भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

null hypothesis

ನಾಮವಾಚಕ

(ಸಂಖ್ಯಾಶಾಸ್ತ್ರ) ಶೂನ್ಯ ಪ್ರತಿಜ್ಞೆ; ಸಂಖ್ಯಾಶಾಸ್ತ್ರೀಯ ಮಾದರಿಗಳಲ್ಲಿ ಕಂಡುಬರಬಹುದಾದ ವ್ಯತ್ಯಾಸದಿಂದ, ಜನ ಸಂದಣಿಗಳಲ್ಲಿಯೂ ವ್ಯತ್ಯಾಸವಿದೆ ಎಂದು ತೀರ್ಮಾನಿಸುವುದು ಸರಿಯಲ್ಲ ಎಂಬ ಊಹನ.

null instrument

ನಾಮವಾಚಕ

ಶೂನ್ಯೋಪಕರಣ; ಸೊನ್ನೆ ಹತ್ಯಾರ; ಸೊನ್ನೆ ಮಾಹಿತಿ ಬರುವಂತೆ ಅಳವಡಿಸುವ ಮೂಲಕ ಊಪಯೋಗಿಸಬಹುದಾದ ಯಾವುದೇ ಉಪಕರಣ, ಸಾಧನ.

null link

ನಾಮವಾಚಕ

(ಗಣನ) ಶೂನ್ಯ – ಸಂಪರ್ಕ, ಕೊಂಡಿ; ಪಟ್ಟಿಯಲ್ಲಿ ಇನ್ನು ಬೇರೆ ಬಾಬುಗಳು ಇಲ್ಲ ಎಂಬುದನ್ನು ತೋರಿಸಲು ಕೊನೆಯ ಬಾಬಿನಲ್ಲಿ ಸೂಚಿಸುವ ಉಲ್ಲೇಖ.

nulla

ನಾಮವಾಚಕ

(ಆಸ್ಟ್ರೇಲಿಯ) ಮೂಲನಿವಾಸಿಗಳು ಬಳಸುತ್ತಿದ್ದ, ಗಟ್ಟಿಮರದ ದೊಣ್ಣೆ, ಲಟ್ಟ.

nulla bona

ನಾಮವಾಚಕ

ಜಫ್ತಿ ಮಾಡಲು (ಕಕ್ಷಿಗಾರನ) ಸಾಮಾನು ಯಾವುದೂ ಇಲ್ಲವೆಂದು ಷರೀಹ್‍ ಕಳುಹಿಸುವ ವರದಿ.

nulla-nulla

ನಾಮವಾಚಕ

= nulla.

nullah

ನಾಮವಾಚಕ

(ಆಂಗ್ಲೋ ಇಂಡಿಯನ್‍) ನಾಲೆ; ತೊರೆ; ಕೊರಕಲು; ಹರಿಯುವ ಹಳ್ಳ.

nullification

ನಾಮವಾಚಕ

ರದ್ದತಿ; ರದ್ದಿಯಾತಿ; ತೊಡೆದು ಹಾಕುವಿಕೆ; ವ್ಯರ್ಥಗೊಳಿಸುವುದು.

nullifidian

ಗುಣವಾಚಕ

ನಾಸ್ತಿಕ(ತೆಯ); ಮತಸಂಬಂಧವಾದ ಯಾವುದೇ ನಂಬಿಕೆ ಯಾ ಶ್ರದ್ಧೆ ಇಲ್ಲದ.

nullifidian

ನಾಮವಾಚಕ

ಧರ್ಮಲಂಡ; ನಾಸ್ತಿಕ; ಮತಸಂಬಂಧವಾದ ನಂಬಿಕೆ ಯಾ ಶ್ರದ್ಧೆ ಇಲ್ಲದವನು.

