भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mad

ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಸಕರ್ಮಕ ಕ್ರಿಯಾಪದ (ಪ್ರಾಚೀನ ಪ್ರಯೋಗ) ಹುಚ್ಚನಾಗು; ಹುಚ್ಚುಹುಚ್ಚಾಗಿ ವರ್ತಿಸು: the madding crowd ಹುಚ್ಚೆದ್ದ ಯಾ ಹುಚ್ಚುಹುಚ್ಚಾಗಿ ವರ್ತಿಸುವ ಜನರು, ಜನಸಂದಣಿ (ಈಗ ಸಾಮಾನ್ಯವಾಗಿ ‘ಹುಚ್ಚು ಹಿಡಿಸುವ’ ಎಂಬರ್ಥದಲ್ಲಿ ಪ್ರಯೋಗ).

  • ಹುಚ್ಚು ಹಿಡಿಸು; ತಲೆಕೆಡಿಸು; ಹುಚ್ಚಿಗೆಬ್ಬಿಸು.
  • ಕೋಪ ಬರಿಸು; ಸಿಟ್ಟಿಗೆಬ್ಬಿಸು.

mad doctor

ನಾಮವಾಚಕ

(ಪ್ರಾಚೀನ ಪ್ರಯೋಗ) ಹುಚ್ಚರ ವೈದ್ಯ.

madam

ನಾಮವಾಚಕ

  • ಶ್ರೀಮತಿಯವರೇ! ಅಮ್ಮಾ! ತಾಯಿ! (ಹೆಂಗಸನ್ನು ಸಂಬೋಧಿಸುವ ಪದ).
  • ಶ್ರೀಮತಿ (ಮರ್ಯಾದೆಯ ಒಕ್ಕಣೆಯಾಗಿ).
  • (ಸೌಮ್ಯೋಕ್ತಿ) ವೇಶ್ಯಾಗೃಹದ ಯಜಮಾನಿ, ಒಡತಿ; ಸೂಳೆಯ ಮನೆ ನಡೆಸುವವಳು.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ತಲೆಹರಟೆ ಹುಡುಗಿ.
    2. ದುರಹಂಕಾರದ ಹುಡುಗಿ.
    3. ಯುವತಿ.

Madame

ನಾಮವಾಚಕ

= madam (ಶಬ್ದದ ಹೆಂಚ್‍ ರೂಪ).

madcap

ನಾಮವಾಚಕ

ಹುಚ್ಚಾಟದ ವ್ಯಕ್ತಿ; ಹುಚ್ಚುಹುಚ್ಚಾಗಿ ವರ್ತಿಸುವ ವ್ಯಕ್ತಿ.

madcap

ಗುಣವಾಚಕ

  • ಅವಿವೇಕದ; ಹುಚ್ಚಾಟದ; ಅವಿಚಾರಿ; ಹುಚ್ಚನಂತೆ ವರ್ತಿಸುವ.
  • ದುಡುಕಿನ; ಮುಂದಾಲೋಚನೆಯಿಲ್ಲದೆ ಮಾಡಿದ, ಕೈಗೊಂಡ.

madden

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಹುಚ್ಚುಹಿಡಿ; ಹುಚ್ಚನಂತಾಡು; ಹುಚ್ಚನಾಗು.

  • ಹುಚ್ಚು ಹಿಡಿಸು; ಹುಚ್ಚಿಗೆಬ್ಬಿಸು.
  • ರೇಗಿಸು; ಕೆರಳಿಸು.

maddening

ಗುಣವಾಚಕ

  • ಹುಚ್ಚು ಹಿಡಿಸುವ; ಹುಚ್ಚೆಬ್ಬಿಸುವ.
  • ರೇಗಿಸುವ; ಕೆರಳಿಸುವ.

maddeningly

ಕ್ರಿಯಾವಿಶೇಷಣ

  • ಹುಚ್ಚು ಹಿಡಿಸುವಂತೆ.
  • ರೇಗಿಸುವಂತೆ; ಕೆರಳಿಸುವ ರೀತಿಯಲ್ಲಿ.

madder

ನಾಮವಾಚಕ

  • ಮ್ಯಾಡರ್‍; ನಸು ಹಳದಿ ಹೂ ಬಿಡುವ, ಮಂಜಿಷ್ಠೆ ಬಳಗದ ಒಂದು ಬಳ್ಳಿ.
  • ಅಲಿಸರಿನ್‍; ಮ್ಯಾಡರ್‍ ಬೇರಿನಿಂದ ಪಡೆದ ಯಾ ರಾಸಾಯನಿಕವಾಗಿ ತಯಾರಿಸಿದ ಒಂದು ಕೆಂಪು ವರ್ಣ ದ್ರವ್ಯ.

made

ಕ್ರಿಯಾಪದ

make ಧಾತುವಿನ ಭೂತರೂಪ ಮತ್ತು ಭೂತಕೃದಂತ.

made

ಗುಣವಾಚಕ

ಪದಗುಚ್ಛ

  • (ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ) ಕೃತ; ನಿರ್ಮಿತ; ರಚಿತ; ರೂಪಿತ; ರಚಿಸಿದ; ಮಾಡಿದ; ರೂಪಿಸಿದ (ಮೊದಲಾದ ಅರ್ಥಗಳಲ್ಲಿ, ಸಾಮಾನ್ಯವಾಗಿ ಸಮಾಸ ಉತ್ತರ ಪದವಾಗಿ): well-made ಸುನಿರ್ಮಿತ. stoutly-made ಸ್ಥೂಲಕಾಯದ.
  • ಕಲ್ಪಿತ; ಇಲ್ಲಸಲ್ಲದ; ಸುಳ್ಳಂಬಳ್ಳಿನ; ತಾನೇ ಕಟ್ಟಿದ; ಸುಳ್ಳಿನ: to tell made stories about oneself ತನ್ನ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಹೇಳಿಕೊಂಡು.

