भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mythical

ಗುಣವಾಚಕ

  • ಪೌರಾಣಿಕ; ಪುರಾಣ ರೂಪದ; ಪುರಾಣ ಕಥೆಯನ್ನೊಳಗೊಂಡ ಯಾ ಪುರಾಣ ಕಥೆಯ ಆಧಾರ ಯಾ ಸ್ವರೂಪ ಉಳ್ಳ.
  • ಪೌರಾಣಿಕ; ಕಾಲ್ಪನಿಕ; ಕಲ್ಪಿತ; ಪುರಾಣೋಕ್ತ; ವಾಸ್ತವ ಆಧಾರವಿಲ್ಲದ.
  • (ವ್ಯಕ್ತಿಗಳು, ಕಾಲ ಇವುಗಳ ವಿಷಯದಲ್ಲಿ) ಪೌರಾಣಿಕ; ಪುರಾಣದ; ಪುರಾಣಕ್ಕೆ ಸಂಬಂಧಿಸಿದ ಯಾ ಪುರಾಣದಲ್ಲಿ ಮಾತ್ರವೇ ಸಿಗುವ.
  • (ಲೇಖಕರು, ಅವರ ಲೇಖನ ವಿಧಾನಗಳು – ಇವುಗಳ ವಿಷಯದಲ್ಲಿ) ಪೌರಾಣಿಕ; ಪುರಾಣವನ್ನು ಕುರಿತ ಯಾ ಬಳಸಿಕೊಳ್ಳುವ.
  • ಅತಿಮಾನುಷ ಘಟನೆಗಳನ್ನು ಪುರಾಣವೆಂದು ಭಾವಿಸುವ.

mythically

ಕ್ರಿಯಾವಿಶೇಷಣ

  • ಪೌರಾಣಿಕವಾಗಿ.
  • ಕಾಲ್ಪನಿಕವಾಗಿ; ಕಲ್ಪಿತವಾಗಿ.
  • ಪೌರಾಣಿಕ ರೀತಿಯಲ್ಲಿ, ದೃಷ್ಟಿಯಿಂದ.

mythicise

ಸಕರ್ಮಕ ಕ್ರಿಯಾಪದ

= mythicize.

mythicism

ನಾಮವಾಚಕ

ಪೌರಾಣಿಕತಾವಾದ; ಅತಿಮಾನುಷ ಘಟನೆಗಳಿಗೆ ಪೌರಾಣಿಕ ಗುಣವನ್ನು, ಸ್ವರೂಪವನ್ನು ನೀಡುವ, ಅವನ್ನು ಪುರಾಣವೆಂದು ಪ್ರತಿಪಾದಿಸುವ ತತ್ತ್ವ.

mythicist

ನಾಮವಾಚಕ

ಪೌರಾಣಿಕತಾವಾದಿ; ಪೌರಾಣಿಕತಾ ಪ್ರತಿಪಾದಕ; ಪೌರಾಣಿಕತಾವಾದವನ್ನು ಯಾ ಪೌರಾಣಿಕ ಸಿದ್ಧಾಂತಗಳನ್ನು ಪ್ರತಿಪಾದಿಸುವವನು.

mythicize

ಸಕರ್ಮಕ ಕ್ರಿಯಾಪದ

  • (ಕಥೆ ಮೊದಲಾದವನ್ನು) ಪುರಾಣೀಕರಿಸು; ಪುರಾಣದಂತೆ ನಿರೂಪಿಸು; ಪುರಾಣವನ್ನಾಗಿ ಮಾಡು.
  • ಪುರಾಣದಂತೆ – ವ್ಯಾಖ್ಯಾನಿಸು, ವ್ಯಾಖ್ಯಾನಮಾಡು, ಅರ್ಥಕಲ್ಪಿಸು.

mytho-

ಸಮಾಸ ಪೂರ್ವಪದ

ಪುರಾಣ (ಕಥೆ) ಎಂಬ ಅರ್ಥದ ಸಮಾಸ ಪೂರ್ವಪದ: mythographer ಪುರಾಣ ಸಂಗ್ರಾಹಕ.

mythogenesis

ನಾಮವಾಚಕ

ಪುರಾಣ ಸೃಷ್ಟಿ; ಪುರಾಣಗಳ ಉತ್ಪತ್ತಿ, ಹುಟ್ಟು.

mythographer

ನಾಮವಾಚಕ

ಪುರಾಣಿಕ; ಪುರಾಣಗಳ – ಸಂಗ್ರಾಹಕ, ಸಂಕಲನಕಾರ.

