भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

nail-set

ನಾಮವಾಚಕ

= nail-punch.

nailed

ಗುಣವಾಚಕ

  • ಉಗುರಿರುವ; ಉಗುರುಳ್ಳ.
  • ಮೊಳೆ ಹೊಡೆದ; ಮೊಳೆ ಹೊಡೆದು ಭದ್ರಪಡಿಸಿದ.

nailer

ನಾಮವಾಚಕ

ಮೊಳೆಗಾರ; ಮೊಳೆ ಮಾಡುವವನು.

nailery

ನಾಮವಾಚಕ

ಮೊಳೆ ತಯಾರಿಕೆ.

nailing

ಗುಣವಾಚಕ

(ಪ್ರಾಚೀನ ಪ್ರಯೋಗ) ಸೊಗಸಾದ; ಮಜವಾದ; ಉತ್ಕೃಷ್ಟವಾದ: a nailing good time ಬಹು ಸೊಗಸಾದ ಕಾಲ.

nailless

ಗುಣವಾಚಕ

  • ಮೊಳೆಯಿಲ್ಲದ.
  • ಉಗುರಿಲ್ಲದ; ನಖರಹಿತ.

nainsook

ನಾಮವಾಚಕ

(ಮೂಲತಃ) ಭಾರತದ ನಾಜೂಕಾದ ಹತ್ತಿಯ ಬಟ್ಟೆ.

naira

ನಾಮವಾಚಕ

ನೈರ; ನೈಜೀರಿಯದ ಹಣದ ಘಟಕ.

naive

ಗುಣವಾಚಕ

ಅಕೃತ್ರಿಮ; ನಿಷ್ಕಪಟ; ಋಜುವಾದ; ಮುಗ್ಧ; ಭೋಳೆತನದ; ಮಗುವಿನಂತೆ ಸರಳವಾದ.

naively

ಕ್ರಿಯಾವಿಶೇಷಣ

ಅಕೃತ್ರಿಮವಾಗಿ; ನಿಷ್ಕಪಟವಾಗಿ.

naiveness

ನಾಮವಾಚಕ

ಅಕೃತ್ರಿಮತನ; ನಿಷ್ಕಾಪಟ್ಯ.

naivete

ನಾಮವಾಚಕ

= naivety.

naivety

ನಾಮವಾಚಕ

  • ಅಕೃತ್ರಿಮತೆ; ನಿಷ್ಕಾಪಟ್ಯ; ಋಜುತೆ; ಮುಗ್ಧತೆ; ಭೋಳೆತನ.
  • ಅಕೃತ್ರಿಮ ಕಾರ್ಯ; ನಿಷ್ಕಪಟವಾದ ಕೆಲಸ.

