English-Kannada Nighantu (University of Mysore)
University of Mysore
NALGO
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) National and Local Government Officers’ Association.
namby-pamby
ಗುಣವಾಚಕ
- ನಿಸ್ಸಾರವಾದ ಅಂದದ; ಬರಿಯ ಬಿನ್ನಾಣದ; ಮುದ್ದುಮುದ್ದಾದ.
- ಸಪ್ಪೆಯ; ಕಸುವು, ಜೋರು ಇಲ್ಲದ.
namby-pamby
ನಾಮವಾಚಕ
- ನಿಸ್ಸಾರವಾದ ಅಂದದ ಮಾತು; ಮುದ್ದುಮುದ್ದು ಮಾತು; ಬಿನ್ನಾಣದ ಮಾತು.
- ಸಪ್ಪೆಯ, ಬಿನ್ನಾಣದ – ವ್ಯಕ್ತಿ.
name
ನಾಮವಾಚಕ
ಪದಗುಚ್ಛ
- ಹೆಸರು; ನಾಮ; ನಾಮಧೇಯ; ಅಭಿಧಾನ: mention person by name ವ್ಯಕ್ತಿಯನ್ನು ಹೆಸರು ಹಿಡಿದು ಹೇಳು.
- ಹೆಸರು; ನಾಮಧೇಯ; ಒಬ್ಬ ವ್ಯಕ್ತಿಯ ಯಾ ವ್ಯಕ್ತಿಗಳ ಗುಂಪಿನ ಹೆಸರು, ಮುಖ್ಯವಾಗಿ ಅನೇಕ ವ್ಯಕ್ತಿಗಳಿಗೆ ಅನ್ವಯಿಸುವ ಹೆಸರು.
- ಪ್ರಖ್ಯಾತ, ಪ್ರಸಿದ್ಧ – ವ್ಯಕ್ತಿ; ಖ್ಯಾತನಾಮ: Gandhi himself and many great names were there ಸಾಕ್ಷಾತ್ ಗಾಂಧಿ ಮಾತ್ರವಲ್ಲದೆ, ಅನೇಕ ಖ್ಯಾತನಾಮರೂ ಅಲ್ಲಿದ್ದರು.
- ಒಂದುಗೊತ್ತಾದ ಹೆಸರಿನವರು; ಕುಲ; ಬಣ; ಮನೆತನ: all the clans hostile to the name of Nehru ನೆಹರೂ ಮನೆತನವನ್ನು ದ್ವೇಷಿಸುವ ಎಲ್ಲ ಬಣದವರು.
- (ಒಳ್ಳೆಯ ಯಾ ಕೆಟ್ಟ) ಹೆಸರು; ಕೀರ್ತಿ; ಖ್ಯಾತಿ: has an ill name ಅವನಿಗೆ ಕೆಟ್ಟ ಹೆಸರು ಬಂದಿದೆ.
- ಕೇವಲ ಹೆಸರಿಗೆ ಮಾತ್ರ ಇರುವಂಥದು; ನಾಮ ಮಾತ್ರದ್ದು; ನಿಜಾಂಶವಲ್ಲದ್ದು; ನಾಮಕಾವಾಸ್ತೆ; ವಾಸ್ತವಾಂಶವಲ್ಲದ್ದು; ಕೇವಲ ಕಾಲ್ಪನಿಕ: honour had become a name ಗೌರವವೆಂಬುದು ಹೆಸರಿಗೆ ಮಾತ್ರ ಉಳಿದಿದ್ದಿತು.
name
ಸಕರ್ಮಕ ಕ್ರಿಯಾಪದ
ಪದಗುಚ್ಛ
- ಹೆಸರುಕೊಡು; ಹೆಸರಿಡು; ಹೆಸರಿಸು; ಹೆಸರಿಟ್ಟು ಕರೆ; ನಾಮಕರಣ ಮಾಡು: the child was named after its father ಮಗುವಿಗೆ ತಂದೆಯ ಹೆಸರನ್ನಿಡಲಾಯಿತು.
- (ವ್ಯಕ್ತಿ ಯಾ ವಸ್ತುವನ್ನು) ನಿಜವಾದ, ಸರಿಯಾದ ಹೆಸರಿನಿಂದ ಕರೆ, ಹೆಸರಿಸು.
- ಹೆಸರನ್ನು – ಹೇಳು, ಗುರುತಿಸು: I am sure that I have seen that bonny face, but I cannot name you ಆ ಚೆಲುವಾದ ಮುಖವನ್ನು ನಾನು ಖಂಡಿತವಾಗಿ ನೋಡಿದ್ದೇನೆ, ಆದರೆ ಆ ಹೆಸರನ್ನು ಹೇಳಲಾರೆ.
