भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

numbat

ನಾಮವಾಚಕ

(ಆಸ್ಟ್ರೇಲಿಯ) ನಂಬಾಟ್‍; ಪೊದರುಪೊದರಾದ ಬಾಲವೂ, ಬೆನ್ನಿನ ಮೇಲೆ ಕಪ್ಪು ಮತ್ತು ಬಿಳಿ ಪಟ್ಟೆಗಳೂ, ಹೊಟ್ಟೆಯಲ್ಲಿ ಚೀಲವೂ ಇರುವ, ಮರ್ಮಿಕೋಬಿಯಸ್‍ ಹ್ಯಾಷಿಯೇಟಸ್‍ ಕುಲಕ್ಕೆ ಸೇರಿದ, ಒಂದು ಸಣ್ಣ ಸಸ್ತನಿ ಪ್ರಾಣಿ.

number

ನಾಮವಾಚಕ

ಪದಗುಚ್ಛ

 • ಅಂಕಿ; ಸಂಖ್ಯೆ: six is an even number ಆರು ಎಂಬುದು ಸಮಸಂಖ್ಯೆ.
 • ಅಂಕಿ; ಸಂಖ್ಯೆ:
  1. ಅಂಕಿಯನ್ನು ಸೂಚಿಸುವ ಶಬ್ದ, ಸಂಕೇತ ಯಾ ಚಿತ್ರ.
  2. ಗುರುತು, ಪರಾಮರ್ಶನೆ, ಮೊದಲಾದವುಗಳಿಗಾಗಿ, ಒಂದು ಗೊತ್ತಾದ ಮೊತ್ತದ ಶ್ರೇಣಿಯಲ್ಲಿ ಯಾವುದಾದರೂ ಒಂದನ್ನು ನಿರ್ದೇಶಿಸುವಾಗ ಅದಕ್ಕೆ [ಉದಾಹರಣೆಗೆ ವಾಹನಗಳು, ದೂರವಾಣಿ, ಮೊದಲಾದವಕ್ಕೆ] ಕೊಡುವ ಸಂಖ್ಯೆ, ಅಂಕಿ: registration number ನೋಂದಣಿ ಸಂಖ್ಯೆ.
 • (ಜನರ, ವಸ್ತುಗಳ ಒಟ್ಟು ಮೊತ್ತ ಸೂಚಿಸುವ) ಅಂಕಿ; ಸಂಖ್ಯೆ: what number of people are you expecting? ನೀನು ಒಟ್ಟು ಎಷ್ಟು ಸಂಖ್ಯೆಯ ಜನರನ್ನು ನಿರೀಕ್ಷಿಸುತ್ತಿದ್ದೀಯೆ? the number of accidents has decreased ಅಪಘಾತಗಳ ಸಂಖ್ಯೆ ಕಡಮೆಯಾಗಿದೆ. twenty in number (ಸಂಖ್ಯೆಯಲ್ಲಿ) ಇಪ್ಪತ್ತಿವೆ.
 • (ಬಹುವಚನದಲ್ಲಿ) ಗಣಿತ; ಅಂಕಗಣಿತ: not good at numbers ಗಣಿತದಲ್ಲಿ ಕುಶಲನಲ್ಲ.
 • (ಏಕವಚನ ಯಾ ಬಹುವಚನದಲ್ಲಿ) ಪ್ರಮಾಣ; ಮೊತ್ತ: a large number of people ಭಾರಿ ಮೊತ್ತದ ಜನರು. only in small numbers ಕಡಮೆ ಪ್ರಮಾಣದಲ್ಲಿ ಮಾತ್ರ.
 • ಅಂಕಿ; ಸಂಖ್ಯೆ; ಒಂದು ಶ್ರೇಣಿಯಲ್ಲಿ ಇಂತಿಷ್ಟನೆಯದು ಎಂದು ಸೂಚಿಸುವ ಚಿಹ್ನೆ (ಮುಖ್ಯವಾಗಿ ವೃತ್ತ ಪತ್ರಿಕೆಯ ಇಂಥ ಸಂಚಿಕೆ, ಗೀತನಾಟಕದಲ್ಲಿ ಯಾ ಸಂಗೀತ ಕಚೇರಿಯಲ್ಲಿ ಇಂತಿಷ್ಟನೆಯ ಹಾಡು, ಮೊದಲಾದವು).