nullify

ಸಕರ್ಮಕ ಕ್ರಿಯಾಪದ

ಇಲ್ಲದಾಗಿಸು; ಇಲ್ಲದಂತೆ ಮಾಡು; ತೊಡೆದು ಹಾಕು; ರದ್ದು ಮಾಡು; ನಿಷ್ಪ್ರಭಾವಗೊಳಿಸು; ವ್ಯರ್ಥವಾಗಿಸು; ನಿರರ್ಥಕಗೊಳಿಸು; ಪರಿಣಾಮ ಶೂನ್ಯವಾಗುವಂತೆ ಮಾಡು.

nullipara

ನಾಮವಾಚಕ

ಅಪ್ರಸವೆ; ಒಂದು ಮಗುವನ್ನೂ ಹೆರದ ಹೆಂಗಸು.

nulliparous

ಗುಣವಾಚಕ

ಅಪ್ರಸವೆಯಾದ; ಒಂದು ಮಗುವನ್ನೂ ಹೆರದ.

nullipore

ನಾಮವಾಚಕ

(ಜೀವವಿಜ್ಞಾನ) ನಲಿಪೋರ್‍; ಹವಳದಂತೆ ಕ್ಯಾಲ್ಸಿಯಂ ಕಾರ್ಬೊನೇಟನ್ನು ಒಸರುವ ಸಮುದ್ರ ಸಸ್ಯ.

nullity

ನಾಮವಾಚಕ

  • (ನ್ಯಾಯಶಾಸ್ತ್ರ)
    1. (ಮುಖ್ಯವಾಗಿ ಮದುವೆಯ) ಅನೂರ್ಜಿತತೆ; ಊರ್ಜಿತವಾಗದಿರುವಿಕೆ.
    2. ಅನೂರ್ಜಿತ – ಕಾರ್ಯ, ಕ್ರಮ, ದಸ್ತೈವಜು, ಮೊದಲಾದವು.
  • ಇಲ್ಲಮೆ; ಶೂನ್ಯತೆ; ಇಲ್ಲದಿರುವುದು; ನಾಸ್ತಿತ್ವ; ಅಸ್ತಿತ್ವಶೂನ್ಯತೆ.
  • ಶುದ್ಧ ಶೂನ್ಯವಾದುದು.
  • ಗಣನೆಗೆ ಬಾರದ್ದು; ಯಃಕಶ್ಚಿತ್ತಾದ ವಸ್ತು, ವಿಚಾರ, ಇತ್ಯಾದಿ.

NUM

ಸಂಕ್ಷಿಪ್ತ

(ಯುನೈಟೆಡ್‍ ಕಿಂಗ್ಡಮ್‍ನಲ್ಲಿ) National Union of Mineworkers.

Num.

ಸಂಕ್ಷಿಪ್ತ

Numbers(ಹಳೆಯ ಒಡಂಬಡಿಕೆ).

numb

ಗುಣವಾಚಕ

ನಿಶ್ಚೇಷ್ಟಿತ; ಜೋವು ಹಿಡಿದ; ಜಡವಾದ; ಮರಗಟ್ಟಿದ; ಸ್ತಂಭೀಭೂತವಾದ; ಸಂವೇದನೆ ಯಾ ಚಲನಶಕ್ತಿ ತಪ್ಪಿಹೋದ: numb with cold ಚಳಿಯಿಂದ ಮರಗಟ್ಟಿದ.

numb

ಸಂಕ್ಷಿಪ್ತ

  • ಮರಗಟ್ಟಿಸು; ಜೋವು ಹಿಡಿಸು; ಸಂವೇದನೆ ಇಲ್ಲದಂತೆ ಮಾಡು.
  • ಸ್ತಬ್ಧಗೊಳಿಸು; ನಿಶ್ಚೇಷ್ಟಿತಗೊಳಿಸು; ಸ್ತಂಭೀಭೂತಗೊಳಿಸು.

numb-fish

ನಾಮವಾಚಕ

= electric ray.

Search Dictionaries

Loading Results

Follow Us :   
  Download Bharatavani App
  Bharatavani Windows App