- (ಸ್ಥಾನ, ಹುದ್ದೆ, ಮೊದಲಾದವುಗಳಿಗೆ, ಒಬ್ಬ ವ್ಯಕ್ತಿಯನ್ನು) ನಾಮಕರಣ ಮಾಡು; ಹೆಸರು ಸೂಚಿಸು; ನೇಮಿಸು: Mr. X has been named for the directorship ನಿರ್ದೇಶಕನ ಸ್ಥಾನಕ್ಕೆ Xರವರ ಹೆಸರನ್ನು ಸೂಚಿಸಲಾಗಿದೆ.
- ಹೇಳು; ತಿಳಿಸು; ಉಚ್ಚರಿಸು.
- ಸ್ಪಷ್ಟವಾಗಿ ಹೇಳು; ನಮಊದಿಸು: name your price ನಿನ್ನ ಬೆಲೆ ಹೇಳು; ನೀನು ಹೇಳುವ ಬೆಲೆ ಎಷ್ಟೆಂಬುದನ್ನು ತಿಳಿಸು.
- ದೃಷ್ಟಾಂತವಾಗಿ ಕೊಡು; ಉದಾಹರಣೆಯಾಗಿ ಹೇಳು.
- (ಶಾಸನ ಸಭೆಯ ಅಧ್ಯಕ್ಷನ ವಿಷಯದಲ್ಲಿ) ಸದಸ್ಯನನ್ನು ಅವಿಧೇಯನೆಂದು ಹೆಸರಿಸಿ ಹೇಳು.
- ಅಪೇಕ್ಷಣೀಯವಾದುದೆಂದು ತಿಳಿಸು, ಸ್ಪಷ್ಟಗೊಳಿಸು.
name
ಗುಣವಾಚಕ
- ಹೆಸರುಳ್ಳ; ಹೆಸರಿನ: name tag ಹೆಸರು(ಳ್ಳ) ಪಟ್ಟಿ.
- ಹೆಸರುವಾಸಿಯಾದ; ಒಳ್ಳೆಯ ಹೆಸರಿನ; ಪ್ರಸಿದ್ಧ; ಪ್ರಖ್ಯಾತ: a name brand ಹೆಸರುವಾಸಿಯಾದ (ವ್ಯಾಪಾರಿ) ಗುರುತು. name actor ಪ್ರಸಿದ್ಧ ನಟ.
name-caller
ನಾಮವಾಚಕ
ಬಯ್ಯುವವನು; (ಜಗಳವಾಡಿ) ದುರ್ಭಾಷೆ ಬಳಸುವವನು.
name-calling
ನಾಮವಾಚಕ
(ಕೇವಲ) ದುರ್ಭಾಷೆ; ಕೆಟ್ಟ ಮಾತು; ಜಗಳದಲ್ಲಿ, ರಾಜಕೀಯ ಪ್ರಚಾರದಲ್ಲಿ ಬಳಸುವ ಬರಿ ಬಯ್ಗುಳದ ಮಾತು.
name-child
ನಾಮವಾಚಕ
(ಗೌರವ ಮೊದಲಾದವಕ್ಕಾಗಿ) ಮತ್ತೊಬ್ಬನ ಹೆಸರಿಟ್ಟಿರುವ ಮಗು.
name-day
ನಾಮವಾಚಕ
- ಸಂತ ನಾಮದಿನ; ತಾನು ಯಾವ ಸಂತನ ಹೆಸರಿಟ್ಟುಕೊಂಡಿರುವನೋ ಆ ಸಂತನ ದಿನ.
- (ಸ್ಟಾಕ್ ಎಕ್ಸ್ಚೇಂಜ್) ನಾಮಪ್ರಕಟನ ದಿನ; ಷೇರು ಮೊದಲಾದವುಗಳನ್ನು ಇಂಥವನು ಕೊಳ್ಳುತ್ತಾನೆಂಬುದು ನಿಷ್ಕರ್ಷೆಯಾಗುವ ಹಿಂದಿನ ದಿನ; ನಿಜವಾಗಿ ಷೇರುಕೊಳ್ಳುವವನ ಹೆಸರನ್ನು ಷೇರು ದಲ್ಲಾಳಿಗೆ ತಿಳಿಸುವ ದಿನ.
name-drop
ಅಕರ್ಮಕ ಕ್ರಿಯಾಪದ
ನಾಮೋಲ್ಲೇಖನ ಮಾಡು; ಮಾತನಾಡುವಾಗ, ಕಾಗದ ಬರೆಯುವಾಗ (ದೊಡ್ಡ ದೊಡ್ಡವರ) ಹೆಸರುಗಳನ್ನು ಉಲ್ಲೇಖಿಸು, ಹೇಳು.
name-dropper
ನಾಮವಾಚಕ
ನಾಮೋಲ್ಲೇಖನಕಾರ.
