भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

nab

ಸಕರ್ಮಕ ಕ್ರಿಯಾಪದ

(ಅಶಿಷ್ಟ) ಹಿಡಿದು ನಿಲ್ಲಿಸು; ದಸ್ತಗಿರಿ ಮಾಡು; ತಪ್ಪಿತ ಮಾಡುತ್ತಿರುವಾಗ ಹಿಡಿದು ಹಾಕು.

nabob

ನಾಮವಾಚಕ

  • (ಚರಿತ್ರೆ) ನವಾಬ; ಮೊಘಲ್‍ ಸಾಮ್ರಾದಲ್ಲಿ ಮುಸಲ್ಮಾನ ಅಧಿಕಾರಿ, ಪ್ರಾಂತ್ಯಾಧಿಕಾರಿ.
  • (ಪ್ರಾಚೀನ ಪ್ರಯೋಗ) ಭೋಗಾಸಕ್ತ ಐಶ್ವರ್ಯವಂತ; (ಮುಖ್ಯವಾಗಿ) ಇಂಡಿಯದಲ್ಲಿ ಐಶ್ವರ್ಯಗಳಿಸಿ ಇಂಗ್ಲೆಂಡಿಗೆ ಹಿಂದಿರುಗಿದವನು.

nacarat

ನಾಮವಾಚಕ

ಉಜ್ವಲ ಕಿತ್ತಳೆ ಕೆಂಪು (ಬಣ್ಣ).

nacelle

ನಾಮವಾಚಕ

ನಸೆಲ್‍:

  • (ವಿಮಾನದಲ್ಲಿ) ಎಂಜಿನ್‍ (ಇರಿಸಿರುವ) ಸಂಪುಟ.
  • ವಾಯುನೌಕೆಯಲ್ಲಿ ಪ್ರಯಾಣಿಕರಿಗೆ ನಿಗದಿಯಾದ ಆವರಣ, ಅಂಕಣ.

nacho

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ನ್ಯಾಚೋ; ಕರಗಿಸಿದ ಚೀಸು, ಮಸಾಲೆ ಪದಾರ್ಥಗಳನ್ನು ಹಾಕಿದ, ಮುಸುಕಿನ ಜೋಳದ ಉಪ್ಪೇರಿ.

NACODS

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) National Association of Colliery Overmen, Deputies and Shotfirers.

nacre

ನಾಮವಾಚಕ

ನೇಕರ್‍:

  • ಮುತ್ತು ಉತ್ಪಾದಿಸುವ ಚಿಪ್ಪುಜೀವಿ.
  • ಮುತ್ತಿನ ಚಿಪ್ಪಿನ ಒಳಮೈ ಮೇಲಿರುವ ವಿವಿಧ ಬಣ್ಣಗಳಿಂದ ಹೊಳೆಯುವ, (ಮುಖ್ಯವಾಗಿ ಕ್ಯಾಲ್ಸಿಯಂ ಕಾರ್ಬೊನೇಟ್‍ನಿಂದಾದ) ಪದಾರ್ಥ.
  • ಮುತ್ತಿನ ಚಿಪ್ಪು.

nacred

ಗುಣವಾಚಕ

ನೇಕರ್‍ ಹೊದಿಸಿದ, ಲೇಪಿಸಿದ.

nacreous

ಗುಣವಾಚಕ

ನೇಕರ್‍ನಂಥ ಯಾ ನೇಕರ್‍ನಿಂದಾದ.

nacrous

ಗುಣವಾಚಕ

= nacreous.

nactared

ಗುಣವಾಚಕ

  • (ರೂಪಕವಾಗಿ ಸಹ) ಮಧುತುಂಬಿದ.
  • ಮಕರಂದದಿಂದ ವ್ಯಾಪ್ತವಾದ; ಬಂಡಿನಿಂದ ರುಚಿಗಟ್ಟಿದ.

