भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

owlery

ನಾಮವಾಚಕ

  • ಗೂಬೆ–ಇಕ್ಕೆ, ಗೂಡು; ಗೂಬೆಗಳನ್ನು ಇಟ್ಟಿರುವ ಸ್ಥಳ.
  • ಗೂಬೆತನ; ಗೂಬೆ ಸ್ವಭಾವ.

owlet

ನಾಮವಾಚಕ

ಮರಿಗೂಬೆ; ಗೂಬೆ ಮರಿ.

owlish

ಗುಣವಾಚಕ

ಗೂಬೆಯಂಥ; ಗೂಬೆಯಂತೆ ಕಾಣುವ: his thick glasses gave him an owlish appearance ಅವನ ದಪ್ಪ ಕನ್ನಡಕ ಅವನಿಗೆ ಗೂಬೆಯ ರೂಪ ಕೊಟ್ಟಿದೆ, ಅವನು ಗೂಬೆಯ ಹಾಗೆ ಕಾಣುವಂತೆ ಮಾಡಿದೆ.

owlishly

ಕ್ರಿಯಾವಿಶೇಷಣ

ಗೂಬೆಯಂತೆ.

owlishness

ನಾಮವಾಚಕ

ಗೂಬೆತನ; ಗೂಬೆ ಸ್ವಭಾವ.

own

ಗುಣವಾಚಕ

ಪದಗುಚ್ಛ

  • ಸ್ವಂತ (ಮತ್ತೊಬ್ಬರದಲ್ಲ): saw it with my own eyes ನನ್ನ (ಸ್ವಂತ) ಕಣ್ಣುಗಳಿಂದಲೇ ನೋಡಿದೆ.
  • ತನ್ನ; ತನ್ನದೇ ಆದ; ತನಗೇ ವಿಶಿಷ್ಟವಾದ, ವಿಲಕ್ಷಣವಾದ: has a value all its own ಅದಕ್ಕೆ ತನ್ನದೇ ಆದ ಒಂದು ಬೆಲೆ ಇದೆ.
  • ಸ್ವಕೀಯ; ತಾನೇ ಮಾಡಿಕೊಂಡ; ಸ್ವಯಂಕೃತ: let them stew in their own juice ಅವರು ಮಾಡಿಕೊಂಡದ್ದನ್ನು ಅವರೇ ಅನುಭವಿಸಲಿ.
  • ಅದರದೇ ಆದ; ಅದರದೇ ಸ್ವರೂಪದ: loves truth for its own sake ಸತ್ಯಕ್ಕಾಗಿಯೇ ಸತ್ಯವನ್ನು ಪ್ರೀತಿಸುತ್ತಾನೆ.
  • (ವ್ಯಕ್ತಿತ್ವವನ್ನು ಒತ್ತಿ ಹೇಳುವಾಗ) ತನ್ನ; ತನ್ನದೇ: cooks her own meals ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳುತ್ತಾಳೆ. I am my own master ನನಗೆ ನಾನೇ ಯಜಮಾನ.
  • ಸ್ವಂತ ಆಸ್ತಿ: may I not do what I will with my own? ನನ್ನ ಸ್ವಂತ ಆಸ್ತಿಯ ಬಗ್ಗೆ ನನಗಿಚ್ಛೆ ಬಂದಂತೆ ನಡೆದುಕೊಳ್ಳಬಾರದೇಕೆ?
  • ಸ್ವಂತ; ಖಾಸಾ: own brother ಸ್ವಂತ ಸೋದರ; ಒಂದೇ ತಾಯಿ ತಂದೆಗಳಿಗೆ ಹುಟ್ಟಿದ ಸೋದರ.
  • ಸಂಬಂಧಿಗಳು: his own received him not ಅವನವರೇ, ಅವನ ಸಂಬಂಧಿಗಳೇ ಅವನನ್ನು ಬರಮಾಡಿಕೊಳ್ಳಲಿಲ್ಲ.

own

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

ಒಪ್ಪಿಕೊ: own to having told a lie ಸುಳ್ಳು ಹೇಳಿದ್ದಾಗಿ (ತಾನೇ) ಒಪ್ಪಿಕೊ. own up (ಆಡುಮಾತು) ಮರೆಮಾಚದೆ ತಪ್ಪೊಪ್ಪಿಕೊ; ತನ್ನದೇ ತಪ್ಪೆಂದು ಪ್ರಕಟವಾಗಿ ಒಪ್ಪಿಕೊ: nobody owned up to the theft ಕದ್ದೆವೆಂದು ಯಾರೂ ಒಪ್ಪಿಕೊಳ್ಳಲಿಲ್ಲ. eventually she owned up ಕೊನೆಗೆ ಅವಳು ತಪ್ಪನ್ನು ಒಪ್ಪಿಕೊಂಡಳು.

