भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

overwritten

ಗುಣವಾಚಕ

ಅತಿ ವಿಸ್ತಾರವಾಗಿ ಯಾ ಅತಿ ಆಲಂಕಾರಿಕವಾಗಿ–ಬರೆದ.

overwrought

ಗುಣವಾಚಕ

  • ಅತಿ ಉದ್ವಿಗ್ನ; ಅತಿ ಉದ್ರೇಕಗೊಂಡ: she was overwrought with grief ಆಕೆ ದುಃಖದಿಂದ ತೀರ ಉದ್ವಿಗ್ನಳಾಗಿದ್ದಳು.
  • ಅತಿ ವಿಸ್ತೃತ ಯಾ ಅತ್ಯಲಂಕೃತ: in a florid overwrought style ಅತ್ಯಲಂಕೃತವೂ ಅತಿ ವಿಸ್ತೃತವೂ ಆದ ಶೈಲಿಯಲ್ಲಿ.
  • (ಪ್ರಾಚೀನ ಪ್ರಯೋಗ) ಅತಿಗೆಲಸದಿಂದ, ಅತಿ ದುಡಿಮೆಯಿಂದ–ಬಳಲಿಹೋದ, ಸುಸ್ತಾದ ಯಾ ಕಂಗೆಟ್ಟ.

overzeal

ನಾಮವಾಚಕ

ಅತ್ಯುತ್ಸಾಹ; ಮಿತಿ ಮೀರಿದ ಆಸಕ್ತಿ.

overzealous

ಗುಣವಾಚಕ

ಅತ್ಯುತ್ಸಾಹದ; ಮಿತಿಮೀರಿದ ಆಸಕ್ತಿ, ಉತ್ಸಾಹಗಳಿಂದ ಕೂಡಿದ: overzealous for reform ಸುಧಾರಣೆಗಾಗಿ ಅತ್ಯುತ್ಸಾಹದಿಂದ ಕೂಡಿದ.

overzealously

ಕ್ರಿಯಾವಿಶೇಷಣ

ಅತ್ಯುತ್ಸಾಹದಿಂದ (ಕೂಡಿ).

overzealousness

ನಾಮವಾಚಕ

ಅತ್ಯುತ್ಸಾಹ; ಅತ್ಯುತ್ಸಾಹದ ಪ್ರವೃತ್ತಿ, ವರ್ತನೆ.

ovi-

ಸಮಾಸ ಪೂರ್ವಪದ

ತತ್ತಿ-, ಮೊಟ್ಟೆ-, ಅಂಡ- ಎಂಬರ್ಥ ನೀಡುವ ಪದಗಳನ್ನು ರಚಿಸಲು ಬಳಸುವ ಸಮಾಸ ಪೂರ್ವಪದ.

ovi-

ಸಮಾಸ ಪೂರ್ವಪದ

ಕುರಿ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

ovibovine

ನಾಮವಾಚಕ

(ಪ್ರಾಣಿವಿಜ್ಞಾನ) ಮೇಷವೃಷಭ; ಕುರಿ ಮತ್ತು ಎತ್ತು ಇವೆರಡರ ನಡುವಣ ಲಕ್ಷಣಗಳುಳ್ಳ ಪ್ರಾಣಿ, ಉದಾಹರಣೆಗೆ musk-ox.

ovibovine

ಗುಣವಾಚಕ

(ಪ್ರಾಣಿವಿಜ್ಞಾನ) ಮೇಷವೃಷಭೀಯ; ಕುರಿ ಮತ್ತು ಎತ್ತು ಇವೆರಡರ ನಡುವಣ ಲಕ್ಷಣಗಳುಳ್ಳ.

oviducal

ಗುಣವಾಚಕ

= oviductal.

oviduct

ನಾಮವಾಚಕ

ಆಂಡನಾಳ; ಅಂಡಾಶಯದಿಂದ ಅಂಡವು ಹಾದುಹೋಗುವ ನಾಳ.

oviductal

ಗುಣವಾಚಕ

ಅಂಡನಾಳದ ಯಾ ಅದಕ್ಕೆ ಸಂಬಂಧಿಸಿದ.

oviform

ಗುಣವಾಚಕ

ಅಂಡರೂಪಿ; ಅಂಡರೂಪದ.

ovine

ಗುಣವಾಚಕ

ಕುರಿಯ ಯಾ ಕುರಿಯಂಥ.

oviparity

ನಾಮವಾಚಕ

(ಪ್ರಾಣಿವಿಜ್ಞಾನ) ಅಂಡೋತ್ಪಾದಕತೆ.

oviparous

ಗುಣವಾಚಕ

(ಪ್ರಾಣಿವಿಜ್ಞಾನ) ಅಂಡೋತ್ಪಾದಕ; ಅಂಡಗಳ (ಮೊಟ್ಟೆಗಳ) ಮೂಲಕ ಸಂತಾನೋತ್ಪತ್ತಿ ಮಾಡುವ.

oviparously

ಕ್ರಿಯಾವಿಶೇಷಣ

(ಪ್ರಾಣಿವಿಜ್ಞಾನ) ಅಂಡದಿಂದ ಉತ್ಪಾದಿಸುವಂತೆ.

oviposit

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಮೊಟ್ಟೆಯಿಡುವ ಅಂಗದಿಂದ) ಮೊಟ್ಟೆಯನ್ನು ಯಾ ಮೊಟ್ಟೆಗಳನ್ನು ಇಡು,ಹಾಕು.

oviposition

ನಾಮವಾಚಕ

ಅಂಡಪ್ರಸವ; (ಮುಖ್ಯವಾಗಿ ಮೊಟ್ಟೆಯಿಡುವ ಅಂಗದಿಂದ) ಮೊಟ್ಟೆಯನ್ನು ಯಾ ಮೊಟ್ಟೆಗಳನ್ನು ಇಡುವಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App