 • ಜತೆ; ಜೊತೆ; ಗುಂಪು; ವರ್ಗ: he is of our number ಅವನು ನಮ್ಮ ಗುಂಪಿನವನು. among our number ನಮ್ಮ ಗುಂಪಿನಲ್ಲಿ.
 • (ವ್ಯಾಕರಣ) ವಚನ: Sanskrit has three numbers ಸಂಸ್ಕೃತ ಭಾಷೆಯಲ್ಲಿ ಮೂರು ವಚನಗಳಿವೆ.
 • (ಆಡುಮಾತು) (ಸಲಿಗೆಯಿಂದ ಯಾ ಪ್ರೀತಿಯಿಂದ ವ್ಯಕ್ತಿಯನ್ನು ಯಾ ವಸ್ತುವನ್ನು ಕರೆಯುವಾಗ) ನಂಬರು; ಇಸಮು: an attractive little number ಆಕರ್ಷಕವಾದ ಪುಟ್ಟ ವ್ಯಕ್ತಿ, ವಸ್ತು.
 • (Numbers)(ಬೈಬ್‍ಲ್‍) ಸಂಖ್ಯಾಕಾಂಡ; ಹಳೆಯ ಒಡಂಬಡಿಕೆಯಲ್ಲಿ ಜನಗಣತಿಯಿರುವ ನಾಲ್ಕನೆಯ ಅಧ್ಯಾಯ.
 • ಒಂದು ಗೊತ್ತಾದ ಸಂಖ್ಯೆಯವರೆಗಿರುವುದರಲ್ಲಿ ನಿರ್ದಿಷ್ಟವಾಗಿ ಯಾವುದಾದರೂ ಒಂದು ವಸ್ತು, ವ್ಯಕ್ತಿ, ಮೊದಲಾದವು: number 22 wants his boots ಇಪ್ಪತ್ತೆರಡನೆಯ ಇಸಮು, ವ್ಯಕ್ತಿ ಬೂಟುಗಳು ಬೇಕೆನ್ನುತ್ತಾನೆ.
 • (ಆಡುಮಾತು) ವ್ಯಕ್ತಿ, ಉಡುಪು, ಕೆಲಸ, ಮೊದಲಾದವು.
 • (ಬಹುವಚನದಲ್ಲಿ) ಸಂಖ್ಯಾಬಲ; ಸಂಖ್ಯೆಯ ಹೆಚ್ಚಳ: they won by force of numbers ಅವರು ಕೇವಲ ಸಂಖ್ಯಾಬಲದಿಂದ ಗೆದ್ದರು.
 • ಎಣಿಕೆ.
 • (ಪ್ರಾಚೀನ ಪ್ರಯೋಗ) ತಾಳ; ಲಯ.
 • (ಬಹುವಚನದಲ್ಲಿ)
  1. (ಸಂಗೀತ) ಸ್ವರತಂಡ.
  2. (ಛಂದಸ್ಸು) ಗಣಗಳು.
  3. (ಪದ್ಯದ) ಸಾಲುಗಳು; ಚರಣಗಳು; ಪಂಕ್ತಿಗಳು.
  4. ಪದ್ಯಗಳು; ಕಾವ್ಯ: I lisped in numbers for the numbers came ನಾನು ತೊದಲು ಮಾತನಾಡುತ್ತಿರುವಂತೆಯೇ ಕಾವ್ಯ ರಚಿಸಿದೆ; ಯಾಕೆಂದರೆ ಕಾವ್ಯ ನನ್ನಲ್ಲಿ ತಾನೇ ತಾನಾಗಿ ಸ್ಫುರಿಸಿತು.

number

ಸಕರ್ಮಕ ಕ್ರಿಯಾಪದ

ಪದಗುಚ್ಛ

one’s days are numbered(ಒಬ್ಬನ) ದಿನಗಳು ಮುಗಿಯುತ್ತ ಬಂದವು; ಹೆಚ್ಚು ದಿನ ಬದುಕುವುದಿಲ್ಲ.

