भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

obsequious

ಗುಣವಾಚಕ

  • ದಾಸ್ಯಭಾವದ; ಗುಲಾಮೀ ಮನೋವೃತ್ತಿಯ; ದಾಸಾನುದಾಸನಾಗಿ ವರ್ತಿಸುವ; ಅಂಗಲಾಚುವ; ಹಲ್ಲುಗಿಂಜುವ; ಅತಿಯಾಗಿ ಅನುಸರಿಸುವ.
  • (ಪ್ರಾಚೀನ ಪ್ರಯೋಗ) ವಿಧೇಯ ಕರ್ತವ್ಯಪರ; ಕರ್ತವ್ಯ ನಿಷ್ಠ.

obsequiously

ಕ್ರಿಯಾವಿಶೇಷಣ

ಗುಲಾಮನಂತೆ; ದಾಸಾನುದಾಸನಾಗಿ; ಹಲ್ಲು ಗಿಂಜುತ್ತ; ಅಂಗಲಾಚುತ್ತಾ; ಅತಿಯಾಗಿ ಅನುಸರಿಸುತ್ತ; ಮುಖಸ್ತುತಿ ಮೊದಲಾದವುಗಳಿಂದ ಮೆಚ್ಚಿಸುತ್ತ.

obsequiousness

ನಾಮವಾಚಕ

ದಾಸ್ಯಭಾವ; ಗುಲಾಮೀ ಮನೋವೃತ್ತಿ; ದಾಸಾನುದಾಸನಂತೆ ವರ್ತಿಸುವುದು; ಹಲ್ಲು ಗಿಂಜುವುದು; ಅಂಗಲಾಚುವಿಕೆ; ಮಿತಿಮೀರಿದ ಅನುಸರಣೆ.

observable

ಗುಣವಾಚಕ

  • ನಡೆಸಬೇಕಾದ; ಆಚರಿಸಬೇಕಾದ; ಪಾಲಿಸಬೇಕಾದ; ಆಚರಣೀಯ; ಅನುಷ್ಠೇಯ; ಪಾಲನೀಯ.
  • ಆಚರಿಸಬಹುದಾದ; ಪಾಲಿಸಬಹುದಾದ.
  • ವೀಕ್ಷಣೀಯ; ವೀಕ್ಷಿಸಬಹುದಾದ.
  • ದೃಶ್ಯ; ದೃಷ್ಟಿಗೋಚರ; ಇಂದ್ರಿಯಗೋಚರ.
  • ದರ್ಶನೀಯ; ಪ್ರೇಕ್ಷಣೀಯ; ದ್ರಷ್ಟವ್ಯ; ನೋಡಲು–ತಕ್ಕ,ಯೋಗ್ಯವಾದ.

observably

ಕ್ರಿಯಾವಿಶೇಷಣ

ದೃಶ್ಯವಾಗಿ; ದೃಷ್ಟಿಗೋಚರವಾಗಿ; ಇಂದ್ರಿಯಗೋಚರವಾಗಿ.

observance

ನಾಮವಾಚಕ

  • (ಶಾಸನ, ಕರ್ತವ್ಯ, ಪದ್ಧತಿ, ಮತೀಯ ಕಟ್ಟಳೆ, ವಿಧಿ, ಆಚರಣೆ, ಮೊದಲಾದವುಗಳ) ಆಚರಣೆ; ಪಾಲನೆ; ಅನುಸರಣೆ; ಅನುಷ್ಠಾನ.
  • (ಧಾರ್ಮಿಕವಾದ ಯಾ ಶಾಸ್ತ್ರೋಕ್ತವಾದ) ಕರ್ಮಾಚರಣೆ; ಮತಾಚಾರ; ಸಾಂಪ್ರದಾಯಿಕ ಕರ್ಮಾನುಷ್ಠಾನ.
  • (ಯಾವುದೇ ಧಾರ್ಮಿಕ ಪಂಥದ) ನಿಯಮ; ಕಟ್ಟಳೆ; ಆಚಾರವಿಧಿ; ಸಂಪ್ರದಾಯ.
  • (ಪ್ರಾಚೀನ ಪ್ರಯೋಗ) ಮರ್ಯಾದೆ, ಮನ್ನಣೆ, ಗೌರವ–ತೋರಿಸುವುದು.

observancy

ನಾಮವಾಚಕ

= observance.

