಂತು; ಸ್ನಾಯುತಂತು.

myogenic

ಗುಣವಾಚಕ

ಸ್ನಾಯುಜ; ಸ್ನಾಯುಜಾತ; ಸ್ನಾಯುಮೂಲದ; ಸ್ನಾಯುವಿನಲ್ಲಿ ಹುಟ್ಟುವ, ಉತ್ಪತ್ತಿಯಾಗುವ.

myoglobin

ನಾಮವಾಚಕ

ಮಯೋಗ್ಲೋಬಿನ್‍; ಸ್ನಾಯುಕೋಶಗಳಲ್ಲಿರುವ, ಕಬ್ಬಿಣವುಳ್ಳ, ಆಕ್ಸಿಜನ್‍ ವಾಹಕ ಪ್ರೋಟೀನು.

myology

ನಾಮವಾಚಕ

ಸ್ನಾಯುಶಾಸ್ತ್ರ; ಸ್ನಾಯುಗಳ ರಚನೆ ಮತ್ತು ಕ್ರಿಯೆಗಳನ್ನು ಕುರಿತು ಅಧ್ಯಯನ ಮಾಡುವ ವೈದ್ಯ ವಿಜ್ಞಾನದ ಶಾಖೆ.

myope

ನಾಮವಾಚಕ

ಸಮೀಪದದೃಷ್ಟಿಯವನು.

myopia

ನಾಮವಾಚಕ

ಸಮೀಪದೃಷ್ಟಿ; ಕಣ್ಮಣಿ, ಮಸೂರ, ಮೊದಲಾದ ಪಾರದರ್ಶಕ ಭಾಗಳಲ್ಲಿನ ದೋಷದಿಂದಾಗಿ ವಸ್ತುಗಳ ಬಿಂಬವು ಅಕ್ಷಿಪಟಲದ ಮುಂದುಗಡೆ ನಾಭೀಕರಿಸುವುದರಿಂದ ದೂರದ ವಸ್ತುಗಳು ಸರಿಯಾಗಿ ಕಾಣಿಸದಿರುವುದು (ರೂಪಕವಾಗಿ ಸಹ).

myopic

ಗುಣವಾಚಕ

(ಕಣ್ಣಿನ ಯಾ ವ್ಯಕ್ತಿಯ ವಿಷಯದಲ್ಲಿ) ಸಮೀಪದೃಷ್ಟಿಯ ಯಾ ಸಮೀಪದೃಷ್ಟಿಯಿಂದ ನರಳುತ್ತಿರುವ (ರೂಪಕವಾಗಿ ಸಹ).

myopically

ಕ್ರಿಯಾವಿಶೇಷಣ

ಸಮೀಪದೃಷ್ಟಿಯಿಂದ ಆಗುವ ಯಾ ಮಾಡುವ ಹಾಗೆ.

myosis

ನಾಮವಾಚಕ

miosis ಎಂಬ ಪದದ ರೂಪಾಂತರ.

myosote

ನಾಮವಾಚಕ

= myosotis.

myosotis

ನಾಮವಾಚಕ

(ಸಸ್ಯವಿಜ್ಞಾನ) ಮಯಸೋಟಿಸ್‍; ನೀಲಿ ಮತ್ತು ಬಿಳಿಯ ಹೂಗಳ ಗೊಂಚಲುಗಳನ್ನು ಬಿಡುವ, ಅಮೆರಿಕದ ಒಂದು ಸಸ್ಯಕುಲ.

myotic

ಗುಣವಾಚಕ

miotic ಎಂಬ ಪದದ ರೂಪಾಂತರ.

myotonia

ನಾಮವಾಚಕ

ಸ್ನಾಯುಬಿಗುಪು, ಸೆಟೆತ; ಶ್ರಮದ ದುಡಿಮೆಯ ನಂತರ ಸ್ನಾಯುವನ್ನು ಸಡಿಲಗೊಳಿಸಲು ಆಗದಿರುವುದು.

myotonic

ಗುಣವಾಚಕ

ಸ್ನಾಯುಬಿಗುಪಿನ ಯಾ ಅದಕ್ಕೆ ಸಂಬಂಧಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App