English-Kannada Nighantu (University of Mysore)
University of Mysore
obstinacy
ನಾಮವಾಚಕ
ಹಠಸ್ವಭಾವ; ಹಠಮಾರಿತನ; ಮೊಂಡುತನ; ಪಟ್ಟು ಬಿಡದಿರುವ ಸ್ವಭಾವ; ಯಾರ ಮಾತನ್ನೂ ಕೇಳದ, ತನ್ನ ಇಚ್ಚೆಯಂತೆಯೇ ನಡೆಯುವ ಮನೋವೃತ್ತಿ.
obstinate
ಗುಣವಾಚಕ
- ಹಠದ; ಹಠಮಾರಿತನದ; ಮೊಂಡುತನದ; ಬಗ್ಗದ; ಸಗ್ಗದ; ಜಗ್ಗದ; ಪಟ್ಟು ಬಿಡದ.
- ದುರಾಗ್ರಹದ; ತನ್ನ ಇಚ್ಚೆಯಂತೆಯೇ ನಡೆಯುವ.
- ಜಗ್ಗದ; ಸಗ್ಗದ; ಚಿಕಿತ್ಸೆ ಮೊದಲಾದವುಗಳಿಗೆ ಸುಲಭವಾಗಿ ಅಣಗದ, ಬಗ್ಗದ.
obstinately
ಕ್ರಿಯಾವಿಶೇಷಣ
- ಹಠ ಸ್ವಭಾವದಿಂದ; ಹಠಮಾರಿಯಾಗಿ; ಮೊಂಡುತನದಿಂದ.
- ಸ್ವಚ್ಛಂದ ಪ್ರವೃತ್ತಿಯಿಂದ; ದುರಾಗ್ರಹದಿಂದ; ಯಾರ ಮಾತನ್ನೂ ಕೇಳದೆ; ತನ್ನ ಇಚ್ಛೆಯಂತೆಯೇ ನಡೆಯುತ್ತ.
obstreperous
ಗುಣವಾಚಕ
- ಗದ್ದಲ, ಗಲಾಟೆ–ಮಾಡುವ; (ಗಟ್ಟಿಯಾಗಿ) ಕೂಗಾಡುವ; ಗುಲ್ಲೆಬ್ಬಿಸುವ.
- ದೊಂಬಿ ಮಾಡುವ; ಗೊಂದಲವೆಬ್ಬಿಸುವ; ಹತೋಟಿಗೊಳಪಡದೆ, ಶಿಸ್ತಿಗೊಳಪಡದೆ–ರಂಪ ಮಾಡುವ.
obstreperously
ಕ್ರಿಯಾವಿಶೇಷಣ
- ಗದ್ದಲ ಮಾಡುತ್ತ; ಗುಲ್ಲೆಬ್ಬಿಸುತ್ತ; (ಗಟ್ಟಿಯಾಗಿ) ಕೂಗಾಡುತ್ತ.
- ದೊಂಬಿ ಮಾಡುತ್ತ; ಗದ್ದಲವೆಬ್ಬಿಸುತ್ತ; ಹತೋಟಿಗೊಳಪಡದೆ, ಶಿಸ್ತಿಗೊಳಪಡದೆ–ರಂಪ ಮಾಡುತ್ತ.
obstreperousness
ನಾಮವಾಚಕ
- ಗದ್ದಲ ಮಾಡುವ, (ಗಟ್ಟಿಯಾಗಿ) ಕೂಗಾಡುವ–ಸ್ವಭಾವ, ನಡೆವಳಿಕೆ; ಗುಲ್ಲೆಬ್ಬಿಸುವ ಮನೋವೃತ್ತಿ ಯಾ ವರ್ತನೆ.
- ಅಶಾಸ್ಯತೆ; ದೊಂಬಿ ಮಾಡುವ ಸ್ವಭಾವ; ಗೊಂದಲವೆಬ್ಬಿಸುವ, ರಂಪ ಮಾಡುವ ಪ್ರವೃತ್ತಿ.
obstruct
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿ ಬರಿಯ ಮಾತಿನಿಂದ ಕಾಲಹರಣ ಮಾಡಿ) ಅಡ್ಡಿಮಾಡುವ ವಿಧಾನವನ್ನು ಅನುಸರಿಸು; ನಿರೋಧ ನೀತಿಯನ್ನು ಅನುಸರಿಸು.