observant

ಗುಣವಾಚಕ

  • (ಶಾಸನ, ಕರ್ತವ್ಯ, ಪದ್ಧತಿ, ಮತೀಯ ಕರ್ಮಗಳು ಮೊದಲಾದವುಗಳನ್ನು) ಪಾಲಿಸುವ; ಅನುಸರಿಸುವ; ಶ್ರದ್ಧೆಯಿಂದ ಆಚರಿಸುವ, ನಡೆಸುವ.
  • (ಮುಖ್ಯವಾಗಿ ಧಾರ್ಮಿಕ ಆಚರಣೆಗಳಿಗೆ) ಲಕ್ಷ್ಯಕೊಡುವ; ಶ್ರದ್ಧೆಯಿಂದ ಗಮನ ಕೊಡುವ: an observant few ಧಾರ್ಮಿಕ ಆಚರಣೆಗಳ ಕೆಲ ಶ್ರದ್ಧಾಳುಗಳು.

observant

ನಾಮವಾಚಕ

ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹ್ರ್ಯಾನ್ಸಿಸ್ಕನ್‍ ಪಂಥದ ಒಂದು ಶಾಖೆಯ ಸದಸ್ಯ.

observantly

ಕ್ರಿಯಾವಿಶೇಷಣ

ಗಮನವಿಟ್ಟು; ಲಕ್ಷ್ಯಪೂರ್ವಕವಾಗಿ; ಜಾಗರೂಕನಾಗಿ; ಸಾವಧಾನದಿಂದ.

observation

ನಾಮವಾಚಕ

ಪದಗುಚ್ಛ

  • ವೀಕ್ಷಣೆ; ಅವಲೋಕನ; ಗಮನವಿಟ್ಟು ನೋಡುವುದು ಯಾ ನೋಡಲ್ಪಡುವುದು.
  • ವೀಕ್ಷಿತ ಸ್ಥಿತಿ; ಗಮನವಿಟ್ಟು ನೋಡಿದ ಸ್ಥಿತಿ.
  • ಗಮನಿಸುವ ಶಕ್ತಿ; ಗಮನ ಕೊಟ್ಟು ನೋಡುವ ಸಾಮರ್ಥ್ಯ.
  • (ಮುಖ್ಯವಾಗಿ ಟೀಕೆಯ ಯಾ ಟಿಪ್ಪಣಿಯ ರೂಪದ) ಹೇಳಿಕೆ; ಅಭಿಪ್ರಾಯ.
  • ನಿಸರ್ಗ ವೀಕ್ಷಣೆ; ಪ್ರಕೃತಿ ವೀಕ್ಷಣೆ; ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳ ಕಾರ್ಯ ಕಾರಣಗಳು ಯಾ ಅವುಗಳ ಪರಸ್ಪರ ಸಂಬಂಧ ಮೊದಲಾದವನ್ನು ಕರಾರುವಾಕ್ಕಾಗಿ ನೋಡಿ ಗುರುತು ಮಾಡಿಕೊಳ್ಳುವುದು.
  • ವೀಕ್ಷಣೆ; ಪರಿಶೀಲನೆ; ರೋಗಿಯ ಲಕ್ಷಣಗಳು, ಗುಮಾನಿಗೊಳಗಾದವನ ನಡೆ ನುಡಿ, ಮೊದಲಾದವನ್ನು ಗಮನಿಸುವುದು.
  • ವೀಕ್ಷಣೆ; ಔನ್ನತ್ಯ ಮಾಪನ ಯಾ ಗಣನೆ; ಅಕ್ಷಾಂಶ, ರೇಖಾಂಶಗಳನ್ನು ಕಂಡುಹಿಡಿಯಲು ಸೂರ್ಯನ ಯಾ ಬೇರಾವುದೇ ಆಕಾಶಕಾಯದ ಔನ್ನತ್ಯವನ್ನು ಅಳೆಯುವುದು ಯಾ ಗಣಿಸುವುದು.
  • (ಸೈನ್ಯ) (ಶತ್ರುಗಳ ದುರ್ಗ, ನೆಲೆ, ಚಲನವಲನ, ಮೊದಲಾದವುಗಳ) ವೀಕ್ಷಣೆ; ನಿರೀಕ್ಷಣೆ: army of observation (ಶತ್ರುಗಳ ದುರ್ಗ ಮೊದಲಾದವುಗಳ) ನಿರೀಕ್ಷಣಾ ಸೈನ್ಯ; ನಿರೀಕ್ಷಣಕ್ಕಾಗಿ ನಿಯುಕ್ತವಾದ, ನಿರೀಕ್ಷಣದಲ್ಲಿ ನಿರತವಾದ ಸೈನ್ಯ.

