भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

obnoxiousness

ನಾಮವಾಚಕ

ಹೇಸಿಕೆ ಹುಟ್ಟಿಸುವಂತಿರುವುದು; ಜುಗುಪ್ಸೆ, ಜಿಹಾಸೆ–ಹುಟ್ಟಿಸುವಂತಿರುವುದು; ಹೇವರಿಕೆ ಬರಿಸುವಂತಿರುವುದು; ಅಸಹ್ಯಕರತೆ.

oboe

ನಾಮವಾಚಕ

  • (ಸಂಗೀತ) ಓಬೋ (ವಾದ್ಯ); ಮರದಿಂದ ಮಾಡಿದ, ವಾದ್ಯಮೇಳದಲ್ಲಿ ಬಳಸುವ, ಒಂದು ಬಗೆಯ ಊದುವ ವಾದ್ಯ. Figure: oboe-1
  • ಓಬೋ ವಾದಕ; ಓಬೋ ವಾದ್ಯವನ್ನು ಊದುವವನು.
  • (ಸಂಗೀತ) ಓಬೋ ವಾದ್ಯವನ್ನನುಕರಿಸಿ ಮಾಡಿದ, ಆರ್ಗನ್‍ ವಾದ್ಯದ ಪಿಳ್ಳಂಗೋವಿಯಂಥ ಭಾಗ; ಆರ್ಗನ್‍ ವಾದ್ಯದ (ಊದು) ಕೊಳಲು.

oboist

ನಾಮವಾಚಕ

(ಸಂಗೀತ) ಓಬೋವಾದಕ, ವಾದನಕಾರ.

obol

ನಾಮವಾಚಕ

ಆಬಲ್‍; ಡ್ರ್ಯಾಕ್ಮದ ಆರನೇ ಒಂದು ಭಾಗಕ್ಕೆ ಸಮನಾಗಿರುವ; ಪುರಾತನ ಗ್ರೀಕ್‍ (ಬೆಳ್ಳಿಯ) ನಾಣ್ಯ.

obovate

ಗುಣವಾಚಕ

(ಜೀವವಿಜ್ಞಾನ) (ಎಲೆಯ ವಿಷಯದಲ್ಲಿ) ತಳಭಾಗದ ತುದಿ ಚೂಪಾಗಿದ್ದು, ಅಂಡಾಕಾರದಲ್ಲಿರುವ.

obscene

ಗುಣವಾಚಕ

  • ಪುಂಡ; ಬಂಡು; ಅಶ್ಲೀಲ; ಭಂಡ; ಮುಖ್ಯವಾಗಿ ಜನಸಮ್ಮತವಾದ ನೈತಿಕ ಲೈಂಗಿಕ ಭಾವನೆಗೆ ವಿರುದ್ಧವಾದ.
  • (ಆಡುಮಾತು) ಹೇಸಿಕೆ, ಹೇವರಿಕೆ–ಹುಟ್ಟಿಸುವ; ಜುಗುಪ್ಸೆ ಉಂಟು ಮಾಡುವ; ಅಸಹ್ಯಕರವಾದ; ಹೊಲಸಾದ: an obscene accumulation of wealth ಜುಗುಪ್ಸೆ ಹುಟ್ಟಿಸುವ ಧನಸಂಗ್ರಹ.
  • (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) (ಪ್ರಕಟಣೆಯೊಂದರ ವಿಷಯದಲ್ಲಿ) ಅಶ್ಲೀಲ; ನೀತಿಗೆಡಿಸುವ ಯಾ ಭ್ರಷ್ಟಗೊಳಿಸುವ.

obscenely

ಕ್ರಿಯಾವಿಶೇಷಣ

  • ಪುಂಡುಪುಂಡಾಗಿ; ಬಂಡುಬಂಡಾಗಿ; ಅಶ್ಲೀಲವಾಗಿ
  • ಹೇಸಿಕೆ ಹುಟ್ಟಿಸುವಂತೆ; ಜುಗುಪ್ಸೆ ಉಂಟು ಮಾಡುವಂತೆ; ಅಸಹ್ಯಕರವಾಗಿ; ಹೊಲಸಾಗಿ.

obsceneness

ನಾಮವಾಚಕ

  • ಅಶ್ಲೀಲತೆ; ಬಂಡುತನ.
  • ಹೇಸಿಕೆ ಹುಟ್ಟಿಸುವಂತಿರುವಿಕೆ; ಜುಗುಪ್ಸಾವಹತೆ.

obscenity

ನಾಮವಾಚಕ

  • ಹೇಸಿಗೆ, ಹೇವರಿಕೆ–ಹುಟ್ಟಿಸುವಂತಿರುವುದು; ಜುಗುಪ್ಸೆ ಉಂಟುಮಾಡುವಂತಿರುವುದು; ಅಸಹ್ಯಕರವಾಗಿರುವಿಕೆ; ಹೊಲಸುತನ.
  • (ಕ್ರಿಯೆ, ಮಾತು, ಮೊದಲಾದವುಗಳಲ್ಲಿ) ಅಶ್ಲೀಲತೆ; ಪುಂಡು ಪುಂಡಾಗಿರುವುದು.

