भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

myriad

ಗುಣವಾಚಕ

(ಸಾಹಿತ್ಯಕ)

  • ಹತ್ತು ಸಾವಿರದ; ದಶಸಹಸ್ರದ.
  • ಅಸಂಖ್ಯಾತ; ಅಸಂಖ್ಯೇಯ; ಲಕ್ಷೋಪಲಕ್ಷ; ಕೋಟ್ಯನುಕೋಟಿ.

myriad

ನಾಮವಾಚಕ

(ಸಾಹಿತ್ಯಕ)

  • ಒಂದು ಗೊತ್ತಿಲ್ಲದಷ್ಟು ದೊಡ್ಡ ಸಂಖ್ಯೆ.
  • ಹತ್ತು ಸಾವಿರ.

myriapod

ಗುಣವಾಚಕ

(ಶತಪಾದಿ, ಸಾವಿರಕಾಲುಗಳನ್ನೊಳಗೊಂಡ) ಬಹುಪಾದಿಯ; ಬಹುಪಾದಿ ವರ್ಗದ ಯಾ ಆ ವರ್ಗಕ್ಕೆ ಸಂಬಂಧಿಸಿದ.

myriapod

ನಾಮವಾಚಕ

(ಶತಪಾದಿ, ಸಹಸ್ರಪಾದಿಗಳನ್ನೊಳಗೊಂಡ) ಬಹುಪಾದಿ.

myriopod

ಗುಣವಾಚಕ

1myriapod ಪದದ ರೂಪಾಂತರ.

myriopod

ನಾಮವಾಚಕ

2myriapod ಪದದ ರೂಪಾಂತರ.

myriorama

ನಾಮವಾಚಕ

ಬಹು ದೃಶ್ಯಾವಳಿ ಪ್ರದರ್ಶನ; ಹಲವಾರು ಸಣ್ಣ ಚಿತ್ರಗಳನ್ನು ವಿವಿಧ ದೃಶ್ಯಗಳಾಗಿ ಕಾಣುವಂತೆ ಅನೇಕ ರೀತಿ ಜೋಡಿಸಿ ಪ್ರದರ್ಶಿಸುವ ದೃಶ್ಯಾವಳಿ.

myrmidon

ನಾಮವಾಚಕ

ಪದಗುಚ್ಛ

myrmidon of the law (ಪೊಲೀಸಿನವನು, ಕೋರ್ಟಿನ ಅಮೀನ, ಮೊದಲಾದ) ನ್ಯಾಯಾಂಗದ ಕೀಳ್ದರ್ಜೆಯ ನೌಕರ.

  • ಕೂಲಿ – ಕೊಲೆಗಾರ, ಖೂನಿಗಾರ; ಕೂಲಿಗಾಗಿ ಕೊಲೆಮಾಡಲು ನೇಮಕಗೊಂಡ ಘಾತುಕ.
  • ಕೀಳ್ದರ್ಜೆಯ ಸೇವಕ.

myrobalan

ನಾಮವಾಚಕ

ಪದಗುಚ್ಛ

  • (ಬಣ್ಣ ಕಟ್ಟುವುದು, ಶಾಯಿ ತಯಾರಿಕೆ, ತೊಗಲು ಹದ ಮಾಡುವುದು, ದೇಶೀವೈದ್ಯ, ಮೊದಲಾದವುಗಳಲ್ಲಿ ಬಳಸುವ) ಅಳಲೆ(ಯ) ಕಾಯಿ.
  • ಪ್ರೂನಸ್‍ ಸೆರಸಿಹೆರ ಕುಲದ, ಅಲ್ಲೊಂದು ಇಲ್ಲೊಂದು ಬಿಳಿ ಹೂಗಳನ್ನು ಕೆಂಪು ಹಣ್ಣುಗಳನ್ನು ಬಿಡುವ ಒಂದು ಬಗೆಯ ಚೆರಿಮರ.

myrrh

ನಾಮವಾಚಕ

ಬೋಳ; ರಕ್ತಬೋಳ; ಗಂಧರಸ; ಸುಗಂಧ ದ್ರವ್ಯಗಳು, ಔಷಧಗಳು, ಧೂಪಸಾಮಗ್ರಿಗಳು ಇವುಗಳಲ್ಲಿ ಬಳಸುವ, ಸಾಂಬ್ರಾಣಿಯಂಥ ಒಂದು ಬಗೆಯ ಗೋಂದು, ರಾಳ.

myrrh

ನಾಮವಾಚಕ

= sweet cicely.

myrrhic

ಗುಣವಾಚಕ

ಗಂಧರಸದ; ರಕ್ತಬೋಳದ.

myrrhy

ಗುಣವಾಚಕ

  • ಗಂಧರಸ ತುಂಬಿದ.
  • ರಕ್ತಬೋಳ ರಸದ ವಾಸನೆಯ ಯಾ ವಾಸನೆ ಕಟ್ಟಿದ.

