English-Kannada Nighantu (University of Mysore)
University of Mysore
nye
ನಾಮವಾಚಕ
nide ಎಂಬುದರ ರೂಪಾಂತರ.
nylghau
ನಾಮವಾಚಕ
= nilgai.
nylon
ನಾಮವಾಚಕ
- ನೈಲಾನ್; ಕೈಗಾರಿಕೆಗಳಲ್ಲಿ, ಬಟ್ಟೆಗಳಲ್ಲಿ, ಹಗ್ಗ ತಯಾರಿಕೆಯಲ್ಲಿ, ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಬಳಸುತ್ತಿರುವ, ದೃಢವೂ ಹಗುರವೂ ಇಲಾಸ್ಟಿಕ್ ಗುಣಗಳನ್ನೂ ಉಳ್ಳ, ಪ್ರೋಟೀನಿನಂಥ ರಚನೆಯುಳ್ಳ ಹಲವಾರು ಸಂಶ್ಲೇಷಿತ ಕೃತಕ ಪಾಲಿ ಅಮೈಡ್ಗಳಲ್ಲಿ ಒಂದು.
- ನೈಲಾನ್ ಬಟ್ಟೆ.
- (ಬಹುವಚನದಲ್ಲಿ) ನೈಲಾನ್(ನಿಂದ ತಯಾರಿಸಿದ) ಕಾಲುಚೀಲಗಳು.
nymph
ನಾಮವಾಚಕ
- ಅಪ್ಸರೆ; (ಕಡಲು, ಹೊಳೆ, ಕಾರಂಜಿ, ಬೆಟ್ಟ, ಕಾಡು, ಮರ ಮೊದಲಾದವುಗಳಲ್ಲಿ ನೆಲೆಸಿರುವ, ಯಾ ಮೇಲ್ತರದ ದೇವತೆಗಳಿಗೆ ಪರಿವಾರವಾಗಿರುವ) ಪುರಾಣದ ಸ್ತ್ರೀ ಉಪದೇವತೆ(ಗಳಲ್ಲೊಬ್ಬಳು).
- (ಕಾವ್ಯಪ್ರಯೋಗ) ಅಪ್ಸರೆ; ಸುಂದರಿ; ಸುಂದರ ತರುಣಿ.
- ನಿಂಹ್; ವಯಸ್ಕ ಕೀಟವನ್ನು ಹೋಲುವ, ಪ್ರಾಯಕ್ಕೆ ಬಂದಿಲ್ಲದ ಕೀಟ.
- ಚಿಕ್ಕ ಕೊಡತಿ ಹುಳು ಯಾ ತೂಕದ ಹುಳು.
nymphae
ನಾಮವಾಚಕ
(ಬಹುವಚನ) (ಅಂಗರಚನಾಶಾಸ್ತ್ರ) ಯೋನಿಯ, ಸ್ತ್ರೀ ಜನನಾಂಗದ ಒಳ ಮಡಿಕೆಗಳು.
nymphal
ಗುಣವಾಚಕ
- ಅಪ್ಸರೆಯರ; ಅಪ್ಸರೆಯರಿಂದ ತುಂಬಿದ; ಅಪ್ಸರೆಯರಿಗೆ ಸೇರಿದ.
- ಕೀಟಕೋಶದಂಥ; ಕೀಟಕೋಶಕ್ಕೆ ಸಂಬಂಧಿಸಿದ.
- ನಿಂಹೀ ಎಂಬ ಜಾತಿಯ ಜಲಸಸ್ಯಗಳಿಗೆ, ನೀರುಗಿಡಗಳಿಗೆ ಸಂಬಂಧಿಸಿದ.
nymphean
ಗುಣವಾಚಕ
ಅಪ್ಸರೆಯಂಥ ಯಾ ಅಪ್ಸರೆಗೆ ಸಂಬಂಧಿಸಿದ.
nymphet
ನಾಮವಾಚಕ
- ಚಿಕ್ಕ ವಯಸ್ಸಿನ ಅಪ್ಸರೆ.
- (ಆಡುಮಾತು) ಅಪ್ಸರೆಯಂಥ ಯಾ ಕಾಮವನ್ನು ಕೆರಳಿಸುವಂಥ ಸುಂದರ ತರುಣಿ.
nymphlike
ಗುಣವಾಚಕ
ಅಪ್ಸರೆಯನ್ನು ಹೋಲುವ; ಅಪ್ಸರೆಯ ಹಾಗಿರುವ.
nympho
ನಾಮವಾಚಕ
(ಆಡುಮಾತು) = 1nymphomaniac.
nympholepsy
ನಾಮವಾಚಕ
ಭಾವೋನ್ಮಾದ; ದುರ್ಲಭ ವಸ್ತುವಿನ ಮೋಹದಿಂದಾದ ಆವೇಶ, ಉನ್ಮಾದ.
nympholept
ನಾಮವಾಚಕ
ಭಾವೋನ್ಮತ್ತ; (ಮುಖ್ಯವಾಗಿ ಒಂದು ಅಸಾಧ್ಯ ಆದರ್ಶಕ್ಕಾಗಿ) ಹುಚ್ಚು ಉತ್ಸಾಹವುಳ್ಳವನು.
nympholeptic
ಗುಣವಾಚಕ
ಭಾವೋನ್ಮಾದದ; ಹುಚ್ಚು, ಉತ್ಸಾಹದಿಂದ ಕೆರಳುವ.
nymphomania
ನಾಮವಾಚಕ
(ಸ್ತ್ರೀಯರ) ಕಾಮೋನ್ಮಾದ; ಅತಿಯಾದ ಕಾಮಾಪೇಕ್ಷೆ.
nymphomaniac
ನಾಮವಾಚಕ
ಕಾವೋನ್ಮತ್ತೆ; ಅತಿಯಾದ ಕಾಮಾಪೇಕ್ಷೆಯುಳ್ಳ ಹೆಂಗಸು.
nymphomaniac
ಗುಣವಾಚಕ
(ಹೆಂಗಸಿನ ವಿಷಯದಲ್ಲಿ) ಕಾಮೋನ್ಮಾದಕ್ಕೆ ಸಂಬಂಧಿಸಿದ.
nystagmic
ಗುಣವಾಚಕ
ಕಣ್ಣದಿರು ರೋಗದ ಯಾ ಅದಕ್ಕೆ ಸಂಬಂಧಿಸಿದ; ಅಕ್ಷಿದೋಲನದ ಯಾ ಅದಕ್ಕೆ ಸಂಬಂಧಿಸಿದ.
nystagmus
ನಾಮವಾಚಕ
ಕಣ್ಣದಿರು ರೋಗ; ಅಕ್ಷಿದೋಲನ; ಗಣಿ ಕೆಲಸಗಾರರಿಗೆ ಸಾಮಾನ್ಯವಾಗಿ ಬರುವ, ಕಣ್ಣುಗುಡ್ಡೆ ಎಡೆಬಿಡದೆ ಅಲುಗುತ್ತಿರುವ, ಒಂದು ಬಗೆಯ ರೋಗ.
NZ
ಸಂಕ್ಷಿಪ್ತ
New Zealand.