obscurant

ನಾಮವಾಚಕ

  • ಗೊಡ್ಡು; ಅಂಧಶ್ರದ್ಧಾಳು; ಪ್ರಗತಿ ವಿರೋಧಿ; ಸುಧಾರಣಾ ವಿರೋಧಿ; ಗೊಡ್ಡು ಸಂಪ್ರದಾಯಶರಣ; ವಿಚಾರಶೀಲತೆ, ಜಿಜ್ಞಾಸೆ, ನೂತನ ಜ್ಞಾನ, ಸುಧಾರಣೆಗಳನ್ನು–ಹಳಿಯುವವನು ಯಾ ವಿರೋಧಿಸುವವನು.
  • ಅಸ್ಪಷ್ಟವಾದಿ; ಬುದ್ಧಿಪೂರ್ವಕವಾಗಿ ಸ್ಪಷ್ಟವಾಗಿರದ ಯಾ ವಿವರಣೆ ನೀಡದ ವ್ಯಕ್ತಿ.

obscurantism

ನಾಮವಾಚಕ

  • ಗೊಡ್ಡುತನ; ಪ್ರಗತಿವಿರೋಧ ಮನೋವೃತ್ತಿ, ಸ್ವಭಾವ; ಪ್ರಗತಿವಿರೋಧ; ಗೊಡ್ಡು ಸಂಪ್ರದಾಯಶರತೆ; ಜಿಜ್ಞಾಸೆ, ನೂತನ ಜ್ಞಾನ, ಸುಧಾರಣೆಗಳನ್ನು ಹಳಿಯುವ ಯಾ ವಿರೋಧಿಸುವ ಪ್ರವೃತ್ತಿ, ಸ್ವಭಾವ.
  • ಬುದ್ಧಿಪೂರ್ವಕವಾಗಿ ಅಸ್ಪಷ್ಟವಾಗಿರುವಿಕೆ ಯಾ ಸಂದಿಗ್ದತೆಯನ್ನು ಉಂಟುಮಾಡುವುದು.

obscurantist

ನಾಮವಾಚಕ

= obscurant.

obscuration

ನಾಮವಾಚಕ

  • ಮಂಕಾಗಿರುವುದು; ಮಸುಕು ಮಸುಕಾಗಿಸುವುದು.
  • ಕಣ್ಣಿಗೆ ಕಾಣದಂತೆ ಮರೆ ಮಾಡುವುದು.
  • ಮಬ್ಬು; ಮಸುಕು ಮಸುಕಾದ ಸ್ಥಿತಿ.
  • (ರೂಪಕವಾಗಿ) (ಬುದ್ಧಿಯ, ಅರಿವಿನ) ಮಂಕುತನ; ಮಾಲಿನ್ಯ.
  • (ಪದಗಳು ಮೊದಲಾದವುಗಳ) ಸ್ಪಷ್ಟತೆ; ಸಂದಿಗ್ಧತೆ.

obscure

ಗುಣವಾಚಕ

ಪದಗುಚ್ಛ

  • ಸ್ಪಷ್ಟವಾಗಿ ಹೇಳಿಲ್ಲದ; ಅಸ್ಪಷ್ಟವಾಗಿ ಹೇಳಿರುವ.
  • ಸುಲಭವಾಗಿ ಅರ್ಥವಾಗದ; ದುರ್ಗ್ರಾಹ್ಯ.
  • ಅರ್ಥವಾಗದ; ವಿವರಿಸಿರದ; ವಿವರಣೆ ಮಾಡಿಲ್ಲದ; ಸಂದೇಹಾಸ್ಪದವಾದ; ಸಂದಿಗ್ಧವಾದ.
  • ಬೆಳಕಿಲ್ಲದ; ಕತ್ತಲು ಕತ್ತಲಾದ; ಮಬ್ಬು ಮಬ್ಬಾದ; ಮಂಕಾದ; ಮಸುಕಾದ.
  • ಅಸ್ಫುಟ; ಅಸ್ಪಷ್ಟ; ಸ್ಪಷ್ಟವಾಗಿಲ್ಲದ.
  • ಮರೆಯಾದ; ಅಡಗಿದ; ಅಗೋಚರ; (ಕಣ್ಣಿಗೆ) ಕಾಣದಷ್ಟು ದೂರದಲ್ಲಿರುವ.
  • ಕಣ್ಣಿಗೆ, ದೃಷ್ಟಿಗೆ–ಬಿದ್ದಿರದ; ಗಮನಕ್ಕೆ ಬಂದಿರದ.
  • (ವ್ಯಕ್ತಿಯ ವಿಷಯದಲ್ಲಿ) ಸಾಮಾನ್ಯ; ಸಾಧಾರಣ; ಅವಿಖ್ಯಾತ; ಅಪ್ರಸಿದ್ಧ; ಪ್ರಸಿದ್ಧಿಗೆ, ಖ್ಯಾತಿಗೆ–ಬಂದಿಲ್ಲದ.
  • (ಬಣ್ಣದ ವಿಷಯದಲ್ಲಿ) ಮಾಸಿದ; ಮಂಕಾದ; ಮಾಸಲು ಮಾಸಲಾದ.