 • (ಒಂದು ವರ್ಗದಲ್ಲಿ) ಸೇರಿಸು; ಸೇರಿದ್ದೆಂದು ಎಣಿಸು: I number you among my friends ನಾನು ನಿನ್ನನ್ನು ನನ್ನ ಸ್ನೇಹಿತರಲ್ಲಿ ಸೇರಿಸಿದ್ದೇನೆ, ನೀನು ಸೇರಿದ್ದೀಯೆಂದು ಎಣಿಸುತ್ತೇನೆ.
 • (ಯಾವುದಕ್ಕಾದರೂ) ಒಂದು ಸಂಖ್ಯೆ ಯಾ ಸಂಖ್ಯೆಗಳನ್ನು ಕೊಡು; ಒಂದು ಸಂಖ್ಯೆಯಿಂದ ನಿರ್ದೇಶಿಸು.
 • (ಒಂದು ನಿರ್ದಿಷ್ಟ ಸಂಖ್ಯೆಯಷ್ಟು) ಮೊತ್ತವಾಗು; (ಅಷ್ಟು) ಸಂಖ್ಯೆಯಲ್ಲಿರು: the crew and passengers numbered thirty-three ಹಡಗಿನಲ್ಲಿ ಸಿಬ್ಬಂದಿ ಪ್ರಯಾಣಿಕರು ಸೇರಿ ಮೂವತ್ತಮೂರು ಮಂದಿ ಇದ್ದರು.
 • ಎಣಿಸು; ಲೆಕ್ಕ ಮಾಡು; ಸಂಖ್ಯೆಯನ್ನು ಗೊತ್ತುಮಾಡು.
 • ಒಳಗೊಳ್ಳು; ಒಳಗೊಂಡಿರು.
 • (ಕರ್ಮಣಿಪ್ರಯೋಗದಲ್ಲಿ) ಸಂಖ್ಯೆಯಲ್ಲಿ – ಪರಿಮಿತವಾಗಿರು, ಸೀಮಿತಗೊಳ್ಳು.
 • (ಇಷ್ಟು ವರ್ಷ) ತುಂಬಿರು; ಬದುಕಿರು; ಜೀವಿಸು: of as able body as when he numbered thirty ಅವನು ಮೂವತ್ತು ವರ್ಷದವನಾಗಿದ್ದಾಗ ಇದ್ದಂತೆ ದೃಢಕಾಯ.
 • (ಇಂತಿಷ್ಟು ಸಂಖ್ಯೆಯ ನಿವಾಸಿಗಳು, ವಸ್ತುಗಳು, ಮೊದಲಾದವುಗಳಿಂದ) ಕೂಡಿರು; ತುಂಬಿರು: Mysore numbers eight lakh inhabitants ಮೈಸೂರು ಎಂಟು ಲಕ್ಷ ನಿವಾಸಿಗಳಿಂದ ತುಂಬಿದೆ.

number cruncher

ನಾಮವಾಚಕ

(ಕಂಪ್ಯೂಟರ್‍ ಮತ್ತು ಗಣಿತ) (ಅಶಿಷ್ಟ) ಸಂಕೀರ್ಣ ಗಣಕ(ಯಂತ್ರ); ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡುವ ಯಂತ್ರ.

number crunching

ನಾಮವಾಚಕ

(ಅಶಿಷ್ಟ) ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡುವುದು ಯಾ ಮಾಡುವ ಕ್ರಿಯೆ.

number one

ನಾಮವಾಚಕ

(ಆಡುಮಾತು) ತಾನು: always takes care of number one ಅವನು ಯಾವಾಗಲೂ ತನ್ನ ಯೋಗಕ್ಷೇಮ ನೋಡಿಕೊಳ್ಳುತ್ತಾನೆ; ಯಾವಾಗಲೂ ಅವನು ತನ್ನ ಬಗ್ಗೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾನೆ.

number one

ಗುಣವಾಚಕ

(ಸ್ಥಾನ ಯಾ ಪ್ರಾಮುಖ್ಯದಲ್ಲಿ) ಮೊದಲನೆಯದಾದ; ಅತ್ಯುಚ್ಚ ಸ್ಥಾನದ; ಅತ್ಯುತ್ಕೃಷ್ಟ; ಪ್ರಥಮ; ಆದ್ಯ.