mythography

ನಾಮವಾಚಕ

ಪುರಾಣಶಿಲ್ಪ; ಜೇಡಿಮಣ್ಣು, ಅರಗು, ಮೊದಲಾದವುಗಳ ಮೂಲಕ ಪುರಾಣಕಥೆಗಳ ಶಿಲ್ಪರೂಪಗಳನ್ನು ರಚಿಸುವುದು; ಪುರಾಣಕಥೆಗಳನ್ನು ಶಿಲ್ಪದಲ್ಲಿ ನಿರೂಪಿಸುವುದು.

mythologer

ನಾಮವಾಚಕ

= mythologist.

mythologic

ಗುಣವಾಚಕ

= mythological.

mythological

ಗುಣವಾಚಕ

  • ಪುರಾಣಾಭ್ಯಾಸದ; ಪುರಾಣಗಳ ಅಧ್ಯಯನದ.
  • ಪೌರಾಣಿಕ; ಪುರಾಣಕ್ಕೆ ಯಾ ಪುರಾಣಿಕನಿಗೆ ಸಂಬಂಧಿಸಿದ.

mythologically

ಕ್ರಿಯಾವಿಶೇಷಣ

ಪೌರಾಣಿಕವಾಗಿ; ಪುರಾಣಗಳ ಯಾ ಪೌರಾಣಿಕ – ರೀತಿಯಲ್ಲಿ.

mythologise

ಸಕರ್ಮಕ ಕ್ರಿಯಾಪದ

= mythologize.

mythologist

ನಾಮವಾಚಕ

  • ಪುರಾಣಿಕ; ಪುರಾಣತಜ್ಞ; ಪುರಾಣಗಳ ಅಧ್ಯಯನ ಮಾಡಿರುವವನು.
  • ಪುರಾಣಗಳನ್ನು ರಚಿಸುವವನು; ಪುರಾಣ ಕರ್ತೃ; ಪೌರಾಣಿಕ.

mythologize

ಸಕರ್ಮಕ ಕ್ರಿಯಾಪದ

  • ಪುರಾಣ ಸೃಷ್ಟಿಸು, ರಚಿಸು,
  • ಪುರಾಣ(ಕಥೆ) ಹೇಳು.
  • (ವಿರಳ ಪ್ರಯೋಗ) ಕಲ್ಪಿತವಾದದ್ದನ್ನು, ಕಟ್ಟು ಕಥೆಯನ್ನು ಹೇಳು.
  • (ಯಾವುದೇ ವಿಷಯವನ್ನು) ಪುರಾಣೀಕರಿಸು; ಪೌರಾಣಿಕಗೊಳಿಸು; ಪುರಾಣದಂತೆ ನಿರೂಪಿಸು, ಕಲ್ಪಿಸು.

mythologizer

ನಾಮವಾಚಕ

ಪುರಾಣಕಾರ:

  • ಪುರಾಣ – ಸೃಷ್ಟಿಸುವವ, ರಚಿಸುವವ.
  • (ಯಾವುದೇ ವಿಷಯವನ್ನು) ಪುರಾಣದಂತೆ ಮಾಡುವವ, ಪರಿವರ್ತಿಸುವವ ಯಾ ನಿರೂಪಿಸುವವ.

mythology

ನಾಮವಾಚಕ

  • (ಒಬ್ಬ ನಿರ್ದಿಷ್ಟ ವ್ಯಕ್ತಿಗೆ, ಯಾ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ)
    1. ಪುರಾಣ(ಕಥೆ).
    2. ಪುರಾಣ ಸಂಗ್ರಹ; ಪುರಾಣ ಕಥೆಗಳ ಸಮುದಾಯ.
  • ಪುರಾಣ ಸಾಹಿತ್ಯ.
  • ಪುರಾಣದ ಅಧ್ಯಯನ.

mythomania

ನಾಮವಾಚಕ

ಸುಳ್ಳುಗೀಳು; ಮಿಥ್ಯಾರಕ್ತಿ; ವಿಷಯಗಳನ್ನು ಅತಿಶಯಗೊಳಿಸುವ ಯಾ ಸುಳ್ಳನ್ನು ಅತಿಯಾಗಿ ಹೇಳುವ ಅಪಸಾಮಾನ್ಯ ಪ್ರವೃತ್ತಿ.

Search Dictionaries

Loading Results

Follow Us :   
  Download Bharatavani App
  Bharatavani Windows App