भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

numismatist

ನಾಮವಾಚಕ

  • ನಾಣ್ಯ ಪರಿಣತ; ನಾಣ್ಯಶಾಸ್ತ್ರಜ್ಞ; ನಾಣ್ಯಪಂಡಿತ.
  • ನಾಣ್ಯ ಸಂಗ್ರಾಹಕ; ನಾಣ್ಯ ಸಂಗ್ರಹಕಾರ, ಹಳೆಯ ನಾಣ್ಯಗಳನ್ನು ಯಾ ಪದಕಗಳನ್ನು ಸಂಗ್ರಹಿಸುವವನು.

numismatology

ನಾಮವಾಚಕ

= numismatics.

nummary

ಗುಣವಾಚಕ

ನಾಣ್ಯದ:

  • ನಾಣ್ಯ ಸಂಬಂಧಿ; ನಾಣ್ಯಕ್ಕೆ (ನಾಣ್ಯಗಳಿಗೆ) ಸಂಬಂಧಿಸಿದ.
  • ನಾ ವ್ಯವಹಾರದ; ನಾಣ್ಯದಲ್ಲಿ ವ್ಯವಹರಿಸುವ.

nummulite

ನಾಮವಾಚಕ

ನಮ್ಯುಲೈಟ್‍; ಟರ್ಷಿಯರಿ ಸ್ತರದಲ್ಲಿ ಸಿಕ್ಕುವ, ತಟ್ಟೆಯಾಕಾರದ, ಪ್ರೋಟೋಸೊವಗಳಿಂದ ರೂಪುಗೊಂಡ, ರಂಧ್ರಗಳುಳ್ಳ ಹಾಸಿಲು ಚಿಪ್ಪು.

numnah

ನಾಮವಾಚಕ

ಜೀನು – ಬಟ್ಟೆ, ಮೆತ್ತೆ; ಕುದುರೆಯ ಜೀನಿನ ತಳಗಡೆ ಹಾಕುವ ಮೆತ್ತೆ.

numskull

ನಾಮವಾಚಕ

  • ದಡ್ಡ; ಗುಗ್ಗು.
  • ದಡ್ಡನ ತಲೆ.

nun

ನಾಮವಾಚಕ

ಪದಗುಚ್ಛ

nun’s cloth (or veiling)(ಉಡುಪಿಗೆ ಉಪಯೋಗಿಸುವ) ತೆಳ್ಳನೆಯ ಉಣ್ಣೆಯ ಬಟ್ಟೆ.

  • ಕ್ರೈಸ್ತ ಸಂನ್ಯಾಸಿನಿ; ಬಡತನ, ಬ್ರಹ್ಮಚರ್ಯೆ, ವಿಧೇಯತೆ, ಮೊದಲಾದವನ್ನು ಪಾಲಿಸುತ್ತ ಚರ್ಚಿನ ಮಠದಲ್ಲಿ ವಾಸಿಸುವ ಸಂನ್ಯಾಸಿನಿ.
  • ನನ್‍:
    1. ನೀಲಿ ಟಿಟ್‍ ಹಕ್ಕಿ.
    2. ಸ್ಮ್ಯೂ (smew); ಮೀನು ಹಿಡಿಯುವ ಒಂದು ಜಾತಿಯ ಬಾತು.

nun-buoy

ನಾಮವಾಚಕ

ಮಧ್ಯವೃತ್ತ ಪ್ಲಾವಕ; ನಡುವೆ ವೃತ್ತಾಕಾರವಾಗಿದ್ದು ಎರಡು ತುದಿಗಳ ಕಡೆಗೂ ಚೂಪಾಗುತ್ತಾ ಹೋಗುವ ತೇಲುವೆ; ದುಂಡುಮಧ್ಯದ ತೇಲುವೆ.