number-plate

ನಾಮವಾಚಕ

ನಂಬರ್‍ ಪ್ಲೇಟ್‍; ಅಂಕಿಪಟ್ಟಿ; ಸಂಖ್ಯಾಫಲಕ; ವಾಹನಗಳಿಗೆ ಹಚ್ಚುವ, ರಿಜಿಸ್ಟರ್‍ ಯಾ ನೋಂದಣಿ ಸಂಖ್ಯೆ ಇರುವ ಫಲಕ.

numberless

ಗುಣವಾಚಕ

ಅಸಂಖ್ಯಾತ; ಲೆಕ್ಕವಿಲ್ಲದಷ್ಟರ; ಎಣಿಕೆಗೆ ಸಿಗದ.

numbles

ನಾಮವಾಚಕ

(ಬಹುವಚನ) (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) (ಆಹಾರವಾಗಿ ಉಪಯೋಗಿಸುವ) ಜಿಂಕೆಯ ಕರುಳು, ಅಂತ್ರ.

numbly

ಕ್ರಿಯಾವಿಶೇಷಣ

ನಿಶ್ಚೇಷ್ಟವಾಗಿ; ಜೋವು ಹಿಡಿದಂತೆ; ಜಡವಾಗಿ; ಮರಗಟ್ಟಿದ ರೀತಿಯಲ್ಲಿ.

numbness

ನಾಮವಾಚಕ

ನಿಶ್ಚೇಷ್ಟತೆ; ಜೋವು ಹಿಂಡಿದಂತಿರುವಿಕೆ; ಮರಗಟ್ಟಿದಂತಿರುವಿಕೆ.

numbskull

ನಾಮವಾಚಕ

numskull ಪದದ ರೂಪಾಂತರ.

numdah

ನಾಮವಾಚಕ

(ಇಂಡಿಯಾ ಮೊದಲಾದ ಕಡೆಗಳಿಂದ ಬರುವ) ಕಸೂತಿಯ ಹೆಲ್ಟ್‍ ಕಂಬಳಿ, ರಗ್ಗು.

numen

ನಾಮವಾಚಕ

ಅಧಿದೇವತೆ; ಅಭಿಮಾನಿ ದೇವತೆ; ಸ್ಥಳದೇವತೆ ಯಾ ಅಭಿಮಾನಿ ದೇವತೆ; ಯಾವುದೇ ಸ್ಥಳದಲ್ಲಿ ಯಾ ವಸ್ತುವಿನಲ್ಲಿ ಇರುವ ಅಭಿಮಾನಿ ದೇವತೆ ಯಾ ಚೈತನ್ಯ.

numerable

ಗುಣವಾಚಕ

ಎಣಿಸಲಾಗುವ; ಎಣಿಸಬಲ್ಲ; ಎಣಿಸಹುದಾದ.

numerably

ಕ್ರಿಯಾವಿಶೇಷಣ

ಎಣಿಸಲಾಗುವಂತೆ.

numeracy

ನಾಮವಾಚಕ

ಗಣಿತಜ್ಞತೆ; ಗಣಿತದ ಮೂಲ ಸೂತ್ರಗಳನ್ನು ತಿಳಿದುಕೊಂಡಿರುವುದು.

numeral

ನಾಮವಾಚಕ

ಅಂಕಿ; ಅಂಕ; ಸಂಖ್ಯಾವಾಚಕ; ಸಂಖ್ಯೆಯನ್ನು ಸೂಚಿಸಲು ಬಳಸುವ ಸಂಕೇತಗಳಲ್ಲೊಂದು (ಶಬ್ದ, ಚಿತ್ರ ಯಾ ಚಿತ್ರಗಳ ಗುಂಪು, ಮೊದಲಾದವು).

numeral

ಗುಣವಾಚಕ

 • ಸಂಖ್ಯಾವಾಚಕ; ಸಂಖ್ಯೆಯನ್ನು ಸೂಚಿಸುವ.
 • ಸಂಖ್ಯೆಯ; ಅಂಕಿಯ.

Search Dictionaries

Loading Results

Follow Us :   
  Download Bharatavani App
  Bharatavani Windows App