भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

napless

ಗುಣವಾಚಕ

(ಬಟ್ಟೆಯ ವಿಷಯದಲ್ಲಿ) ಜುಂಜಿಲ್ಲದ; ಜುಂಗಿಲ್ಲದ.

napoleon

ನಾಮವಾಚಕ

  • (ಮೊದಲನೆಯ ನೆಪೋಲಿಯನ್‍ ಠಸ್ಸೆಯಿರುವ) 20 ಹ್ರಾಂಕು ಬೆಲೆಯ, ಹ್ರಾನ್ಸಿನ ಒಂದು ಚಿನ್ನದ ನಾಣ್ಯ.
  • (19ನೆಯ ಶತಮಾನದ) ಒಂದು ರೀತಿಯ ಎತ್ತರದ ‘ಬೂಟು’, ಮೋಜ.
  • = 5nap\((1)\).
  • (ಅಮೆರಿಕನ್‍ ಪ್ರಯೋಗ) = millefeuille.

Napoleonic

ಗುಣವಾಚಕ

  • (ಹ್ರಾನ್ಸಿನ ಮೊದಲನೆಯ) ನೆಪೋಲಿಯನ್‍ನ ಯಾ ನೆಪೋಲಿಯನ್‍ನಂಥ.
  • ನೆಪೋಲಿಯನ್‍ ಮನೆತನದ ಯಾ ನೆಪೋಲಿಯನ್‍ ಮನೆತನದಂಥ.

Napoleonically

ಕ್ರಿಯಾವಿಶೇಷಣ

  • ನೆಪೋಲಿಯನ್ನನ ರೀತಿಯಲ್ಲಿ; ನೆಪೋಲಿಯನ್ನನ ಹಾಗೆ.
  • ನೆಪೋಲಿಯನ್ನನ್ನು ಯಾ ನೆಪೋಲಿಯನ್‍ ಮನೆತನವನ್ನು ಹೋಲುವಂತೆ.

Napoleonism

ನಾಮವಾಚಕ

  • (ಮುಖ್ಯವಾಗಿ ಹ್ರಾನ್ಸಿನ ಮೊದಲನೆಯ) ನೆಪೋಲಿಯನ್‍ನ ತತ್ತ್ವ, ರಾಜನೀತಿ, ಮೊದಲಾದವು.
  • ನೆಪೋಲಿಯನ್‍ವಂಶದ ಮಮತೆ; ನೆಪೋಲಿಯನ್‍ ಪಕ್ಷಪಾತ.

Napoleonist

ನಾಮವಾಚಕ

ನೆಪೋಲಿಯನ್‍ವಾದಿ:

  • ನೆಪೋಲಿಯನ್‍ ಮನೆತನದ ಮಮತೆಯುಳ್ಳವನು.
  • ನೆಪೋಲಿಯನ್‍ನ ತತ್ತ್ವಗಳನ್ನು ಸಮರ್ಥಿಸುವವನು.

nappa

ನಾಮವಾಚಕ

(ವಿಶೇಷ ರೀತಿಯಲ್ಲಿ ಸಂಸ್ಕರಿಸಿದ) ಕುರಿಯ ಯಾ ಮೇಕೆಯ ಮೃದು ಚರ್ಮ.

nappe

ನಾಮವಾಚಕ

(ಭೂವಿಜ್ಞಾನ) ಪಕ್ಕ ಸರಿದ ಪದರ; ಅತಿಯಾದ ಒತ್ತರಿಸುವಿಕೆಗೆ ಒಳಗಾಗಿ, ಅಕ್ಕಪಕ್ಕದ ಸ್ತರಗಳ ಮೇಲೆ ಚಲಿಸಿದ ಬಂಡೆಯ ಪದರ.

napper

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ತಲೆ.

nappy

ಗುಣವಾಚಕ

  • (ಪ್ರಾಚೀನ ಪ್ರಯೋಗ) ನೊರೆ ನೊರೆಯಾದ; ಬುರುಗುಳ್ಳ.
  • ಮತ್ತು ಬರಿಸುವ; ತೀವ್ರ ವೆಗಟುಳ್ಳ.
  • (ಸ್ಕಾಟ್ಲೆಂಡ್‍) (ಅಶಿಷ್ಟ) ಕುಡಿದ; ಮತ್ತೇರಿದ; ಅಮಲೇರಿದ.

nappy

ನಾಮವಾಚಕ

(ಪ್ರಾಚೀನ ಪ್ರಯೋಗ) ನೊರೆನೊರೆಯಾದ ಮಾದಕ ಪಾನೀಯ ಮೊದಲಾದವು.

