भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

numerate

ಗುಣವಾಚಕ

ಗಣಿತಜ್ಞ(ನಾದ); ಗಣಿತದ ಮೂಲಸೂತ್ರಗಳನ್ನು ಅರಿತ, ತಿಳಿದುಕೊಂಡಿರುವ.

numerate

ಸಕರ್ಮಕ ಕ್ರಿಯಾಪದ

  • ಎಣಿಸು; ಗಣಿಸು.
  • ಅಂಕಿಗಳನ್ನು ಪದಗಳನ್ನು ಬರೆ ಯಾ ಪದಗಳಾಗಿ ಓದು; ಅಂಕಿಗಳಲ್ಲಿರುವುದನ್ನು ಪದರೂಪದಲ್ಲಿ ಬರೆ ಯಾ ಓದು.

numeration

ನಾಮವಾಚಕ

    1. ಎಣಿಕೆ; ಗಣನೆ; ಎಣಿಸುವ ವಿಧಾನ ಯಾ ಪ್ರಕ್ರಿಯೆ.
    2. ಲೆಕ್ಕಾಚಾರ; ಗಣನ; ಎಣಿಕೆ (ಮಾಡುವುದು).
  • (ಅಂಕಗಣಿತ) ಅಂಕಲೇಖನ; ಸಂಖ್ಯಾಲೇಖನ; ಅಂಕಿಗಳಲ್ಲಿ ಬರೆದಿರುವುದನ್ನು ಪದಗಳಾಗಿ, ಪದಗಳ ರೂಪದಲ್ಲಿ ಓದುವುದು ಯಾ ಬರೆಯುವುದು.
  • ಅಂಕನ; ವಸ್ತು, ವ್ಯಕ್ತಿ, ಮೊದಲಾದವರಿಗೆ ಸಂಖ್ಯೆಗಳನ್ನು ಕೊಡುವುದು ಯಾ ಕೊಡುವ ವಿಧಾನ.

numeration table

ನಾಮವಾಚಕ

ಅಂಕನಕೋಷ್ಟಕ; ಅಂಕನ ಪದ್ಧತಿಯಲ್ಲಿ ಅಂಕಿಯ ಸ್ಥಾನಕ್ಕೆ ಅನುಗುಣವಾದ ಅದರ ಬೆಲೆಯನ್ನು ತೋರಿಸುವ ಕೋಷ್ಟಕ.

numerator

ನಾಮವಾಚಕ

  • (ಗಣಿತ) ಅಂಶ; ಭಿನ್ನರಾಶಿಯಲ್ಲಿ ಅಡ್ಡಗೆರೆಯ ಮೇಲಿನ ಸಂಖ್ಯೆ (ಉದಾಹರಣೆಗೆ $\frac{ 2}{ 3}$ರಲ್ಲಿ 2).
  • ಗಣಕ; ಎಣಿಸುವವನು.
  • ಅಂಕನಕಾರ; ಸಂಖ್ಯಾಕಾರ; ಸಂಖ್ಯೆಯನ್ನು ಗುರುತುಮಾಡುವ ವ್ಯಕ್ತಿ ಯಾ ಸಾಧನ.

numeric

ಗುಣವಾಚಕ

= numerical.

numerical

ಗುಣವಾಚಕ

ಸಂಖ್ಯಾತ್ಮಕ; ಸಂಖ್ಯೆಗಳಲ್ಲಿ ವ್ಯಕ್ತಪಡಿಸಿದ; ಸಂಖ್ಯೆಯ ಯಾ ಸಂಖ್ಯೆಗೆ, ಸಂಖ್ಯೆಗಳಿಗೆ ಸಂಬಂಧಿಸಿದ.

numerical analysis

ನಾಮವಾಚಕ

(ಗಣಿತ) ಸಂಖ್ಯಾತ್ಮಕ ವಿಶ್ಲೇಷಣೆ; ಸಮಸ್ಯೆಗಳ ಪರಿಹಾರಕ್ಕೆ ಸಂಖ್ಯಾತ್ಮಕ ವಿಧಾನಗಳನ್ನು ರೂಪಿಸುವ ಮತ್ತು ಬಳಸುವ ಗಣಿತಶಾಖೆ.

numerically

ಕ್ರಿಯಾವಿಶೇಷಣ

ಸಂಖ್ಯಾತ್ಮಕವಾಗಿ; ಸಂಖ್ಯೆಗಳಲ್ಲಿ ವ್ಯಕ್ತಪಡಿಸುವಂತೆ.

numerological

ಗುಣವಾಚಕ

  • ಸಂಖ್ಯಾರಹಸ್ಯಶಾಸ್ತ್ರಕ್ಕೆ ಸಂಬಂಧಿಸಿದ.
  • ಸಂಖ್ಯಾಭವಿಷ್ಯದ.

numerologist

ನಾಮವಾಚಕ

  • ಸಂಖ್ಯಾರಹಸ್ಯಶಾಸ್ತ್ರಜ್ಞ.
  • ಸಂಖ್ಯಾಜ್ಯೋತಿಷಿ; ಸಂಖ್ಯಾಭವಿಷ್ಯವಾದಿ.

