भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

nap

ನಾಮವಾಚಕ

  • ಜುಂಜು; ಜುಂಗು; (ಬಟ್ಟೆಯ) ಮೋಟು ಎಳೆಗಳನ್ನು, ಜುಂಜುಗಳನ್ನು ಮೇಲೆತ್ತಿ ತಕ್ಕಂತೆ ಕತ್ತರಿಸಿ ನಯಮಾಡಿದ ಬಟ್ಟೆಯ ಮೇಲುಭಾಗ, ಹೊರಮೈ ಭಾಗ.
  • ಮೃದುವಾದ, ಮೆತ್ತನೆಯ ಮೇಲ್ಮೈ.
  • (ಆಸ್ಟ್ರೇಲಿಯ) (ಆಡುಮಾತು) ಕಂಬಳಿ, ಹಾಸಿಗೆ, ಸಾಮಾನು, ಗಂಟುಮೂಟೆ.

nap

ಸಕರ್ಮಕ ಕ್ರಿಯಾಪದ

(ಬಟ್ಟೆಯ ಮೈಮೇಲೆ) ಜುಂಗನ್ನು ಎಬ್ಬಿಸು.

nap

ನಾಮವಾಚಕ

ಪದಗುಚ್ಛ

  • ನ್ಯಾಪ್‍ ಆಟ; ಒಂದು (ರೀತಿ) ಇಸ್ಪೀಟಾಟ; ಆಟಗಾರನು ಐದು ಪಟ್ಟಿಗೆ ಮೀರದಂತೆ, ಎಷ್ಟು ಪಟ್ಟನ್ನು ಗೆಲ್ಲಬಹುದೆಂಬ ಭರವಸೆ ಇದೆಯೋ ಅಷ್ಟು ಸಂಖ್ಯೆಯನ್ನು ಕೂಗಿ ಹೇಳುವ ಇಸ್ಪೀಟಾಟ.
  • ಈ ಆಟದಲ್ಲಿ ಐದು ಹೇಳುವುದು.
  • (ಜೂಜು, ಬಾಜಿ, ಮೊದಲಾದವುಗಳಲ್ಲಿ) ಎಲ್ಲ ಹಣವನ್ನೂ ಒಂದೇ ಆಟದಲ್ಲಿ ಒಡ್ಡಿ ಬಿಡುವುದು.
  • ಇದಕ್ಕಾಗಿ ಜೂಜು ಸಲಹೆಗಾರನು ಮಾಡುವ ಆಟದ ಆಯ್ಕೆ.

nap

ಸಕರ್ಮಕ ಕ್ರಿಯಾಪದ

ಗೆಲ್ಲಬಹುದೆಂಬ ನಿರೀಕ್ಷೆಯಿರುವ ಕುದುರೆ ಮೊದಲಾದವನ್ನು ಗುರುತಿಸಿ ಹೇಳು; ಗೆಲ್ಲುವ ಕುದುರೆಯನ್ನು ಹೇಳು.

napa

ನಾಮವಾಚಕ

= nappa.

napalm

ನಾಮವಾಚಕ

ನೇಪಾಮ್‍:

  • ಪೆಟ್ರೋಲನ್ನು ಮಂದಗೊಳಿಸಲು ಉಪಯೋಗಿಸುವ ಅಲ್ಯೂಮಿನಿಯಮ್‍, ಸಾಬೂನುಗಳ ಮಿಶ್ರಣ.
  • ಅಂಥ ಮಂದಕಾರಿಯನ್ನುಪಯೋಗಿಸಿ ಮಂದಗೊಳಿಸಿದ, ಬೆಂಕಿ ಹರಡುವ ಬಾಂಬುಗಳ ತಯಾರಿಕೆಯಲ್ಲಿ ಬಳಸುವ ಪೆಟ್ರೋಲು.