  • (ಆಸ್ತಿಯಾಗಿ) ಪಡೆದಿರು; ಹೊಂದಿರು; (ಆಸ್ತಿಯ) ಸ್ವಾಮ್ಯವುಳ್ಳವನಾಗಿರು, ಒಡೆಯನಾಗಿರು.
  • (ಭೂತಕೃದಂತದಲ್ಲಿ, ಸಮಾಸ ಪೂರ್ವಪದವಾಗಿ) ಸ್ವಾಮ್ಯವಾಗಿ ಒಂದಕ್ಕೆ ಸೇರಿರು: state-owned ಸರ್ಕಾರಿ; ಸರ್ಕಾರಕ್ಕೆ ಸೇರಿದ; ಸರ್ಕಾರದ ವಶದಲ್ಲಿರುವ.
  • (ಕರ್ತೃತ್ವ, ಜನ್ಮದಾತೃತ್ವ ಯಾ ಸ್ವಾಮ್ಯ) ತನ್ನದೆಂದು–ಒಪ್ಪಿಕೊ, ಅಂಗೀಕರಿಸು, ಸ್ವೀಕರಿಸು: the hat that nobody will own ತನ್ನದೆಂದು ಯಾರೂ ಒಪ್ಪಿಕೊಳ್ಳದ ಹ್ಯಾಟು.
  • (ಇದೆಯೆಂದು, ಸತ್ಯವೆಂದು, ಸಿಂಧುವೆಂದು) ಅಂಗೀಕರಿಸು; ಒಪ್ಪಿಕೊ: owns his deficiencies ತನ್ನ ಕುಂದುಕೊರತೆಗಳನ್ನು ಒಪ್ಪಿಕೊಳ್ಳುತ್ತಾನೆ.
  • (ಒಬ್ಬನ ಅಧಿಕಾರ ಮೊದಲಾದವಕ್ಕೆ) ಎದುರಾಡದೆ ತಲೆಬಾಗು; ಪ್ರತಿಭಟಿಸದೆ ಒಪ್ಪಿಕೊ.

own brand

ಗುಣವಾಚಕ

ಸ್ವಂತ—ಗುರುತಿನ, ಛಾಪಿನ, ಚಿಹ್ನೆಯ; ಚಿಲ್ಲರೆ ವ್ಯಾಪಾರಿಗಾಗಿ ತಯಾರಿಸಿ ಕೊಟ್ಟ ಮತ್ತು ತಯಾರಕನ ಹೆಸರಿಗೆ ಬದಲಾಗಿ ಚಿಲ್ಲರೆ ವ್ಯಾಪಾರಿಯ ಹೆಸರುಳ್ಳ.

owned

ಗುಣವಾಚಕ

(ಸಾಮಾನ್ಯವಾಗಿ ಇನ್ನೊಂದು ಪದದೊಡನೆ ಪ್ರಯೋಗ) ವಶದಲ್ಲಿರುವ; ಸ್ವಾಮ್ಯದಲ್ಲಿರುವ: state-owned railways ರಾಷ್ಟ್ರಸ್ವಾಮ್ಯದ ರೈಲ್ವೆ ಇಲಾಖೆ.

owner

ನಾಮವಾಚಕ

ಒಡೆಯ; ಸ್ವಾಮಿ; ಮಾಲೀಕ; ಯಜಮಾನ.

owner-occupier

ನಾಮವಾಚಕ

ನಿವಾಸಿ ಒಡೆಯ; ತಾನು ವಾಸಿಸುತ್ತಿರುವ ಮನೆಯ ಒಡೆತನವುಳ್ಳವ(ಳು).

ownerless

ನಾಮವಾಚಕ

ಒಡೆಯನಿಲ್ಲದ; ಯಾರಿಗೂ ಸೇರಿರದ.

ownership

ನಾಮವಾಚಕ

ಒಡೆತನ; ಸ್ವಾಮ್ಯ.

owt

ನಾಮವಾಚಕ

(ಆಡುಮಾತು ಯಾ ಪ್ರಾಂತೀಯ ಪ್ರಯೋಗ) ಏನೋ ಒಂದು; ಯಾವುದೋ ಒಂದು.

ox

ನಾಮವಾಚಕ

ಪದಗುಚ್ಛ

the black ox has trod on one’s foot ಅವನಿಗೆ ದುರದೃಷ್ಟ ಒದಗಿದೆ ಯಾ ಮುಪ್ಪು ಅಡರಿದೆ.

  • ದನದ ಬಳಗದ ಯಾವುದೇ ಗಂಡು ಪ್ರಾಣಿ.
  • (ಮುಖ್ಯವಾಗಿ ಬೀಜ ಒಡೆದ) ಎತ್ತು.

ox-

ಸಮಾಸ ಪೂರ್ವಪದ

= oxy-.

ox-eye

ನಾಮವಾಚಕ

  • ಎತ್ತಿನ ಕಣ್ಣು.
  • (ಮನುಷ್ಯನ) ದೊಡ್ಡ ಕಣ್ಣು; ಗೂಳಿಗಣ್ಣು.
  • ಸೇವಂತಿಗೆ ಬಳಗದ ಹಲವು ಜಾತಿಯ ಕಳೆಗಿಡಗಳು.

ox-eye daisy

ನಾಮವಾಚಕ

ಲ್ಯೂಕ್ಯಾಂತಿಮಂ ವಲ್ಗರೇ ಕುಲದ, ಬಿಳಿಯ ದಳಗಳೂ ಹಳದಿ ಕೇಂದ್ರವೂ ಉಳ್ಳ, ಡೇಯ್ಸಿ(daisy) ಹೂವು ಯಾ ಗಿಡ.

ox-eyed

ಗುಣವಾಚಕ

ದೊಡ್ಡಕಣ್ಣುಗಳ; ಅಗಲಗಣ್ಣಿನ; ವಿಶಾಲವಾದ ಕಣ್ಣಿನ: the ox-eyed Juno ಅಗಲಗಣ್ಣಿನ ಜೂನೋ ದೇವತೆ.

ox-fence

ನಾಮವಾಚಕ

(ಸುತ್ತಲೂ ಕಬ್ಬಿಣದ ಕಟಕಟೆ, ದಡಿಬೇಲಿ ಹಾಕಿ ಮತ್ತು ಕೆಲವು ವೇಳೆ, ಹಳ್ಳ ತೋಡಿರುವ) ದನದ ಹಟ್ಟಿಯ ಬೇಲಿ.

Search Dictionaries

Loading Results

Follow Us :   
  Download Bharatavani App
  Bharatavani Windows App