भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

nursing

ನಾಮವಾಚಕ

  • ಆರೈಕೆ, ಪೋಷಣೆ – ಮಾಡುವುದು; ರೋಗಿಗಳನ್ನು ದಾದಿಯಾಗಿ ನೋಡಿಕೊಳ್ಳುವುದು ಯಾ ಹಾಗೆ ಶುಶ್ರೂಷೆ ಮಾಡುವ ವೃತ್ತಿ.
  • ಮೊಲೆಯೂಡಿಸಿ ಆರೈಕೆ ಮಾಡುವುದು.
  • ಯೋಗಕ್ಷೇಮ ನೋಡಿಕೊಳ್ಳುವಿಕೆ.
  • ಸಾಕಿ ಸಲಹುವಿಕೆ.
  • ಬೆಳಸಿ ಒಪ್ಪ ಮಾಡುವುದು.

nursing father

ನಾಮವಾಚಕ

ಸಾಕುತಂದೆ.

nursing home

ನಾಮವಾಚಕ

ನರ್ಸಿಂಗ್‍ ಹೋಂ; ಶುಶ್ರೂಷಾಗೃಹ; ರೋಗೋಪಚಾರ ಗೃಹ; ಶಸ್ತ್ರಚಿಕಿತ್ಸೆ, ರೋಗಿಗಳ ಉಪಚಾರ, ಮೊದಲಾದವುಗಳಿಗೆ ಇಟ್ಟಿರುವ ಖಾಸಗಿ ಆಸ್ಪತ್ರೆ.

nursing mother

ನಾಮವಾಚಕ

  • ಸಾಕುತಾಯಿ.
  • ಪೋಷಕ ದಾದಿ; ಮೊಲೆಯೂಡಿಸಿ ಆರೈಕೆ ಮಾಡುವ ದಾದಿ.

nursing officer

ನಾಮವಾಚಕ

ಹಿರಿಯ ದಾದಿ, ನರ್ಸ್‍.

nursling

ನಾಮವಾಚಕ

ಪದಗುಚ್ಛ

(ಮುಖ್ಯವಾಗಿ ಅದಕ್ಕೆ ಮೊಲೆಯುಣಿಸುವ ದಾದಿಯ ಸಂಬಂಧದಲ್ಲಿ) ಕೂಸು; ಶಿಶು. nursling of (ವ್ಯಕ್ತಿ ಯಾ ವಸ್ತುವಿನ ವಿಷಯದಲ್ಲಿ ಯಾವುದೋ ಒಂದು ಸಂದರ್ಭ, ಘಟನೆ, ವ್ಯಕ್ತಿ, ಮೊದಲಾದವರಿಂದ) ಬೆಳೆಸಲಾದ; ಪೋಷಿಸಲಾದ.

nurture

ನಾಮವಾಚಕ

  • (ಮುಖ್ಯವಾಗಿ ಮಕ್ಕಳ) ಪಾಲನೆ; ಆರೈಕೆ; ಸಾಕುವುದು, ಬೆಳಸುವುದು ಯಾ ತರಬೇತು, ಶಿಕ್ಷಣ ಕೊಡುವುದು.
  • ಆರೈಕೆ; ಪೋಷಣೆ; ಪುಷ್ಟಿ ಕೊಡುವಂಥ ಆಹಾರ.
  • ಸಾಮಾಜಿಕ – ಪ್ರಭಾವ, ಪರಿಣಾಮ, ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಯಾ ವ್ಯಕ್ತಿತ್ವವನ್ನು ನಿರ್ಧರಿಸುವ ಸಾಮಾಜಿಕ ಅಂಶಗಳು.

nurture

ಸಕರ್ಮಕ ಕ್ರಿಯಾಪದ

  • ಸಾಕು; ಬೆಳಸು,
  • ಪೋಷಿಸು; ಪಾಲನೆ, ಆರೈಕೆ – ಮಾಡು.
  • ತರಬೇತು, ಶಿಕ್ಷಣ – ಕೊಡು.

nurturer

ನಾಮವಾಚಕ

ಪೋಷಕ; ಸಾಕುವವ; ಪೋಷಿಸುವವ; ಆರೈಕೆ ಮಾಡುವವ.

NUS

ಸಂಕ್ಷಿಪ್ತ

(ಯುನೈಟೆಡ್‍ ಕಿಂಗ್ಡಮ್‍ನಲ್ಲಿ)

  • National Union of Seamen.
  • National Union of Students.

NUT

ಸಂಕ್ಷಿಪ್ತ

(ಯುನೈಟೆಡ್‍ ಕಿಂಗ್ಡಮ್‍ನಲ್ಲಿ) National Union of Teachers.