nappy

ನಾಮವಾಚಕ

(ಮಲ ಮೂತ್ರಾದಿಗಳು ಸೋರದಂತೆ) ಮಕ್ಕಳಿಗೆ ಕಟ್ಟುವ ಬಟ್ಟೆ, ಚೌಕ, ಮೊದಲಾದವು.

nappy rash

ನಾಮವಾಚಕ

ಚಡ್ಡಿದದ್ದು; ಒದ್ದೆಯಾದ ಮಲ ಮೂತ್ರ ಚೌಕವು ಸತತವಾಗಿ ತಗುಲಿ ತಗುಲಿ ಆಗುವ, ಮಗುವಿನ ಚರ್ಮದ ಉರಿಯೂತ, ಗಂದೆ, ದದ್ದು.

napu

ನಾಮವಾಚಕ

(ಮಲಯಾ ದ್ವೀಪದ) ಕಸ್ತೂರಿ ಜಿಂಕೆ.

narceine

ನಾಮವಾಚಕ

(ರಸಾಯನವಿಜ್ಞಾನ) ನಾರ್ಸೀನ್‍; ಅಫೀಮಿನಿಂದ ತೆಗೆದ, ನಿದ್ದೆ ಬರಿಸುವ ಆಲ್ಕಲಾಯ್ಡ್‍, ${\rm C}_{ 23} {\rm H}_{ 27} {\rm NO}_8$.

narcissism

ನಾಮವಾಚಕ

(ಮನಶ್ಶಾಸ್ತ್ರ)

  • ಆತ್ಮರತಿ; ಆತ್ಮಾಸಕ್ತಿ; ಆತ್ಮಕಾಮನೆ; ಸ್ವಾನುರಕ್ತಿ; ತನ್ನೊಲವು; ತನ್ನ ಸ್ವಂತ ರೂಪಾಕೃತಿಗಳಲ್ಲಿ ವಿಪರೀತವಾದ ಯಾ ಕಾಮಾತ್ಮಕವಾದ ಪ್ರೀತಿ, ಆಸಕ್ತಿ.
  • ಸ್ವಾರಾಧನಾ ಪ್ರವೃತ್ತಿ; ಆತ್ಮಶ್ಲಾಘನೆ; ಸ್ವಪ್ರಶಂಸೆ; ತನ್ನನ್ನು ತಾನೇ ಮೆಚ್ಚಿಕೊಳ್ಳುವುದು.

narcissist

ನಾಮವಾಚಕ

  • ಆತ್ಮಾಸಕ್ತ; ತನ್ನ ಸ್ವಂತ ರೂಪ, ಆಕೃತಿಗಳಲ್ಲಿ ವಿಪರೀತವಾದ ಯಾ ಕಾಮಾತ್ಮಕವಾದ ಆಸಕ್ತಿಯುಳ್ಳವ.
  • ಸ್ವಪ್ರಶಂಸಕ; ತನ್ನನ್ನು ತಾನು ಆರಾಧಿಸುವವನು; ತನ್ನನ್ನು ತಾನು ಮೆಚ್ಚಿಕೊಳ್ಳುವವನು.

narcissistic

ಗುಣವಾಚಕ

  • ಆತ್ಮರತಿಯ.
  • ಸ್ವಾರಾಧನಾ ಪ್ರವೃತ್ತಿಯ; ಆತ್ಮಶ್ಲಾಘನೆಯ; ತನ್ನನ್ನು ತಾನೇ ಮೆಚ್ಚಿಕೊಳ್ಳುವ.

narcissistically

ಕ್ರಿಯಾವಿಶೇಷಣ

  • ಆತ್ಮಾಸಕ್ತಿಯಿಂದ; ಅತ್ಮರತಿಯಿಂದ.
  • ಸ್ವಾರಾಧನಾ ಪ್ರವೃತ್ತಿಯಿಂದ; ಸ್ವಪ್ರಶಂಸೆಯಿಂದ.

narcissus

ನಾಮವಾಚಕ

(ಸಸ್ಯವಿಜ್ಞಾನ) ನಾರ್ಸಿಸಸ್‍; ಯೂರೋಪಿನಲ್ಲಿ ವಿಶೇಷವಾಗಿ ಕಂಡುಬರುವ ಡ್ಯಾಹೊಡಿಲ್‍ನಂಥ ತುತ್ತೂರಿ ಆಕಾರದ ಹೂ ಬಿಡುವ, ಗೆಡ್ಡೆಗಿಡಗಳ ಒಂದು ಸಸ್ಯಕುಲ.

Search Dictionaries

Loading Results

Follow Us :   
  Download Bharatavani App
  Bharatavani Windows App