numerology

ನಾಮವಾಚಕ

  • ಸಂಖ್ಯಾ ಭವಿಷ್ಯ(ಜ್ಞಾನ); ಸಂಖ್ಯೆಯ ಮೂಲಕ ಕಣಿ ಹೇಳುವುದು.
  • ಸಂಖ್ಯಾ ರಹಸ್ಯ(ಶಾಸ್ತ್ರ); ಸಂಖ್ಯೆಗಳ ನಿಗೂಢ ಅರ್ಥವನ್ನು ಕುರಿತ ಶಾಸ್ತ್ರ.

numerous

ಗುಣವಾಚಕ

  • (ಬಹುವಚನದ ಜೊತೆಗೆ) ಬಹಳ; ಅನೇಕ: he received numerous gifts ಅವನಿಗೆ ಅನೇಕ ಉಡುಗೊರೆಗಳು ದೊರೆತವು.
  • ಬಹುಸಂಖ್ಯಾಕ; ಅನೇಕ ಘಟಕ ಯಾ ಅಂಶಗಳುಳ್ಳ: a numerous library ಬಹು ಪುಸ್ತಕಗಳುಳ್ಳ ಗ್ರಂಥಭಂಡಾರ.
    1. (ಪ್ರಾಚೀನ ಪ್ರಯೋಗ) ಅನೇಕರಿಂದ – ಬರುವ, the numerous voices of the people ಬಹು ಕಂಠಗಳ ಧ್ವನಿ, ವಾಣಿ.
    2. ಕಿಕ್ಕಿರಿದ; ತುಂಬಿದ; ಜನಭರಿತ: numerous gathering ಕಿಕ್ಕಿರಿದ ಸಭೆ.
  • (ಪದ್ಯ ಯಾ ಗದ್ಯದ ವಿಷಯದಲ್ಲಿ) ಲಯಬದ್ಧ; ಸುಶ್ರಾವ್ಯ: numerous verse ಸುಶ್ರಾವ್ಯ ಕಾವ್ಯ.

numerously

ಕ್ರಿಯಾವಿಶೇಷಣ

ಬಹಳವಾಗಿ; ಅನೇಕವಾಗಿ; ಬಹುಸಂಖ್ಯೆಯಿಂದ ಕೂಡಿ.

numerousness

ನಾಮವಾಚಕ

ಬಾಹುಳ್ಯ; ಬಹುಸಂಖ್ಯೆಯಿಂದ ಕೂಡಿರುವಿಕೆ.

numina

ನಾಮವಾಚಕ

numen ಎಂಬುದರ ಬಹುವಚನ.

numinous

ಗುಣವಾಚಕ

  • ದೈವಿಕ; ದೈವ ಪ್ರೇರಿತ.
  • ಆಧ್ಯಾತ್ಮಿಕ; ಪಾರಮಾರ್ಥಿಕ; ಅತಿ ಮಾನುಷ.
  • ಗಂಭೀರವಾದ; ಭಯಭಕ್ತಿ ಹುಟ್ಟಿಸುವ.
  • (ಯಾವುದೇ ಸ್ಥಳದ ಯಾ ವಸ್ತುವಿನ) ಅಧಿದೇವತೆಯ; ಅಭಿಮಾನಿ ದೇವತೆಯ ಯಾ ಅಭಿಮಾನಿ ದೇವತೆಯಂಥ.
  • ಜಾಗ್ರತ; ದೇವತಾ ಸಾನ್ನಿಧ್ಯವಿರುವ.

numismatic

ಗುಣವಾಚಕ

  • ನಾಣ್ಯಗಳ; ನಾಣ್ಯ ರಚನೆಯ; ಟಂಕ ವಿಷಯಕ.
  • ನಾಣ್ಯ ಸಂಬಂಧಿ; ನಾಣ್ಯಗಳ ಯಾ ಅವುಗಳಂತಿರುವ ಪದಕಗಳಿಗೆ ಸಂಬಂಧಿಸಿದ.

numismatically

ಕ್ರಿಯಾವಿಶೇಷಣ

ನಾಣ್ಯಗಳಿಗೆ ಸಂಬಂಧಿಸಿದಂತೆ; ನಾಣ್ಯರಚನೆಗೆ ಸೇರಿದ ಹಾಗೆ.

numismatics

ನಾಮವಾಚಕ

(ಬಹುವಚನ) (ಸಾಮಾನ್ಯವಾಗಿ ಏಕವಚನವಾಗಿ ಪರಿಗಣಿಸಲಾಗಿದೆ) ನಾಣ್ಯವಿದ್ಯೆ; ನಾಣ್ಯಶಾಸ್ತ್ರ; ನಾಣ್ಯಗಳ ಯಾ ಪದಕಗಳ ಅಧ್ಯಯನ.

Search Dictionaries

Loading Results

Follow Us :   
  Download Bharatavani App
  Bharatavani Windows App