भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mystery

ನಾಮವಾಚಕ

(ಪ್ರಾಚೀನ ಪ್ರಯೋಗ) ಕೈಕಸುಬು; ಉದ್ಯೋಗ (ಮುಖ್ಯವಾಗಿ ಕರಾರು ಪತ್ರಗಳಲ್ಲಿ ನಮೂದಿಸುವಂತೆ): art and mystery ಕಲೆ ಮತ್ತು ಕಸುಬು (ಒಬ್ಬನ ವೃತ್ತಿ ಎಂಬರ್ಥದಲ್ಲಿ).

mystery

ಗುಣವಾಚಕ

ರಹಸ್ಯ; ಗುಪ್ತ; ಅಪ್ರಕಟಿತ; ಅಪ್ರಕಾಶಿತ: mystery guest ಅಜ್ಞಾತ ಅತಿಥಿ.

mystery novel

ನಾಮವಾಚಕ

ನಿಗೂಢ ಕಾದಂಬರಿ; ಕೊಲೆಗಾರ ಮೊದಲಾದವರನ್ನು ಕಂಡುಹಿಡಿಯಲು ಓದುಗನನ್ನು ಆಹ್ವಾನಿಸುವ ಕತೆ, ಕಾದಂಬರಿ.

mystery play

ನಾಮವಾಚಕ

  • ನಿಗೂಢ ನಾಟಕ; ಕೊಲೆಗಾರ ಮೊದಲಾದವರನ್ನು ಕಂಡುಹಿಡಿಯಲು ಪ್ರೇಕ್ಷಕನನ್ನು ಆಹ್ವಾನಿಸುವ ನಾಟಕ.
  • = 1mystery\((8)\).

mystery ship

ನಾಮವಾಚಕ

(1914-18ರ ಮೊದಲ ಮಹಾಯುದ್ಧದಲ್ಲಿ ಜಲಾಂತರ್ನೌಕೆಗಳನ್ನು ಮೋಸದಿಂದ ಹತ್ತಿರಕ್ಕೆಳೆಯಲು ಅಲೆಮಾರಿ ಅಥವಾ ವ್ಯಾಪಾರಿ ಜಹಜಿನಂತೆ ಸೋಗು ಹಾಕಿದ) ರಹಸ್ಯ ನೌಕೆ; ಗುಪ್ತ ನೌಕೆ; ಗೂಢ ನೌಕೆ.

mystery tour

ನಾಮವಾಚಕ

ರಹಸ್ಯ – ಯಾತ್ರೆ, ಯಾನ; ಖುಷಿಗಾಗಿ ಅನಿಶ್ಚಿತ ಸ್ಥಳಕ್ಕೆ ಕೈಕೊಳ್ಳುವ ಪ್ರವಾಸ.

mystery trip

ನಾಮವಾಚಕ

= mystery tour.

mystic

ಗುಣವಾಚಕ

  • ಆಧ್ಯಾತ್ಮಿಕಾರ್ಥದ; ಆಧ್ಯಾತ್ಮಿಕವಾಗಿ ಅನ್ಯಾರ್ಥ ಯಾ ಸಾಂಕೇತಿಕಾರ್ಥ ಉಳ್ಳ.
  • ರಹಸ್ಯಾರ್ಥಕ; ಗೂಢಾರ್ಥಕ.
  • ಅತೀಂದ್ರಿಯವಾದ; ಆಧ್ಯಾತ್ಮಿಕವಾದ.
  • ರಹಸ್ಯಾತ್ಮಕವೂ ಭಯ ಭಕ್ತಿ ಪ್ರಚೋದಕವೂ ಆದ.

