English-Kannada Nighantu (University of Mysore)
University of Mysore
nutritious
ಗುಣವಾಚಕ
ಪೋಷಕ; ಪೌಷ್ಟಿಕ; ಉತ್ತಮ ಪೋಷಣೆ ನೀಡಬಲ್ಲ.
nutritiously
ಕ್ರಿಯಾವಿಶೇಷಣ
ಪೌಷ್ಟಿಕವಾಗಿ; ಪುಷ್ಟಿದಾಯಕವಾಗಿ; ಪುಷ್ಟಿಕರವಾಗುವಂತೆ.
nutritiousness
ನಾಮವಾಚಕ
ಪೌಷ್ಟಿಕತೆ; ಪುಷ್ಟಿದಾಯಕತೆ; ಪುಷ್ಟಿಕರವಾಗುವಂತಿರುವುದು.
nutritive
ಗುಣವಾಚಕ
- ಪೌಷ್ಟಿಕ; ಪೋಷಕ – ಆಹಾರವಾಗಬಲ್ಲ, ಗುಣವುಳ್ಳ.
- ಜೀವ ಪೋಷಣೆಯ; ಜೀವಪೋಷಣೆಗೆ ನೆರವಾಗುವ.
nutritive
ನಾಮವಾಚಕ
ಪೌಷ್ಟಿಕ ಆಹಾರ (ಪದಾರ್ಥ).
nuts
ಗುಣವಾಚಕ
ಪದಗುಚ್ಛ
(ಅಶಿಷ್ಟ) ಹುಚ್ಚುಹಿಡಿದ; ತಿಕ್ಕಲು ಹಿಡಿದ. nuts about (or on)(ಆಡುಮಾತು) (ಒಂದು ವಿಷಯದಲ್ಲಿ)
- ಉತ್ಸಾಹಿಯಾದ; ಉತ್ಸುಕನಾಗಿರುವ.
- ಚತುರ; ಕುಶಲ.
nuts
ಭಾವಸೂಚಕ ಅವ್ಯಯ
(ಅಶಿಷ್ಟ) (ತಿರಸ್ಕಾರ ಯಾ ಅಣಕ ಸೂಚಿಸುವ ಉದ್ಗಾರ) ಥೂ; ಥು: nuts to you ಥೂ ನಿನ್ನ!
nutshell
ನಾಮವಾಚಕ
- ಕಾಯಿ – ಕರಟ, ಚಿಪ್ಪು.
- (ರೂಪಕವಾಗಿ) (ಹೇಳುವುದರಲ್ಲಿ) ಅತ್ಯಂತ ಸಂಗ್ರಹ ರೂಪ; ಸಂಕ್ಷಿಪ್ತ ನಿರೂಪಣೆ; ಬಹಳ ಅಡಕ ರೀತಿ: can give it to you in a nutshell ನಿನಗದನ್ನು ಅಡಕವಾಗಿ ಹೇಳಬಲ್ಲೆ.
nutter
ನಾಮವಾಚಕ
- (ಬ್ರಿಟಿಷ್ ಪ್ರಯೋಗ) (ಅಶಿಷ್ಟ) ಹುಚ್ಚ; ತಿಕ್ಕಲ ಮನುಷ್ಯ.
- ಕಾಯಿ – ಸಂಗ್ರಾಹಕ, ಒಟ್ಟು ಮಾಡುವವನು.
nuttiness
ನಾಮವಾಚಕ
- ಕರಟಕಾಯಿ ಭರಿತತೆ; ಕರಟಕಾಯಿ ತುಂಬಿರುವಿಕೆ.
- ಕರಟಕಾಯಿಯ ರುಚಿಯಂತಿರುವಿಕೆ.
nux vomica
ನಾಮವಾಚಕ
- ಕಾಜವಾರ; ಹೆಮ್ಮುಷ್ಟಿ; ವಿಷಮುಷ್ಟಿ; ಸ್ಟ್ರಿಕ್ನಾಸ್ನಕ್ಸ್ ವಾಮಿಕ ಕುಲಕ್ಕೆ ಸೇರಿದ, ವಿಷ ಹಣ್ಣುಗಳನ್ನು ಬಿಡುವ, ಪೂರ್ವ ಇಂಡಿಯಾದ ಮರ.
- ಸ್ಟ್ರಿಕ್ನೀನ್ ಎಂಬ ಆಲ್ಕಲಾಯ್ಡ್ ಇರುವ ಈ ಮರದ ಬೀಜಗಳು.
nuzzle
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
- ಮೆಲ್ಲಗೆ ಮೂಗಿನಿಂದ ಉಜ್ಜು, ತಿವಿ.
- (ಆತ್ಮಾರ್ಥಕ ಸಹ) ಬೆಚ್ಚಗೆ – ಒಳಗೆ ತೂರಿಕೊ, ಮುದುರಿಕೊಂಡಿರು.
NV
ಸಂಕ್ಷಿಪ್ತ
(ಅಮೆರಿಕ) Nevada (ಅಧಿಕೃತ ಅಂಚೆ ಬಳಕೆಯಲ್ಲಿ ಪ್ರಯೋಗ).
NW
ಸಂಕ್ಷಿಪ್ತ
- north-west.
- northwestern.
NY
ಸಂಕ್ಷಿಪ್ತ
(ಅಮೆರಿಕ) New York (ಅಧಿಕೃತ ಅಂಚೆ ಬಳಕೆಯಲ್ಲಿ ಪ್ರಯೋಗ.)
nyala
ನಾಮವಾಚಕ
inyala ಪದದ ರೂಪಂತರ.
NYC
ಸಂಕ್ಷಿಪ್ತ
New York City.
nyctalopia
ನಾಮವಾಚಕ
ನಿಶಾಂಧತೆ; ಮಬ್ಬುಗುರುಡು; ರಾತ್ರಿಕುರುಡು; ಕತ್ತಲೆಯಲ್ಲಿ ಹಾಗೂ ಮಬ್ಬಿನಲ್ಲಿ ಕಣ್ಣು ಕಾಣದಿರುವುದು (night-blindness ಎಂದೂ ಪ್ರಯೋಗ).
nyctitropic
ಗುಣವಾಚಕ
(ಸಸ್ಯವಿಜ್ಞಾನ) (ಗಿಡಗಳ ಚಲನೆಯ ವಿಷಯದಲ್ಲಿ) ರಾತ್ರ್ಯಾವರ್ತ; ರಾತ್ರಿಯ ವೇಳೆ ನಿಶ್ಚಿತ ದಿಕ್ಕಿಗೆ ತಿರುಗುವ.