naked

ಗುಣವಾಚಕ

  • ನಗ್ನ; ಬೆತ್ತಲೆಯ; ನಿರ್ವಾಣ; ಟ್ಟೆ ತೊಟ್ಟಿರದ; ಬರಿಮೈಯಿನ; ನಿರ್ವಸನದ: as naked as my mother bore me ನಮ್ಮಮ್ಮ ಹಡೆದಾಗ ಹೇಗಿದ್ದೆನೋ ಅಂಥ ಬತ್ತಲೆ ಸ್ಥಿತಿಯಲ್ಲಿ.
  • ಅರಕ್ಷಿತ; ಸುಲಭವಾಗಿ ಗುರಿಯಾದ, ಸಿಕ್ಕಿದ; ರಕ್ಷಣೆ ಇಲ್ಲದ: left naked to temptations ಸುಲಭವಾಗಿ ಪ್ರಲೋಭನೆಗಳಿಗೆ ಸಿಕ್ಕಿದ.
  • ಒರೆಯಿಲ್ಲದ; ಕಾಪಿಲ್ಲದ: a naked sword ಒರೆಯಿಂದೆಳೆದ ಕತ್ತಿ.
  • ನಗ್ನ; ಮುಚ್ಚುಮರೆಯಿಲ್ಲದ; ಸ್ಪಷ್ಟ; ಸ್ಫುಟ; ನೇರವಾದ: naked truth ನಗ್ನಸತ್ಯ.
  • (ಪರೀಕ್ಷೆಗಾಗಿ ಹೊದಿಕೆ) ತೆರೆದಿಟ್ಟ: his naked soul ಅವನ ತೆರೆದಿಟ್ಟ ಆತ್ಮ.
  • ಬಟ್ಟಬಯಲಾದ; ಮರಗಿಡಗಳಿಲ್ಲದ; ಬಂಜರು: naked shores ಬಟ್ಟ ಬಯಲಾದ ಕರಾವಳಿ.
  • ರಹಿತ; ಇಲ್ಲದ.
  • ಎಲೆಗಳಿಲ್ಲದ; ಬೋಳಾದ: naked trees ಬೋಳು ಮರಗಳು.
  • (ಬಂಡೆ ಮೊದಲಾದವುಗಳ ವಿಷಯದಲ್ಲಿ) ನಗ್ನ; ಮುಚ್ಚುಕಳೆದ; ತೆರೆದ.
  • (ನೆಲದ ವಿಷಯದಲ್ಲಿ) ಮಣ್ಣು, ಗಿಡಗಂಟೆಗಳಿಂದ ಮುಚ್ಚಿರದ.
  • (ಕೊಠಡಿಯ ವಿಷಯದಲ್ಲಿ) ಪೀಠೋಪಕರಣಗಳಿಲ್ಲದ; ಖಾಲಿ.
  • ಅಲಂಕಾರವಿಲ್ಲದ; ನಿರಲಂಕೃತ; ನಿರಾಭರಣವಾದ.
  • (ಹಚ್ಚಿದ ಮೋಂಬತ್ತಿ ಮೊದಲಾದವುಗಳ ವಿಷಯದಲ್ಲಿ) ಗಾಳಿಗೊಡ್ಡಿದ; ಸುಲಭದಾಹ್ಯ ಅನಿಲಗಳಿಗೊಡ್ಡಿದ; ಮುಚ್ಚದೆ ತೆರೆದಿಟ್ಟ.
  • ಬೋಳುಬೋಳಾದ; ಸಿಪ್ಪೆ, ಎಲೆ, ಕೂದಲು, ಶಲ್ಕಗಳು, ಚಿಪ್ಪು, ಮೊದಲಾದವುಗಳಿಲ್ಲದ.
  • ಬರಿಯ; ಕೇವಲ; ಆಧಾರರಹಿತ: naked assertion ಆಧಾರರಹಿತ ಹೇಳಿಕೆ.
  • ಯಾವುದೇ ಸಾಧನದ ನೆರವಿಲ್ಲದ; ಬರಿಯ: naked eye (ದೂರದರ್ಶಕ, ಸೂಕ್ಷ್ಮದರ್ಶಕ, ಮೊದಲಾದವುಗಳ ನೆರವಿಲ್ಲದೆ ನೋಡುವ) ಬರಿಯ ಕಣ್ಣು.

naked boys

ನಾಮವಾಚಕ

ಹುಲ್ಲು ಮೈದಾನದ ಕೆಲವು ಎಲೆಯಿಲ್ಲದ ಸಸ್ಯಜಾತಿಗಳು; ಹುಲ್ಲುಕೇಸರಿ.

naked ladies

ನಾಮವಾಚಕ

= naked boys.

naked lady

ನಾಮವಾಚಕ

= naked boys.

nakedly

ಕ್ರಿಯಾವಿಶೇಷಣ

  • ನಗ್ನವಾಗಿ; ಬತ್ತಲೆಯಾಗಿ.
  • ಅರಕ್ಷಿತವಾಗಿ.
  • ಒರೆಯಿಲ್ಲದೆ.
  • ಮುಚ್ಚುಮರೆಯಿಲ್ಲದೆ; ಸ್ಪಷ್ಟವಾಗಿ; ಸ್ಫುಟವಾಗಿ.
  • ಬೋಳುಬೋಳಾಗಿ.
  • ಅಲಂಕಾರವಿಲ್ಲದೆ; ನಿರಾಭರಣವಾಗಿ.
  • ಆಧಾರ, ರುಜುವಾತು – ಇಲ್ಲದೆ.

nakedness

ನಾಮವಾಚಕ

  • ನಗ್ನತೆ; ಬರಿ ಬತ್ತಲೆ ಸ್ಥಿತಿ.
  • ಬಯಲಾಗಿರುವಿಕೆ.
  • ಬೋಳು ಸ್ಥಿತಿ.

naker

ನಾಮವಾಚಕ

(ಚರಿತ್ರೆ) ಭೇರಿ; ಸಣ್ಣ ನಗಾರಿ.

Search Dictionaries

Loading Results

Follow Us :   
  Download Bharatavani App
  Bharatavani Windows App