mystic

ಗುಣವಾಚಕ

  • (ಧ್ಯಾನದಿಂದಲೂ ಆತ್ಮಾರ್ಪಣದಿಂದಲೂ ಪರಮಾತ್ಮನಲ್ಲಿ ಐಕ್ಯವಾಗಲು ಯಾ ಪರಮಾತ್ಮನ ಸಾಯುಜ್ಯ ಪಡೆಯಲು ಪ್ರಯತ್ನಿಸುವ) ಮುಮುಕ್ಷು; ಮೋಕ್ಷಾಕಾಂಕ್ಷಿ; ಮುಕ್ತಿ ಬಯಸುವವನು; ಅನುಭಾವಿ.
  • ತರ್ಕಕ್ಕೆ ಯಾ ಬುದ್ಧಿಗೆ ಮೀರಿದ ತತ್ತ್ವಗಳನ್ನು ಆಧ್ಯಾತ್ಮಿಕ ಜ್ಞಾನದ ಮೂಲಕ ಅರಿಯಲು ಸಾಧ್ಯವೆಂಬ ನಂಬಿಕೆಯುಳ್ಳವನು; ಯೋಗಿ; ಅತೀಂದ್ರಿಯವಾದಿ.

mystical

ಗುಣವಾಚಕ

  • ಮುಮುಕ್ಷುಗಳ; ಅನುಭಾವಿಗಳ.
  • ಅನುಭಾವಕ್ಕೆ, ಆಧ್ಯಾತ್ಮಿಕಕ್ಕೆ ಸಂಬಂಧಿಸಿದ.
  • ಅತೀಂದ್ರಿಯ ; ಇಂದ್ರಿಯಾತೀತ; ಯೌಗಿಕ; ಆಧ್ಯಾತ್ಮಿಕ.

mystically

ಕ್ರಿಯಾವಿಶೇಷಣ

  • ಅನುಭಾವದಿಂದ; ಆಧ್ಯಾತ್ಮಿಕವಾಗಿ.
  • ಮುಮುಕ್ಷತೆಯಿಂದ.
  • ಅತೀಂದ್ರಿಯವಾಗಿ; ಇಂದ್ರಿಯಾತೀತವಾಗಿ; ಯೌಗಿಕವಾಗಿ.

mysticise

ಸಕರ್ಮಕ ಕ್ರಿಯಾಪದ

= mysticize.

mysticism

ನಾಮವಾಚಕ

(ಅನೇಕ ವೇಳೆ ಹೀನಾರ್ಥದಲ್ಲಿ ಪ್ರಯೋಗ)

  • ಯೋಗರಹಸ್ಯ; ಅಧ್ಯಾತ್ಮ ಜ್ಞಾನ; ಅನುಭಾವ; ಅನುಭಾವಿಗಳ ನಂಬಿಕೆಗಳು, ಭಾವನೆಗಳು ಮತ್ತು ವಿಚಾರ ಸರಣಿಗಳು.
  • ಬುದ್ಧಿಗೆ, ತರ್ಕಕ್ಕೆ ಮೀರಿದ ಯಾ ಅತೀಂದ್ರಿಯವಾದ ಆಧ್ಯಾತ್ಮಿಕ ತತ್ತ್ವಗಳನ್ನು ಅಪರೋಕ್ಷ ಜ್ಞಾನದಿಂದ ಅರಿಯಬಹುದೆಂದು ಪ್ರತಿಪಾದಿಸುವ ಸಿದ್ಧಾಂತ; ಅತೀಂದ್ರಿಯವಾದ; ಅನುಭಾವವಾದ.

mysticize

ಸಕರ್ಮಕ ಕ್ರಿಯಾಪದ

ಆಧ್ಯಾತ್ಮಿಕಗೊಳಿಸು; ಆಧ್ಯಾತ್ಮಿಕ ಅರ್ಥ ಕಲ್ಪಿಸು.

mystification

ನಾಮವಾಚಕ

  • ಪೆಚ್ಚಾಗಿಸುವುದು; ಕುಚೋದ್ಯಕ್ಕಾಗಿ ಮೋಸ ಹೋಗುವಂತೆ ದಿಗ್ಭ್ರಮೆಗೊಳಿಸುವುದು, ತಬ್ಬಿಬ್ಬಾಗಿಸುವುದು.
  • ನಂಬಿಕೆವಂಚನೆ; ನಂಬುವ ಸ್ವಭಾವವನ್ನು ದುರುಪಯೋಗ ಮಾಡುವುದು; ನಂಬಿಸಿ ವಂಚಿಸುವುದು.
  • ರಹಸ್ಯದ ಮುಸುಕು ಹಾಕುವುದು; ನಿಗೂಢಗೊಳಿಸುವುದು; ಭೇದಿಸಲಾಗದ ಗುಟ್ಟನ್ನಾಗಿ ಮಾಡುವುದು.