Madeira

ನಾಮವಾಚಕ

ಪದಗುಚ್ಛ

Madeira cake ಮಡೀರ ಕೇಕ್‍; ಸ್ಪಂಜಿನಂತೆ ಮೆತುವಾದ, ಒಂದು ರೀತಿಯ ಕೇಕು, ಸಿಹಿತಿಂಡಿ.

  • ಅಟ್ಲಾಂಟಿಕ್‍ ಸಾಗರದಲ್ಲಿನ ಒಂದು ದ್ವೀಪ.
  • ಅಲ್ಲಿ ತಯಾರಾಗುವ ಒಂದು ಬಗೆಯ ಬಿಳಿ ವೈನು, ಮದ್ಯ.

madeleine

ನಾಮವಾಚಕ

ಒಂದು ಬಗೆಯ ಸಣ್ಣದಾದ ಸ್ಪಂಜ್‍ ಕೇಕು.

Mademoiselle

ನಾಮವಾಚಕ

  • (ಹ್ರೆಂಚ್‍) ಅವಿವಾಹಿತ ಸ್ತ್ರೀ; ಕನ್ಯೆ; ಕುಮಾರಿ; ಇನ್ನೂ ಮದುವೆಯಿಲ್ಲದ ಹ್ರೆಂಚ್‍ ಹೆಂಗಸು.
  • (ಹ್ರೆಂಚ್‍) ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಹ್ರೆಂಚ್‍ ಶಿಕ್ಷಕಿ, ಉಪಾಧ್ಯಾಯಿನಿ.
  • ಶ್ರೀಮತಿ; ಹ್ರೆಂಚ್‍ ಕನ್ಯೆಗೆ ಯಾ ಹೆಂಗಸಿಗೆ ಗೌರವದ ಒಕ್ಕಣೆಯಾಗಿ ಬಳಸುವ ಪದ.

madhouse

ನಾಮವಾಚಕ

  • (ಪ್ರಾಚೀನ ಪ್ರಯೋಗ ಯಾ ಆಡುಮಾತು) ಹುಚ್ಚಾಸ್ಪತ್ರೆ.
  • ಗೊಂದಲದ, ಗಲಾಟೆಯ, ರಂಪದ – ಪ್ರದೇಶ, ಜಾಗ.

madia

ನಾಮವಾಚಕ

ಮಾಡಿಯ; ಸೂರ್ಯಕಾಂತಿ ಬಳಗದ ಒಂದು ಗಿಡ.

madly

ಕ್ರಿಯಾವಿಶೇಷಣ

  • ಬುದ್ಧಿಕೆಟ್ಟು; ಉನ್ಮಾದದಿಂದ; ಹುಚ್ಚು ಹಿಡಿದು.
  • ಆವೇಶದಿಂದ; ಅತಿ ವೇಗದಿಂದ; ರಭಸದಿಂದ; ತುಂಬಾ ಜೋರಾಗಿ; ಅತಿ ರಭಸದಿಂದ; ತರಾತುರಿಯಿಂದ; ಅತಿ ಆತುರದಲ್ಲಿ: they worked madly to fix the bridge ಸೇತುವೆಯನ್ನು ಸರಿಮಾಡಲು ಅವರು ತರಾತುರಿಯಿಂದ ಕೆಲಸ ಮಾಡಿದರು.
  • ಅವಿವೇಕವಾಗಿ; ತಿಳಿಗೇಡಿತನದಿಂದ: they lived madly, wasting all their money ಅವರು ಹಣವೆಲ್ಲವನ್ನೂ ದುಂದು ಮಾಡುತ್ತಾ ಅವಿವೇಕದ ಜೀವನ ನಡೆಸಿದರು.
  • ದುಡುಕಿನಿಂದ; ಹಿಂದುಮುಂದು ನೋಡದೆ.
  • (ಆಡುಮಾತು)
    1. ತೀವ್ರವಾಗಿ; ಅತ್ಯಂತವಾಗಿ
    2. ಭಾವಾವೇಶದಿಂದ; ಭಾವಪೂರ್ಣವಾಗಿ.

madman

ನಾಮವಾಚಕ

ಹುಚ್ಚ; ತಲೆಕೆಟ್ಟವ.

madness

ನಾಮವಾಚಕ

  • ಹುಚ್ಚು; ಉನ್ಮಾದ; ತಲೆ ಕೆಟ್ಟಿರುವುದು.
  • ಅವಿವೇಕ; ತಿಳಿಗೇಡಿತನ.
  • ದುಡುಕು.

Search Dictionaries

Loading Results

Follow Us :   
  Download Bharatavani App
  Bharatavani Windows App