observation car

ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ವೀಕ್ಷಣಬಂಡಿ; ನೋಟದ ಗಾಡಿ; ಸುತ್ತಲಿನ ದೃಶ್ಯಗಳನ್ನು ನೋಡಲು ಅನುಕೂಲಿಸುವಂತೆ ಗಾಜಿನ ಕಿಟಕಿಗಳಿರುವ ರೈಲುಬಂಡಿ.

observation post

ನಾಮವಾಚಕ

(ಸೈನ್ಯ) ವೀಕ್ಷಣ ನೆಲೆ; ಮುಖ್ಯವಾಗಿ ಫಿರಂಗಿ ಹೊಡೆತದ ಪರಿಣಾಮವನ್ನು ವೀಕ್ಷಿಸಲು ಕಲ್ಪಿಸಿಕೊಂಡ ನೆಲೆ.

observational

ಗುಣವಾಚಕ

  • ವೀಕ್ಷಣದ; ವೀಕ್ಷಣೆಯ; ಅವಲೋಕನದ; ವೀಕ್ಷಣಕ್ಕೆ ಸಂಬಂಧಿಸಿದ; ಗಮನವಿಟ್ಟು ನೋಡುವ ಯಾ ನೋಡಲ್ಪಡುವ.
  • ವೀಕ್ಷಣ ಶಕ್ತಿಯ.
  • ವೈಜ್ಞಾನಿಕ ವೀಕ್ಷಣೆಗೆ ಸಂಬಂಧಿಸಿದ.

observationally

ಕ್ರಿಯಾವಿಶೇಷಣ

ವೀಕ್ಷಣ(ವಿಧಾನ)ದಿಂದ; ವೀಕ್ಷಣ ವಿಧಾನದಲ್ಲಿ.

observatory

ನಾಮವಾಚಕ

ವೇಧಶಾಲೆ; ವೀಕ್ಷಣಾಲಯ; ವೀಕ್ಷಣಾಗಾರ; ವೀಕ್ಷಣ–ಗೃಹ, ಮಂದಿರ, ಕೇಂದ್ರ; ಪ್ರಕೃತಿಯ ಯಾ ನಿಸರ್ಗದ ವಿದ್ಯಮಾನಗಳನ್ನು, ಮುಖ್ಯವಾಗಿ ಖಗೋಳದ ಯಾ ಹವಾಮಾನದ ಘಟನೆಗಳನ್ನು, ವೀಕ್ಷಿಸುವ ಸಲುವಾಗಿ ನಿರ್ಮಿಸಿರುವ ಕಟ್ಟಡ ಮೊದಲಾದವು.

observe

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ವ್ಯಕ್ತಿ, ವಸ್ತು ಮೊದಲಾದವನ್ನು) ಗಮನವಿಟ್ಟು ನೋಡು; ಲಕ್ಷಿಸು; ಗಮನಿಸು; ಗಮನಕ್ಕೆ ತಂದುಕೊ: the observed of all observers ಎಲ್ಲರ ಗಮನವೂ ಬೀಳುವಂಥ ವ್ಯಕ್ತಿ, ವಸ್ತು ಯಾ ವಿಷಯ; ಎಲ್ಲ ವೀಕ್ಷಕರಿಂದಲೂ ವೀಕ್ಷಿಸಲ್ಪಟ್ಟವನು ಯಾ ವೀಕ್ಷಿಸಲ್ಪಟ್ಟದ್ದು.
  • ಎಚ್ಚರಿಕೆಯಿಂದ ಗಮನಿಸು, ನೋಡು.
  • (ಶಾಸನ, ಕಟ್ಟಳೆ, ಕಾರ್ಯ ವಿಧಾನ, ತತ್ತ್ವ, ಮೊದಲಾದವನ್ನು) ನಡೆಸು; ಆಚರಿಸು; ಪಾಲಿಸು; ನಡೆಸಿಕೊಂಡು ಬರು; ಬಿಡದೆ ಅನುಸರಿಸು; ವಿಹಿತವಾಗಿ ನೆರೆವೇರಿಸು.
  • (ನಿಯಮಿತ ಕಾಲ) ಪಾಲಿಸು; ಪಾಲನೆ ಮಾಡು.
  • (ಮೌನ) ಆಚರಿಸು; ಪಾಲಿಸು.
  • (ಮತೀಯ ಆಚರಣೆಯನ್ನು) ವಿಧಿವತ್ತಾಗಿ ಆಚರಿಸು; ಅನುಷ್ಠಾನಮಾಡು.
  • (ವಾರ್ಷಿಕೋತ್ಸವವನ್ನು) ಆಚರಿಸು; ನಡೆಸು.
  • ವೀಕ್ಷಿಸು; ಪ್ರಯೋಗದ ನೆರವಿಲ್ಲದೆ ನಿಸರ್ಗದ ವಿದ್ಯಮಾನಗಳನ್ನು ಪರಿಶೀಲಿಸಿ ಗುರುತು ಮಾಡಿಕೊ.
  • (ಒಂದು ವಿಷಯವನ್ನು ಕುರಿತು) ಹೇಳು; ಅಭಿಪ್ರಾಯ ತಿಳಿಸು; ಮುಖ್ಯವಾಗಿ ಟೀಕಿಸು, ವಿಮರ್ಶಾತ್ಮಕ ಅಭಿಪ್ರಾಯ ಹೇಳು.

