भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

NUPE

ಸಂಕ್ಷಿಪ್ತ

(ಯುನೈಟೆಡ್‍ ಕಿಂಗ್ಡಮ್‍ನಲ್ಲಿ) National Union of Public Employees.

nuptial

ಗುಣವಾಚಕ

ಮದುವೆಯ; ವಿವಾಹದ; ವಿವಾಹ ಸಂಬಂಧದ.

nuptial

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) ಮದುವೆ; ವಿವಾಹ.

NUR

ಸಂಕ್ಷಿಪ್ತ

(ಯುನೈಟೆಡ್‍ ಕಿಂಗ್ಡಮ್‍ನಲ್ಲಿ) National Union of Railwaymen.

nurd

nerd ಪದದ ರೂಪಾಂತರ.

nurse

ನಾಮವಾಚಕ

ಪದಗುಚ್ಛ

  • ದಾದಿ; ಆಯ; ರೋಗಿಗಳ, ಅಶಕ್ತರ ಉಪಚಾರದಲ್ಲಿ ವೈದ್ಯರಿಗೆ ನೆರವಾಗುವ, ತರಬೇತು ಪಡೆದಿರುವ ವ್ಯಕ್ತಿ.
  • ಧಾತ್ರಿ ಮಕ್ಕಳ ದಾದಿ; ಚಿಕ್ಕ ಮಕ್ಕಳ ಯೋಗಕ್ಷೇಮ ಮಾತ್ರ ನೋಡಿಕೊಳ್ಳುವ ದಾದಿ.
  • (ಪ್ರಾಚೀನ ಪ್ರಯೋಗ) ಸ್ತನ್ಯ ದಾದಿ; ಮೊಲೆಯೂಡುವ ದಾದಿ; ಬೇರೆಯವರ ಮಗುವಿಗೆ ಮೊಲೆಯೂಡಿಸಿ ಆರೈಕೆ ಮಾಡಲು ನೇಮಿತಳಾದ ಹೆಂಗಸು (= wetnurse).
  • (ಅರಣ್ಯ ವಿಜ್ಞಾನ) ಪೋಷಕ, ಆಶ್ರಯ – ವೃಕ್ಷ; ಇತರ ಸಸ್ಯಗಳಿಗೆ ಆಶ್ರಯ ನೀಡುವುದಕ್ಕಾಗಿಯೇ ಬೆಳೆಸಿದ ಮರ.
  • (ಪ್ರಾಣಿವಿಜ್ಞಾನ) ಪೋಷಕ ಕೀಟ; ಕೆಲಸಗಾರ ಕೀಟ; ಕೀಟದ ಮರಿಗಳನ್ನು ಪೋಷಿಸುವ, ಲೈಂಗಿಕ ದೋಷವಿರುವ ಜೇನುನೊಣ, ಕೀಟ, ಇತ್ಯಾದಿ.
  • ಪೋಷಕ; ಒಂದು ವಿಶಿಷ್ಟ ಗುಣ ಮೊದಲಾದವನ್ನು ಬೆಳೆಸುವ ದೇಶ ಮೊದಲಾದವು: the nurd of liberty ಸ್ಪಾತಂತ್ರದ ಪೋಷಕ.
  • ಪೋಷಣೆ; ಆರೈಕೆ.
  • ಮೊಲೆಯೂಡುವುದು ಯಾ ಮೊಲೆಯೂಡಿಸಲ್ಪಡುವುದು.