name-dropping
ನಾಮವಾಚಕ
ನಾಮೋಲ್ಲೇಖ(ನ); (ದೊಡ್ಡ ದೊಡ್ಡವರ) ಹೆಸರುಗಳನ್ನು ಉದುರಿಸುವುದು; ಕಾಗದ ಬರೆಯುವಾಗ, ಮಾತನಾಡುವಾಗ ದೊಡ್ಡ ದೊಡ್ಡವರ ಪರಿಚಯ ತನಗಿದೆಯೆಂದು ತೋರಿಸಿಕೊಳ್ಳಲು, ಜಂಬ ಕೊಚ್ಚಲು ದೊಡ್ಡ ಮನುಷ್ಯರ ಹೆಸರುಗಳನ್ನು ಉಲ್ಲೇಖಿಸುವುದು.
name-part
ನಾಮವಾಚಕ
ನಾಮಪಾತ್ರ; ನಾಟಕಕ್ಕೆ ಹೆಸರುಕೊಟ್ಟ ಪಾತ್ರ: who will play the name-part in Hamlet? ಹ್ಯಾಮ್ಲೆಟ್ನಲ್ಲಿ ನಾಮಪಾತ್ರವನ್ನು (ಹ್ಯಾಮ್ಲೆಟ್ಟನ ಪಾತ್ರವನ್ನು) ಯಾರು ಮಾಡುತ್ತಾರೆ?
name-plate
ನಾಮವಾಚಕ
ಹೆಸರುಹಲಗೆ; ನಾಮಫಲಕ.
name-tape
ನಾಮವಾಚಕ
ಹೆಸರುಚೀಟಿ; (ಬಟ್ಟೆ ಮೊದಲಾದವುಗಳ ಮೇಲೆ) ಹಚ್ಚಿದ ಮಾಲೀಕನ ಹೆಸರುಚೀಟಿ.
nameable
ಗುಣವಾಚಕ
- ಹೆಸರಿಸಬಹುದಾದ; ಹೆಸರು ಹೇಳಲು ಯೋಗ್ಯವಾದ.
- ಉಲ್ಲೇಖನೀಯ.
nameless
ಗುಣವಾಚಕ
- ಹೆಸರಿಲ್ಲದ; ಹೆಸರು ಕೆತ್ತಿಲ್ಲದ; ನಾಮರಹಿತ: nameless grave ಹೆಸರಿಲ್ಲದ ಸಮಾಧಿ.
- ಅಜ್ಞಾತ; ಅಪ್ರಸಿದ್ಧ.
- (ಬೇಕೆಂದು) ಹೆಸರು ಹೇಳದಿರುವ; ಹೆಸರು – ಮರೆಸಿಟ್ಟ, ಗೋಪ್ಯವಾಗಿಟ್ಟ, ಮುಚ್ಚಿಟ್ಟ: a well-known person who shall be nameless ಯಾರ ಹೆಸರನ್ನು ಬೇಕೆಂದೇ ಮುಚ್ಚಿಡುತ್ತಿರುವರೋ ಆ ಪ್ರಸಿದ್ಧ ವ್ಯಕ್ತಿ.
- ಅನಾಮಿಕ; ಅನಾಮಧೇಯ: a certain nameless politician ಯಾವನೋ ಒಬ್ಬ ಅನಾಮಧೇಯ ರಾಜಕಾರಣಿ.
- ಅನಿರ್ವಚನೀಯ; ವಿವರಿಸಲಾಗದ; ವರ್ಣಿಸಲಾಗದ: a nameless charm ಒಂದು ಅನಿರ್ವಚನೀಯ ಮೋಹಕತೆ.
- ಅವಾಚ್ಯ; ಹೆಸರು ಹೇಳಬಾರದಷ್ಟು ಕೆಟ್ಟದಾದ; ಅಸಹ್ಯವಾದ: nameless vices ಹೆಸರು ಹೇಳಬಾರದ ದುರ್ಗುಣಗಳು.
- ಕಾನೂನುಬಾಹಿರ; ಅಕ್ರಮ.
namelessly
ಕ್ರಿಯಾವಿಶೇಷಣ
- ಹೆಸರಿಲ್ಲದ ಹಾಗೆ.
- ಅಜ್ಞಾತವಾಗಿ; ಅಪ್ರಸಿದ್ಧವಾಗಿ.
- ಅನಾಮಧೇಯನಾಗಿ.
namelessness
ನಾಮವಾಚಕ
- ಹೆಸರಿಲ್ಲದಿರುವಿಕೆ.
- ಅಜ್ಞಾತಸ್ಥಿತಿ; ಅಪ್ರಸಿದ್ಧ ಸ್ಥಿತಿ.
- ಅನಾಮಿಕವಾಗಿರುವಿಕೆ; ಅನಾಮಧೇಯ ಸ್ಥಿತಿ.