mystify

ಸಕರ್ಮಕ ಕ್ರಿಯಾಪದ

  • ಪೆಚ್ಚಾಗಿಸು; ಲೇವಡಿಗಾಗಿ, ಕುಚೋದ್ಯಕ್ಕಾಗಿ, ಮೋಸ ಹೋಗುವಂತೆ ದಿಗ್ಭ್ರಮೆಗೊಳಿಸು, ತಬ್ಬಿಬ್ಬಾಗಿಸು.
  • ನಂಬುವ ಸ್ವಭಾವವನ್ನು ದುರುಪಯೋಗ ಮಾಡು; ನಂಬಿಸಿ ವಂಚಿಸು.
  • ರಹಸ್ಯದ ಮುಸುಕು ಹಾಕು; ನಿಗೂಢಗೊಳಿಸು; ಭೇದಿಸಲಾಗದ ಗುಟ್ಟನ್ನಾಗಿ ಮಾಡು.

mystique

ನಾಮವಾಚಕ

  • (ಕೆಲವು ಪಂಥಗಳು, ಆಚರಣೆಗಳು, ಸಿದ್ಧಾಂತಗಳು, ಕಲೆಗಳು, ವೃತ್ತಿಗಳು, ಪ್ರತಿಷ್ಠಿತ ವ್ಯಕ್ತಿಗಳು, ಮೊದಲಾದವುಗಳನ್ನು ಸುತ್ತುವರೆದಿರುವ) ರಹಸ್ಯ ಮತ್ತು ಪೂಜ್ಯತೆಯ ಆವರಣ.
  • (ಒಂದು ವೃತ್ತಿಗೆ ಸೇರದವನಿಗೆ ಭೇದಿಸಲಾರದ ರಹಸ್ಯವಾಗಿ ಅವನನ್ನು ಬೆರಗುಗೊಳಿಸುವ) ಔದ್ಯೋಗಿಕ ಕುಶಲತೆ ಯಾ ತಂತ್ರ; ವೃತ್ತಿ – ಕೌಶಲ, ಚಳಕ, ಚಮತ್ಕಾರ ಯಾ ವಿಧಾನ.

myth

ನಾಮವಾಚಕ

  • (ಸಾಮಾನ್ಯವಾಗಿ ಅತಿಮಾನುಷ ಯಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಕೃತಿಯ ಯಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ) ಸಾಂಪ್ರದಾಯಿಕ ಕಥೆ, ಕಥನ; ಪುರಾಣ (ಕಥೆ).
  • ಅಂಥ ಸಾಂಪ್ರದಾಯಿಕ ಯಾ ಪುರಾಣ ಕಥೆಗಳ – ಸಂಗ್ರಹ, ಸಂಕಲನ.
  • ರೂಪಕ ಕಥೆ; ಅನ್ಯಾರ್ಥಕ ಕಥೆ: Platonic myth ಪ್ಲೇಟೋ ರಚಿತ ರೂಪಕ ಕಥೆ.
  • ಕಲ್ಪಿತ – ವ್ಯಕ್ತಿ, ಭಾವನೆ ಯಾ ವಸ್ತು.
  • ಪುರಾಣ; ವ್ಯಾಪಕವಾಗಿ ನಂಬಲಾಗಿರುವ ಮಿಥ್ಯಾಕಲ್ಪನೆ, ತಪ್ಪಭಿಪ್ರಾಯ.

mythi

ನಾಮವಾಚಕ

mythus ಪದದ ಬಹುವಚನ.

mythic

ಗುಣವಾಚಕ

= mythical.

Search Dictionaries

Loading Results

Follow Us :   
  Download Bharatavani App
  Bharatavani Windows App