nurse

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ರೋಗಿಗೆ) ಶುಶ್ರೂಷೆ, ಆರೈಕೆ – ಮಾಡು.
  • (ಕಾಯಿಲೆ, ಗಾಯವಾದ ದೇಹದ ಅಂಗ, ಮೊದಲಾದವನ್ನು) ವಾಸಿಮಾಡಿಕೊಳ್ಳಲು ಯತ್ನಿಸು.
  • (ಮಗುವಿಗೆ) ಮೊಲೆಯುಣಿಸು; ಸ್ತನ್ಯ ಕೊಡು; ಮೊಲೆಯೂಡಿಸುವ ದಾದಿಯಾಗಿರು.
  • (ಕರ್ಮಣಿಪ್ರಯೋಗದಲ್ಲಿ) (ಒಂದು ನಿರ್ದಿಷ್ಟ ಸ್ಥಿತಿಯಲ್ಲಿ) ಬೆಳಸಲಾಗಿರು: nursed in pomp and pleasure ಸುಖಸಂಪತ್ತಿನಲ್ಲಿ ಬೆಳಸಿದ. nursed in poverty ಬಡತನದಲ್ಲಿ ಬೆಳಸಿದ.
  • (ಎಚ್ಚರಿಕೆಯಿಂದ ಯಾ ಪ್ರೀತಿಯಿಂದ) ಹಿಡಿದುಕೊ ಯಾ ಅಪ್ಪಿಕೊಂಡು ಮುದ್ದಾಡು: sat nursing my feet ನನ್ನ ಕಾಲುಗಳನ್ನು ಅಪ್ಪಿಕೊಂಡು ಕುಳಿತ(ಳು).
  • (ಸಸ್ಯಗಳು, ಕಲೆಗಳು, ಮೊದಲಾದವನ್ನು) ಬೆಳಸು; ಪೋಷಿಸು; ಅಭಿವರ್ಧಿಸು; ಅಭಿವೃದ್ಧಿಪಡಿಸು.
  • (ಕೊರಗು, ದ್ವೇಷ, ಮೊದಲಾದವನ್ನು) ಬೆಳಸು; ಪೋಷಿಸು: to nurse a grudge ಮನಸ್ಸಿನಲ್ಲಿ ಜಿದ್ದಿಟ್ಟುಕೊ.
  • ಎಚ್ಚರಿಕೆಯಿಂದ ನೋಡಿಕೊ; ಗಮನವಿಟ್ಟು ನೋಡಿಕೊ; ವಿಶೇಷ ಗಮನ ಕೊಡು: nurse the voters ಮತಕ್ಷೇತ್ರದ ವಿಶ್ವಾಸವನ್ನು ಹಿಡಿದಿಟ್ಟುಕೊ; ಮತದಾರರನ್ನು ಸದಾ ಓಲೈಸುತ್ತಾ, ಉಪಚರಿಸುತ್ತಾ (ತನ್ನಲ್ಲಿ) ವಿಶ್ವಾಸವುಳ್ಳವರನ್ನಾಗಿ ಮಾಡಿಕೊ, ಇಟ್ಟುಕೊ. to nurse the borough cost him Rs. 50,000/- a year ತನ್ನ ಕ್ಷೇತ್ರದ ಮತದಾರರನ್ನು ವಿಶ್ವಾಸದಲ್ಲಿಟ್ಟುಕೊಳ್ಳಲು ಅವನಿಗೆ ಪ್ರತಿವರ್ಷ 50,000/- ರೂಪಾಯಿಗಳ ಖರ್ಚು ತಗುಲಿತು.
  • (ಬಿಲ್ಯರ್ಡ್ಸ್‍) ಆಟಗಾರನ ಚೆಂಡಿನಿಂದ ಒಂದಾದ ಮೇಲೊಂದು ಚೆಂಡು ಹೊಡೆಯಲಾಗುವಂತೆ (ಚೆಂಡುಗಳನ್ನು) ಕ್ರಮದಲ್ಲಿ ಸೇರಿಸಿ ಇಟ್ಟಿರು.

nurse

ನಾಮವಾಚಕ

ಹವು ಬಗೆಯ ದೊಡ್ಡ ದೊಡ್ಡ ಷಾರ್ಕ್‍(ಮೀನು) ಜಾತಿ.

nurse-child

ನಾಮವಾಚಕ

ಸಾಕುಮಗು; ಸಾಕಿದ ಮಗು.

nurse-frog

ನಾಮವಾಚಕ

ಪೋಷಕ – ಕಪ್ಪೆ, ಮಂಡೂಕ; ಇನ್ನೂ ಮರಿಯಾಗದಿರುವ ಮೊಟ್ಟೆಗಳನ್ನು ಹೊರುವ, ಒಂದು ಜಾತಿಯ ಗಂಡು ಕಪ್ಪೆ.

nurse-hound

ನಾಮವಾಚಕ

ಚಿಕ್ಕ ಷಾರ್ಕ್‍ ಮೀನು.

nurseling

ನಾಮವಾಚಕ

= nursling.

nursemaid

ನಾಮವಾಚಕ

  • ದಾದಿ; ಮಗುವನ್ನು ಯಾ ಮಕ್ಕಳನ್ನು ನೋಡಿಕೊಳ್ಳುವ ಹೆಂಗಸು.
  • (ರೂಪಕವಾಗಿ) ಪೋಷಕ; ಇನ್ನೊಬ್ಬರನ್ನು ಎಚ್ಚರಿಕೆಯಿಂದ, ಆದರದಿಂದ ನೋಡಿಕೊಳ್ಳುವ ವ್ಯಕ್ತಿ.

nursery

ನಾಮವಾಚಕ

ಪದಗುಚ್ಛ

nursery cannon = nursery(೪).