- ತಡೆ; ತಡೆಯೊಡ್ಡು; ಅಡ್ಡಗಟ್ಟು; ದುರ್ಗಮಗೊಳಿಸು; ಅಡಚಣೆಗಳನ್ನು ತಂದೊಡ್ಡು; ಹಾದುಹೋಗಲು ಕಷ್ಟವಾಗುವಂತೆ ಮಾಡು.
- (ಪ್ರಗತಿಗೆ) ಅಡ್ಡಿ ಮಾಡು; ಅಡ್ಡಿಪಡಿಸು; ತಡೆಯೊಡ್ಡು; (ಪ್ರಗತಿಯನ್ನು) ನಿಲ್ಲಿಸು; ತಡೆಗಟ್ಟು; ನಿರೋಧಿಸು.
obstruction
ನಾಮವಾಚಕ
- ತಡೆಯುವಿಕೆ; ತಡೆಯೊಡ್ಡುವಿಕೆ; ಅಡ್ಡಗಟ್ಟುವಿಕೆ; ಪ್ರತಿರೋಧ; ಅಡಚಣೆಗಳನ್ನು ಒಡ್ಡುವಿಕೆ.
- ದುರ್ಗಮಗೊಳಿಸುವಿಕೆ; ಹಾದುಹೋಗಲು ಕಷ್ಟವಾಗುವಂತೆ ಮಾಡುವುದು.
- ಅಡ್ಡಿ; ತಡೆ; ಅಡಚಣೆ; ತಡೆಗಟ್ಟು; ಎಡರು; ಅಡ್ಡಗಟ್ಟು; ಪ್ರತಿಬಂಧ; ನಿರೋಧ; ಪ್ರತಿರೋಧ; ವಿಘ್ನ.
- ಪ್ರಗತಿ ನಿರೋಧ; (ಮುಖ್ಯವಾಗಿ ಪಾರ್ಲಿಮೆಂಟಿನ ವ್ಯವಹಾರಗಳ ವಿಷಯದಲ್ಲಿ) (ಬರಿಯ ಮಾತು ಮೊದಲಾದವುಗಳಿಂದ ಉದ್ದೇಶಪೂರ್ವಕವಾಗಿ ಕಾಲಹರಣ ಮಾಡಿ) ಪ್ರಗತಿಯನ್ನು–ನಿಲ್ಲಿಸುವುದು, ತಡೆಗಟ್ಟುವುದು, ಅಡ್ಡಿಪಡಿಸುವುದು; ಅಡ್ಡಿಮಾಡುವ ವಿಧಾನವನ್ನನುಸರಿಸುವುದು; ವಿಳಂಬ ನೀತಿಯನ್ನು ಯಾ ನಿರೋಧ ನೀತಿಯನ್ನು ಅನುಸರಿಸುವುದು.
- (ಕ್ರೀಡೆ) (ಕೆಲವು ಪಂದ್ಯಗಳಲ್ಲಿ ಕಾನೂನು ಬಾಹಿರ ವರ್ತನೆಯಾಗಿ ಇನ್ನೊಬ್ಬ ಆಟಗಾರನಿಗೆ) ತಡೆಯುಂಟುಮಾಡುವುದು; ಆಡಚಣೆ ಮಾಡುವುದು.
- (ವೈದ್ಯಶಾಸ್ತ್ರ) (ಮುಖ್ಯವಾಗಿ ಕರುಳಿನಲ್ಲಿ) ನಾಳ–ನಿರೋಧ, ಅಡಚಣೆ; ಶರೀರದ ನಾಳ ಮಾರ್ಗದಲ್ಲಿ ಉಂಟಾಗುವ ಅಡಚಣೆ.
obstruction-guard
ನಾಮವಾಚಕ
ಅಡ್ಡಿನಿವಾರಕ; ಅಡ್ಡಿಕಾಪು; ಕಂಬಿಗಳ ಯಾ ಹಳಿಗಳ ಮೇಲಿರಬಹುದಾದ ಅಡಚಣೆಗಳನ್ನು ದೂಡಿ ಹಾಕಲು ರೈಲಿನ ಎಂಜಿನಿನ ಮುಂಭಾಗಕ್ಕೆ ಹಾಕಿರುವ ಸಲಾಕಿ.
