English-Kannada Nighantu (University of Mysore)
University of Mysore
narcolepsy
ನಾಮವಾಚಕ
(ವೈದ್ಯಶಾಸ್ತ್ರ) ನಾರ್ಕೊಲೆಪ್ಸಿ; ವಿಚ್ಛಿದ್ರ ನಿದ್ರೆ; ಆಗಾಗ ಅಲ್ಪಕಾಲಿಕ ನಿದ್ರೆ ಬರುವ ಒಂದು ರೋಗ.
narcoleptic
ನಾಮವಾಚಕ
(ವೈದ್ಯಶಾಸ್ತ್ರ) ನಾರ್ಕೊಲೆಪ್ಸಿ ಪೀಡಿತ (ರೋಗಿ).
narcoleptic
ಗುಣವಾಚಕ
(ವೈದ್ಯಶಾಸ್ತ್ರ) ನಾರ್ಕೊಲೆಪ್ಸಿ ರೋಗದ.
narcosis
ನಾಮವಾಚಕ
- (ವೈದ್ಯಶಾಸ್ತ್ರ) ನಾರ್ಕೋಸಿಸ್; ವೇದನಾಶಾಮಕಗಳು ಪರಿಣಾಮವಾಗಿ ಉಂಟಾದ ಮಂಪರು ಅಥವಾ ಪ್ರಜ್ಞೆ ಇಲ್ಲದಿರುವಿಕೆ.
- ಸಂವೇದನಾಶೂನ್ಯತೆ.
narcotic
ಗುಣವಾಚಕ
- ನಾರ್ಕೊಟಿಕ್; ವೇದನಾಶಾಮಕ; ಸಂವೇದನಾಹಾರಿ; ಸಂವೇದನೆಯನ್ನು ಮಂದಗೊಳಿಸಿ ನೋವು ಹೋಗಲಾಡಿಸಬಲ್ಲ.
- (ರೂಪಕವಾಗಿ) ನಿದ್ರಾಜನಕ.
- ಸಂವೇದನಾ ರಹಿತ ಸ್ಥಿತಿಯ; ವೇದನೆ ತಿಳಿಯದ ಸ್ಥಿತಿಯ.
- (ನಿದ್ರೆ ಬರಿಸುವ ಮದ್ದು ಮೊದಲಾದವುಗಳ ವಿಷಯದಲ್ಲಿ) ಮನಸ್ಸಿನ ವೇಲೆ ಪ್ರಭಾವವನ್ನುಂಟುಮಾಡುವ, ಪರಿಣಾಮ ಬೀರುವ; ಮಾದಕ.
narcotic
ನಾಮವಾಚಕ
(ವೈದ್ಯಶಾಸ್ತ್ರ) ನಾರ್ಕೊಟಿಕ್; ಮಾದಕ ವಸ್ತು; ಸಂವೇದನಾ ಹಾರಿ; ಸಾಧಾರಣ ಪ್ರಮಾಣದಲ್ಲಿ ಸೇವಿಸಿದಾಗ ಸಂವೇದನೆಯನ್ನು ಮಂದಗೊಳಿಸಿ, ನೋವು ಹೋಗಲಾಡಿಸಿ, ಗಾಢನಿದ್ರೆ ಬರಿಸಬಲ್ಲ ಮತ್ತು ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ಪ್ರಜ್ಞೆ ಕಳೆಯಬಲ್ಲ, ಅಫೀಮಿನಂಥ ಯಾವುದೇ ಮದ್ದು.
narcotically
ಕ್ರಿಯಾವಿಶೇಷಣ
- ನಿದ್ರೆ ಬರಿಸುವಂತೆ; ಮಂಪರುಗೊಳಿಸುವ ರೀತಿಯಲ್ಲಿ.
- ವೇದನಾಜಡತೆಯನ್ನುಂಟುಮಾಡುವಂತೆ.
narcotise
ಕ್ರಿಯಾಪದ
= narcotize.
narcotism
ನಾಮವಾಚಕ
- ನಿದ್ರೆ, ಮಂಪರು ಬರಿಸುವ ಮಾದಕ ವಸ್ತುಗಳನ್ನು ಸೇವಿಸುವ ದುರಭ್ಯಾಸ.
- ನಿದ್ರಾಜನಕ ವಸ್ತುಗಳ ಕ್ರಿಯೆ ಯಾ ಪ್ರಭಾವ.
- = narcosis.
- ಅತಿ ನಿದ್ದೆ; ಅತಿನಿದ್ರಾರೋಗ.
narcotization
ನಾಮವಾಚಕ
- (ನಿದ್ರಾಜನಕ ಬಳಸಿ)
- ನಿದ್ರೆ ಬರಿಸುವಿಕೆ.
- ಪ್ರಜ್ಞೆ ತಪ್ಪಿಸುವಿಕೆ.