nut

ನಾಮವಾಚಕ

ಪದಗುಚ್ಛ

    1. ಕರಟಕಾಯಿ; ಗಡುಸಾದ ಯಾ ಮೆತುವಾದ ಚಿಪ್ಪಿನೊಳಗಡೆ ಆಹಾರಯೋಗ್ಯ ತಿರುಳಿರುವ ಕಾಯಿ, ಹಣ್ಣು.
    2. ಈ ಕರಟ.
  • ಗಟ್ಟಿ ಬೀಜವಿರುವ ಬೀಜಕೋಶ.
  • ನಟ್ಟು; ಬೋಲ್ಟನ್ನು ಹಾಕಿ ತಿರುಗಿಸುವಂತೆ, ರಂಧ್ರದಲ್ಲಿ ತಿರುಪು ಗಾಡಿಗಳುಳ್ಳ, ಸಾಮಾನ್ಯವಾಗಿ ಚಚ್ಚೌಕ ಯಾ ಷಡ್ಭುಜಾಕಾರದ ತಿರುಪು.
  • (ಅಶಿಷ್ಟ) ತಲೆ; ತಲೆಕಾಯಿ ; ತಲೆಬುರುಡೆ.
  • (ಅಶಿಷ್ಟ)
    1. ಹುಚ್ಚ; ತಿಕ್ಕಲ(ಮನುಷ್ಯ).
    2. ಭಕ್ತ; ಕಟ್ಟಾ ಅಭಿಮಾನಿ: ಪ್ರೇಮಿ: an exercise nut ವ್ಯಾಯಾಮದ ಭಕ್ತ, ಕಟ್ಟಾಭಿಮಾನಿ.
  • (ಕಲ್ಲಿದ್ದಲು, ಬೆಣ್ಣೆ, ಮೊದಲಾದವುಗಳ) ಉಂಡೆ; ಮುದ್ದೆ; ತುಣುಕು; ಸಣ್ಣ ತುಂಡು.
    1. ಪಿಟೀಲು ಕಮಾನು ಮೊದಲಾದವುಗಳಲ್ಲಿನ ಕುದುರೆಯ ಜವಿ ಮೊದಲಾದವನ್ನು ಬಿಗಿಸುವ ಯಾ ಸಡಿಲಿಸುವ ಬಿರಡೆ, ಹಿಡಿಕೆ.
    2. (ಪಿಟೀಲು ಮೊದಲಾದ ತಂತಿವಾದ್ಯಗಳಲ್ಲಿನ) ಕುದುರೆ; ತಂತಿಗಳು ಹಾಯುವಂತೆ ವಾದ್ಯದ ಕಂಠದ ತುದಿಯಲ್ಲಿ ನೆಲೆಯಾಗಿ ನಿಲ್ಲಿಸಿರುವ ಕುದುರೆ.
  • (ಬಹುವಚನದಲ್ಲಿ) (ಅಶ್ಲೀಲ ಅಶಿಷ್ಟ) ತರಡು; ತರಡು ಬೀಜ.
  • (ಪ್ರಾಚೀನ ಪ್ರಯೋಗ) (ಅಶಿಷ್ಟ) ಷೋಕೀಲಾಲ; ಸೊಗಸುಗಾರ ಪುಟ್ಟಸಾಮಿ.

nut

ಅಕರ್ಮಕ ಕ್ರಿಯಾಪದ

ಪದಗುಚ್ಛ

ಕರಟಕಾಯಿಗಳನ್ನು – ಹುಡುಕು, ಒಟ್ಟುಮಾಡು, ಆಯು, ಆರಿಸು. to go nutting ಕಾಯಿ ಆಯಲು, ಅರಿಸಲು ಹೋಗು.

nut-brown

ಗುಣವಾಚಕ

(ಸಾಮಾನ್ಯವಾಗಿ ಹುಡುಗಿಯ ಮೈಬಣ್ಣ, ಮದ್ಯದ ಬಣ್ಣ, ಮೊದಲಾದವುಗಳ ವಿಷಯದಲ್ಲಿ) ಬಲಿತ ಹೇಸಲ್‍ ಕಾಯಿ ಬಣ್ಣದ; ಕಂದುಕಾಯಿ ಬಣ್ಣದ.

nut-butter

ನಾಮವಾಚಕ

ಕಾಯಿ ಬೆಣ್ಣೆ; ಕಾಯಿ ಮೊದಲಾದವುಗಳಿಂದ ತಯಾರಿಸಿದ ಬೆಣ್ಣೆ ಮೊದಲಾದ ಆಹಾರ ವಸ್ತುಗಳು.

nut-house

ನಾಮವಾಚಕ

(ಅಶಿಷ್ಟ) ಹುಚ್ಚಾಸ್ಪತ್ರೆ; ಮಾನಸಿಕ ರೋಗಿಗಳ ಆಸ್ಪತ್ರೆ ಯಾ ಶುಶ್ರೂಷಾಲಯ.

nut-meat

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕಾಯಿ ತಿರುಳು; ಕಾಯಿಯೊಳಗಣ ತಿರುಳು.

nut-oil

ನಾಮವಾಚಕ

ಕಾಯೆಣ್ಣೆ; ನಟ್‍ ಎಣ್ಣೆ; ಹೇಸಲ್‍ಕಾಯಿ, ವಾಲ್ನಟ್‍, ಅಕ್ರೋಟ್‍, ಮೊದಲಾದ ಚಿಪ್ಪುಕಾಯಿಗಳಿಂದ ತೆಗೆದ, ರಂಗುಗಳು ಮತ್ತು ವಾರ್ನಿಷ್‍ಗಳಲ್ಲಿ ಬಳಸುವ, ಒಂದು ಬಗೆಯ ಎಣ್ಣೆ.

nut-palm

ನಾಮವಾಚಕ

ಕಾಯಿತಾಳೆ; ಆಸ್ಟ್ರೇಲಿಯದಲ್ಲಿ ಸಿಕ್ಕುವ, ಸೈಕಡೇಸೀ ವಂಶಕ್ಕೆ ಸೇರಿದ, ಖಾದ್ಯಫಲ ಕೊಡುವ, ತಾಳೆಯಂಥ ಮರ.

nut-pine

ನಾಮವಾಚಕ

ಕಾಯಿಪೈನ್‍(ಮರ); ತಿನ್ನಲು ಯೋಗ್ಯವಾದ, ಕರಟಕಾಯಿಯಂಥ ಬೀಜಗಳಿರುವ, ಉತ್ತರ ಅಮೆರಿಕದ ಪೈನ್‍ ಮರ.

Search Dictionaries

Loading Results

Follow Us :   
  Download Bharatavani App
  Bharatavani Windows App