obstructionism
ನಾಮವಾಚಕ
ಪ್ರತಿರೋಧ, ಅಡ್ಡಿ–ನೀತಿ; ವಿಳಂಬ, ನಿರೋಧ–ನೀತಿ.
obstructionist
ನಾಮವಾಚಕ
ವಿಳಂಬಕಾರಿ; ಅಡ್ಡಿಗಾರ; ಪ್ರತಿರೋಧಕ; ನಿರೋಧಕ; ವಿಳಂಬನೀತಿಯನ್ನು, ನಿರೋಧನೀತಿಯನ್ನು ಅನುಸರಿಸುವವನು.
obstructionist
ಗುಣವಾಚಕ
ವಿಳಂಬಕಾರಿಯಾದ; ಪ್ರತಿರೋಧಕ; ನಿರೋಧಕ; ವಿಳಂಬನೀತಿಯನ್ನು, ನಿರೋಧನೀತಿಯನ್ನು ಅನುಸರಿಸುವ; ಅಡೆತಡೆಯೊಡ್ಡುವ.
obstructive
ಗುಣವಾಚಕ
ತಡೆಯೊಡ್ಡುವ; ಅಡ್ಡಿಪಡಿಸುವ; ಪ್ರತಿರೋಧಕ; ಪ್ರತಿಬಂಧಕ; ಅಡಚಣೆ ಉಂಟುಮಾಡುವ ಯಾ ಆ ಉದ್ದೇಶವುಳ್ಳ.
obstructive
ನಾಮವಾಚಕ
ಪ್ರತಿಬಂಧಕ; ನಿರೋಧಕ; ಅಡ್ಡಿಪಡಿಸುವ, ತಡೆಯೊಡ್ಡುವ–ವ್ಯಕ್ತಿ ಯಾ ವಸ್ತು (ಮುಖ್ಯವಾಗಿ ಹೌಸ್ ಆಹ್ ಕಾಮನ್ಸ್ನಲ್ಲಿ ವಿಳಂಬ ಯಾ ನಿರೋಧ ನೀತಿಯನ್ನನುಸರಿಸುವವನು).
obstructively
ಕ್ರಿಯಾವಿಶೇಷಣ
ತಡೆಯೊಡ್ಡುತ್ತ; ಅಡ್ಡಿಪಡಿಸುತ್ತ; ಪ್ರತಿಬಂಧಕವಾಗಿ; ತಡೆಯೊಡ್ಡುವ ಉದ್ದೇಶದಿಂದ.
obstructiveness
ನಾಮವಾಚಕ
ಪ್ರತಿಬಂಧನ; ನಿರೋಧನ; ಪ್ರತಿಬಂಧಕ ಪ್ರವೃತ್ತಿ ಯಾ ನಡೆವಳಿಕೆ; ತಡೆಯೊಡ್ಡುವ ಯಾ ಅಡ್ಡಿಪಡಿಸುವ ಸ್ವಭಾವ, ವರ್ತನೆ.
obstructor
ನಾಮವಾಚಕ
ಪ್ರತಿರೋಧಕ; ಅಡ್ಡಿಪಡಿಸುವವ; ಅಡಚಣೆಯುಂಟು ಮಾಡುವವ.
obtain
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪಡೆ; ಹೊಂದು; ಗಳಿಸು; ಸಂಪಾದಿಸು; ದೊರಕಿಸಿಕೊ; ಪಡೆದುಕೊ. ಬಳಕೆಯಲ್ಲಿರು; ಪ್ರಚಲಿತವಾಗಿರು; ಪ್ರಚಾರದಲ್ಲಿರು; ಜಾರಿಯಲ್ಲಿರು; ಚಾಲ್ತಿಯಲ್ಲಿರು; ರೂಢಿಯಲ್ಲಿರು; ವಾಡಿಕೆಯಲ್ಲಿರು.
obtainability
ನಾಮವಾಚಕ
ಪಡೆಯಲಾಗುವಿಕೆ; ಪ್ರಾಪ್ಯತೆ.
obtainable
ಗುಣವಾಚಕ
ಪಡೆಯಲಾಗುವ; ಸಂಪಾದನೀಯ; ಪ್ರಾಪ್ಯ; ಲಭ್ಯ; ಹೊಂದಲು ಸಾಧ್ಯವಾದ.