observer

ನಾಮವಾಚಕ

  • (ನಿಸರ್ಗದ ವಿದ್ಯಮಾನಗಳು ಮೊದಲಾದವುಗಳ) ನೋಡುಗ; ದರ್ಶಿ; ವೀಕ್ಷಕ; ಪ್ರೇಕ್ಷಕ; ನೋಡುವವನು.
  • ಆಸಕ್ತ–ವೀಕ್ಷಕ, ಪ್ರೇಕ್ಷಕ.
  • ವೀಕ್ಷಕ; ಸಭೆ ಮೊದಲಾದವುಗಳ ಕಾರ್ಯಕಲಾಪಗಳಲ್ಲಿ ಭಾಗವಹಿಸದೆ, ಅವುಗಳ ಟಿಪ್ಪಣಿ ತೆಗೆದುಕೊಳ್ಳುವ, ಮಾಡಿಕೊಳ್ಳುವ ವ್ಯಕ್ತಿ.
  • ವೀಕ್ಷಕ:
    1. ವಿಮಾನಗಳನ್ನು ನೋಡಿ ಅವುಗಳ ಗುರುತು ಹಿಡಿಯಲು ತರಪೇತಿ ಪಡೆದವ.
    2. ಶತ್ರುವಿನ ನೆಲೆ, ಸ್ಥಾನ, ಮೊದಲಾದವನ್ನು ಗುರುತಿಸಲು, ವಿಮಾನದಲ್ಲಿ ಕರೆದುಕೊಂಡು ಹೋಗುವಂಥ ವ್ಯಕ್ತಿ.
  • (ನಿಯಮ, ತತ್ತ್ವ, ವ್ರತ, ಮತೀಯ ಕರ್ಮ, ಮೊದಲಾದವನ್ನು) ನಡೆಸುವವನು; ಆಚರಿಸುವವನು; ಪಾಲಿಸುವವನು; ಅನುಷ್ಠಾತೃ.
  • (ಯಾವುದನ್ನೇ ಕುರಿತ) ಟೀಕಾಕಾರ; ಟೀಕೆಯ ರೂಪದಲ್ಲಿ ಅಭಿಪ್ರಾಯ ಹೇಳುವವನು.
  • ವೃತ್ತಪತ್ರಿಕೆಯ ಹೆಸರಾಗಿ: The Observer.

observingly

ಕ್ರಿಯಾವಿಶೇಷಣ

ಗಮನಿಸಿ ನೋಡುತ್ತ; ಲಕ್ಷ್ಯಗೊಟ್ಟು ವೀಕ್ಷಿಸುತ್ತ; ವೀಕ್ಷಕ ದೃಷ್ಟಿಯಿಂದ.

obsess

ಸಕರ್ಮಕ ಕ್ರಿಯಾಪದ

(ಹಲವೊಮ್ಮೆ ಕರ್ಮಣಿಪ್ರಯೋಗದಲ್ಲಿ) (ದೆವ್ವ, ಭ್ರಾಂತಿ, ಗೀಳು, ಮೊದಲಾದವುಗಳ ವಿಷಯದಲ್ಲಿ) ಎಡೆಬಿಡದೆ, ನಿರಂತರ–ಪೀಡಿಸು, ಕಾಡು; ಮೇಲಿಂದ ಮೇಲೆ ಮನಸ್ಸಿಗೆ ಬಂದು ಕಾಡು; ಸದಾ ಬೆನ್ನು ಹತ್ತಿರು; (ವ್ಯಕ್ತಿಯ) ಮನಸ್ಸನ್ನೆಲ್ಲ ತುಂಬಿ, ಆವರಿಸಿ ಹಿಂಸಿಸು; ಸದಾ ಗ್ರಹದಂತೆ ಹಿಡಿದಿರು.

Search Dictionaries

Loading Results

Follow Us :   
  Download Bharatavani App
  Bharatavani Windows App