myrtaceous

ಗುಣವಾಚಕ

ಮರ್ಟ್‍ಲ್‍ ಸಸ್ಯಜಾತಿಯ.

myrtle

ನಾಮವಾಚಕ

  • ಮರ್ಟ್‍ಲ್‍; (ನೇರಳೆಯ ಮತ್ತು ಪನ್ನೇರಳೆಯ ಬಳಗಕ್ಕೆ ಸೇರಿದ, ಹೊಳಪಿನ ನಿತ್ಯ ಹಸುರು ಎಲೆಗಳುಳ್ಳ, ಸುವಾಸನೆಯುಳ್ಳ ಬಿಳಿಯ ಹೂವು ಬಿಡುವ, ಗ್ರೀಕರ ಸೌಂದರ್ಯ ದೇವತೆ ವೀನಸ್‍ಳಿಗೆ ಪವಿತ್ರವೆಂದು ಭಾವಿಸಲಾದ) ಒಂದು ಪೊದೆ ಗಿಡ.
  • = $^1$periwinkle.

myself

ಸರ್ವನಾಮ

ಪದಗುಚ್ಛ

  • (ನಾನು ಎಂಬುದನ್ನು ಒತ್ತಿ ಹೇಳಲು I ಎಂಬುದಕ್ಕೆ ಬದಲಾಗಿ ಬಳಸುವ ಸರ್ವನಾಮ) ನಾನೇ: I saw it myself ಅದನ್ನು ನಾನೇ ನೋಡಿದೆ.
  • ತನ್ನ ಕ್ರಿಯೆ ಪ್ರತಿಫಲಿಸಿ ತನಗೇ ಹಿಂದಿರುಗಿತೆಂದು ಸೂಚಿಸುವ, me ಎಂಬುದರ ಆತ್ಮಾರ್ಥಕ ರೂಪ: I hurt myself ನಾನು ನನ್ನನ್ನೇ ಗಾಯಗೊಳಿಸಿಕೊಂಡೆ.
  • (ಕಾವ್ಯಪ್ರಯೋಗ) ನಾನು; ನಾನೇ: I myself am blind ನಾನೇ ಕುರುಡನಾಗಿದ್ದೇನೆ.
  • ಮೈಮನಸ್ಸುಗಳಲ್ಲಿ ಮಾಮೂಲಿನ, ರೂಢಿಯ, ಸಹಜ ಸ್ಥಿತಿಯನ್ನು ಸೂಚಿಸಲು ಬಳಸುವ ಪದ: I am not myself today ಇವತ್ತು ನಾನು ಎಂದಿನಂತಿಲ್ಲ, ಮಾಮೂಲಿನಂತಿಲ್ಲ; ಇವತ್ತು ನನಗೆ ಸರಿಯಾಗಿಲ್ಲ.

mysterious

ಗುಣವಾಚಕ

  • ರಹಸ್ಯಪೂರ್ಣ; ರಹಸ್ಯಮಯ; ರಹಸ್ಯಗರ್ಭಿತ.
  • ರಹಸ್ಯಾವೃತ; ರಹಸ್ಯದ ಮುಸುಕುಳ್ಳ; ನಿಗೂಢ.
  • (ವ್ಯಕ್ತಿಗಳ ವಿಷಯದಲ್ಲಿ) ರಹಸ್ಯಪ್ರಿಯ; ರಹಸ್ಯಪ್ರಕೃತಿಯ; ಗುಟ್ಟು ಗೋಪ್ಯದ; ಗುಟ್ಟನ್ನು ಬಚ್ಚಿಡುವುದರಲ್ಲೇ ಸಂತೋಷವುಳ್ಳ.

mysteriously

ಕ್ರಿಯಾವಿಶೇಷಣ

  • ರಹಸ್ಯ ಪೂರ್ಣವಾಗಿ; ರಹಸ್ಯಮಯವಾಗಿ; ರಹಸ್ಯಗರ್ಭಿತವಾಗಿ.
  • ರಹಸ್ಯಾವೃತವಾಗಿ; ರಹಸ್ಯದ ಮುಸುಕು ಧರಿಸಿ; ನಿಗೂಢವಾಗಿ.
  • (ವ್ಯಕ್ತಿಗಳ ವಿಷಯದಲ್ಲಿ) ರಹಸ್ಯವಾಗಿ; ಗುಟ್ಟಾಗಿ; ಗೋಪ್ಯದಿಂದ.