nape

ನಾಮವಾಚಕ

ಪದಗುಚ್ಛ

ಹೆಡಕು; ಹೆಕ್ಕತ್ತು; ಕತ್ತಿನ ಹಿಂಭಾಗ. nape of the neck = nape.

napery

ನಾಮವಾಚಕ

(ಸ್ಕಾಟ್ಲೆಂಡ್‍ ಪ್ರಯೋಗ ಯಾ ಪ್ರಾಚೀನ ಪ್ರಯೋಗ) ಮನೆಯ ಬಳಕೆ ಬಟ್ಟೆ; (ಮುಖ್ಯವಾಗಿ) ಊಟದ ಮೇಜಿನ ಬಟ್ಟೆ, ಹೊದಿಕೆ, ಹಾಸು.

naphtha

ನಾಮವಾಚಕ

ನ್ಯಾಹ್ತ:

  • ಪೆಟ್ರೋಲಿಯಮ್‍.
  • ಪೆಟ್ರೋಲಿಯಮ್‍ ಸಂಸ್ಕರಣದಿಂದಾಗಲಿ ಕಲ್ಲಿದ್ದಲು ಮೊದಲಾದವುಗಳ ನಾಶಕ ಆಸವನದಿಂದಾಗಲಿ ದೊರೆತ, ಕಾರ್ಬನಿಕ ಪದಾರ್ಥಗಳನ್ನು ಕರಗಿಸಲು ಬಳಸುವ ದ್ರವ, ಹೈಡ್ರೊಕಾರ್ಬನ್‍ಗಳ ಮಿಶ್ರಣ.

naphthalene

ನಾಮವಾಚಕ

(ರಸಾಯನವಿಜ್ಞಾನ) ನ್ಯಾಹ್ತಲೀನ್‍; ಕಲ್ಲಿದ್ದಲು ಡಾಮರಿನ ಆಸವನದಿಂದ ತಯಾರಿಸುವ, ಬೆಳ್ಳನೆಯ, ಸ್ಫಟಿಕರೂಪದ, ಎರಡು ಬೆನ್ಸೀನ್‍ ಚಕ್ರಗಳ ಸಂಕಲನದಿಂದಾದ ಆರೋಮ್ಯಾಟಿಕ್‍ ಹೈಡ್ರೊಕಾರ್ಬನ್‍, ${\rm C}_1{_0 \rm H}_8$.

naphthalic

ಗುಣವಾಚಕ

ನ್ಯಾಹ್ತಾಲಿಕ್‍; ನ್ಯಾಹ್ತಲೀನಿನ ಯಾ ಅದಕ್ಕೆ ಸಂಬಂಧಿಸಿದ.

naphthene

ನಾಮವಾಚಕ

(ರಸಾಯನವಿಜ್ಞಾನ) ನ್ಯಾಹ್ತೀನ್‍; ರಷ್ಯನ್‍ ಪೆಟ್ರೋಲಿಯಮ್‍ನಲ್ಲಿ ಅಧಿಕ ಪ್ರಮಾಣದಲ್ಲಿ ಕಾಣಸಿಗುವ, ${\rm C}_{\rm n} {\rm H}_{\rm 2n}$ ಎಂಬ ಸಾಮಾನ್ಯ ಅಣುಸೂತ್ರವಿರುವ, ಪರ್ಯಾಪ್ತ ಚಕ್ರೀಯ ಹೈಡ್ರೊಕಾರ್ಬನ್‍ಗಳಲ್ಲಿ ಒಂದು.

naphthenic

ಗುಣವಾಚಕ

ನ್ಯಾಹ್ತೀನಿಕ್‍; ನ್ಯಾಹ್ತೀನಿನ ಯಾ ಅದರ ರ್ಯಾಡಿಕಲ್‍ನ.