nunatak

ನಾಮವಾಚಕ

(ಮುಖ್ಯವಾಗಿ ಗ್ರೀನ್‍ಲೆಂಡ್‍ ಮೊದಲಾದ ಕಡೆಗಳಲ್ಲಿ) ಹಿಮನೆಲದ ಮೇಲೆ ಎದ್ದು ನಿಂತ ಬಂಡೆಯ ತುದಿ ಯಾ ಕೋಡುಗಲ್ಲು.

nunc dimittis

ನಾಮವಾಚಕ

ಪದಗುಚ್ಛ

sing nunc dimittis ಪರಲೋಕ ಯಾತ್ರೆಗೆ ಮನಃಪೂರ್ವಕ ಸಿದ್ಧವಾಗಿರು.

  • (ಬೈಬಲ್ಲಿನ ಲ್ಯೂಕ್‍ ಸುವಾರ್ತೆಯ 2:29-32ರಲ್ಲಿ ಬರುವ) “ನಂಕ್‍ ಡಿಮಿಟಿಸ್‍” ಎಂದು ಪ್ರಾರಂಭವಾಗುವ, ಸ್ತೋತ್ರದಂತೆ ಬಳಸುವ, ಸೈಮನ್ನನ ದೇವತಾ ಪ್ರಾರ್ಥನೆ.
  • ನಿರ್ಗಮನಾನುಜ್ಞೆ; ಹೊರಡಹುದೆಂಬ ಅಪ್ಪಣೆ.

nunciature

ನಾಮವಾಚಕ

  • (ರೋಮನ್‍ ಕ್ಯಾಥೊಲಿಕ್‍, ಚರ್ಚ್‍) ಪೋಪ್‍ ಗುರುವಿನ ನಿಯೋಗಿ ಯಾ ರಾಯಭಾರಿ ಹುದ್ದೆ ಯಾ ಪದವಿ.
  • ಪರದೇಶದಲ್ಲಿ ಪೋಪ್‍ ಗುರುವನ್ನು ಪ್ರತಿನಿಧಿಸುವ ರಾಯಭಾರಿಯ ಹುದ್ದೆಯ ಅವಧಿ.

nuncio

ನಾಮವಾಚಕ

(ಬೇರೊಂದು ದೇಶದಲ್ಲಿ) ಪೋಪ್‍ ಗುರುವಿನ ರಾಯಭಾರಿ ಯಾ ನಿಯೋಗಿ.

nuncupate

ಸಕರ್ಮಕ ಕ್ರಿಯಾಪದ

ಉಯಿಲನ್ನು (ಬರವಣಿಗೆಯಲ್ಲಿಡದೆ) ಬಾಯಲ್ಲೇ ದೃಢೀಕರಿಸಿ ಹೇಳು, ತಿಳಿಯಪಡಿಸು.

nuncupation

ನಾಮವಾಚಕ

(ಉಯಿಲನ್ನು) ಬಾಯಲ್ಲೇ ದೃಢೀಕರಿಸಿ ತಿಳಿಸುವುದು.

nuncupative

ಗುಣವಾಚಕ

(ಉಯಿಲನ್ನು) ಬಾಯಲ್ಲೇ ದೃಢೀಕರಿಸಿ ಹೇಳಿದ.

nunhood

ನಾಮವಾಚಕ

(ಕ್ರೈಸ್ತ) ಸಂನ್ಯಾಸಿನಿತನ.

nunlike

ಗುಣವಾಚಕ

(ಕ್ರೈಸ್ತ) ಸಂನ್ಯಾಸಿನಿಯಂಥ; ಸಂನ್ಯಾಸಿನಿಯ ರೀತಿಯ.

nunnery

ನಾಮವಾಚಕ

(ಕ್ರೈಸ್ತ) ಸಂನ್ಯಾಸಿನಿಯರ ಮಠ, ನಿವಾಸ.

nunnish

ಗುಣವಾಚಕ

= nunlike.

nunship

ನಾಮವಾಚಕ

= nunhood.

Search Dictionaries

Loading Results

Follow Us :   
  Download Bharatavani App
  Bharatavani Windows App