- ಜಡತ್ವವನ್ನುಂಟುಮಾಡುವಿಕೆ.
narcotize
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ನಿದ್ರೆ ಬರಿಸುವ ವಸ್ತುವಿನಂತೆ ಕೆಲಸ ಮಾಡು.
- (ನಿದ್ರಾಜನಕ ವಸ್ತುವನ್ನು ಬಳಸಿ)
- ಮಂಪರು ಬರಿಸು; ನಿದ್ರೆ ಬರಿಸು.
- ಪ್ರಜ್ಞೆ ತಪ್ಪಿಸು; ಅರಿವಳಿಕೆಯನ್ನುಂಟು ಮಾಡು; ವೇದನಾಜಡತೆಯನ್ನುಂಟುಮಾಡು.
- ಜಡತ್ವವನ್ನುಂಟುಮಾಡು; ಅಚೇತನಗೊಳಿಸು: to narcotize one’s anxieties ಆತಂಕ, ಕಳವಳಗಳನ್ನು ಅಚೇತನಗೊಳಿಸು, ಜಡ್ಡುಗಟ್ಟಿಸು; ತಲ್ಲಣತೆಯ ಅರಿವಳಿಸು.
nard
ನಾಮವಾಚಕ
(ಸಸ್ಯವಿಜ್ಞಾನ) ಜಟಿಲೆ; ಜಟಾಮಾಂಸಿ:
- ಹಿಮಾಲಯದಲ್ಲಿ ಸಿಕ್ಕುವ ನಾರ್ಡೊಸ್ಟಾಕಿಸ್ ಕುಲದ ಮೂಲಿಕೆ.
- ಅದರಿಂದ ತಯಾರಿಸಿದ ಮುಲಾಮು.
nardoo
ನಾಮವಾಚಕ
(ಸಸ್ಯವಿಜ್ಞಾನ) ನಾರ್ಡೂ;
- ಆಸ್ಟ್ರೇಲಿಯದಲ್ಲಿ ಇರುವ ಕುದುರೆ ಮಸಾಲೆಗಿಡದಂಥ ಒಂದು ಗಿಡ.
- ಅದರ ಬೀಜಗಳಿಂದ ತಯಾರಿಸಿದ ಆದಿವಾಸಿಗಳ ಆಹಾರ ಅದಾರ್ಥ.
nares
ನಾಮವಾಚಕ
ಮೂಗಿನ ಹೊಳ್ಳೆಗಳು; ನಾಸಾರಂಧ್ರಗಳು.
narghile
ನಾಮವಾಚಕ
ಹುಕ್ಕ; ಗುಡುಗುಡಿ.
narial
ಗುಣವಾಚಕ
ಮೂಗಿನ ಹೊಳ್ಳೆಯ ಯಾ ಮೂಗಿನ ಹೊಳ್ಳೆಗಳಿಗೆ ಸಂಬಂಧಿಸಿದ; ನಾಸಾರಂಧ್ರದ; ನಾಸಾರಂಧ್ರೀಯ.
nark
ನಾಮವಾಚಕ
- (ಬ್ರಿಟಿಷ್ ಪ್ರಯೋಗ) (ಪೊಲೀಸಿನವರಿಂದ ನಿಯಮಿತನಾದ)
- ಬೇಹುಗಾರ; ಗೂಢಚಾರ.
- (ಆಸೆ ತೋರಿಸಿ ಬಲೆಗೆ ಬೀಳಿಸುವ) ವಂಚಕ.
- (ಆಸ್ಟ್ರೇಲಿಯ) ಪೀಡಕ; ಕಾಡಿಸುವ, ಪೀಡಿಸುವ, ರೇಗಿಸುವ – ವಸ್ತು, ವ್ಯಕ್ತಿ.
nark
ಸಕರ್ಮಕ ಕ್ರಿಯಾಪದ
ಪದಗುಚ್ಛ
ಪೀಡಿಸು; ಕಾಡಿಸು; ರೇಗಿಸು; ಕಿರಿಕಿರಿಗೊಳಿಸು; ಉದ್ರೇಕವನ್ನುಂಟುಮಾಡು: feel narked at unjust criticism ಅನ್ಯಾಯವಾದ ಟೀಕೆಯನ್ನು ಕೇಳಿ ಕಿರಿಕಿರಿಗೊಂಡು, ಉದ್ರೇಕಗೊಂಡು. nark it! (ವಿಧಿ ರೂಪ) ಅದು ಸಾಕು! ಅದನ್ನು ನಿಲ್ಲಿಸು!
narky
ಗುಣವಾಚಕ
ರೇಗುವ; ಉದ್ರೇಕಗೊಳ್ಳುವ; ಸಿಟ್ಟಿಗೇಳುವ; ಸಿಡಿಮಿಡಿಗುಟ್ಟುವ.
narratable
ಗುಣವಾಚಕ
ಕಥಿಸಬಹುದಾದ; ಕಥನ ರೂಪದಲ್ಲಿ – ಹೇಳಬಹುದಾದ, ನಿರೂಪಿಸಬಹುದಾದ.