naphthenic acid

ನಾಮವಾಚಕ

ನ್ಯಾಹ್ತೀನಿಕ್‍ ಆಮ್ಲ; ಯಾವುದೇ ನ್ಯಾಹ್ತೀನ್‍ನಲ್ಲಿ ಹೈಡ್ರೊಜನ್‍ ಪರಮಾಣುವನ್ನು ಕಾರ್ಬಾಕ್ಸಿಲ್‍ ಗುಚ್ಛದಿಂದ ಆದೇಶಿಸಿದಾಗ ಉಂಟಾಗುವ ಆಮ್ಲ.

naphthol

ನಾಮವಾಚಕ

(ರಸಾಯನವಿಜ್ಞಾನ) ನ್ಯಾಹ್ತಾಲ್‍; ನ್ಯಾಹ್ತಲೀನ್‍ ರಚನೆಯನ್ನೊಳಗೊಂಡ ಯಾವುದೇ ಅಣುವಿನಲ್ಲಿ ಹೈಡ್ರೊಜನ್‍ ಪರಮಾಣುವಿನ ಸ್ಥಾನದಲ್ಲಿ ಹೈಡ್ರಾಕ್ಸಿಲ್‍ ಗುಚ್ಛ ಆದೇಶವಾದಾಗ ದೊರೆಯುವ ಹಿನಾಲಿಕ ಸಂಯುಕ್ತ.

Napier’s bones

ನಾಮವಾಚಕ

ನೇಪಿಯರ್‍ನ ಸರಳುಗಳು; ಅಂಕಗಣಿತಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಮಾಡಲು ನೆರವಾಗುವ, ಗುರುತು ಮಾಡಿರುವ, ಹನ್ನೊಂದು (ಮಊಳೆ, ಮರ, ಮೊದಲಾದವುಗಳಿಂದ ತಯಾರಿಸಿದ) ಸರಳುಗಳ ತಂಡ.

Napierian logarithm

ನಾಮವಾಚಕ ( ಗುಣವಾಚಕ)

ನೇಪೀರಿಯನ್‍ ಲಾಗರಿದಮ್‍; ಲಾಗರಿದಮ್‍ ವ್ಯವಸ್ಥೆಯಲ್ಲಿ eಯನ್ನು (2.71828…) ಅಧಾರಸಂಖ್ಯೆಯಾಗಿಟ್ಟುಕೊಂಡಾಗ ದೊರಕುವ ಲಾಗರಿದಮ್‍.

napkin

ನಾಮವಾಚಕ

ಪದಗುಚ್ಛ

  • ಕರವಸ್ತ್ರ; ಕೈವಸ್ತ್ರ; ಊಟ ಮಾಡುವಾಗ ತುಟಿಗಳನ್ನು ಯಾ ಬೆರಳುಗಳನ್ನು ಒರೆಸಿಕೊಳ್ಳುವ ಯಾ ಮೀನು ಮೊದಲಾದವನ್ನು ಬಡಿಸಿಕೊಳ್ಳುವಾಗ ಬಳಸುವ (ಬಟ್ಟೆಯ ಯಾ ಕಾಗದದ) ಚೌಕ.
  • ಸಣ್ಣ, ಚಿಕ್ಕ – ಚೌಕ.
  • (ಬ್ರಿಟಿಷ್‍ ಪ್ರಯೋಗ) = nappy.

napkin-ring

ನಾಮವಾಚಕ

ಕರವಸ್ತ್ರದ ಬಳೆ; ಮೇಜಿನ ಕರವಸ್ತ್ರವನ್ನು ಇಡುವ ಲೋಹದ ಯಾ ಮರದ ಪಟ್ಟಿ ಯಾ ಬಳೆ.

naplam

ಸಕರ್ಮಕ ಕ್ರಿಯಾಪದ

ನೇಪಾಮ್‍ ಬಾಂಬು ಹಾಕು; ನೇಪಾಮ್‍ ಬಾಂಬಿನ ದಾಳಿ ಮಾಡು.

Search Dictionaries

Loading Results

Follow Us :   
  Download Bharatavani App
  Bharatavani Windows App