nactareous

ಗುಣವಾಚಕ

ಮಧುವನ್ನುಳ್ಳ; ಮಕರಂದದಿಂದ ತುಂಬಿದ.

nactariferous

ಗುಣವಾಚಕ

ಮಧು ಸ್ರವಿಸುವ; ಬಂಡು ಸುರಿಸುವ; ಮಧುವನ್ನು ಉತ್ಪಾದಿಸುವ.

nadir

ನಾಮವಾಚಕ

  • ಖಮಧ್ಯಕ್ಕೆ ನೇರಿದಿರಾಗಿ ಪ್ರೇಕ್ಷಕನ ಕಾಲಡಿ ಇರುವ ಬಿಂದು.
  • (ರೂಪಕವಾಗಿ) ಅಧೋಬಿಂದು; ಅಧಃಪಾತಾಳ; ಅತ್ಯಂತ ಕೆಳಗಿನ ಬಿಂದು ಯಾ ಪ್ರದೇಶ; ಅತ್ಯಂತ ಅವನತಿ ಮೊದಲಾದವುಗಳ ಸ್ಥಾನ, ಕಾಲ; the nadir of our hopes ನಮ್ಮ ಭರವಸೆಗಳ ಅಧಃಪಾತಾಳ.

naevus

ನಾಮವಾಚಕ

  • ಕೆಂಪು ಮಚ್ಚೆ; ಚರ್ಮದ ಮೇಲೆ ಸ್ಪಷ್ಟವಾಗಿ ಕೆಂಪಗೆ ಕಾಣುವ ಹುಟ್ಟುಮಚ್ಚೆ.
  • = $^1$mole.

naff

ಅಕರ್ಮಕ ಕ್ರಿಯಾಪದ

(ಅಶಿಷ್ಟ) (ಆಜ್ಞಾರ್ಥಕವಾಗಿ) ತೊಲಗು; ತೊಲಗಾಚೆ; ನಿಕಲಾಯಿಸು; ಹೊರಟು ಹೋಗು (ಸಾಮಾನ್ಯವಾಗಿ naff off).

naff

ಗುಣವಾಚಕ

(ಅಶಿಷ್ಟ)

  • ಹ್ಯಾಷನ್ನಾಗಿಲ್ಲದ; (ಸಾಮಾಜಿಕವಾಗಿ) ನಯನಾಜೂಕಿಲ್ಲದ.
  • ಕೆಲಸಕ್ಕೆ ಬಾರದ; ಕಚಡವಾದ; ಹೊಲಸಾದ.

naffing

ಗುಣವಾಚಕ

(ಆಧಿಕ್ಯವಾಚಕವಾಗಿ) (ಹೆಚ್ಚಿನ ಕಿರಿಕಿರಿಯನ್ನು ವ್ಯಕ್ತಪಡಿಸಲು) ಕೆಟ್ಟ; ಹಾಳಾದ; ದರಿದ್ರ.

Naffy

ನಾಮವಾಚಕ

(ಅಶಿಷ್ಟ) = NAAFI.

nag

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ nagged, ವರ್ತಮಾನ ಕೃದಂತ nagging).

  • (ವ್ಯಕ್ತಿಯನ್ನು) ಬಿಡದೆ, ಒಂದೇ ಸಮನಾಗಿ ಒತ್ತಾಯಿಸಿ ಯಾ ತಪ್ಪು ಹಿಡಿದು – ಕಾಡು: ಪೀಡಿಸು, ಕಿರಿಕಿರಿಯುಂಟುಮಾಡು.
  • (ವ್ಯಕ್ತಿ, ಮನಸ್ಸು, ಮೊದಲಾದವನ್ನು) ಕಾಡು; ಕೊರೆ: his mistake nagged him ಅವನ ತಪ್ಪು ಅವನನ್ನು ಕಾಡಿತು, ಕೊರೆಯಿತು.

Search Dictionaries

Loading Results

Follow Us :   
  Download Bharatavani App
  Bharatavani Windows App