mysteriousness

ನಾಮವಾಚಕ

  • ರಹಸ್ಯಪೂರ್ಣತೆ; ರಹಸ್ಯಮಯತೆ; ರಹಸ್ಯ ಗರ್ಭಿತತೆ.
  • ರಹಸ್ಯಾವೃತತೆ; ನಿಗೂಢತೆ.
  • ರಹಸ್ಯಶೀಲತೆ; ರಹಸ್ಯಪ್ರಿಯತೆ; ಗುಟ್ಟನ್ನು ಬಚ್ಚಿಡುವುದರಲ್ಲೇ ಸಂತೋಷವುಳ್ಳ ಸ್ವಭಾವ.

mystery

ನಾಮವಾಚಕ

ಪದಗುಚ್ಛ

make a mystery of ಅತಿ ಗುಟ್ಟು ಮಾಡು; ಮಹಾ ರಹಸ್ಯದಂತೆ ಕಾಪಿಡು; ಅತಿ ರಹಸ್ಯವಾಗಿಡು.

  • ರಹಸ್ಯ; ಗೂಢವಾದ ಯಾ ವಿವರಿಸಲಸಾಧ್ಯವಾದ ವಿಷಯ; ಗುಹ್ಯ – ವಿದ್ಯೆ, ವಿಷಯ; ಗುಪ್ತ ವಿಷಯ; ನಿಗೂಢ ತತ್ತ್ವ; ಗಾಢವಾದ ಗುಟ್ಟು.
  • ಅಸ್ಪಷ್ಟತೆ; ಅಪ್ರಕಟತೆ.
  • ರಹಸ್ಯತೆ; ಗೋಪ್ಯತೆ: wrapped in mystery ಗೋಪ್ಯವಾಗಿಟ್ಟ; ರಹಸ್ಯದಲ್ಲಿ ಮರೆಮಾಡಿದ, ಮುಚ್ಚಿದ.
  • ಗುಟ್ಟು ಗೋಪ್ಯತೆ; ಅಮುಖ್ಯ ವಿಷಯಗಳನ್ನು ಗುಟ್ಟು ಮಾಡುವುದು; ಗುಟ್ಟಾಗಿಡುವ ಅಭ್ಯಾಸ: engaged in mystery and intrigue ಗುಟ್ಟು ಮತ್ತು ಪಿತೂರಿಯಲ್ಲಿ ತೊಡಗಿದ.
  • ರಹಸ್ಯ; ಮನುಷ್ಯ ತರ್ಕಕ್ಕೆ ಮೀರಿದ, ದೈವೀ ಮೂಲದಿಂದ ಪ್ರಕಾಶಿತವಾದ, ಪ್ರಕಟಿತವಾದ, ಧಾರ್ಮಿಕ ತತ್ತ್ವ,ಸತ್ಯ.
    1. ಧಾರ್ಮಿಕ ಯಾ ಮತೀಯ ಕರ್ಮಾಚರಣೆ, ಸಂಸ್ಕಾರ.
    2. (ರೋಮನ್‍ ಕ್ಯಾಥೊಲಿಕ್‍ ಚರ್ಚು) ಹತ್ತು (ಸಂಖ್ಯೆಯ) ಜಪ; ದಶವಾರ ಜಪ.
  • (ಬಹುವಚನದಲ್ಲಿ)
    1. (ಗ್ರೀಕರು, ರೋಮನರು, ಮೊದಲಾದವರ) ರಹಸ್ಯ – ಧಾರ್ಮಿಕವಿಧಿಗಳು, ಮತಾಚರಣೆಗಳು.
    2. (ಪ್ರಾಚೀನ ಪ್ರಯೋಗ) ಕ್ರೈಸ್ತಪ್ರಭು ಭೋಜನ ಸಂಸ್ಕಾರ.
  • ಪವಾಡ ನಾಟಕ; ಏಸು ಕ್ರಿಸ್ತನ ಜೀವನ, ಮರಣ ಮತ್ತು ಸ್ವರ್ಗಾರೋಹಣ ಮೊದಲಾದ ಕ್ರೈಸ್ತ ಧರ್ಮದ ಅದ್ಭುತ ಘಟನೆಗಳನ್ನು ಕುರಿತ ಮಧ್ಯ ಯುಗದ ನಾಟಕ ಯಾ ಈ ಬಗೆಯ ನಾಟಕವನ್ನು ಹೋಲುವ ನಾಟಕ.
  • ರಹಸ್ಯಾತ್ಮಕ ಕಥೆ; ಸಮಸ್ಯಾತ್ಮಕವಾದ ಘಟನೆಯನ್ನು, ಮುಖ್ಯವಾಗಿ ಅಪರಾಧವೊಂದನ್ನು, ಕುರಿತ ಕಾಲ್ಪನಿಕ ಕೃತಿ: a successful mystery novelist ಯಶಸ್ವೀ ರಹಸ್ಯ ಕಾದಂಬರಿಕಾರ.

Search Dictionaries

Loading Results

Follow Us :   
  Download Bharatavani App
  Bharatavani Windows App