obscure

ಸಕರ್ಮಕ ಕ್ರಿಯಾಪದ

  • ಮಬ್ಬುಗೊಳಿಸು; ಮಸುಕುಗೊಳಿಸು; ಮಂಕಾಗಿಸು; ಪ್ರಕಾಶಗುಂದಿಸು.
  • ಅಸ್ಪಷ್ಟಗೊಳಿಸು; ಅರ್ಥವಾಗದಂತೆ ಮಾಡು; ಸಂದಿಗ್ಧವಾಗುವಂತೆ ಮಾಡು.
  • (ಒಂದರ) ಕಳೆಗೆಡಿಸು; ಕಾಂತಿಗುಂದಿಸು.
  • (ಒಬ್ಬನ) ಕೀರ್ತಿಯನ್ನು ಮಂಕಾಗಿಸು, ಮಸುಳಿಸು.
  • (ಕಾಂತಿಯಲ್ಲಿ, ಕೀರ್ತಿಯಲ್ಲಿ) ಮೀರಿಸು; ಹಿನ್ನೆಲೆಗೆ ದೂಡು.
  • (ಕಣ್ಣಿಗೆ ಕಾಣದಂತೆ) ಮರೆ ಮಾಡು.

obscurely

ಕ್ರಿಯಾವಿಶೇಷಣ

  • ಮಂಕಾಗಿ; ಮಸುಕಾಗಿ.
  • ಅಸ್ಪಷ್ಟವಾಗಿ; ಅಸ್ಫುಟವಾಗಿ.

obscurity

ನಾಮವಾಚಕ

  • ಮಬ್ಬು; ಮಸುಕು; ಕತ್ತಲೆ; ಬೆಳಕಿಲ್ಲದ ಸ್ಥಿತಿ; ಕತ್ತಲು ಕತ್ತಲಾಗಿರುವಿಕೆ; ಮಬ್ಬು ಮಬ್ಬಾದ ಸ್ಥಿತಿ; ಮಸುಕು ಮಸುಕಾಗಿರುವಿಕೆ.
  • ಅಪ್ರಸಿದ್ಧ ಯಾ ಅಜ್ಞಾತ ವ್ಯಕ್ತಿ.
  • ಅಪ್ರಸಿದ್ಧ ಯಾ ಅಜ್ಞಾತತೆ; ಯಾರ ಕಣ್ಣಿಗೂ ಬೀಳದಂತೆ, ಯಾರಿಗೂ ತಿಳಿಯದಂತೆ ಇರುವ ಸ್ಥಿತಿ.
  • ಅಸ್ಪಷ್ಟತೆ; ಅಸ್ಫುಟತೆ; ಸಂದಿಗ್ಧತೆ; ಸ್ಪಷ್ಟವಾಗಿ ತಿಳಿಯದಂಥ ಸ್ಥಿತಿ ಯಾ ಲಕ್ಷಣ.
  • ಅರ್ಥವಾಗದಂತಿರುವಿಕೆ; ದುರೂಹ್ಯತೆ; ದುರವಗಾಹ್ಯತೆ.
  • ಅಸ್ಪಷ್ಟವಾದ ಅಂಶ, ಗ್ರಂಥ ಭಾಗ, ಮೊದಲಾದವು.

obsecration

ನಾಮವಾಚಕ

  • (ಮನಸಾರೆ ಮಾಡಿಕೊಂಡ) ಬೇಡಿಕೆ; ಮನವಿ; ಬಿನ್ನಹ; ಅರಿಕೆ; ಶ್ರದ್ಧಾಪೂರ್ಣ ಪ್ರಾರ್ಥನೆ, ವಿಜ್ಞಾಪನೆ; ಹೃದಯಾಂತರಾಳದಿಂದ ಬಂದ ಮೊರೆ.
  • (ಕ್ರೈಸ್ತರ ಸ್ತೋತ್ರಮಾಲೆಯ ಒಂದು) ಪ್ರಾರ್ಥನಾಗೀತೆ.

obsequial

ಗುಣವಾಚಕ

ಪ್ರೇತಸಂಸ್ಕಾರದ; ಅಂತ್ಯಸಂಸ್ಕಾರದ; ಉತ್ತರಕ್ರಿಯೆಯ; ಮೃತಸಂಸ್ಕಾರದ; ಅಂತ್ಯವಿಧಿಯ.

obsequies

ನಾಮವಾಚಕ

ಪ್ರೇತ ಸಂಸ್ಕಾರ; ಅಂತ್ಯಸಂಸ್ಕಾರ; ಉತ್ತರ ಕ್ರಿಯೆ; ಮೃತ ಸಂಸ್ಕಾರ; ಶವಸಂಸ್ಕಾರ; ಅಂತ್ಯವಿಧಿ.

Search Dictionaries

Loading Results

Follow Us :   
  Download Bharatavani App
  Bharatavani Windows App