    1. ಕೂಸುಕೋಣೆ; ಮಕ್ಕಳಿಗೂ ಅವರ ದಾದಿಯರಿಗೂ ಗೊತ್ತುಮಾಡಿರುವ ಕೋಣೆ.
    2. = day nursery.
  • ನರ್ಸರಿ; ಸಸಿತೋಟ; ಸಸ್ಯೋದ್ಯಾನ; ಮುಖ್ಯವಾಗಿ ಮಾರಾಟಕ್ಕಾಗಿ ಯಾ ಬೇರೆ ಕಡೆ ನೆಡುವುದಕ್ಕಾಗಿ ಗಿಡಗಳನ್ನು ಯಾ ಸಸ್ಯಗಳನ್ನು ಬೆಳೆಸಿ ಸಾಕುವ ಸ್ಥಳ.
  • ಪೋಷಣಸ್ಥಾನ, ಮಂದಿರ; ಕೆಲವು ವಿಶಿಷ್ಟ ಗುಣಗಳನ್ನಾಗಲಿ, ಕೆಲವು ವರ್ಗದ ಜನರನ್ನಾಗಲಿ ಪೋಷಿಸುವ, ಬೆಳೆಸುವ – ಪದ್ಧತಿ, ಸಂಸ್ಥೆ, ಕ್ಷೇತ್ರ, ಸ್ಥಳ.
  • (ಬಿಲ್ಯರ್ಡ್ಸ್‍ ಆಟ)
    1. ಚೆಂಡುಗುಂಪು; ಆಟಗಾರನ ಚೆಂಡಿನಿಂದ ಒಂದಾದ ಮೇಲೊಂದನ್ನು ಹೊಡೆಯಲು ಕ್ರಮವಾಗಿ ಸೇರಿಸಿಟ್ಟುಕೊಂಡ ಚೆಂಡುಗಳ ಗುಂಪು.
    2. ಹತ್ತಿರ ಹತ್ತಿರವಿರುವ ಮೂರು ಚೆಂಡುಗಳ ಬಡಿತ.
  • ಮೀನು ಸಾಕುವ ಕೊಳ.
  • ಪ್ರಾಣಿವರ್ಧನ ಕೇಂದ್ರ; ಪ್ರಾಣಿಗಳನ್ನು ಅಭಿವೃದ್ಧಿಗೊಳಿಸುವ ಸ್ಥಳ.

nursery nurse

ನಾಮವಾಚಕ

ಮಕ್ಕಳ ದಾದಿ; ಶಿಶು ದಾದಿ; ಚಿಕ್ಕ ಮಕ್ಕಳ ಆರೈಕೆ ಮಾಡಲು ತರಬೇತಿ ಪಡೆದ ದಾದಿ.

nursery rhyme

ನಾಮವಾಚಕ

ಶಿಶು – ಪ್ರಾಸ, ಗೀತೆ; ಮಕ್ಕಳ ಹಾಡು; ಮಕ್ಕಳಿಗೋಸ್ಕರ ಪ್ರಾಸಬದ್ಧವಾಗಿ ರಚಿಸಿದ ಸರಳ ಸಾಂಪ್ರದಾಯಿಕ ಹಾಡು ಯಾ ಕಥನ ಕವನ.

nursery school

ನಾಮವಾಚಕ

ಬಾಲವನ; ಬಾಲವಾಡಿ; ಶಿಶುವಿಹಾರ; ನರ್ಸರಿ ಶಾಲೆ; ಮೂರರಿಂದ ಐದು ವರ್ಷದೊಳಗಿನ ಮಕ್ಕಳ ಶಾಲೆ.

nursery slopes

ನಾಮವಾಚಕ

(ಸ್ಕೀಯಿಂಗ್‍ ಆಟ) ತರಬೇತಿ ಇಳಿಜಾರು; ಹೊಸದಾಗಿ ಕಲಿಯುವವರಿಗಾಗಿ ಸಿದ್ಧಪಡಿಸಿದ ಇಳಿಜಾರು.

nursery stakes

ನಾಮವಾಚಕ

ಕುದುರೆ ಮರಿ ಪಂದ್ಯ; ಎರಡು ವರ್ಷ ವಯಸ್ಸಿನ ಕುದುರೆಗಳ ರೇಸು, (ಓಟದ) ಪಂದ್ಯ.

nurseryman

ನಾಮವಾಚಕ

  • ಸಸಿತೋಟದ ಯಾ ಸಸ್ಯೋದ್ಯಾನದ – ಮಾಲಿ, ಕೆಲಸಗಾರ.
  • ಸಸಿ ತೋಟದ ಮಾಲೀಕ; ಸಸಿಗಳ ಮಾರಾಟಗಾರ.

Search Dictionaries

Loading Results

Follow Us :   
  Download Bharatavani App
  Bharatavani Windows App